ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ವಾಟ್ಸಾಪ್‌ನಲ್ಲಿ ಈಗ ಪ್ರೀಮಿಯಂ ವೇರಿಫಿಕೇಷನ್ ಸೇವೆ ಲಭ್ಯವಿದ್ದು, ಪ್ರೋಫೈಲ್‌ಗಳಿಗೆ ಬ್ಲ್ಯೂ ಬ್ಯಾಡ್ಜ್ ನೀಡಲಾಗುತ್ತದೆ ಎಂದು ಪೋಷಕ ಸಂಸ್ಥೆ ಮೆಟಾ ಮಾಹಿತಿ ನೀಡಿದೆ. ಈಗಾಗಲೇ ಟ್ವಿಟ್ಟರ್‌ನಲ್ಲಿ ಬ್ಲ್ಯೂ ಟಿಕ್ ವೇರಿಫಿಕೇಷನ್ ಇದ್ದು ಇದಕ್ಕಾಗಿ ಚಂದಾದಾರರು ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ.
ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ವಾಟ್ಸಾಪ್‌ನಲ್ಲಿಯೂ ಜನರು ಬ್ಲ್ಯೂ ಟಿಕ್ ಬ್ಯಾಡ್ಜ್ ಅನ್ನು ಪಡೆಯಬೇಕಾದರೆ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಖಾತೆಯ ಪ್ರೊಫೈಲ್ ವೇರಿಫಿಕೇಷನ್ ಮಾಡಲು ಬಯಸುವ ಜನರು ಪ್ರೀಮಿಯಂ ಸಬ್‌ಸ್ಕ್ರಿಪ್‌ಷನ್‌ಗೆ ಮಾಸಿಕವಾಗಿ ವೆಬ್‌ಗಾಗಿ 1.99 ಡಾಲರ್ ಪಾವತಿ ಮಾಡಬೇಕಾಗುತ್ತದೆ. iOS ಪ್ಲಾಟ್‌ಫಾರ್ಮ್‌ಗಾಗಿ ಮಾಸಿಕವಾಗಿ 14.99 ಡಾಲರ್ ಪಾವತಿಸಬೇಕಾಗುತ್ತದೆ.
ಪ್ರಸ್ತುತ ಈ ಸೇವೆಯನ್ನು ಕೆಲವು ದೇಶಗಳಲ್ಲಿ ಮಾತ್ರ ಆರಂಭ ಮಾಡಲಾಗುತ್ತಿದೆ. ಈ ವಾರದಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್‌ನಲ್ಲಿ ಮೊದಲ ಬಾರಿಗೆ ಪ್ರೀಮಿಯಂ ವೇರಿಫಿಕೇಷನ್ ಸೇವೆಯನ್ನು ಪ್ರಾರಂಭ ಮಾಡಲಾಗುತ್ತದೆ. ಈ ಸೇವೆಯ ಬಗ್ಗೆ ಅಧಿಕ ಮಾಹಿತಿ ಈ ಕೆಳಗಿದೆ ಮುಂದೆ ಓದಿ....

ಸೇವೆಯ ಬಗ್ಗೆ ಅಧಿಕ ಮಾಹಿತಿ ತಿಳಿಯಿರಿ
ಸರ್ಕಾರದ ಗುರುತಿನ ಆಧಾರದಲ್ಲಿ ಜನರ ಪ್ರೋಫೈಲ್ ಅನ್ನು ವೇರಿಫಿಕೇಷನ್ ಮಾಡಲಾಗುತ್ತದೆ. ಪ್ರೊಫೈಲ್ ವೇರಿಫಿಕೇಷನ್ ಜೊತೆಗೆ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಸಬ್‌ಸ್ಕ್ರಿಪ್‌ಷನ್ ಆಯ್ಕೆಯು ಖಾತೆಗೆ ಹೆಚ್ಚುವರಿ ಸುರಕ್ಷತೆಯನ್ನು ನೀಡಲಿದೆ. ಆದರೆ ಈ ಖಾತೆಯ ಬಗ್ಗೆ ಹೆಚ್ಚುವರಿ ಮಾಹಿತಿಯನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ವಾಟ್ಸಾಪ್‌ನ ಪೋಷಕ ಸಂಸ್ಥೆಯಾದ ಮೆಟಾ ಈವರೆಗೂ ಬಿಡುಗಡೆ ಮಾಡಿಲ್ಲ.
ಸಾಮಾಜಿಕ ಜಾಲತಾಣ ಸಂಸ್ಥೆಯಾದ ಫೇಸ್‌ಬುಕ್‌ನ ಸಹಸಂಸ್ಥಾಪಕ ಮಾರ್ಕ್ ಜುಕನ್‌ಬರ್ಗ್ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. "ಶುಭ ಮುಂಜಾನೆ ಹಾಗೂ ನಿಮಗೆ ಉತ್ಪನ್ನಕ್ಕೆ ಸಂಬಂಧಿಸಿದಂತೆ ಒಂದು ಘೋಷಣೆಯಿದೆ. ಈ ವಾರದಲ್ಲಿ ನಾವು ಮೆಟಾ ವೇರಿಫೈ ಮಾಡಿದ ಚಂದಾದಾರಿಕೆ ಸೇವೆಯನ್ನು ಆರಂಭ ಮಾಡುತ್ತಿದ್ದೇವೆ. ನೀವು ಸರ್ಕಾರದ ಐಡಿ ಮೂಲಕ ನಿಮ್ಮ ಖಾತೆಯನ್ನು ವೇರಿಫೈ ಮಾಡಿಕೊಳ್ಳಬಹುದು. ಈ ಮೂಲಕ ನೀವು ಬ್ಲ್ಯೂ ಬ್ಯಾಡ್ಜ್ ಅನ್ನು ಪಡೆಯಬಹುದು. ನಿಮ್ಮ ಖಾತೆಗೆ ಅಧಿಕ ಸುರಕ್ಷತೆಯನ್ನು ಕೂಡಾ ಪಡೆಯಬಹುದು. ಗ್ರಾಹಕರ ಸೇವೆಯ ನೇರ ಪ್ರಯೋಜನವನ್ನು ಪಡೆಯಬಹುದು," ಎಂದು ಮಾಹಿತಿ ನೀಡಿದ್ದಾರೆ.
"ಈ ಹೊಸ ಸೇವೆಯು ನಮ್ಮ ಆಪ್‌ನಲ್ಲಿ ಸುರಕ್ಷತೆ ಮತ್ತು ದೃಢೀಕರಣವನ್ನು ಹೆಚ್ಚುಸುತ್ತದೆ. ಈ ಮೆಟಾ ವೇರಿಫಿಕೇಷನ್ ಸೇವೆಯು ವೆಬ್‌ಗಾಗಿ 1.99 ಡಾಲರ್ ಮತ್ತು iOS ಪ್ಲಾಟ್‌ಫಾರ್ಮ್‌ಗಾಗಿ ಮಾಸಿಕವಾಗಿ 14.99 ಡಾಲರ್‌ನಿಂದ ಆರಂಭವಾಗುತ್ತದೆ. ಈ ಸೇವೆಯನ್ನು ನಾವು ಆರಂಭಿಕವಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ನಲ್ಲಿ ಈ ವಾರ ಆರಂಭಿಸುತ್ತೇವೆ, ಶೀಘ್ರವೇ ಇತರೆ ದೇಶಗಳಿಗೆ ವಿಸ್ತರಿಸಲಾಗುವುದು," ಎಂದೂ ಮಾರ್ಕ್ ಜುಕನ್‌ಬರ್ಗ್ ತಿಳಿಸಿದ್ದಾರೆ.
ಟ್ವಿಟ್ಟರ್‌ನಲ್ಲಿ ಈಗಾಗಲೇ ಬ್ಲ್ಯೂ ಟಿಕ್ ಚಂದಾದಾರಿಕೆ ಇದೆ. ಇತ್ತೀಚೆಗೆ ಪ್ರೀಮಿಯಂ ಸೇವೆಯಡಿಯಲ್ಲಿ ಟ್ವಿಟ್ಟರ್ ಬ್ಲ್ಯೂ ಚಂದಾದಾರಿಕೆಯನ್ನು ಆರಂಭಿಸಿದೆ. ಭಾರತೀಯ ಚಂದಾದಾರರು ಮಾಸಿಕವಾಗಿ ವೆಬ್‌ಸೈಟ್‌ನಲ್ಲಿ ಟ್ವಿಟ್ಟರ್ ಬ್ಲ್ಯೂ ಟಿಕ್‌ಗೆ 650 ರೂಪಾಯಿ ಮತ್ತು ಮೊಬೈಲ್‌ನಲ್ಲಿ ಟ್ವಿಟ್ಟರ್ ಖಾತೆ ಬ್ಲ್ಯೂ ಟಿಕ್‌ಗೆ 900 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications