ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ ಸಂಸ್ಥೆ (ಇಪಿಎಫ್‌ಒ) ಸದಸ್ಯರು ನಿವೃತ್ತಿಯ ಬಳಿಕ ಪಿಂಚಣಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ ಅಧಿಕ ಪಿಂಚಣಿಯನ್ನು ಪಡೆಯಬೇಕೆಂಬುವುದು ಎಲ್ಲರ ಆಸೆಯಾಗಿರುವುದಿಲ್ಲವೇ?. ಎಲ್ಲ ಅರ್ಹ ಅಭ್ಯರ್ಥಿಗಳು ಅಧಿಕ ಪಿಂಚಣಿಗಾಗಿ ಅರ್ಜಿ ಸಲ್ಲಿಸಲು ಮಾರ್ಚ್ 3, 2023ರವರೆಗೆ ಅವಕಾಶವನ್ನು ಹೊಂದಿದ್ದಾರೆ. ಪ್ರಸ್ತುತ ಉದ್ಯೋಗಿಗಳ ಶೇಕಡ 12ರಷ್ಟು ಮೂಲ ಆದಾಯ ಮತ್ತು ತುಟ್ಟಿಭತ್ಯೆ ಇಪಿಎಫ್‌ಗೆ ನೀಡಬೇಕಾಗುತ್ತದೆ.
ಶೇಕಡ 12ರಲ್ಲಿ ಶೇಕಡ 8.33ರಷ್ಟು ಉದ್ಯೋಗಿಗಳ ಪಿಂಚಣಿ ಯೋಜನೆಯಲ್ಲಿ (ಇಪಿಎಸ್) ಉದ್ಯೋಗಿಗಳು ಕೊಡುಗೆ ನೀಡಿದರೆ, ಇಪಿಎಫ್‌ಗೆ ಶೇಕಡ 3.67ರಷ್ಟು ಉದ್ಯೋಗಿದಾತರು ನೀಡುತ್ತಾರೆ. ಇಪಿಎಫ್ ಕಾಯ್ದೆಯ ಸೆಕ್ಷನ್ 6A ಅಡಿಯಲ್ಲಿ ಸರ್ಕಾರವು 1995ರಲ್ಲಿ ಆರಂಭ ಮಾಡಿದೆ. ಇದರ ಪ್ರಕಾರ ಪಿಂಚಣಿ ಯೋಜನೆಗೆ ಉದ್ಯೋಗಿಗಳ ಕೊಡುಗೆ ಶೇಕಡ 8.33ರಷ್ಟು ಆಗಿದೆ. ಇಪಿಎಸ್-95 ಅಡಿಯಲ್ಲಿ 5-6 ಸಾವಿರ ಪಿಂಚಣಿ ಪಡೆಯಬಹುದು. ಆದರೆ 18,857 ರೂಪಾಯಿ ಪಿಂಚಣಿ ಪಡೆಯುವುದು ಹೇಗೆ ನೋಡಿ...

ಗರಿಷ್ಠ ಪಿಂಚಣಿ ಬಗ್ಗೆ ಮಾಹಿತಿ
ನೀವು ಇಪಿಎಫ್‌ಒಗೆ ಪ್ರತಿ ತಿಂಗಳು 40,000 ರೂಪಾಯಿ ಬೇಸಿಕ್ ಪಾವತಿ ಎಂದಾದರೆ, ನೀವು ಮಾಸಿಕವಾಗಿ ಇಪಿಎಫ್‌ಗೆ ಶೇಕಡ 12ರಷ್ಟು ಅಂದರೆ 4800 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಉದ್ಯೋಗಿಗಳ ಪಿಂಚಣಿ ಯೋಜನೆಗೆ ಶೇಕಡ 12ರಷ್ಟು ಎಂದಾದರೆ ಉದ್ಯೋಗಿಗಳು 1250 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಉಳಿದಂತೆ 3550 ರೂಪಾಯಿ ಜಮೆಯಾಗಲಿದೆ.
ನೀವು ಅಧಿಕ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಂಡರೆ, ನೀವು ನಿವೃತ್ತಿ ಬಳಿಕ ಪಿಂಚಣಿಯನ್ನು ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಬೇಸಿಕ್ ಸ್ಯಾಲರಿ ಸೇರಿದಂತೆ ತುಟ್ಟಿಭತ್ಯೆ (ಅನ್ವಯವಾಗುವುದಾದರೆ) ನಿಮಗೆ ಲಭ್ಯವಾಗುತ್ತದೆ. ಅಂದರೆ ನಿಮಗೆ 18,857 [(40000 ರೂ*33)/70] ರೂಪಾಯಿ ಪಿಂಚಣಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಕಳೆದ 60 ತಿಂಗಳುಗಳಲ್ಲಿ 40,000 ರೂಪಾಯಿ ಆದಾಯವನ್ನು ಹೊಂದಿರಬೇಕಾಗುತ್ತದೆ.


Click it and Unblock the Notifications