ಹಿಂದೊಂದು ಕಾಲವಿತ್ತು, ನಾವು ಎಲ್ಲಿ ಹೋದರು ಕೈಯಲ್ಲಿ ಹಣವನ್ನು ಇಟ್ಟುಕೊಳ್ಳುವುದು ಮುಖ್ಯವಾಗಿತ್ತು. ಕೈಯಲ್ಲಿ ಹಣ ಇಲ್ಲವಾದರೆ ಬ್ಯಾಂಕಿಗೆ ಹೋಗಿ ಚೆಕ್ ಭರ್ತಿ ಮಾಡಿ ಸಾಲಿನಲ್ಲಿ ನಿಂತು ಹಣವನ್ನು ವಿತ್‌ಡ್ರಾ ಮಾಡಬೇಕಾಗಿತ್ತು. ಆದರೆ ಅದಕ್ಕೆ ಡೆಬಿಟ್ ಕಾರ್ಡ್ ಬ್ರೇಕ್ ನೀಡಿದೆ. ನಾವೀಗ ಕೈಯಲ್ಲಿ ನಗದನ್ನು ಇಟ್ಟುಕೊಂಡು ತಿರುಗಾಡಬೇಕಾಗಿಲ್ಲ.
ಡೆಬಿಟ್ ಕಾರ್ಡ್ ಇದ್ದರೆ ಎಲ್ಲಿ ಬೇಕಾದರೆ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಬಹುದು, ಹೊಟೇಲ್, ಮಾಲ್, ಮಳಿಗೆಗಳಲ್ಲಿ ಡೆಬಿಟ್ ಕಾರ್ಡ್ ನೀಡಬಹುದು. ನಗದುರಹಿತ ವಹಿವಾಟಿಗೆ ಡೆಬಿಟ್ ಕಾರ್ಡ್ ಸಹಕಾರಿಯಾಗಿದೆ.
ಇನ್ನು ನೀವು ಎಲ್ಲೇ ಇದ್ದರೂ ಯಾವ ಸಮಯದಲ್ಲಿಯಾದರೂ ಡೆಬಿಟ್ ಕಾರ್ಡ್ ಮೂಲಕ ಹಣವನ್ನು ಎಟಿಎಂ ಮೂಲಕ ವಿತ್‌ಡ್ರಾ ಮಾಡಿಕೊಳ್ಳಬಹುದು. ಈ ಲೇಖನದಲ್ಲಿ ನಾವು ಡಿಬಿಎಸ್ ಡಿಜಿಬ್ಯಾಂಕ್‌ನ ಡೆಬಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಮಾಡುವುದು ಹೇಗೆ ಎಂದು ಹಂತ ಹಂತವಾಗಿ ವಿವರಿಸಿದ್ದೇವೆ... ಮುಂದೆ ಓದಿ..
ಡಿಬಿಎಸ್ ಡಿಜಿಬ್ಯಾಂಕ್ ಬಗ್ಗೆ ಪ್ರಮುಖ ಮಾಹಿತಿ
ಡಿಬಿಎಸ್ ಡಿಜಿಬ್ಯಾಂಕ್ ಆನ್‌ಲೈನ್ ಬ್ಯಾಂಕ್ ಆಗಿದೆ. ಇಲ್ಲಿ ನೀವು ಮೊಬೈಲ್ ಫೋನ್ ಮೂಲಕವೇ ಹಣವನ್ನು ವಿತ್‌ಡ್ರಾ ಮಾಡಿ ಬೇರೆ ಖಾತೆಗೆ ವರ್ಗಾವಣೆ ಕೂಡಾ ಮಾಡಬಹುದು ಹಾಗೂ ಹಣವನ್ನು ಡೆಪಾಸಿಟ್ ಕೂಡಾ ಮಾಡಬಹುದು. ಡಿಬಿಎಸ್ ಡಿಜಿಬ್ಯಾಂಕ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಯನ್ನು ತರುವ ಗುರಿಯನ್ನು ಹೊಂದಿದೆ. ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಮಾಡುವ ಗುರಿಯನ್ನು ಹೊಂದಿದೆ. ಇದು ತನ್ನ ಡೆಬಿಟ್ ಕಾರ್ಡ್‌ಗೆ ರಿವಾರ್ಡ್ ಹಾಗೂ ರಿಯಾಯಿತಿಗಳನ್ನು ನೀಡುತ್ತದೆ. ಡಿಜಿಬ್ಯಾಂಕ್‌ನಲ್ಲಿ ನೀವು ಡಿಜಿಟಲ್ ಗೋಲ್ಡ್, ಮ್ಯೂಚುವಲ್ ಫಂಡ್ ಯೋಜನೆಗೆ ಹೂಡಿಕೆ ಮಾಡುವ ಆಯ್ಕೆ ಮಾತ್ರವಲ್ಲ, ಡಿಜಿಟಲ್ ವೈಯಕ್ತಿಕ ಸಾಲ ಪಡೆಯಬಹುದು. ತ್ವರಿತವಾಗಿ ಹಣವನ್ನು ವರ್ಗಾವಣೆ ಮಾಡಬಹುದು.
ಡಿಜಿಬ್ಯಾಂಕ್ ಡೆಬಿಟ್ ಕಾರ್ಡ್‌ನ ಬಗ್ಗೆ ತಿಳಿಯಿರಿ
* ಒಂದು ಕ್ಲಿಕ್‌ನಲ್ಲೇ ಡಿಜಿಬ್ಯಾಂಕ್ ಡೆಬಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸಬಹುದು.
* ನಿಮ್ಮ ಡೆಬಿಟ್ ಕಾರ್ಡ್ ಪಿನ್ ಅನ್ನು ಎಲ್ಲಿಯಾದರೂ, ಯಾವ ಹೊತ್ತಿನಲ್ಲಾದರೂ ಮೊಬೈಲ್ ಫೋನ್‌ನಲ್ಲೇ ಬದಲಾವಣೆ ಮಾಡಬಹುದು.
* ಬೇರೆ ಸಾಂಪ್ರಾದಾಯಿಕ ಬ್ಯಾಂಕ್‌ನಂತೆ ನೀವು ಡೆಬಿಟ್ ಕಾರ್ಡ್ ಕಳೆದು ಹೋದಾಗ ಚಿಂತೆಗೆ ಒಳಗಾಗಬೇಕಾಗಿಲ್ಲ. ನಿಮ್ಮ ಕಾರ್ಡ್ ಅನ್ನು ಬ್ಲಾಕ್ ಮಾಡಲು ಗ್ರಾಹಕರ ಸಹಾಯವಾಣಿಗೆ ಕರೆಮಾಡಬೇಕಾಗಿಲ್ಲ. ನೀವು ತಾತ್ಕಾಲಿಕವಾಗಿ ನಿಮ್ಮ ಕಾರ್ಡ್ ಅನ್ನು ಡಿಜಿಬ್ಯಾಂಕ್ ಮೂಲಕ ಮೊಬೈಲ್‌ನಲ್ಲೇ ಬ್ಲಾಕ್ ಮಾಡಬಹುದು.
* ನೀವು ನಿಮ್ಮ ಕಾರ್ಡ್ ಅನ್ನು ಅಂತಾರಾಷ್ಟ್ರೀಯ ಕಾರ್ಡ್ ಆಗಿ ಬದಲಾವಣೆ ಮಾಡಿಕೊಳ್ಳಬೇಕು. ನೀವು ಅಂತಾರಾಷ್ಟ್ರೀಯ ಪ್ರವಾಸ ಹೋದಾಗ ಎಲ್ಲಿಂದಾದರೂ ವಹಿವಾಟು ನಡೆಸಲು ಸಾಧ್ಯವಾಗಲಿದೆ.
* ವಹಿವಾಟು ಅತೀ ಸುಲಭ ಹಾಗೂ ಶೀಘ್ರವಾಗಿ ನಡೆಸಬಹುದು.
ಡಿಜಿಬ್ಯಾಂಕ್ ಡೆಬಿಟ್ ಕಾರ್ಡ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ
ಸಾಮಾನ್ಯವಾಗಿ ನೀವು ಒಂದು ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆದಾಗ ನಿಮಗೆ ಡೆಬಿಟ್ ಕಾರ್ಡ್ ಅನ್ನು ನೀಡಲಾಗುತ್ತದೆ. ನೀವು ಅದಕ್ಕಾಗಿ ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಕೆ ಮಾಡಬಹುದು. ಸಾಮಾನ್ಯವಾಗಿ ಪ್ರಸ್ತುತ ಎಲ್ಲ ಬ್ಯಾಂಕ್‌ಗಳು ಡೆಬಿಟ್ ಕಾರ್ಡ್ ಅನ್ನು ನೀಡುತ್ತದೆ. ಆದರೆ ನೀವು ಡಿಜಿಬ್ಯಾಂಕ್ ಖಾತೆ ಹೊಂದಿರುವಾಗ, ಡೆಬಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ನೋಡಿ..
ಹಂತ 1: ಡಿಜಿಬ್ಯಾಂಕ್ ಮೊಬೈಲ್ ಆಪ್ ಅನ್ನು ತೆರೆಯಿರಿ
ಹಂತ 2: ಲಾಗಿನ್ ಐಡಿ, ಪಿನ್ ಬಳಸಿ ನಿಮ್ಮ ಖಾತೆಗೆ ಲಾಗಿನ್ ಆಗಿ
ಹಂತ 3: more ಮೇಲೆ ಕ್ಲಿಕ್ ಮಾಡಿ, apply tabನಲ್ಲಿ cards ಮೇಲೆ ಕ್ಲಿಕ್ ಮಾಡಿ
ಹಂತ 4: ನೀವು ಯಾವ ಡೆಬಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಬಯಸುತ್ತೀರಿ ಅದನ್ನು ಆಯ್ಕೆ ಮಾಡಿಕೊಳ್ಳಿ
ಹಂತ 5: ಕಾರ್ಡ್‌ಗೆ ಲಿಂಕ್ ಆಗಬೇಕಾದ ಖಾತೆಯನ್ನು ಆಯ್ಕೆ ಮಾಡಿ
ಹಂತ 6: ನಿಮ್ಮ ಕಾರ್ಡ್‌ನಲ್ಲಿ ಇರಬೇಕಾದ ಹೆಸರನ್ನು ನಮೂದಿಸಿ
ಹಂತ 7: promo code ನಮೂದಿಸಿ next ಮೇಲೆ ಕ್ಲಿಕ್ ಮಾಡಿ
ಹಂತ 8: ನಿಮ್ಮ ಅರ್ಜಿಯನ್ನು ಮರುಪರಿಶೀಲಿಸಿ, ಕೊನೆಯದಾಗಿ ಸಲ್ಲಿಕೆ ಮಾಡಿ
ನೀವು ಅರ್ಜಿ ಸಲ್ಲಿಕೆ ಮಾಡಿದ 3-5 ದಿನದಲ್ಲಿ ನಿಮ್ಮ ವಿಳಾಸಕ್ಕೆ ಡಿಜಿಬ್ಯಾಂಕ್ ಡೆಬಿಟ್ ಕಾರ್ಡ್ ಕಳುಹಿಸಲಾಗುತ್ತದೆ.


Click it and Unblock the Notifications