ಮದುವೆ ಸೀಸನ್ ಎಂದರೆ ವ್ಯಾಪಾರ, ವಹಿವಾಟಿಗೂ ಒಂದು ಸೀಸನ್ ಇದ್ದಂತೆ. ದೇಶಾದ್ಯಂತ ಹಲವಾರು ವಸ್ತುಗಳ ಬೇಡಿಕೆಯು ಈ ಮದುವೆ ಸೀಸನ್‌ನಲ್ಲಿ ಇರುತ್ತದೆ. ಒಟ್ಟು ಆರು ತಿಂಗಳ ಸಂಭ್ರಮದಲ್ಲಿ ಉತ್ತಮ ವ್ಯಾಪಾರದ ನಿರೀಕ್ಷೆಯನ್ನು ಎಲ್ಲ ವ್ಯಾಪಾರಿಗಳು ಹೊಂದಿರುತ್ತದೆ.
ಜನವರಿಯಿಂದ ಮದುವೆ ಸೀಸನ್ ಆರಂಭವಾಗಲಿದ್ದು, ಜೂನ್ ಅಂತ್ಯದವರೆಗೂ ಇರಲಿದೆ. ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಅಂದಾಜಿನ ಪ್ರಕಾರವಾಗಿ ಒಟ್ಟಾಗಿ ಸುಮಾರು 53 ಶುಭ ದಿನಗಳು ಇರಲಿದೆ. ಈ ಅವಧಿಯಲ್ಲಿ ದೇಶದಾದ್ಯಂತ ಸುಮಾರು 70 ಲಕ್ಷ ವಿವಾಹಗಳು ನಡೆಯಲಿದೆ. ಸುಮಾರು 13 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆಯುವ ನಿರೀಕ್ಷೆಯಿದೆ.

ದೆಹಲಿ ಒಂದು ರಾಜ್ಯದಲ್ಲೇ ಸುಮಾರು 1.25 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ 7 ಲಕ್ಷಕ್ಕೂ ಹೆಚ್ಚು ವಿವಾಹಗಳು ನಡೆಯಲಿವೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ 3.75 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ದೇಶದಾದ್ಯಂತ 32 ಲಕ್ಷ ವಿವಾಹಗಳನ್ನು ನಡೆಸಲಾಗಿದೆ.
ಎಷ್ಟು ಖರ್ಚಿನಲ್ಲಿ ವಿವಾಹ ನಡೆಯಲಿದೆ?
ಸಿಎಐಟಿ ರಾಷ್ಟ್ರೀಯ ಅಧ್ಯಕ್ಷರಾದ ಬಿ.ಸಿ.ಭಾರ್ತಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳುವಂತೆ ಮದುವೆಗೆ 53 ಮಂಗಳಕರ ದಿನಗಳಿದ್ದು, ಈ ಆರು ತಿಂಗಳ ಮದುವೆಯ ಸೀಸನ್‌ನಲ್ಲಿ ಸುಮಾರು 10 ಲಕ್ಷ ಮದುವೆಗಳಿಗೆ ಅಂದಾಜು 3 ಲಕ್ಷ ರೂಪಾಯಿ ವೆಚ್ಚವಾಗಲಿದೆ.
ಈ ಪೈಕಿ ಸುಮಾರು 10 ಲಕ್ಷ ಮದುವೆಗೆ ಸುಮಾರು 5 ಲಕ್ಷ ರೂಪಾಯಿ ವೆಚ್ಚ, 15 ಲಕ್ಷ ಮದುವೆಗೆ 10 ಲಕ್ಷ ರೂಪಾಯಿ ವೆಚ್ಚ, 10 ಲಕ್ಷ ಮದುವೆಗೆ 15 ಲಕ್ಷ ರೂಪಾಯಿ ವೆಚ್ಚ, 10 ಲಕ್ಷ ಮದುವೆಗೆ 25 ಲಕ್ಷ ರೂಪಾಯಿ ವೆಚ್ಚ, 10 ಲಕ್ಷ ಮದುವೆಯು 35 ಲಕ್ಷ ರೂಪಾಯಿ ವೆಚ್ಚ, 3 ಲಕ್ಷ ಮದುವೆಗಳು 50 ಲಕ್ಷ ರೂಪಾಯಿ ವೆಚ್ಚ, 2 ಲಕ್ಷ ಮದುವೆಗಳು 1 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ವೆಚ್ಚದಲ್ಲಿ ನಡೆಯಲಿದೆ.
ಭರ್ಜರಿಯಾಗಿ ನಡೆಯುವ ವ್ಯಾಪಾರ
"ಮದುವೆ ಸೀಸನ್‌ಗೂ ಮುನ್ನವೇ ಮನೆಗಳ ದುರಸ್ತಿ, ಪೇಂಟ್, ಆಭರಣಗಳು, ಉಡುಪುಗಳು, ಪೀಠೋಪಕರಣಗಳು, ಪಾದರಕ್ಷೆಗಳು, ಶುಭಾಶಯ ಪತ್ರಗಳು, ಸಿಹಿತಿಂಡಿಗಳು, ಹಣ್ಣುಗಳು, ಪೂಜಾ ಸಾಮಗ್ರಿಗಳು, ದಿನಸಿ, ಆಹಾರ ಧಾನ್ಯಗಳು, ಅಲಂಕಾರ ವಸ್ತುಗಳು, ಎಲೆಕ್ಟ್ರಾನಿಕ್ಸ್ ಮತ್ತು ಅನೇಕ ಉಡುಗೊರೆ ವಸ್ತುಗಳು ಬೇಡಿಕೆ ಅಧಿಕವಾಗಿರುತ್ತದೆ. ಈ ಸೀಸನ್‌ನಲ್ಲಿ ಭರ್ಜರಿಯಾಗಿ ವ್ಯಾಪಾರ ನಡೆಯುತ್ತದೆ," ಎಂದು ಬಿ.ಸಿ.ಭಾರ್ತಿಯಾ ಮತ್ತು ಖಂಡೇಲ್ವಾಲ್ ತಿಳಿಸಿದರು.
"ಇದನ್ನು ಹೊರತುಪಡಿಸಿ ಹಾಲ್, ಹೊಟೇಲ್‌ಗಳು, ಪಾರ್ಕ್‌ಗಳು, ಫಾರ್ಮ್ ಹೌಸ್‌ಗಳು, ಕ್ಯಾಟೆರಿಂಗ್, ಕ್ಯಾಬ್ ಸೇವೆ, ವಿಡಿಯೋಗ್ರಾಫರ್, ಫೋಟೋಗ್ರಾಫರ್, ಡಿಜೆ, ಹಾಡುಗಾರರು, ವಾದ್ಯ-ತಬಲ ವೃಂದ, ಪೂಜಾರಿಗಳು, ಪಂಡಿತರು, ಗುರಿಕಾರರ ಬೇಡಿಕೆ ಕೂಡಾ ಈ ಮದುವೆಯ ಸೀಸನ್‌ನಲ್ಲಿಯೇ ಅಧಿಕವಾಗುತ್ತದೆ," ಎಂದು ಮಾಹಿತಿ ನೀಡಿದರು.


Click it and Unblock the Notifications