ಕಳೆದ ಒಂದು ವರ್ಷದ ಅವಧಿಯಲ್ಲಿ ನಾವು ನಿರಂತರವಾಗಿ ಉದ್ಯೋಗ ಕಡಿತದ ಸುದ್ದಿಯನ್ನು ಕೇಳುತ್ತಾ ಬಂದಿದ್ದೇವೆ. ಪ್ರಮುಖ ಟೆಕ್ ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡುತ್ತಾ ಬಂದಿದೆ. ವೆಚ್ಚವನ್ನು ಕಡಿತ ಮಾಡು ನಿಟ್ಟಿನಲ್ಲಿ ಜಾಗತಿಕವಾಗಿ ಟೆಕ್ ದೈತ್ಯಗಳು ತಮ್ಮ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿ ಕಳುಹಿಸಿದೆ. ಈ ಪ್ರಕ್ರಿಯೆ ಈಗಲೂ ಮುಂದುವರಿದಿದೆ. ಆದರೆ ಈ ಪ್ರಮುಖ ಟೆಕ್ ಸಂಸ್ಥೆಗಳಿಗೆ ಎಷ್ಟು ಸಂಬಳವನ್ನು ನೀಡುತ್ತದೆ ಎಂಬುವುದು ನಿಮಗೆ ತಿಳಿದಿದೆಯೇ?
2022ರಲ್ಲಿ ಜಾಗತಿಕವಾಗಿ ತಮ್ಮ ಉದ್ಯೋಗಿಗಳಿಗೆ ಅಧಿಕ ವೇತನ ನೀಡಿದ 3 ಸಂಸ್ಥೆಗಳ ಪೈಕಿ ಎರಡು ಪ್ರಮುಖ ಜನಪ್ರಿಯ ಸಂಸ್ಥೆಗಳಾದ ಫೇಸ್‌ಬುಕ್‌ನ ಪೋಷಕ ಸಂಸ್ಥೆ ಮೆಟಾ ಹಾಗೂ ಗೂಗಲ್‌ನ ಪೋಷಕ ಸಂಸ್ಥೆ ಆಲ್ಫಾಬೇಟ್ ಆಗಿದೆ ಎಂದು ವರದಿಯು ಹೇಳುತ್ತದೆ. ಇದು ಸಾರ್ವಜನಿಕ ಕಂಪನಿ ಸಂಶೋಧಕರು MyLogIQ ಸಂಗ್ರಹಿಸಿದ 278 S&P 500 ವ್ಯವಹಾರಗಳಲ್ಲಿನ ಸರಾಸರಿ ವೇತನದ ಮಾಹಿತಿಯಲ್ಲಿದೆ ಇದು ಇದೆ. ಉದ್ಯೋಗ ಕಡಿತ ನಡೆಯುತ್ತಿರುವಾಗಲೂ ಈ ಸಂಸ್ಥೆಗಳಲ್ಲಿ ಉದ್ಯೋಗಿಗಳಿಗೆ ಉತ್ತಮ ವೇತನ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

2022ರಲ್ಲಿ ಉದ್ಯೋಗಿಗಳಿಗೆ ಅಧಿಕ ವೇತನ ನೀಡಿದ ಸಂಸ್ಥೆಗಳಿವು
1. ವೈಸಿ ಪ್ರಾಪರ್ಟೀಸ್: ವೈಸಿ ಪ್ರಾಪರ್ಟೀಸ್ ಒಂದು ವಾಣಿಜ್ಯ ಆಸ್ತಿ ಹೂಡಿಕೆ ಟ್ರಸ್ಟ್ ಆಗಿದೆ. ಈ ಸಂಸ್ಥೆಯು 22 ಉದ್ಯೋಗಿಗಳನ್ನು ಹೊಂದಿದೆ. ವೇತನವು ಸರಿಸುಮಾರು 415,000 ಡಾಲರ್ (3 ಕೋಟಿ 40 ಲಕ್ಷ ರೂಪಾಯಿಗೂ ಅಧಿಕ). ವೈಸಿ ಪ್ರಾಪರ್ಟೀಸ್ ನ್ಯೂಯಾರ್ಕ್ ಮೂಲದ ಸಂಸ್ಥೆಯಾಗಿದೆ. ಇದು ಕ್ಯಾಸಿನೊಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ನಾಲ್ಕು ಗಾಲ್ಫ್ ಕೋರ್ಸ್‌ಗಳು, 450 ಕ್ಕೂ ಹೆಚ್ಚು ತಿಂಡಿ ಸಂಸ್ಥೆಗಳು, ಬಾರ್‌ಗಳು, ಬಾರ್ ಮತ್ತು ಕ್ಲಬ್‌ಗಳು, ರೇಸ್‌ಕೋರ್ಸ್‌ಗಳನ್ನು ನಿರ್ವಹಣೆ ಮಾಡುತ್ತದೆ.
2. ಮೆಟಾ: ಫೇಸ್‌ಬುಕ್‌ನ ಪೋಷಕ ಸಂಸ್ಥೆಯಾದ ಮೆಟಾ ಅಧಿಕ ವೇತನ ನೀಡುವ ವಿಚಾರದಲ್ಲಿ ಎರಡನೇ ಅತೀ ದೊಡ್ಡ ಸಂಸ್ಥೆಯಾಗಿದ್ದು 296,320 ಡಾಲರ್ ಅಥವಾ 2 ಕೋಟಿ 45 ಲಕ್ಷ ರೂಪಾಯಿಗಿಂತ ಅಧಿಕ ವೇತನವನ್ನು ನೀಡುತ್ತದೆ. ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ಸಂಭಾವನೆಯು 28 ಮಿಲಿಯನ್ ಡಾಲರ್ (229 ಕೋಟಿ ರೂಪಾಯಿ) ಆಗಿದ್ದು ಇದು ಸಂಸ್ಥೆಯ ಸರಾಸರಿ ಆದಾಯದ 91ರಷ್ಟು ಅಧಿಕವಾಗಿದೆ.
ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ನಂತಹ ಸಾಮಾಜಿಕ ನೆಟ್‌ವರ್ಕಿಂಗ್ ಸೈಟ್‌ಗಳು ಮೆಟಾ ಪ್ಲಾಟ್‌ಫಾರ್ಮ್‌ಗಳ ಒಡೆತನದಲ್ಲಿದೆ. 2022-2023ರಲ್ಲಿ ಮೆಟಾ 117.3 ಬಿಲಿಯನ್ ಡಾಲರ್ ಆದಾಯ ಗಳಿಸಿದೆ ಎಂದು ಫೋರ್ಬ್ಸ್ ಅಂದಾಜಿಸಿದೆ.
3. ಆಲ್ಫಾಬೇಟ್: 2022 ರಲ್ಲಿ, ಗೂಗಲ್‌ನ ಮೂಲ ಸಂಸ್ಥೆಯಾದ ಆಲ್ಫಾಬೆಟ್ ಮೂರನೇ ಸ್ಥಾನದಲ್ಲಿದೆ. ಇದರ ಉದ್ಯೋಗಿಗಳ ಸರಾಸರಿ ಆದಾಯ 279,802 ಡಾಲರ್ ಅಥವಾ ಸುಮಾರು 2 ಕೋಟಿ 29 ಲಕ್ಷ ರೂಪಾಯಿ ಆಗಿದೆ. ಮೈಕ್ರೋಸಾಫ್ಟ್, ಅಮೆಜಾನ್, ಆಪಲ್ ಮತ್ತು ಮೆಟಾ ಜೊತೆಗೆ, ಇದನ್ನು ದೊಡ್ಡ ಐದು ಅಮೇರಿಕನ್ ತಾಂತ್ರಿಕ ಸಂಸ್ಥೆಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ.
ವರದಿಯ ಪ್ರಕಾರ ಆಲ್ಫಾಬೆಟ್‌ನ ಸಿಇಒ ಸುಂದರ್ ಪಿಚೈಗೆ 2022 ರಲ್ಲಿ 226 ಮಿಲಿಯನ್ ಡಾಲರ್ ಅಥವಾ ಸುಮಾರು 185 ಲಕ್ಷ ಕೋಟಿ ರೂಪಾಯಿ ಪಾವತಿಸಲಾಗಿದೆ. ಸಂಸ್ಥೆಗೆ ಸರಾಸರಿ ಪರಿಹಾರವು ಸುಮಾರು 808 ಪಟ್ಟು ಹೆಚ್ಚಾಗಿದೆ. ಜನವರಿ 2023 ರಲ್ಲಿ ಗೂಗಲ್ 12,000 ಕೆಲಸಗಾರರನ್ನು ವಜಾಗೊಳಿಸಿದೆ.
4. ಎಟ್ಸಿ: ತಮ್ಮ ಉದ್ಯೋಗಿಗಳಿಗೆ ಅಧಿಕ ವೇತನ ನೀಡುವ ಟೆಕ್ ಸಂಸ್ಥೆಗಳಲ್ಲಿ ಎಟ್ಸಿ ನಾಲ್ಕನೇ ಸ್ಥಾನದಲ್ಲಿದೆ. ಈ ಸಂಸ್ಥೆಯಲ್ಲಿ 248,232 ಡಾಲರ್ ಅಥವಾ 2 ಕೋಟಿ 3 ಲಕ್ಷ ರೂಪಾಯಿಗೂ ಅಧಿಕ ವೇತನವನ್ನು ಉದ್ಯೋಗಿಗಳಿಗೆ ನೀಡಲಾಗುತ್ತದೆ. ಫೋರ್ಬ್ಸ್ ಪ್ರಕಾರ, ಕಂಪನಿಯು 2005 ರಲ್ಲಿ ಕ್ರಿಸ್ಟೋಫರ್ ಮ್ಯಾಗೈರ್ಸ್, ಜೇರೆಡ್ ಟಾರ್ಬೆಲ್, ಹೈಮ್ ಸ್ಕೋಪಿಕ್ ಮತ್ತು ರಾಬರ್ಟ್ ಕಲಿನ್ ಸ್ಥಾಪನೆ ಮಾಡಿದ್ದಾರೆ. ಪ್ರಸ್ತುತ ಸಂಸ್ಥೆಯಲ್ಲಿ 1,414 ಉದ್ಯೋಗಿಗಳು ಇದ್ದಾರೆ.
5. ಇನ್ಸೈಟ್: ಫಾರ್ಮಾಸ್ಯುಟಿಕಲ್ಸ್ ದೈತ್ಯ ಇನ್ಸೈಟ್ ಉದ್ಯೋಗಿಗಳಿಗೆ ಅಧಿಕ ವೇತನ ನೀಡುವ ಸಂಸ್ಥೆಗಳಲ್ಲಿ ಐದನೇ ಸ್ಥಾನದಲ್ಲಿದೆ. ಈ ಸಂಸ್ಥೆಯಲ್ಲಿ 47678 ಡಾಲರ್ ಅಥವಾ 40 ಲಕ್ಷ ರೂಪಾಯಿಗೂ ಅಧಿಕ ವೇತನವನ್ನು ನೀಡಲಾಗಿದೆ. ಈ ಸಂಸ್ಥೆಯು ಜೈವಿಕ ಔಷಧಗಳ ರಚನೆ ಮತ್ತು ತಯಾರಿಕೆಯಲ್ಲಿ ಪರಿಣತಿಯನ್ನು ಹೊಂದಿದೆ. ಫೋರ್ಬ್ಸ್ ಪ್ರಕಾರ, ಇನ್‌ಸೈಟ್ ಈ ಸಮಯದಲ್ಲಿ ಸುಮಾರು 3,000 ಉದ್ಯೋಗಿಗಳನ್ನು ನೇಮಿಸಿಕೊಂಡಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications