ಹಣಕಾಸು ಸಮಸ್ಯೆ ಇದೆಯಾ? ಪ್ರಮೋಷನ್ ಇಷ್ಟೊತ್ತಿಗೆ ಸಿಗಬೇಕಾಗಿತ್ತು, ಆದರೂ ಸಿಕ್ಕಿಲ್ವಾ? ದಿನದಿನಕ್ಕೂ ವ್ಯಾಪಾರ ಕುಸಿಯುತ್ತಾ ಇದೆಯಾ? - ಇಂಥ ಸಮಸ್ಯೆಗಳಿಂದ ಆಚೆ ಬರುವುದಕ್ಕೆ ಅಷ್ಟೇನೂ ದುಬಾರಿ ಅಲ್ಲದ ವಾಸ್ತು ಸಲಹೆಯೊಂದಿದೆ. ನಿಮಗೆ ನಂಬಿಕೆ ಇರುವುದಾದರೆ ಜೇಬಿಗೆ- ವ್ಯಾನಿಟಿ ಬ್ಯಾಗ್ ಗೆ ವಜ್ಜೆ ಆಗದಂತೆ ಇದನ್ನು ಅನುಸರಿಸಬಹುದು.
ಏನು ಆ ಪರಿಹಾರ ಅನ್ನೋದಾದರೆ, ಮನೆಯಲ್ಲಿ ಅಥವಾ ವ್ಯಾಪಾರ ಮಾಡುವ ಸ್ಥಳದಲ್ಲಿ ಅಥವಾ ಉದ್ಯೋಗ ಸ್ಥಳದಲ್ಲಿ ಫೆಂಗ್ ಶುಯ್ ನ ಒಂದು ಜೊತೆ ಒಂಟೆಯ ಮೂರ್ತಿಗಳನ್ನು ಇಡಬೇಕು. ಹಾಗಂತ ಅದರ ಎತ್ತರದಷ್ಟು ಅಂತೇನೂ ಅಂದುಕೊಳ್ಳಬೇಡಿ. ಚಿಕ್ಕದಾದ ಎರಡು ಒಂಟೆಗಳ ಮೂರ್ತಿಯನ್ನು ಇಟ್ಟುಕೊಂಡರೆ ಸಾಕು. ಸಂತೋಷ, ನೆಮ್ಮದಿ ಹಾಗೂ ಯಶಸ್ಸು ನಿಮ್ಮದಾಗುತ್ತದೆ.
ಫೆಂಗ್ ಶುಯ್ ಒಂಟೆಗಳು ಎಂದು ಕೇಳಿದರೆ ಇವುಗಳನ್ನು ಖರೀದಿ ಮಾಡಬಹುದು. ಇದರಿಂದ ದುರದೃಷ್ಟ ದೂರವಾಗುತ್ತದೆ. ವ್ಯಾಪಾರ- ವ್ಯವಹಾರದಲ್ಲಿ ಸಮಸ್ಯೆಗಳಿದ್ದರೆ ಬಗೆಹರಿಯುತ್ತವೆ.
ಪೂರ್ವ ದಿಕ್ಕಿನ ಕಡೆಗೆ ಒಂದು ಜೊತೆ ಒಂಟೆ ಮೂರ್ತಿ
ವಾಸ್ತು ಪ್ರಕಾರ ಏನು ಹೇಳುತ್ತದೆ ಅಂದರೆ, ಓದುವ ಕೋಣೆಯಲ್ಲಿ ಅಥವಾ ಕಚೇರಿಯಲ್ಲಿ ಎರಡು ಒಂಟೆ ಮೂರ್ತಿಗಳಲ್ಲಿ ಇಟ್ಟಲ್ಲಿ ಉದ್ಯೋಗ ಅಥವಾ ವೃತ್ತಿಯಲ್ಲಿನ ಸಮಸ್ಯೆಗಳು ನಿವಾರಣೆ ಆಗಿ, ಏಕಾಗ್ರತೆ ಹೆಚ್ಚಾಗುತ್ತದೆ. ಯಾರಿಗೆ ತಮಗೆ ಅದೃಷ್ಟ ಕೈ ಕೊಡುತ್ತಿದೆ ಎಂದೆನಿಸುತ್ತದೆಯೋ ಅಂಥವರು ಮನೆ ಅಥವಾ ಉದ್ಯೋಗ ಸ್ಥಳದಲ್ಲಿ ಪೂರ್ವ ದಿಕ್ಕಿನ ಕಡೆಗೆ ಒಂದು ಜೊತೆ ಒಂಟೆ ಮೂರ್ತಿಗಳನ್ನು ಇಡಬೇಕು.
ಪರಿಶ್ರಮ ಹಾಗೂ ಹೋರಾಟದ ಸಂಕೇತ
ಹಣಕಾಸಿನ ಸಮಸ್ಯೆಗಳು ಕಾಡುತ್ತಿದ್ದಲ್ಲಿ ಒಂಟೆಯ ಮೂರ್ತಿಗಳನ್ನು ಪೂಜಾ ಸ್ಥಳದಲ್ಲಿ ಇಡಬೇಕು. ಆಗ ಶ್ರೀಮಂತಿಕೆ ಬರುತ್ತದೆ. ಫೆಂಗ್ ಶುಯ್ ಪ್ರಕಾರ, ಒಂಟೆಯು ಪರಿಶ್ರಮ ಹಾಗೂ ಹೋರಾಟದ ಸಂಕೇತ, ಹೇಗೆ ಒಂಟೆಯು ಎಂಥ ಸನ್ನಿವೇಶದಲ್ಲೂ ದೃಢವಾಗಿ ಇರುತ್ತದೋ ಅದೇ ರೀತಿ ಒಂಟೆಯ ಮೂರ್ತಿಗಳನ್ನು ಇಟ್ಟುಕೊಳ್ಳುವ ವ್ಯಕ್ತಿಗೆ ಸಮಸ್ಯೆ ಎದುರಿಸುವ ಹಾಗೂ ನಿವಾರಿಸಿಕೊಳ್ಳುವ ಶಕ್ತಿ ಬರುತ್ತದೆ.
ವಾಯವ್ಯ ಭಾಗದಲ್ಲಿ ಇಟ್ಟರೆ ಪಾಸಿಟಿವ್ ಎನರ್ಜಿ
ಇನ್ನು ಒಂಟೆಯ ಮೂರ್ತಿಗಳನ್ನು ಮನೆಯ ವಾಯವ್ಯ ಭಾಗದಲ್ಲಿ ಇರಿಸುವುದರಿಂದ ಪಾಸಿಟಿವ್ ಎನರ್ಜಿ ಬರುತ್ತದೆ. ಒಂಟೆ ಸ್ಥಿರತೆಯ ಸಂಕೇತ ಕೂಡ ಹೌದು. ಆದ್ದರಿಂದ ಒಬ್ಬ ವ್ಯಕ್ತಿಗೆ ಮಾನಸಿಕವಾಗಿ ನೆಮ್ಮದಿ ದೊರೆಯುತ್ತದೆ. ಮನೆಯಲ್ಲಿ ಒಂಟೆಯ ಚಿತ್ರ ಹಾಕುವುದರಿಂದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ.
ವೃತ್ತಿ ಬದುಕಿನಲ್ಲಿ ಯಶಸ್ಸು ದೊರೆಯುತ್ತದೆ
ಹೇಗೆ ಒಂಟೆಯು ಸುದೀರ್ಘ ಪ್ರಯಾಣ ಮಾಡುವ ಸಾಮರ್ಥ್ಯ ಹೊಂದಿರುತ್ತದೋ ಅದೇ ರೀತಿ ಒಂಟೆಯ ಮೂರ್ತಿ ಇಟ್ಟುಕೊಳ್ಳುವ ಮೂಲಕ ಒಬ್ಬ ವ್ಯಕ್ತಿ ವೃತ್ತಿ ಜೀವನದಲ್ಲಿ ಯಶಸ್ಸಿನ ಏಣಿಯನ್ನು ಏರುವಲ್ಲಿ ನೆರವಾಗುತ್ತದೆ. ಪ್ರಗತಿಯ ವೇಗ ಹೆಚ್ಚಾಗುತ್ತದೆ. ಮಕ್ಕಳು ತಮ್ಮ ಪೋಷಕರ ಮಾತನ್ನು ಕೇಳುತ್ತಿಲ್ಲ ಎಂದಲ್ಲಿ ಆ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ. ಮನೆಯ ಡ್ರಾಯಿಂಗ್ ರೂಮ್ ನಲ್ಲಿ ಒಂಟೆಯ ಮೂರ್ತಿ ಇಟ್ಟರೆ ಶಾಂತಿ, ನೆಮ್ಮದಿ ನೆಲೆಸುತ್ತದೆ.


Click it and Unblock the Notifications