ಡೈರೆಕ್ಟರೇಟ್ ಜನರಲ್ ಆಫ್ ಜಿಎಸ್‌ಟಿ ಇಂಟೆಲಿಜೆನ್ಸ್ (ಡಿಜಿಜಿಐ), ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಇತ್ತೀಚೆಗೆ ವಂಚನೆಯ ಉದ್ದೇಶ ಹೊಂದಿರುವ ಕೆಲವು ವ್ಯಕ್ತಿಗಳು ಡಿಜಿಜಿಐ ತನಿಖೆಯಲ್ಲಿರಬಹುದು ಅಥವಾ ಇಲ್ಲದಿರುವ ತೆರಿಗೆದಾರರಿಗೆ ನಕಲಿ ಸಮನ್ಸ್‌ಗಳನ್ನು ಕಳುಹಿಸುತ್ತಿರುವುದನ್ನು ಗಮನಿಸಿದೆ.
ಹೌದು ಪ್ರಸ್ತುತ ವಂಚಕರು ಜನರಿಂದ ಹಣ ಎಗರಿಸಲು, ಜನರನ್ನು ವಂಚನೆ ಮಾಡಲು ಹಲವಾರು ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಈಗ ನಕಲಿ ಜಿಎಸ್‌ಟಿ ಸಮನ್ಸ್ ಕಳುಹಿಸುವ ಬಲೆಯನ್ನು ಕೂಡಾ ವಂಚಕರು ಬೀಸಿದ್ದಾರೆ. ಈ ಜಿಎಸ್‌ಟಿ ಸಮನ್ಸ್ ನಿಜವಾದಂತೆ ಕಾಣುತ್ತದೆಯಾದರೂ ಇದನ್ನು ಕಂಡು ಹಿಡಿಯಲು ದಾರಿ ಇದೆ, ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ.....

ಕಳುಹಿಸಲಾಗುತ್ತಿರುವ ನಕಲಿ ಸಮನ್ಸ್‌ಗಳು ಡಾಕ್ಯುಮೆಂಟ್ ಐಡೆಂಟಿಫಿಕೇಶನ್ ನಂಬರ್ (ಡಿಐಎನ್) ಹೊಂದಿರುವ ಕಾರಣ ನಿಜವಾಗಿ ಕಾಣಿಸಬಹುದು. ಆದರೆ ಈ ಘಟಕಗಳ ಸಂದರ್ಭದಲ್ಲಿ ಈ ಡಿಐಎನ್ ಸಂಖ್ಯೆಗಳನ್ನು ಡಿಜಿಜಿಐ ನೀಡುವುದಿಲ್ಲ. ಈ ಸಮಸ್ಯೆಯನ್ನು ನಿಭಾಯಿಸಲು, ಡಿಜಿಜಿಐ ಅವರು ನಕಲಿ ಮತ್ತು ಮೋಸದ ಸಮನ್ಸ್‌ಗಳನ್ನು ರಚಿಸುವ ಮತ್ತು ಕಳುಹಿಸುವವರ ವಿರುದ್ಧ ಪೊಲೀಸರಿಗೆ ತಿಳಿಸುವ ಮತ್ತು ದೂರುಗಳನ್ನು ದಾಖಲಿಸುವ ಮೂಲಕ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಸಿಬಿಐಸಿ ಅಧಿಕಾರಿಗಳು ತೆರಿಗೆದಾರರಿಗೆ ಕಳುಹಿಸುವ ಕಮ್ಯೂನಿಫಿಕೇಷನ್ ಮೇಲೆ ಡಿಐಎನ್ ಅನ್ನು ಉತ್ಪಾದಿಸುವ ಮತ್ತು ಉಲ್ಲೇಖಿಸುವ ಕುರಿತು CBIC 5 ನವೆಂಬರ್ 2019 ರ ಸುತ್ತೋಲೆ ಸಂಖ್ಯೆ 122/41/2019-ಜಿಎಸ್‌ಟಿ ಹೊರಡಿಸಿದೆ.
ತೆರಿಗೆದಾರರ ಜಾಗೃತಿಗಾಗಿ, ತೆರಿಗೆದಾರರು ಸಿಬಿಐಸಿ ವೆಬ್‌ಸೈಟ್‌ನಲ್ಲಿನ 'VERIFY CBIC-DIN' ವಿಂಡೋ ಅಥವಾ ಆನ್‌ಲೈನ್ ಪೋರ್ಟಲ್‌ನಲ್ಲಿರುವ ಡಿಐಎನ್ ಯುಟಿಲಿಟಿ ಹುಡುಕಾಟವನ್ನು ಬಳಸಿಕೊಂಡು ಇಲಾಖೆಯಿಂದ ಯಾವುದೇ ಸಂವಹನವು (ಸಮನ್ಸ್ ಸೇರಿದಂತೆ) ನಿಜವೇ ಎಂದು ತಿಳಿಯಬಹುದು. ಡೈರೆಕ್ಟರೇಟ್ ಆಫ್ ಡಾಟಾ ಮ್ಯಾನೇಜ್‌ಮೆಂಟ್ (ಡಿಡಿಎಂ), ಸಿಬಿಐಸಿ ಮೂಲಕ ನೋಡಬಹುದು.
ಅನುಮಾನಾಸ್ಪದ ಅಥವಾ ಪ್ರಾಯಶಃ ನಕಲಿ ಎಂದು ತೋರುವ ಡಿಜಿಜಿಐ/ಸಿಬಿಐಸಿ ರಚನೆಗಳಿಂದ ಸಮನ್ಸ್‌ಗಳನ್ನು ಪಡೆಯುವ ವೈಯಕ್ತಿಕ ತೆರಿಗೆದಾರರು ಅವುಗಳನ್ನು ತಕ್ಷಣವೇ ಸಂಬಂಧಪಟ್ಟ ನ್ಯಾಯವ್ಯಾಪ್ತಿಯ ಡಿಜಿಜಿಐ/ ಸಿಬಿಐಸಿ ಕಚೇರಿಗೆ ಪರಿಶೀಲನೆಗಾಗಿ ವರದಿ ಮಾಡಬಹುದು. ಇದರಿಂದ ಈ ಮೋಸದ ಚಟುವಟಿಕೆಗಳಿಗೆ ಕಾರಣರಾದವರ ವಿರುದ್ಧ ಅಗತ್ಯ ಕ್ರಮವನ್ನು ತೆಗೆದುಕೊಳ್ಳಬಹುದು.


Click it and Unblock the Notifications