ಕೇಂದ್ರ ಸರ್ಕಾರವು ಡಿಜಿಟಲ್ ಇಂಡಿಯಾ ಅಡಿಯಲ್ಲಿ ಹಲವಾರು ಯೋಜನೆಗಳನ್ನು, ಆಪ್‌ಗಳನ್ನು ಜಾರಿ ಮಾಡಿದೆ. ಈ ಆಪ್‌ಗಳ ಪೈಕಿ ಡಿಜಿಲಾಕರ್ ಕೂಡಾ ಒಂದಾಗಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಈ ಡಿಜಿಲಾಕರ್ ಆಪ್‌ನ ನಿರ್ವಹಣೆ ಮಾಡುತ್ತದೆ. ಡಿಜಿಲಾಕರ್ ನಾಗರಿಕರ ಡಿಜಿಟಲ್ ಡಾಕ್ಯುಮೆಂಟ್ ವ್ಯಾಲೆಟ್ ಮೂಲಕ ಒಂದು ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸೇವ್ ಮಾಡಲು ನೀಡುವ ಅವಕಾಶವಾಗಿದೆ. ಪ್ರಮುಖವಾಗಿ ಡಿಜಿಟಲ್ ಸಬಲೀಕರಣ ಇದರ ಉದ್ದೇಶವಾಗಿದೆ.
ಡಿಜಿಲಾಕರ್ ಡಾಕ್ಯುಮೆಂಟ್‌ಗಳು ಮತ್ತು ಪ್ರಮಾಣಪತ್ರಗಳ ಸಂಗ್ರಹಣೆ, ಹಂಚಿಕೆ ಮತ್ತು ಪರಿಶೀಲನೆಗಾಗಿ ಕ್ಲೌಡ್ ಆಧಾರಿತ ವೇದಿಕೆಯಾಗಿದೆ. ಪ್ಯಾನ್ ವೆರಿಫಿಕೇಷನ್ ರೆಕಾರ್ಡ್, ಕೋವಿಡ್ ಲಸಿಕೆ ಪ್ರಮಾಣಪತ್ರ, 10ನೇ ತರಗತಿಯ ಅಂಕಪಟ್ಟಿ, 12ನೇ ತರಗತಿಯ (ದ್ವಿತೀಯ ಪಿಯುಸಿ) ಅಂಕಪಟ್ಟಿ, ಡ್ರೈವಿಂಗ್ ಲೈಸೆನ್ಸ್ ಇತರೆ ಹಲವಾರು ದಾಖಲೆಗಳನ್ನು ನಾವು ಡಿಜಿಲಾಕರ್‌ನಲ್ಲಿ ಸಂಗ್ರಹ ಮಾಡಲು ಸಾಧ್ಯವಾಗುತ್ತದೆ. ಹಾಗೆಯೇ ಆಧಾರ್, ಪ್ಯಾನ್ ಕಾರ್ಡ್ ಮೊದಲಾದ ಪ್ರಮುಖ ದಾಖಲೆಗಳನ್ನು ಕೂಡಾ ಸಂಗ್ರಹ ಮಾಡಲು ಸಾಧ್ಯವಾಗುತ್ತದೆ. ಡಿಜಿಲಾಕರ್‌ನಲ್ಲಿ ಇಪಿಎಫ್‌ಒ ಸೇವೆಯೂ ಲಭ್ಯವಿದೆ. ಯುಎಎನ್, ಪಿಂಚಣಿ ಪ್ರಮಾಣಪತ್ರ ಹೀಗೆ ಪಡೆಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಡಿಜಿಲಾಕರ್ ಖಾತೆಯನ್ನು ತೆರಯುವುದು ಹೇಗೆ?
ಬಳಕೆದಾರರು ತಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಒದಗಿಸುವ ಮೂಲಕ ಡಿಜಿಲಾಕರ್‌ನಲ್ಲಿ ಖಾತೆಯನ್ನು ರಚಿಸಬಹುದು. ನಂತರ ಸರ್ಕಾರದಿಂದ ನೀಡಲಾಗುವ ವಿವಿಧ ದಾಖಲೆಗಳು ಮತ್ತು ಪ್ರಮಾಣಪತ್ರಗಳನ್ನು ಈ ಆಪ್‌ನಲ್ಲಿ ಸೇವ್ ಮಾಡಿಕೊಳ್ಳಬಹುದು. ಬೇಕಾದಾಗ ಡೌನ್‌ಲೋಡ್ ಮಾಡಬಹುದಾಗಿದೆ. ಪ್ಲಾಟ್‌ಫಾರ್ಮ್ ಬಳಕೆದಾರರಿಗೆ ತಮ್ಮ ಸ್ವಂತ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಮತ್ತು ಸಂಗ್ರಹಿಸಲು ಸಹ ಅನುಮತಿ ಇದೆ. ನೀವು ಗೂಗಲ್ ಪ್ಲೇಸ್ಟೋರ್ ಅಥವಾ https://digilocker.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಡಿಜಿಲಾಕರ್ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಹಂತ 1: ನಿಮ್ಮ ಆಂಡ್ರಾಯ್ಡ್ ಅಥವಾ ಐಒಎಸ್ ಮೊಬೈಲ್‌ನಲ್ಲಿ ಡಿಜಿಲಾಕರ್ ಮೊಬೈಲ್ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ
ಹಂತ 2: ಮೊಬೈಲ್ ನಂಬರ್ ಅನ್ನು ನಮೂದಿಸಿ ಮತ್ತು ಒಟಿಪಿ ಮೂಲಕ ವೆರಿಫಿಕೇಷನ್ ಮಾಡಿಬಿಡಿ
ಹಂತ 3: ಯೂಸರ್ ನೇಮ್ ಹಾಗೂ ಪಾಸ್‌ವರ್ಡ್ ಅನ್ನು ಬಳಕೆ ಮಾಡಿ ಖಾತೆಯನ್ನು ರಚನೆ ಮಾಡಿ
ಹಂತ 4: ನಿಮಗೆ ಆಧಾರ್ ಲಿಂಕ್ ಮಾಡುವಂತೆ ಸೂಚಿಸಲಾಗುತ್ತದೆ. ಅದರಂತೆಯೇ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ಹಾಕಿ Continue ಮೇಲೆ ಕ್ಲಿಕ್ ಮಾಡಿ
ಹಂತ 5: ಒಟಿಪಿಯನ್ನು ಹಾಕಿ ಮತ್ತೆ Continue ಕ್ಲಿಕ್ ಮಾಡಿ
ಹಂತ 6: ಖಾತೆಯನ್ನು ಯಶಸ್ವಿಯಾಗಿ ಕ್ರಿಯೇಟ್ ಮಾಡಿದ ಬಳಿಕ Dashboard ಪೇಜ್ ನಿಮಗೆ ಕಾಣಲಿದೆ.
ಇಪಿಎಫ್‌ಒ ಸೇವೆಯನ್ನು ಡಿಜಿಲಾಕರ್‌ನಲ್ಲಿ ಪಡೆಯುವುದು ಹೇಗೆ?
ಪಿಂಚಣಿ ಪಾವತಿ ಆದೇಶ, ಯುಎಎನ್ ಮತ್ತು ಸ್ಕೀಮ್ ಪ್ರಮಾಣಪತ್ರವನ್ನು ಇಪಿಎಫ್‌ಒ ಒದಗಿಸುತ್ತದೆ. ಅವುಗಳನ್ನು ಜನರು ಡಿಜಿಲಾಕರ್ ಖಾತೆಯಲ್ಲಿ ಡೌನ್‌ಲೋಡ್ ಮಾಡಬಹುದು. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಭಾರತದಲ್ಲಿ ಉದ್ಯೋಗಿಗಳಿಗೆ ಭವಿಷ್ಯ ನಿಧಿ, ಪಿಂಚಣಿ ಮತ್ತು ವಿಮಾ ಯೋಜನೆಗಳನ್ನು ನಿರ್ವಹಿಸಲು ಮತ್ತು ನಿಯಂತ್ರಿಸಲು ಸರ್ಕಾರವು ಸ್ಥಾಪಿಸಿದ ಶಾಸನಬದ್ಧ ಸಂಸ್ಥೆಯಾಗಿದೆ. ಇಪಿಎಫ್‌ಒ ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿದೆ.
* ಡಿಜಿಲಾಕರ್ ಆಪ್‌ನಲ್ಲಿ ನಿಮ್ಮ ಹೆಸರು, ಜನನ ದಿನಾಂಕ ಮತ್ತು ಪಿಪಿಒ ಸಂಖ್ಯೆಯನ್ನು ಉಲ್ಲೇಖ ಮಾಡಲಾಗುತ್ತದೆ.
* ಆಧಾರ್ ಸಂಖ್ಯೆಯನ್ನು ಹೊಂದಿರುವ ಇಪಿಎಫ್‌ಒ ಸದಸ್ಯರು ಡಿಜಿಲಾಕರ್‌ನಲ್ಲಿ ಇಪಿಎಫ್‌ಒ ನೀಡುವ ಪಿಪಿಒ ಸಂಖ್ಯೆಯನ್ನು ನೋಡಬಹುದಾಗಿದೆ.
* ಆಧಾರ್ ಕಾರ್ಡ್‌ಗೆ ನಿಮ್ಮ ಈಗಿನ ಮೊಬೈಲ್ ನಂಬರ್ ರಿಜಿಸ್ಟಾರ್ ಆಗಿದೆಯೇ ಎಂದು ನೋಡಿಕೊಳ್ಳಿ. ಇದನ್ನು ನೀವು ಇಕೆವೈಸಿ ಒಟಿಪಿಗಾಗಿ ಬಳಕೆ ಮಾಡಬೇಕಾಗುತ್ತದೆ.
* ನೀವು ಡಿಜಿಲಾಕರ್ ಆಪ್‌ಗೆ ಲಾಗಿನ್ ಆಗಿ ಯೋಜನೆ ಪ್ರಮಾಣಪತ್ರದ ಸಂಖ್ಯೆಯನ್ನು ಹಾಕಿದರೆ ನಿಮಗೆ ಯಾವುದೇ ಯೋಜನೆಯ ಕಾರ್ಡ್ ಲಭ್ಯವಾಗುತ್ತದೆ.
* ನೀವು ಡಿಜಿಲಾಕರ್‌ನಲ್ಲಿ ಯುಎಎನ್ ಕಾರ್ಡ್ ಡೌನ್‌ಲೋಡ್ ಮಾಡಬಹುದಾಗಿದೆ. ಡಿಜಿಲಾಕರ್ ನಿಮ್ಮ ಹೆಸರು, ಜನನ ದಿನಾಂಕ, ಯುಎಎನ್ ನಂಬರ್ ಕೇಳುತ್ತದೆ. ಅದನ್ನು ನಮೂದಿಸಿದರೆ ನಿಮಗೆ ಆಪ್‌ನಲ್ಲಿ ಯುಎಎನ್ ಕಾರ್ಡ್ ಲಭ್ಯವಾಗುತ್ತದೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ



Click it and Unblock the Notifications