ಪ್ರಸ್ತುತ ಯಾವುದೇ ಉದ್ಯಮವನ್ನು ಮಾಡಬೇಕಾದರೂ ಕೂಡಾ ಅದಕ್ಕೆ ಹೂಡಿಕೆಯನ್ನು ಮಾಡುವುದು ಅತೀ ಮುಖ್ಯವಾಗುತ್ತದೆ. ನಾವಿಗಿಯೇ ಸಣ್ಣ ಪುಟ್ಟ ಉದ್ಯಮವನ್ನು ಮಾಡಿ ಅದನ್ನು ದೊಡ್ಡ ಉದ್ಯಮವಾಗಿ ಬದಲಾವಣೆ ಮಾಡಿಕೊಳ್ಳಬಹುದು. ಕಡಿಮೆ ಎಂದರೆ ಕೆಲವು ಖರ್ಚುಗಳಿಗಾಗಿ ಬಳಕೆ ಮಾಡಬಹುದಾಗಿದೆ. ಅದಕ್ಕೆ ಉತ್ತಮ ಆಯ್ಕೆ ಟೈಲರಿಂಗ್ ಮಾಡುವುದು ಆಗಿದೆ.
ಆದರೆ ಅದಕ್ಕೆ ಹೂಡಿಕೆ ಬೇಕಾಗುತ್ತದೆ ಅಲ್ಲವೇ?. ನೀವು ಮಿಷನ್ ಅನ್ನಾದರೂ ಖರೀದಿ ಮಾಡಬೇಕಾಗುತ್ತದೆ ಅಲ್ಲವೇ?. ಆದರೆ ನೀವು ಈ ಯೋಜನೆಯಲ್ಲಿ ಉಚಿತವಾಗಿ ಹೊಲಿಗೆ ಯಂತ್ರವನ್ನು ಪಡೆಯಬಹುದಾಗಿದೆ. ಈ ಯೋಜನೆಯ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಉಚಿತ ಹೊಲಿಗೆ ಯಂತ್ರ ಕರ್ನಾಟಕ
ಸರ್ಕಾರವು ಗ್ರಾಮೀಣ ಕುಶಲಕರ್ಮಿ, ಗುಡಿ ಕೈಗಾರಿಕೆಯನ್ನು ಪ್ರೋತ್ಸಾಹಿಸಲು ಈ ಯೋಜನೆಯನ್ನು ರೂಪಿಸಿದೆ. ಅರ್ಹರು ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಹಣಕಾಸು ವರ್ಷ 2023-24 ರ ಸಾಲಿನಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ವೃತ್ತಿನಿರತ ಗ್ರಾಮೀಣ ಗುಡಿ ಕೈಗಾರಿಕೆ ಮಾಡುತ್ತಿರುವ ಅರ್ಹ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಈ ಯೋಜನೆಗೆ ಬೇಕಾದ ದಾಖಲೆಗಳು
ಯೋಜನೆ 1: ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಸಲಕರಣೆ
1. ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
2. ಜಾತಿ ಪ್ರಮಾಣ ಪತ್ರ
3. ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ
4. ರೇಷನ್ ಕಾರ್ಡ್ / ವೋಟರ್ ಐಡಿ ಹೊಂದಿದ್ದರೆ ಪ್ರತಿ
5. ಮರಗೆಲಸ, ಗಾರೆಕೆಲಸ, ಕ್ಷೌರಿಕ, ಧೋಬಿ ಕಸುಬಿನ ಕುಶಲಕರ್ಮಿಯಾಗಿದ್ದರೆ, ಆಯಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರಿಂದ ಧೃಡೀಕರಣ ಪತ್ರ/ ಕಾರ್ಮಿಕ ಇಲಾಖೆಯಿಂದ ವಿತರಿಸಿದ ಕುಶಲಕರ್ಮಿ ಗುರುತಿನ ಚೀಟಿ ಪ್ರತಿ
ಲಿಂಕ್‌ಗೆ ಭೇಟಿ ನೀಡಿ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಯೋಜನೆ 2: ಜಿಲ್ಲಾ ಉದ್ಯಮ ಬಂಡವಾಳ ಹೂಡಿಕೆ
1. ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
2. ಜಾತಿ ಪ್ರಮಾಣ ಪತ್ರ
3. ಬ್ಯಾಂಕ್ ಪಾಸ್ ಬುಕ್
4. ನಿಗದಿತ ನಮೂನೆಯಲ್ಲಿ ಬ್ಯಾಂಕ್‌ನಿಂದ ಸಾಲ ಮಂಜೂರಾತಿ/ ಬಿಡುಗಡೆಯಾಗಿರುವ ಪತ್ರ
ಯೋಜನೆ 3: ಕುಶಲಕರ್ಮಿಗಳಿಗೆ ಬಡ್ಡಿ ಸಹಾಯಧನ
1. ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
2. ಜಾತಿ ಪ್ರಮಾಣಪತ್ರ
3. ಬ್ಯಾಂಕ್ ಪಾಸ್ ಪುಸ್ತಕ
4. ನಿಗದಿತ ನಮೂನೆಯಲ್ಲಿ ಬ್ಯಾಂಕಿನಿಂದ ಸಾಲ ಮಂಜೂರಾತಿ ಹಾಗೂ ಬಿಡುಗಡೆಯಾಗಿರುವ ಪತ್ರ
5. ಉದ್ಯಮ ನೋಂದಣಿ ಪತ್ರ
6. ಸ್ಥಳೀಯ ಸಂಸ್ಥೆಯಿಂದ ಪಡೆದ ಪರವಾನಗಿ ಪತ್ರ
7. ಬ್ಯಾಂಕಿನಿಂದ ಬಡ್ಡಿ ಸಹಾಯಧನದ ನಮೂನೆ ಪತ್ರ
ಸೂಚನೆ: ಈ ಯೋಜನೆಗಾಗಿ ಚಿಕ್ಕಮಗಳೂರು, ಮೈಸೂರು, ಮಂಡ್ಯ, ತುಮಕೂರು ಜಿಲ್ಲೆಯ ಅರ್ಹ ಫಲಾನುಭವಿಗಳು ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಇನ್ನುಳಿದ ಜಿಲ್ಲೆಗಳಲ್ಲಿ ಈ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿಲ್ಲ. ಪ್ರಸ್ತುತ ಮಂಡ್ಯದಲ್ಲಿ ಅಕ್ಟೋಬರ್ 10ರವರೆಗೆ ನೀವು ಅರ್ಜಿ ಸಲ್ಲಿಬಹುದು. ಬೇರೆ ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸಲು ಈಗ ಅವಕಾಶವಿಲ್ಲ.


Click it and Unblock the Notifications