ವಿದೇಶಕ್ಕೆ ತೆರಳಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕೆಂಬ ಒಂದು ವರ್ಗ ಹಲವು ದೇಶಗಳಲ್ಲಿರುವುದು ಸಾಮಾನ್ಯ ಸಂಗತಿ. ಆದರೆ ವಿದೇಶದಲ್ಲಿದ್ದುಕೊಂಡು ಉತ್ತಮ ವೇತನ ಸಿಗುತ್ತಿದ್ದರೂ ತಾಯ್ನಾಡಿಗೆ ಬಂದು ಹೊಸ ಉದ್ಯಮ ಸ್ಥಾಪಿಸಬೇಕೆನ್ನುವವರ ಸಂಖ್ಯೆ ಕೂಡ ಇತ್ತೀಚಿಗಿನ ದಿನಗಳಲ್ಲಿ ಹೆಚ್ಚುತ್ತಿದೆ. ಅದರಲ್ಲೂ ಕೊರೊನಾ ಸೋಂಕಿನ ಸಮಯದಲ್ಲಿ ವಿದೇಶದಲ್ಲಿ ಭಾರತೀಯರು ಭಾರೀ ಸಂಖ್ಯೆಯಲ್ಲಿ ಸ್ವದೇಶಕ್ಕೆ ಬಂದು ಕೃಷಿ ಸೇರಿದಂತೆ ಹಲವು ರೀತಿಯ ಸ್ವಉದ್ಯೋಗದಲ್ಲಿ ತೊಡಗಿಸಿಕೊಂಡ ಉದಾಹರಣೆ ಬಹಳಷ್ಟಿದೆ.
ಸದ್ಯ ಇತ್ತೀಚಿಗಿನ ದಿನಗಳಲ್ಲಿ ಈ ಟ್ರೆಂಡ್ ಕಡಿಮೆಯಾಗುತ್ತಿದ್ದರೂ ಭಾರತಕ್ಕೆ ಆಗಮಿಸುತ್ತಿರುವ ಟ್ರೆಂಡ್ ಏನೂ ಕಡಿಮೆಯಾಗಿಲ್ಲ. ಅಂಥವರಲ್ಲಿ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಡೇಟಾ ಇಂಜಿನಿಯರ್ ಆಗಿದ್ದ ಸಂದೀಪ್ ಜೋಗಿಪಾರ್ತಿ ಕೂಡ ಒಬ್ಬರು. ಅಮೆರಿಕಾದಲ್ಲಿ ಉತ್ತಮ ವೇತನ ಪಡೆದುಕೊಳ್ಳುತ್ತಿದ್ದ ಅವರಿಗೆ ತವರು ಹೈದಾರಾಬಾದ್‌ಗೆ ತೆರಳುವ ಬಗ್ಗೆ ಹೆಚ್ಚಿನ ಆಸೆ ಹೊಂದಿದ್ದರು.

ಅದೂ ಅಲ್ಲದೆ ಸ್ವಂತ ಉದ್ಯೋಗ ಸ್ಥಾಪಿಸುವ ಬಗ್ಗೆ ಅವರು ಹೆಚ್ಚಿನ ಆಸಕ್ತಿ ಕೂಡ ಹೊಂದಿದ್ದರು. ಇದಕ್ಕೆ ಪತ್ನಿ ಕವಿತಾ ಗೋಪು ಕೂಡ ಧ್ವನಿಗೂಡಿಸಿದರು. ಕವಿತಾ ಗೋಪು ಕೂಡ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಪತಿಯ ಆಸೆಗೆ ಮತ್ತೆಗೆ ಹೆಚ್ಚಿನ ನೀರೆರೆದರು. ಅಮೆರಿಕಾದಲ್ಲಿ ಐದಕ್ಕೂ ಹೆಚ್ಚಿನ ಕಾಲ ಕಳೆದಿದ್ದ ದಂಪತಿ ಕೊನೆಗೂ ತಮ್ಮ ಆಸೆಯನ್ನು ನೆರವೇರಿಸುವ ಸಲುವಾಗಿ ಭಾರತಕ್ಕೆ ಬಂದರು. ನಂತರ ನಡೆದದ್ದೇ ರೋಚಕ ಸಂಗತಿ.
ಒಂದು ಲಕ್ಷ ರೂ.ನಲ್ಲಿ ಸ್ಟಾರ್ಟಪ್ ಆರಂಭ
ಬೃಹತ್ ಕನಸನ್ನು ಹೊತ್ತುಕೊಂಡ ದಂಪತಿ 2019 ರಲ್ಲಿ ಹೈದರಾಬಾದ್‌ಗೆ ಮರಳಿದರು. ಹೀಗೆ ಭಾರತಕ್ಕೆ ಬಂದ ದಂಪತಿ ಕೈಕಟ್ಟಿ ಕೂರಲಿಲ್ಲ. ಬದಲಾಗಿ ತಮ್ಮ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಆರಂಭದಲ್ಲೇ ಸಾಹಸಕ್ಕೆ ಇಳಿದರು. ಇನ್ನು ಬಹುತೇಕ ಹೆಚ್ಚಿನವರಂತೆ ಈ ಜೋಡಿ ಕೂಡ ಆರಂಭದಲ್ಲಿ ಕಡಿಮೆ ಹೂಡಿಕೆಯನ್ನು ಮಾಡಿ, ಸ್ಟಾರ್ಟಪ್ ಆರಂಭಿಸಿದ್ದರು. ಸುಮಾರು ಲಕ್ಷ ರೂ. ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ತಮ್ಮ ಮಹತ್ವಾಕಾಂಕ್ಷೆಯ ಸ್ಟಾರ್ಟಪ್ ಅನ್ನು ಇವರು ಪ್ರಾರಂಭಿಸಿದ್ದರು.
ಆದರೆ ಭಾರತಕ್ಕೆ ಬಂದ ಕೂಡಲೇ ಏನನ್ನೂ ಅರಿಯದೆ ಸಂದೀಪ್ ವ್ಯವಹಾರ ಆರಂಭಿಸಿರಲಿಲ್ಲ. ಬದಲಾಗಿ ಭಾರತದೆಲ್ಲೆಡೆ ಸಂಚರಿಸಿ ವ್ಯಾಪಾರ ವಹಿವಾಟುಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿದರು. ಸಂದೀಪ್ ವಿವಿಧ ರೀತಿಯ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸಲು ಪ್ರಾರಂಭಿಸಿದರು. ಆರರಿಂದ ಎಂಟು ತಿಂಗಳ ಕಾಲ ದೇಶಾದ್ಯಂತ ಸಂಚರಿಸಿ ಜನರ ಅಗತ್ಯತೆಗಳನ್ನು ಹಾಗೂ ಮಾರುಕಟ್ಟೆಯನ್ನು ಅರಿತುಕೊಂಡರು. ಈ ವೇಳೆ ಸಂದೀಪ್ ಅವರು ಆಹಾರ ಮತ್ತು ಫಿಟ್ನೆಸ್ ವಿಭಾಗಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಕಂಡುಕೊಂಡರು. ಇಲ್ಲೊಂದು ರೋಚಕ ಸಂಗತಿಯ ಬಗ್ಗೆ ಹೇಳಲೇ ಬೇಕಿದೆ. ಮುಖ್ಯವಾಗಿ ಸಿಹಿ ತಿನ್ನುವ ಅಭ್ಯಾಸ ಹೊಂದಿರುವ ಅಭ್ಯಾಸ ಹೊಂದಿದ್ದರು. ಆದರೆ ಈ ಅಭ್ಯಾಸದ ಬಗ್ಗೆ ಸ್ವತಹ ಅವರಿಗೆ ಜಿಗುಪ್ಸೆ ಭಾವನೆ ಕಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯಕರ ಸಿಹಿ ಆಯ್ಕೆಯ ಬಗ್ಗೆ ಅವರು ಮತ್ತಷ್ಟು ಯೋಚಿಸಿದರು. ಮಾರುಕಟ್ಟೆಯಲ್ಲಿ ಸಾಕಷ್ಟು ಶಕ್ತಿ ಮತ್ತು ಪ್ರೋಟೀನ್ ಭರಿತ ಉತ್ಪನ್ನಗಳಿವೆ. ಆದರೆ ಗ್ರಾಹಕರು ಅರ್ಥಮಾಡಿಕೊಳ್ಳಲು ಕಷ್ಟಕರವಾದ ಅನೇಕ ಅಂಶಗಳನ್ನು ಅವು ಒಳಗೊಂಡಿರುತ್ತವೆ. ಹಾಗಾಗಿ ಅವುಗಳ ಬಗ್ಗೆ ಜನರಿಗೆ ತಿಳಿಸುವ ನಿಟ್ಟಿನಲ್ಲಿ ತಮ್ಮ ಉದ್ಯಮವನ್ನು ಆರಂಭಿಸಲು ಅವರು ನಿರ್ಧರಿಸಿದರು.
ಭಾರತದಲ್ಲಿ ಸಿಹಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ
ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಸಿಹಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇರುವುದು ಅಂಕಿಅಂಶಗಳಿಂದ ಬಹಿರಂಗವಾಗಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ IMARC ಗ್ರೂಪ್ ಪ್ರಕಾರ, ಭಾರತೀಯ ಪ್ಯಾಕೇಜ್ಡ್ ಸಿಹಿತಿಂಡಿಗಳ ಮಾರುಕಟ್ಟೆ (ರಸ್ಗುಲ್ಲಾ, ಗುಲಾಬ್ ಜಾಮೂನ್, ಬರ್ಫಿ, ಸೋನ್ ಪಾಪ್ಡಿ, ಪೇಡಾ, ಲಡ್ಡುಸ್ ಇತ್ಯಾದಿ ಸೇರಿದಂತೆ) 2023 ರಲ್ಲಿ 6,229.7 ಕೋಟಿ ರೂ. ಆಗಿದ್ದು, ಇದು 2032ರ ವೇಳೆಗೆ 25,970.8 ಕೋಟಿ ರೂ.ಗೆ ತಲುಪುವ ನಿರೀಕ್ಷೆಯಿದೆ. ಹೆಚ್ಚುತ್ತಿರುವ ದುಡಿಯುವ ಜನಸಂಖ್ಯೆ ಮತ್ತು ಗ್ರಾಹಕರ ಆದ್ಯತೆಗಳು ಸಿದ್ಧ ವಸ್ತುಗಳು ಹಾಗೂ ರೂಪಾಂತರಗೊಂಡ ವಸ್ತುಗಳ ಕಡೆಗೆ ಬದಲಾಗುತ್ತಿರುವು ದಾಖಲೆಗಳು ಸೂಚಿಸುತ್ತಿದೆ. ಹಾಗಾಗಿ ಸಂದೀಪ್ ಹಾಗೂ ಕವಿತಾ ದಂಪತಿ ಈ ಎಲ್ಲಾ ಅಂಶಗಳನ್ನು ಚೆನ್ನಾಗಿಯೇ ಅರಿತುಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ದಂಪತಿಯು ಮನೆಯಲ್ಲಿ ಬಳಸುವ ಲಡ್ಡುಗಳ ಸಾಂಪ್ರದಾಯಿಕ ಪಾಕವಿಧಾನಗಳ ಬಗ್ಗೆ ಹೆಚ್ಚಿನ ಸಂಶೋಧನೆಗೆ ಮುಂದಾದರು. ಹಾನಿಕಾರಕವಾದ ಸಕ್ಕರೆಯ ಬದಲಿಗೆ ಆರೋಗ್ಯಕರ ವಸ್ತುವನ್ನು ಬಳಸುವುದು ಅವರ ಯೋಜನೆಯಾಗಿತ್ತು. ಈ ಹಿನ್ನೆಲೆಯಲ್ಲಿ ದಂಪತಿ ಸಕ್ಕರೆ ಬದಲಿಗೆ ಆರೋಗ್ಯಕರವಾದ ಬೆಲ್ಲವನ್ನು ಬಳಸುವ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿದರು. ಎಲ್ಲರಿಗೂ ತಿಳಿದಿರುವಂತೆ ಸಕ್ಕರೆಯಲ್ಲಿ ಸಿಹಿ ಅಂಶ ಹೊರತುಪಡಿಸಿ ದೇಹಕ್ಕೆ ಒಳಿತಾಗುವ ಯಾವುದೇ ಅಂಶಗಳು ಇಲ್ಲದೆ ಇರುವುದು ತಿಳಿದು ಬಂದಿತ್ತು. ಆದರೆ ಅತ್ತ ಬೆಲ್ಲವು ಸಕ್ಕರೆಗಿಂತ ಸಂಪೂರ್ಣ ಭಿನ್ನವಾಗಿದ್ದು, ಆರೋಗ್ಯದ ದೃಷ್ಟಿಯಿಂದ ಅತ್ಯಮೂಲ್ಯ ಪೋಷಕಾಂಶಗಳನ್ನೇ ಹೊಂದಿದೆ. ನಾರಿನಾಂಶ, ಕಬ್ಬಿನಾಂಶ ಮುಂತಾದ ಖನಿಚಗಳನ್ನು ಬೆಲ್ಲ ಹೊಂದಿರುವ ಹಿನ್ನೆಲೆಯಲ್ಲಿ ತಮ್ಮ ಸಿಹಿ ಉತ್ಪನ್ನಗಳಿಗೆ ಅದನ್ನೇ ಬಳಸಲು ಆರಂಭಿಸಿದರು. ಆರಂಭದಲ್ಲಿ ಹಲವು ಕಡೆಗಳಲ್ಲಿ ಸಣ್ಣ ಸಣ್ಣ ಸ್ಟಾಲ್‌ಗಳನ್ನು ಹಾಕಿ, ಕೈಯಾರೆ ಮಾಡಿದ ಸಿಹಿತಿಂಡಿಗಳನ್ನು ಗ್ರಾಹಕರಿಗೆ ಉಣಬಡಿಸಿದರೆ ನಿಧಾನವಾಗಿ ಐಟಿ ಕಂಪೆನಿಗಳಿಗೆ ಕೂಡ ತಮ್ಮ ಉತ್ಪನ್ನಗಳನ್ನು ಸರಬರಾಜು ಮಾಡಲು ಪ್ರಾರಂಭಿಸಿದರು.
ನಿಧಾನವಾಗಿ ಇವರ ಸಿಹಿ ಉತ್ಪನ್ನಗಳಿಗೆ ಬೇಡಿಕೆ ಕುದುರಲು ಪ್ರಾರಂಭವಾದವು. ಹೀಗಾಗಿ ಆರಂಭಿಕ ಹಂತದಲ್ಲಿ ಸುಮಾರು ಒಂದು ಲಕ್ಷ ರೂ.ಗಳನ್ನು ಹೂಡಿಕೆ ಮಾಡುವ ಮೂಲಕ ತಮ್ಮ ಉದ್ಯಮದ ಹಣೆಬರಹ ಪರೀಕ್ಷಿಸಲು ಕಣಕ್ಕಿಳಿದರು. ಇದರ ಪರಿಣಾಮವಾಗಿಯೇ ಲಡ್ಡು ಬಾಕ್ಸ್ ಎಂಬ ಸ್ಟಾರ್ಟಪ್ ಸಂಸ್ಥೆಯನ್ನು ದಂಪತಿ 2020 ರಲ್ಲಿ ಇಬ್ಬರೂ ಅಧಿಕೃತವಾಗಿ ಬಿಡುಗಡೆ ಮಾಡಿದರು. ಆದರೆ ಕಂಪೆನಿ ಆರಂಭವಾದ ಕೆಲವೇ ದಿನಗಳಲ್ಲಿ ಕೋವಿಡ್ ಮಹಾಮಾರಿಯಿಂದ ಸಂಸ್ಥೆಯು ಹಲವು ರೀತಿಯಲ್ಲಿ ಸವಾಲುಗಳನ್ನು ಎದುರಿಸಿತ್ತು. ಹಾಗಾಗಿ ಸ್ಟಾರ್ಟಪ್ ಮುಂದುವರೆಸುವುದು ಕೂಡ ಸವಾಲಿನಿಂದ ಕೂಡಿತ್ತು. ಪರಿಣಾಮ ಸ್ಟಾರ್ಟಪ್‌ನ ಕಾರ್ಯ ಕೂಡ ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ಆದರೆ ಕೋವಿಡ್ ಬಳಿಕ ಜನತೆ ಆರೋಗ್ಯದೆಡೆಗೆ ಹೆಚ್ಚಿನ ಗಮನ ಹರಿಸಿದ ಹಿನ್ನೆಲೆಯಲ್ಲಿ ಸಂಸ್ಥೆಯು ಭಾರೀ ಲಾಭದೆಡೆಗೆ ಸಾಗಿದ್ದು, ಮತ್ತೊಂದು ತಿರುವು ನೀಡಿತು. ಹೀಗೆ 15 ಪ್ರಕಾರಗಳಲ್ಲಿ ಅವರು ಧಾನ್ಯಗಳಿಂದ ಕೂಡಿದ ಲಡ್ಡು ಸೇರಿದಂತೆ ಧವಸ ಧಾನ್ಯಗಳ ಆಹಾರ ತಯಾರಿಸುವುದನ್ನು ಪ್ರಾರಂಭಿಸಿದ್ದು, ಗ್ರಾಹಕರನ್ನು ಸುಲಭವಾಗಿ ಆಕರ್ಷಿಸಿತು. ಈ ಮೂಲಕ ಕಂಪೆನಿ ಯಶಸ್ಸಿನ ಹಾದಿಗೆ ಮರಳಿತು.
More From GoodReturns

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್‌ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Vande Bharat: ಸುಂದರ ನೋಟ, ವೇಗದ ಸೇವೆ; ವಂದೇ ಭಾರತ್ ರೈಲಿನ ವಿಶೇಷ ಮಾರ್ಗಗಳಿವು!

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications