ಒಬ್ಬ ಬಡ ಹುಡುಗನ ಆಕಾಶದೆತ್ತರದ ಕನಸು ಹೇಗೆ ನನಸಾಯಿತು ಎಂಬುದರೊಂದಿಗೆ ಈ ಲೇಖನವನ್ನು ಮುಂದುವರಿಸೋಣ...ಅದು 1990 ರ ದಶಕ ಉತ್ತರ ಪ್ರದೇಶದ ಅಲಿಘರ್‌ನ 19 ವರ್ಷದ ಯುವಕನಿಗೆ ತಾನೊಬ್ಬ ದೊಡ್ಡ ವ್ಯಾಪಾರಸ್ತನಾಗಬೇಕೆಂಬ ಮಹತ್ವಾಕಾಂಕ್ಷೆ ಇರುತ್ತೆ.
ಆದರೆ ಆ ಹುಡಗನ ಮನೆಯಲ್ಲಿ ಹೇಳಿಕೊಳ್ಳುವಂತ ಸ್ಥಿತಿವಂತರಾಗೇನು ಇರಲಿಲ್ಲ ಹಾಗು ಮನೆಯಲ್ಲಿ ಯಾವುದೇ ವ್ಯಕ್ತಿ ದೊಡ್ಡ ವ್ಯಾಪಾರಸ್ಥನಾಗಿರಲಿಲ್ಲ, ಅಪ್ಪ ಒಂದು ಶಾಲೆಯಲ್ಲಿ ಶಿಕ್ಷಕರಾಗಿದ್ದರು ಮತ್ತು ಅಮ್ಮ ಗೃಹಿಣಿಯಾಗಿದ್ದರು.

ಕೇವಲ ತನ್ನ 19ನೇ ವಯಸ್ಸಿಗೆ ಇಂಜಿನಿಯರಿಂಗ್ ಪದವಿ ಪಡೆದ ಹುಡುಗ ಅವನಿಗೆ ಕನಸುಗಳು ಮಾತ್ರ ದೊಡ್ಡದಾಗಿದ್ದವು, 1997 ರಲ್ಲಿ ಕಾಲೇಜು ನಲ್ಲಿ ಶಿಕ್ಷಣ ಪಡೆಯುವಾಗಲೇ ಕೋಟ್ಯಾಧಿಪತಿಯಾಗುವತ್ತ ಹೆಜ್ಜೆ ಇಟ್ಟಿದ್ದ, ಅದು ಆಗಿನ್ನೂ ನಮ್ಮ ದೇಶ 2ಜಿ ಎಂದರೆ ಏನು ಎಂದು ಕಣ್ಣು ಬಿಡುತ್ತಿದ್ದ ಕಾಲ ಅಂತ ಸಮಯದಲ್ಲಿ ಈ ಹುಡುಗ indiasite.net ಎಂಬ ವೆಬ್ಸೈಟ್ ಶುರುಮಾಡಿ ಎರಡು ವರ್ಷ ನಡೆಸಿ ಆಮೇಲೆ ಅದನ್ನು ಅಂದಿನ ಕಾಲಕ್ಕೆ ಹತ್ತು ಲಕ್ಷ ಡಾಲರ್‌ಗೆ ಮಾರಾಟ ಮಾಡಿದ, ಅದು ಅವತ್ತಿನ ಕಾಲಕ್ಕೆ ದೊಡ್ಡ ಮೊತ್ತವಾಗಿತ್ತು.
ಇದಾದ ಮೇಲೆ ಅವನು ಹಿಂತಿರುಗಿ ನೋಡಲೇ ಇಲ್ಲ, ಮತ್ತೆ 2000ನೇ ಇಸವಿಯಲ್ಲಿ ಒನ್97 ಎಂಬ ಹೆಸರಿನ ಕಂಪನಿ ಶುರು ಮಾಡಿದ, ಆಗಷ್ಟೇ ಲ್ಯಾಂಡ್‌ಫೋನ್‌ಗಳು ಬೇಸಿಕ್ ಮೊಬೈಲ್‌ಗಳು ಭಾರತದಲ್ಲಿ ಹೆಜ್ಜೆ ಇತ್ತು ಸದ್ದು ಮಾಡುತ್ತಿದ್ದವು.
ಆಗಲೇ ಆ ಯುವಕನಿಗೆ ಇಲ್ಲಿ ಒಂದು ವ್ಯಾಪಾರ ಮಾಡುವ ಆಲೋಚನೆ ಬಂತು ತನ್ನ ಒನ್97 ಕಮ್ಯುನಿಕೇಷನ್ಸ್ ಮೂಲಕ ಜನರಿಗೆ ಮೆಸೇಜ್ ಕಾಲ್ ಮೂಲಕ ಜ್ಯೋತಿಷ್ಯ ಹೇಳೋದು, ಕ್ರಿಕೆಟ್ ಸ್ಕೋರ್ ಹೇಳೋದು, ನ್ಯೂಸ್ ಹೇಳೋದು, ರಿಂಗ್ಟೋನ್, ಜೋಕ್ಸ್, ಏಕ್ಸಾಮ್ ರಿಸಲ್ಟ್ ಹೇಳೋದನ್ನು ಶುರು ಮಾಡಿದ, ಅದರಲ್ಲೂ ಲ್ಯಾಂಡ್ಲೈನ್ ಮೂಲಕ ಜ್ಯೋತಿಷ್ಯ ಹೇಳೋದೇ ದೊಡ್ಡ ಬಿಸಿನೆಸ್ ಆಗಿತ್ತು, ಆತ ತನ್ನ ಕಂಪನಿಗೆ ಒನ್97 ಎಂದು ಹೆಸರಿಡಲು ಕೂಡ ಒಂದು ಕಾರಣವಿತ್ತು ಆಗ 197 ಅಂದ್ರೆ ಎಂಟಿಎನ್‌ಎಲ್ ಎಂಬ ಟೆಲಿಕಾಂ ಕಂಪನಿಯ ಎಂಕ್ವರಿ ಸೆರ್ವಿಸಸ್‌ನ ನಂಬರ್ ಆಗಿತ್ತು ಅದನ್ನೇ ಒನ್97 ಎಂದು ಮಾಡಿಕೊಂಡಿದ್ದ.
ಆದರೆ ಆಗಿನ್ನೂ ಯಾರಿಗೂ ಊಹೆ ಕೂಡ ಇರಲಿಲ್ಲ ಮುಂದೆ ಒಂದಿನ ಈ ಕಂಪನಿ ಭಾರತದ ಷೇರುಮಾರುಕಟ್ಟೆಯಲ್ಲಿ ಅತಿ ದೊಡ್ಡ ಮೌಲ್ಯದೊಂದಿಗೆ ತನ್ನ ಐಪಿಒ ಒಂದಿಗೆ ಲಿಸ್ಟ್ ಆಗುವ ಮೂಲಕ ದಾಖಲೆ ಮಾಡುತ್ತದೆ ಎಂದು. ಅದರ ಐಪಿಒ ಮೌಲ್ಯವು ದಾಖಲೆಯ 1.5 ಲಕ್ಷ ಕೋಟಿ ರೂಪಾಯಿಯಾಗಿತ್ತು.
ಆ ದೊಡ್ಡ ಕನಸನ್ನು ನನಸು ಮಾಡಿಕೊಂಡ ಯುವಕನ ಹೆಸರೇ ವಿಜಯ್ ಶೇಖರ್ ಶರ್ಮ, ಪೇಟಿಎಂ ಅಂದ್ರೆ ಪೇ ತ್ರೂ ಮೊಬೈಲ್ ಇದರ ಸಂಸ್ಥಾಪಕರೇ ವಿಜಯ್ ಶೇಖರ್ ಶರ್ಮ, ಇತ್ತೀಚಿಗೆ ಕೆಲವು ನಿಯಮ ಉಲಂಘನೆ ಆರೋಪ ಒಳಗಾಗಿ ಭಾರತದ ಆರ್‌ಬಿಐ ಕೆಂಗಣ್ಣಿಗೆ ಗುರಿಯಾಗಿ ಇವಾಗ ಷೇರುಮಾರುಕಟ್ಟೆಯಲ್ಲಿ ಪಾತಾಳಕ್ಕೆ ಇಳಿಯುತ್ತಿರುವ ಕಂಪನಿಯ ಒಂದು ಫ್ಲ್ಯಾಷ್‌ಬ್ಯಾಕ್ ಆಗಿದೆ.
ಆದರೆ ಆಗಿನ್ನೂ ಯಾರಿಗೂ ಊಹೆ ಕೂಡ ಇರಲಿಲ್ಲ ಮುಂದೆ ಒಂದಿನ ಈ ಕಂಪನಿ ಭಾರತದ ಷೇರುಮಾರುಕಟ್ಟೆಯಲ್ಲಿ ಅತಿ ದೊಡ್ಡ ಮೌಲ್ಯದೊಂದಿಗೆ ತನ್ನ ಐಪಿಒ ಒಂದಿಗೆ ಲಿಸ್ಟ್ ಆಗುವ ಮೂಲಕ ದಾಖಲೆ ಮಾಡುತ್ತದೆ ಎಂದು. ಅದರ ಐಪಿಒ ಮೌಲ್ಯವು ದಾಖಲೆಯ 1.5 ಲಕ್ಷ ಕೋಟಿಯಾಗಿತ್ತು.
ಆ ದೊಡ್ಡ ಕನಸನ್ನು ನನಸು ಮಾಡಿಕೊಂಡ ಯುವಕನ ಹೆಸರೇ ವಿಜಯ್ ಶೇಖರ್ ಶರ್ಮ, ಪೇಟಿಎಂ ಅಂದ್ರೆ ಪೇ ತ್ರೂ ಮೊಬೈಲ್ ಇದರ ಸಂಸ್ಥಾಪಕರೇ ವಿಜಯ್ ಶೇಖರ್ ಶರ್ಮ, ಇತ್ತೀಚಿಗೆ ಕೆಲವು ನಿಯಮ ಉಲಂಘನೆ ಆರೋಪ ಒಳಗಾಗಿ ಭಾರತದ ಆರ್‌ಬಿಐ ಕೆಂಗಣ್ಣಿಗೆ ಗುರಿಯಾಗಿ ಇವಾಗ ಷೇರುಮಾರುಕಟ್ಟೆಯಲ್ಲಿ ಪಾತಾಳಕ್ಕೆ ಇಳಿಯುತ್ತಿರುವ ಕಂಪನಿಯ ಒಂದು ಫ್ಲ್ಯಾಷ್‌ಬ್ಯಾಕ್ ಆಗಿದೆ.
3ಜಿ ಮತ್ತು 4ಜಿ ಕಾಲದಲ್ಲಿ ಮೊಬೈಲ್ ಮೂಲಕ ಎಲ್ಲ ರೀತಿಯ ಬಿಲ್‌ಗಳನ್ನು ಆನ್ಲೈನ್ ನಲ್ಲೆ ಅದು ಕೂಡ ತನ್ನ ಮೊಬೈಲ್‌ನಲ್ಲೆ ಎಲ್ಲಾನು ಮಾಡುವಂತಹ ಅದ್ಭುತ ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಿ ಪ್ರತಿಯೊಬ್ಬರ ಬಾಯಿಯಲ್ಲಿ ಕೂಡ ಪೆಟಿಎಂ ಎಂಬ ಹೆಸರು ಉಳಿದುಕೊಳ್ಳುವಂತೆ ಮಾಡಿತು.
ಆದರೆ ಈಗ ತನ್ನದೇ ಬ್ಯಾಂಕ್ ಮತ್ತು ವಾಲ್ಲೆಟ್‌ನಲ್ಲಿ ಗ್ರಾಹಕರ ವಿವರಗಳನ್ನು ಸರಿಯಾಗಿ ಪಡೆಯದೇ ಅಂದರೆ ಸರಿಯಾಗಿ ಕೆವೈಸಿ ತೆಗೆದುಕೊಳ್ಳದೆ ಹಣಕಾಸು ವ್ಯವಹಾರ ಮಾಡಲು ಅನುವು ಮಾಡಿಕೊಟ್ಟಿದೆ ಇಂಡಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪೇಮೆಂಟ್ಸ್ ಬ್ಯಾಂಕ್‌ನ ಲೈಸೆನ್ಸ್ ಅನ್ನು ರದ್ದು ಮಾಡಿ ಅದರ ವಹಿವಾಟು ನಿಲ್ಲಿಸುವಂತೆ ಹೇಳಿದೆ ಇದರಿಂದ ಪೆಟಿಎಂ ಸಾಕಷ್ಟು ನಷ್ಟ ಅನುಭವಿಸುತ್ತಿದ್ದು ಇತ್ತೀಚಿನ ಸುದ್ದಿ ಏನೆಂದರೆ ಅಂಬಾನಿ ಒಡೆತನದ ಜಿಯೋ ಫೈನಾನ್ಸಿಯಲ್ ಸರ್ವಿಸಸ್ ಪೆಟಿಎಂ ಅನ್ನು ಕೊಳ್ಳಬಹುದು ಎಂಬ ಊಹೆಗಳು ನಡೆಯುತ್ತಿದೆ.


Click it and Unblock the Notifications