ಪ್ರತಿಯೊಬ್ಬರಿಗೂ ಜೀವನದಲ್ಲಿ ಏನನ್ನಾದರೂ ದೊಡ್ಡ ಸಾಧನೆ ಮಾಡಬೇಕೆಂಬ ಗುರಿ ಇರುತ್ತದೆ. ಆದರೆ ಅಂಥಹ ಅಚಲವಾದ ಗುರಿಯ ಹಿಂದಿನ ಪರಿಶ್ರಮದಿಂದಾಗಿ ಕೆಲವೊಬ್ಬರು ಜೀವನದಲ್ಲಿ ನಿರೀಕ್ಷೆಗೂ ಮೀರಿ ಬಹಳ ಎತ್ತರಕ್ಕೆ ಬೆಳೆಯುತ್ತಾರೆ ಹಾಗೂ ಸಮಾಜದಲ್ಲಿ ಒಂದು ಹೆಜ್ಜೆ ಗುರುತನ್ನು ನಿರ್ಮಿಸುವಲ್ಲಿ ಯಶಸ್ವಿಯಾಗುತ್ತಾರೆ. ಅಂಥಹ ಸಾಧಕರ ಸಾಲಿನಲ್ಲಿ ಛೋಟೂ ಶರ್ಮಾ ಅವರ ಕಥೆಯೂ ಒಂದು. ಚಂಡೀಗಢದಿಂದ ಬಂದಿರುವ ಛೋಟು ಶರ್ಮಾ ಅವರು ಒಂದು ಕಾಲದಲ್ಲಿ ಕಂಪೆನಿಯೊಂದರಲ್ಲಿ ಗುಮಸ್ತರಾಗಿ ಕೆಲಸ ಮಾಡುತ್ತಿದ್ದವರು. ಪ್ರಸ್ತುತ ಅವರು ಚಂಡೀಗಢದಲ್ಲಿ ಎರಡು ಸಾಫ್ಟ್‌ವೇರ್ ಕಂಪೆನಿಯನ್ನು ಹೊಂದಿದ್ದಾರೆ.
ಛೋಟು ಶರ್ಮಾ ಅವರು ಹಿಮಾಚಲಪ್ರದೇಶದಲ್ಲಿ ಜನಿಸಿದ್ದಾರೆ. ಮುಂದೆ ಅವರು ಸರ್ಕಾರಿ ಶಾಲೆಯಲ್ಲಿ ಬಿಎ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ನಂತರದಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ಉದ್ಯೋಗ ಹುಡುಕುತ್ತಾ ಚಂಡೀಗಢಕ್ಕೆ ಹೋದರು. ಆದರೆ ವೃತ್ತಿಪರ ಕೋರ್ಸ್‌ಗಳನ್ನು ಹೊಂದಿಲ್ಲದ ಕಾರಣ ಉದ್ಯೋಗ ಪಡೆಯುವುದು ಕೂಡ ಅವರಿಗೆ ಅಷ್ಟು ಸುಲಭವಾಗಿರಲಿಲ್ಲ.

ಮುಂದೆ ಛೋಟು ಶರ್ಮಾ ಅವರು ಕಂಪ್ಯೂಟರ್ ಕೋರ್ಸ್ ಅನ್ನು ಮುಂದುವರಿಸಲು ನಿರ್ಧರಿಸಿದ್ದರು. ಆದರೆ ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗಿತ್ತು. ಹೀಗಾಗಿ, ಗುಮಾಸ್ತರಾಗಿ ಕೆಲಸಕ್ಕೆ ಸೇರಿಕೊಳ್ಳಲು ನಿರ್ಧರಿಸಿದರು. ಜೀವನದಲ್ಲಿ ಎಷ್ಟು ಕಷ್ಟಪಟ್ಟಿದ್ದರು ಅಂದರೆ, ಹಗಲು ಹೊತ್ತು ಗುಮಸ್ತರಾಗಿ ಕೆಲಸ ಮಾಡುತ್ತ ರಾತ್ರಿವೇಳೆಯನ್ನು ಓದಿಗಾಗಿ ಮೀಸಲಿಟ್ಟರು.
ಈ ಕೆಲಸವು ಅವರಿಗೆ ತಾತ್ಕಾಲಿಕ ಜೀವನ ನಿರ್ವಹಣೆಗೆ ಮಾಡಿಕೊಂಡ ಸಿದ್ಧತೆಯಾಗಿತ್ತು. ನಿಧಾನಕ್ಕೆ ಛೋಟು ಶರ್ಮಾ ಅವರು ವೃತ್ತಿ ಕೌಶಲ್ಯಗಳನ್ನು ಒಂದೊಂದಾಗಿ ಕಲಿತುಕೊಂಡು ಮೈಗೂಡಿಸಿಕೊಂಡರು. ಅಲ್ಲಿ ಅವರು ಶಿಕ್ಷಣವನ್ನು ಮುಂದುವರಿಸುತ್ತಲೇ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕೋರ್ಸ್‌ಗಳನ್ನು ಕಲಿಸಲು ಶುರು ಮಾಡಿದ್ದರು. ಈಗ ಛೋಟು ಶರ್ಮಾ ಅವರು ಸಿಎಸ್ ಸಲ್ಯೂಷನ್ಸ್ ಮತ್ತು ಸಿಎಸ್ ಇನ್ಫೋಟೆಕ್‌ನ ಸಂಸ್ಥಾಪಕರು ಹಾಗೂ ಸಿಇಒ ಆಗಿದ್ದಾರೆ.
ಬಡತನದಿಂದ ಶ್ರೀಮಂತಿಕೆಗೆ ಬಂದವರಿವರು
ಗುಮಾಸ್ತರಾಗಿದ್ದ ಛೋಟು ಶರ್ಮಾ ಸ್ವಂತ ಸಾಫ್ಟ್‌ವೇರ್ ಕಂಪೆನಿಯ ಮಾಲೀಕರಾದಂತೆ ಹಲವಾರು ಮಂದಿ ಬಡತನದಿಂದ ಶ್ರೀಮಂತಿಕೆಗೆ ಬಂದಿದ್ದಾರೆ. ಬೀದಿಯಲ್ಲಿ ಮಲಗಿ, ಬಲೂನ್ ಮಾರಾಟ ಮಾಡುತ್ತಿದ್ದವರು ಈಗ ದೊಡ್ಡ ಸಂಸ್ಥೆಯನ್ನು ಹೊಂದಿದ್ದಾರೆ. ಆ ಪೈಕಿ ಮುಖೇಶ್ (ಮಿಕ್ಕಿ) ಜಗ್ತಿಯಾನಿ ಕೂಡಾ ಒಬ್ಬರಾಗಿದ್ದಾರೆ. ಒಂದು ಕಾಲದಲ್ಲಿ ಟ್ಯಾಕ್ಸಿ ಡೈವರ್ ಆಗಿ ಹಾಗೂ ಹೋಟೆಲ್‌ಗಳಲ್ಲಿ ರೂಮ್ ಕ್ಲೀನ್ ಮಾಡುತ್ತಿದ್ದ ವ್ಯಕ್ತಿ ಛೋಟು ಶರ್ಮಾ ಆಗಿದ್ದಾರೆ.
ಇನ್ನು ಬಲೂನ್ ಮಾರಾಟ ಮಾಡಿ ಅತೀ ದೊಡ್ಡ ಸಂಸ್ಥೆಯನ್ನು ಕಟ್ಟಿದ ರೋಚಯ ಯಶೋಗಾಥೆ ಕೂಡಾ ನಮ್ಮ ಮುಂದಿದೆ. ಭಾರತೀಯ ಟೈರ್ ತಯಾರಕ ಎಂಆರ್‌ಎಫ್ (MRF) ಲಿಮಿಟೆಡ್ ಹೆಸರು ಕೇಳದವರು ವಿರಳ. ಎಂಆರ್‌ಎಫ್ ಕಥೆ ಪ್ರಾರಂಭವಾಗೋದೇ 1946ರಿಂದ. ಇದರ ಸ್ಥಾಪಕರಾದ ಕೆ.ಎಂ ಮಮ್ಮೆನ್ ಮಾಪಿಳ್ಳೆ ಹಿಂದೆ ಬೀದಿಗಳಲ್ಲಿ ಬಲೂನ್ ಮಾರುತ್ತಿದ್ದರು. ಇವರು ಸಣ್ಣ ಕಂಪನಿಯೊಂದನ್ನು ಹೊಂದಿದ್ದು, ಇಲ್ಲೇ ಬಲೂನ್ ಉತ್ಪಾದಿಸಿ ಬಳಿಕ ಅವರೇ ಅದನ್ನು ಬೀದಿ ಬೀದಿಗಳಲ್ಲಿ ಮಾರಾಟ ಮಾಡುತ್ತಿದ್ದರು.
ದೇಶದ ಪ್ರಖ್ಯಾತ ಮಸಾಲ ಬ್ರ್ಯಾಂಡ್ ಎಂಡಿಎಚ್ ಮಸಾಲ ಸಂಸ್ಥೆಯ ಸಂಸ್ಥಾಪಕ ಧರ್ಮಪಾಲ್ ಗುಲಾಟಿ 'ಮಸಾಲೆ ರಾಜ' ಎಂದು ಖ್ಯಾತಿ ಜೊತೆಗೆ ಸಂಪತ್ತನ್ನು ಗಳಿಸಿದರು. ಮಾತ್ರವಲ್ಲದೇ ತಮ್ಮ ಮಸಾಲ ಬ್ರ್ಯಾಂಡ್ ಎಂಡಿಎಚ್ ಉತ್ಪನ್ನಗಳನ್ನು ಲಕ್ಷಾಂತರ ಅಡಿಗೆ ಮನೆಗಳ ಮಸಾಲೆಯ ಘಮದ 'ಆಯ್ಕೆ'ಯನ್ನಾಗಿ ಮಾಡಲು ತಮ್ಮ ಕೊನೆಗಾಲದವರೆಗೂ ಶ್ರಮಿಸಿದರು. ಕಡುಬಡತನದಿಂದ ಶ್ರೀಮಂತಿಕೆಗೆ ಏರಿದವರು ಧರ್ಮಪಾಲ್ ಗುಲಾಟಿ ಆಗಿದ್ದಾರೆ.


Click it and Unblock the Notifications