ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ನಿಯಮವನ್ನು ಜಾರಿಗೆ ತಂದಿದೆ. ಇದುವೇ ಟೋಕನೈಜೇಶನ್ ಆಗಿದೆ. ಇದರ ಗಡುವು 2022ರ ಸೆಪ್ಟೆಂಬರ್ 30 ಆಗಿದೆ. ಅದಕ್ಕೂ ಮುನ್ನ ನೀವು ಈ ಕಾರ್ಯವನ್ನು ಮಾಡಬೇಕಾಗಿದೆ.
ವಹಿವಾಟಿನ ಸಂದರ್ಭದಲ್ಲಿ ಸುರಕ್ಷತೆಯನ್ನು ಒದಗಿಸುವ ನಿಟ್ಟಿನಲ್ಲಿ ಆರ್‌ಬಿಐ ಈ ಹೊಸ ವ್ಯವಸ್ಥೆಯನ್ನು ಆರಂಭ ಮಾಡಿದೆ. ಈ ಹಿಂದೆ ಟೋಕನೈಸೇಶನ್ ಗಡುವು ಜೂನ್ 30 ಆಗಿತ್ತು. ಆದರೆ ಇದಕ್ಕೆ ಭಾರೀ ವಿರೋಧಗಳು ವ್ಯಕ್ತವಾಗಿದೆ. ಈ ಬೆನ್ನಲ್ಲೇ ಗಡುವನ್ನು ಜೂನ್ ಕೊನೆಯಲ್ಲಿ ವಿಸ್ತರಣೆ ಮಾಡಲಾಗಿದೆ.
ಗ್ರಾಹಕರ ವಿವರವನ್ನು ಮರೆಮಾಚಿ ಬರೀ ವಹಿವಾಟು ನಡೆಸುವ ಅವಕಾಶವನ್ನು ಈ ಟೋಕನ್‌ಗಳು ನೀಡುತ್ತದೆ. ಗುಪ್ತ ಮಾಹಿತಿಯನ್ನು ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆ ಆರ್‌ಬಿಐ ಪರಿಚಯಿಸಿದೆ. ಕಾರ್ಡ್ ಮಾಹಿತಿಯನ್ನು ಟೋಕನ್‌ನೊಂದಿಗೆ ವಿನಿಮಯ ಮಾಡಿಕೊಳ್ಳುವ ತಂತ್ರವೇ ಟೋಕನೈಜೇಶನ್ ಆಗಿದೆ. ಈ ಬಗ್ಗೆ ಅಧಿಕ ಮಾಹಿತಿ ಹಾಗೂ ಟೋಕನ್ಸ್ ಜನರೇಟ್ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ.....
ಟೋಕನೈಜೇಶನ್ ಎಲ್ಲಾ ಅಪಾಯ ದೂರ ಮಾಡುತ್ತಾ?
ಟೋಕನ್ ರೂಪದಲ್ಲಿ ಕಾರ್ಡ್ ಅನ್ನು ವರ್ಗಾವಣೆ ಮಾಡುವುದೇ ಟೋಕನೈಜೇಶನ್ ಆಗಿದೆ. ಇನ್ನು ಮುಂದೆ ಸಂಪರ್ಕರಹಿತ ಬ್ಯಾಂಕಿಂಗ್‌ಗೆ ಯಾವುದೇ ಸಿವಿವಿ (ಕಾರ್ಡ್ ವೆರಿಫಿಕೇಶನ್ ವಾಲ್ಯೂ) ಬೇಕಾಗಿಲ್ಲ. ಇದು ಸಂಪೂರ್ಣವಾಗಿ ನೆಟ್‌ವರ್ಕ್ ಅನ್ನು ಸುರಕ್ಷಿತಗೊಳಿಸಲಿದೆ. ಈ ಟೋಕನೈಜೇಶನ್ ಡೇಟಾ ಕಳ್ಳತನವನ್ನು ಸಂಪೂರ್ಣವಾಗಿ ತಡೆಗಟ್ಟಲಾರದು, ಆದರೆ ಈ ಡೇಟಾ ಕಳ್ಳತನದ ಸಾಧ್ಯತೆಯನ್ನು ಹೆಚ್ಚು ಕಡಿಮೆ ಮಾಡುತ್ತದೆ. ಆಪ್‌ಗಳ ಮೂಲಕ ನೀವು ಶಾಪಿಂಗ್ ಮಾಡುವುದನ್ನು ಈ ಹೊಸ ವಿಧಾನ ಟೋಕನೈಜೇಶನ್ ನೀವು ಸುಲಭವಾಗಿ ಶಾಪಿಂಗ್ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ನಿಮ್ಮ ಆನ್‌ಲೈನ್ ಶಾಪಿಂಗ್ ಅನ್ನು ಸುರಕ್ಷಿತಗೊಳಿಸುತ್ತದೆ.
ಟೋಕನೈಜೇಶನ್ ವಿವರ ಇಲ್ಲಿದೆ
ಟೋಕನೈಜ್ ಮಾಡಿದ ಕಾರ್ಡ್‌ಗಳನ್ನು ನಿರ್ವಹಣೆ ಮಾಡಲು ಬ್ಯಾಂಕ್‌ಗಳು ಪ್ರತ್ಯೇಕ ಇಂಟರ್ಫೇಸ್ ಅನ್ನು (ಅದರ ವೆಬ್‌ಸೈಟ್‌ನಲ್ಲಿ) ನೀಡುತ್ತದೆ. ಇನ್ನು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ದಾರರು ಯಾವುದೇ ಸಮಯದಲ್ಲಿ ತಮ್ಮ ಟೋಕನ್ ಆಯ್ಕೆಯನ್ನು ರದ್ದು ಮಾಡುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಟೋಕನೈಜೇಶನ್ ಸಂಪೂರ್ಣವಾಗಿ ಉಚಿತವಾಗಿ ಮಾಡಲಾಗುತ್ತದೆ. ಜನರು ತಮ್ಮ ಎಷ್ಟೇ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನುಟೋಕನೈಜೇಶನ್ ಮಾಡಬಹುದು. ಆದರೆ ಡೊಮೆಸ್ಟಿಕ್ ಕಾರ್ಡ್‌ಗಳಿಗೆ ಮಾತ್ರ ಕೆಲವು ನಿಯಮಗಳು ಇದೆ. ಓವರ್‌ಸೀಸ್ ಕಾರ್ಡ್‌ಗಳಿಗೆ ಟೋಕನೈಜೇಶನ್ ವಿಧಾನ ಅನ್ವಯ ಆಗುವುದಿಲ್ಲ. ನೀವು ಟೋಕನೈಜೇಶನ್ ಮಾಡಲು ಬಯಸಿದರೆ, ಮೊದಲು ತಮ್ಮ ಕಾರ್ಡ್ ಮಾಹಿತಿಯನ್ನು ನೀಡಬೇಕಾಗುತ್ತದೆ. ನೀವು ವೆಬ್‌ಸೈಟ್ ಮೂಲಕ ಯಾವುದೇ ಶಾಪಿಂಗ್ ಮಾಡುವ ಸಂದರ್ಭದಲ್ಲಿ ನೀವು ಟೋಕನೈಜೇಶನ್ ಆಯ್ಕೆಯನ್ನು ಆರಿಸಬೇಕಾಗುತ್ತದೆ.
ಟೋಕನ್ ಜನರೇಟ್ ಮಾಡುವುದು ಹೇಗೆ?
ಹಂತ 1: ಯಾವುದೇ ಇಕಾಮರ್ಸ್ ವೆಬ್‌ಸೈಟ್ ಅಥವಾ ಆಪ್ ತೆರೆಯಿರಿ
ಹಂತ 2: ಕಾರ್ಡ್ ಆಯ್ಕೆ ಮಾಡಿ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿ ಹಾಕಿ, ಇತರೆ ಮಾಹಿತಿ ಕೂಡಾ ನಮೂದಿಸಿ
ಹಂತ 3: secure your card as per RBI guidelines ಆಯ್ಕೆಯನ್ನು ಕ್ಲಿಕ್ ಮಾಡಿ ನಿಮ್ಮ ಕಾರ್ಡ್ ಸುರಕ್ಷಿತವಾಗಿಸಿ
ಹಂತ 4: ಟೋಕನ್ ಕ್ರಿಯೇಷನ್ ಅಧಿಕೃತ ಮಾಡಿ. ಅದಕ್ಕಾಗಿ ಮೊಬೈಲ್‌ಗೆ ಅಥವಾ ಇಮೇಲ್ ಬಂದ ಒಟಿಪಿಯನ್ನು ನಮೂದಿಸಿ
ಹಂತ 5: ಟೋಕನ್ ಕ್ರಿಯೇಟ್ ಮಾಡಿ. ನಿಮ್ಮ ಕಾರ್ಡ್ ಮಾಹಿತಿ ಟೋಕನ್ ಆಗಿ ಬದಲಾಗಲಿದೆ.
ಹಂತ 6: ನೀವು ಅದೇ ಆಪ್ ಅಥವಾ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ನಿಮ್ಮ ಕಾರ್ಡ್‌ನ ಕೊನೆಯ ನಾಲ್ಕು ಡಿಜಿಟ್ ಕಾಣಲಿದೆ.
ಹಂತ 7: ಹಾಗಾದಾಗ ನಿಮ್ಮ ಕಾರ್ಡ್ ಟೋಕನೈಜ್ ಆಗಿದೆ ಎಂದು ಅರ್ಥ


Click it and Unblock the Notifications