ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಬಾಕ್ಸ್ ಆಫೀಸ್ ಅತೀ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಒಟ್ಟು ಇಂಡಸ್ಟ್ರೀಯ ಬೆಳವಣಿಗೂ ಈ ಬಾಕ್ಸ್ ಆಫೀಸ್‌ನ ಲೆಕ್ಕಾಚಾರದಲ್ಲಿ ನಿರ್ಧಾರ ಮಾಡಲಾಗುತ್ತದೆ. ಬಾಕ್ಸ್ ಆಫೀಸ್ ಸಂಗ್ರಹದ ಮೇಲೆಯೇ ಒಂದು ಸಿನಿಮಾವು ಎಷ್ಟು ಯಶಸ್ವಿಯಾಗಿದೆ ಎಂಬ ನಿರ್ಧಾರವನ್ನು ಕೂಡಾ ಮಾಡಲಾಗುತ್ತದೆ.
ಇನ್ನು ಸಿನಿಮಾದಲ್ಲಿ ನಟ, ನಟಿಯರ ಸಂಭಾವನೆ ಅಥವಾ ವೇತನವು ಕೂಡಾ ಈ ಬಾಕ್ಸ್ ಆಫೀಸ್ ಸಂಗ್ರಹದ ಮೇಲೆ ನಿರ್ಧರಿತವಾಗುತ್ತದೆ. ಇನ್ನು ಇಷ್ಟು ಮಾತ್ರವಲ್ಲ ಇತರೆ ಹಲವಾರು ಅಂಶಗಳು ಕೂಡ ಭಾರತದಲ್ಲಿ ನಟ, ನಟಿಯರ ವೇತನದ ಮೇಲೆ ಪ್ರಭಾವ ಬೀರುತ್ತದೆ. ಯಾವೆಲ್ಲ ಅಂಶಗಳು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ನಟ, ನಟಿಯರ ಸಂಭಾವನೆ ಮೇಲೆ ಫ್ರಭಾವ ಬೀರುವ ಅಂಶಗಳು
ಬಾಕ್ಸ್ ಆಫೀಸ್ ಸಂಗ್ರಹ: ಬಾಕ್ಸ್ ಆಫೀಸ್‌ನ ಲೆಕ್ಕಾಚಾರದಲ್ಲಿ ಒಂದು ಸಿನಿಮಾ ಎಷ್ಟು ಯಶಸ್ವಿಯಾಗಿದೆ ಎಂದು ನಿರ್ಧಾರ ಮಾಡಲಾಗುತ್ತದೆ. ನಟರ ವೇತನದ ಮೇಲೆಯೂ ಬಾಕ್ಸ್ ಆಫೀಸ್ ಸಂಗ್ರಹವು ಪ್ರಭಾವ ಉಂಟು ಮಾಡುತ್ತದೆ. ಒಂದು ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಅಧಿಕವಾಗಿರುತ್ತದೆಯೋ ಅಷ್ಟು ನಟ, ನಟಿಯರ ಸಂಭಾವನೆ ಅಧಿಕವಾಗುವ ಸಾಧ್ಯತೆ ಇರುತ್ತದೆ.
ವಿಮರ್ಶಾತ್ಮಕ ಮೆಚ್ಚುಗೆ: ಬಾಕ್ಸ್ ಆಫೀಸ್ ಸಂಗ್ರಹವು ಅತೀ ಮುಖ್ಯವಾಗಿರುವಾಗಲೇ ಆ ಸಿನಿಮಾಕ್ಕೆ ಎಷ್ಟು ವಿಮರ್ಶೆ ಮಾಡಲಾಗುತ್ತದೆ ಎಂಬುವುದು ಕೂಡಾ ಅತೀ ಮುಖ್ಯವಾಗುತ್ತದೆ. ವಿಮರ್ಶೆಯು ಕೂಡಾ ನಟ, ನಟಿಯರ ಸಂಭಾವನೆ ಮೇಲೆ ಫ್ರಭಾವ ಬೀರುತ್ತದೆ. ನಟ, ನಟಿಯರ ನಟನೆಯನ್ನು ವಿಮರ್ಶಕರು ಹೊಗಳಿದಷ್ಟು ನಟರ ಡಿಮ್ಯಾಂಡ್ ಅಧಿಕವಾಗುತ್ತದೆ.
ಜನಪ್ರಿಯತೆ ಮತ್ತು ಫ್ಯಾನ್ ಫಾಲೋವಿಂಗ್: ಯಾವ ನಟರುಗಳಿಗೆ ಅಧಿಕ ಫ್ಯಾನ್‌ಗಳು ಇರುತ್ತಾರೋ ಹಾಗೆಯೇ ಯಾರು ಸಾಮಾಜಿಕ ಜಾಲತಾಣದಲ್ಲಿ ಅಧಿಕ ಫಾಲೋವರ್‌ಗಳನ್ನು ಹೊಂದಿರುತ್ತಾರೋ ಅವರು ಸಿನಿಮಾಗಳಲ್ಲಿ ಅಧಿಕ ಸಂಭಾವನೆಯನ್ನು ಪಡೆಯುವ ಸಾಧ್ಯತೆ ಇರುತ್ತದೆ. ಫ್ಯಾನ್ಸ್‌ಗಳು ತಮ್ಮ ನೆಚ್ಚಿನ ನಟನ ಸಿನಿಮಾ ನೋಡಲು ಎಂದಿಗೂ ಉತ್ಸುಕರಾಗಿರುತ್ತಾರೆ. ಹಾಗಿರುವಾಗ ಪ್ರೊಡ್ಯೂಸರ್‌ಗಳು ಸಾಮಾನ್ಯವಾಗಿಯೇ ಅಧಿಕ ಫ್ಯಾನ್ಸ್ ಇರುವ ನಟರುಗಳಿಗೆ ಅಧಿಕ ಸಂಭಾವನೆ ನೀಡುತ್ತಾರೆ. ನಟರುಗಳು ಕೂಡಾ ಡಿಮ್ಯಾಂಡ್ ಮಾಡುತ್ತಾರೆ.
ಚಲನಚಿತ್ರ ಪ್ರಕಾರ: ಒಂದು ಚಲನಚಿತ್ರ ಅಥವಾ ಸಿನಿಮಾವು ಯಾವ ಪ್ರಕಾರದ್ದಾಗಿದೆ ಎಂಬುವುದು ಕೂಡಾ ನಟರ ಸಂಭಾವನೆಯ ಮೇಲೆ ಪ್ರಭಾವ ಬೀರುತ್ತದೆ. ವಾಣಿಜ್ಯ ಚಿತ್ರಗಳು ಹೆಚ್ಚಿನ ಬಜೆಟ್ ಅನ್ನು ಹೊಂದಿರುತ್ತವೆ, ಅಂದರೆ ನಟರಿಗೆ ಹೆಚ್ಚಿನ ಸಂಬಳ ನೀಡಲಾಗುತ್ತದೆ. ಮತ್ತೊಂದೆಡೆ ನಿರ್ದಿಷ್ಟ ಪ್ರೇಕ್ಷಕರಿಗಾಗಿ ಮಾತ್ರ ಮಾಡಲಾಗುವ ಸಿನಿಮಾಗಳು ಕಡಿಮೆ ಬಜೆಟ್ ಹೊಂದಿರುತ್ತದೆ. ಅದರಿಂದಾಗಿ ನಟರ ವೇತನ ಕೂಡಾ ಕಡಿಮೆಯಾಗಿರುತ್ತದೆ.
ನಟರ ಅನುಭವ ಮತ್ತು ಬೇಡಿಕೆ: ಹಲವಾರು ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿರುವವರಿಗೆ, ನಟನೆಯಲ್ಲಿ ಅಧಿಕ ಅನುಭವವನ್ನು ಹೊಂದಿರುವವರಿಗೆ ಸಾಮಾನ್ಯವಾಗಿ ಅಧಿಕ ಡಿಮ್ಯಾಂಡ್ ಇರುತ್ತದೆ, ಹಾಗೆಯೇ ಅಧಿಕ ಸಂಭಾವನೆ ಕೂಡಾ ಇರುತ್ತದೆ. ಹಾಗೆಯೇ ತಮ್ಮ ನಟನೆಯ ಶೈಲಿಯಿಂದಾಗಿ, ಲುಕ್‌ನಿಂದ, ವಿಭಿನ್ನತೆಯಿಂದ ಜನಮನ ಗೆದ್ದಿರುವ ನಟರುಗಳಿಗೆ ಅಧಿಕ ಡಿಮ್ಯಾಂಡ್ ಇರುತ್ತದೆ, ಹಾಗಿದ್ದಾಗಲೂ ಸಂಭಾವನೆ ಅಧಿಕವಾಗಿರುತ್ತದೆ.
ಇನ್ನು ನಾವು ಸ್ಯಾಂಡಲ್‌ವುಡ್‌ನಲ್ಲಿ ನೋಡಿದಾಗ ಅಧಿಕ ಸಂಭಾವನೆಯನ್ನು ಪಡೆಯುವ ನಟರುಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕೆಜಿಎಫ್, ರಾಮಚಾರಿ ಮೂಲಕ ಜನಪ್ರಿಯವಾಗಿರುವ ರಾಕಿಂಗ್ ಸ್ಟಾರ್ ಯಶ್ ಬರುತ್ತಾರೆ. ಎರಡನೇ ಸ್ಥಾನದಲ್ಲಿ ಡಿ-ಬಾಸ್ ದರ್ಶನ್ ಇದ್ದಾರೆ. ಮೂರನೇ ಸ್ಥಾನದಲ್ಲಿ ಕಿಚ್ಚ ಸುದೀಪ್, ನಾಲ್ಕನೇ ಸ್ಥಾನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಐದನೇ ಸ್ಥಾನದಲ್ಲಿ ಕಾಂತಾರ ಖ್ಯಾತಿಯ ರಿಷನ್ ಶೆಟ್ಟಿ ಇದ್ದಾರೆ.


Click it and Unblock the Notifications