ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ಭಾರೀ ವಂಚನೆಯನ್ನು ಮಾಡಿದೆ ಎಂದು ಜನವರಿ 24ರಂದು ಹಿಂಡನ್‌ಬರ್ಗ್ ವರದಿಯನ್ನು ಪ್ರಕಟಿಸಿದೆ. ಇದಾದ ಬಳಿಕ ಭಾರತದ ಬಿಲಿಯನೇರ್ ಗೌತಮ್ ಅದಾನಿ ಆದಾಯವು ಭಾರೀ ಇಳಿಕೆಯಾಗಿದೆ. ಈ ತಿಂಗಳ ಆರಂಭದಲ್ಲಿ ಅದಾನಿ ಗ್ರೂಪ್ ಸ್ಟಾಕ್‌ಗಳು ಭಾರೀ ಇಳಿಕೆಯಾಗಿದೆ. ಇದರಿಂದಾಗಿ ಗೌತಮ್ ಅದಾನಿ ಕೂಡಾ ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳ ಪಟ್ಟಿಯಿಂದ ಕೆಳಕ್ಕೆ ಇಳಿಯುತ್ತಾ ಬಂದಿದ್ದಾರೆ.
ಆದರೆ ಈಗ ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಕೊಂಚ ಏರಿಕೆಯಾಗುತ್ತಿದ್ದಂತೆ ಗೌತಮ್ ಅದಾನಿ ಆದಾಯವು ಕೂಡಾ ಏರಿಕೆಯಾಗಿದೆ. ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಗೌತಮ್ ಅದಾನಿ ಹೆಸರು ಮೇಲಕ್ಕೆ ಏರುತ್ತಿದೆ. ಭಾರತದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಿಂದ ಕೂಡಾ ಹೊರಬಿದ್ದಿದ್ದ ಗೌತಮ್ ಅದಾನಿ ಈಗ 27ನೇ ಸ್ಥಾನಕ್ಕೆ ಏರಿದ್ದು, ಆದಾಯವು 38.8 ಬಿಲಿಯನ್ ಡಾಲರ್ ಆಗಿದೆ. ಇನ್ನು ಈ ಹಿಂದೆ 38ನೇ ಸ್ಥಾನಕ್ಕೆ ಕುಸಿದಿದ್ದ ಗೌತಮ್ ಅದಾನಿ ಮಾರ್ಚ್ 1ರಂದು 30ನೇ ಸ್ಥಾನಕ್ಕೆ ಏರಿದ್ದಾರೆ.

ಅದಾನಿ ಎಂಟರ್‌ಪ್ರೈಸಸ್ ಷೇರು ಏರಿಕೆ
ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆ ಮಾಡಿದೆ ಎಂದು ಹಿಂಡನ್‌ಬರ್ಗ್ ವರದಿಯ ಬಳಿಕ ಸ್ಟಾಕ್ ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ನಷ್ಟವನ್ನು ಕಂಡಿದೆ. ಆದರೆ ಕಳೆದ ಎರಡು ದಿನಗಳಿಂದ ಅದಾನಿ ಗ್ರೂಪ್ ಸ್ಟಾಕ್ ಭಾರೀ ಏರಿಕೆಯಾಗುತ್ತಿದೆ. ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಶೇಕಡ 30ರಷ್ಟು ಏರಿಕೆಯಾಗಿದೆ. ಅದಾನಿ ಗ್ರೂಪ್‌ನ ನಿವ್ವಳ ಆದಾಯವು 39,000 ಕೋಟಿ ರೂಪಾಯಿ ಏರಿಕೆಯಾಗಿ, 7.50 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ.
ಈ ಸಮಯಕ್ಕೆ ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಶೇಕಡ 2.81ರಷ್ಟು ಅಥವಾ 43.90 ಅಂಕ ಏರಿಕೆಯಾಗಿ 1,608.20 ರೂಪಾಯಿಗೆ ತಲುಪಿದೆ. ಅದಾನಿ ವಿಲ್ಮಾರ್ ಸ್ಟಾಕ್ ಶೇಕಡ 4.99ರಷ್ಟು ಹೆಚ್ಚಳವಾಗಿ, 398.65 ರೂಪಾಯಿಗೆ ತಲುಪಿದೆ. ಅದಾನಿ ಪೋರ್ಟ್ಸ್ ಶೇಕಡ 0.90ರಷ್ಟು ಏರಿಕೆಯಾಗಿ, 607.50 ರೂಪಾಯಿಗೆ ತಲುಪಿದೆ. ಅಂಬುಜಾ ಸಿಮೆಂಟ್ ಸ್ಟಾಕ್ ಶೇಕಡ 3.41ರಷ್ಟು ಹೆಚ್ಚಳವಾಗಿದ್ದು, 365.65 ರೂಪಾಯಿಗೆ ತಲುಪಿದೆ.
ಎಸಿಸಿ ಶೇಕಡ 0.52ರಷ್ಟು ಹೆಚ್ಚಾಗಿ, 1,778.70 ರೂಪಾಯಿಗೆ ತಲುಪಿದೆ. ಇನ್ನು ಅದಾನಿಯ 5 ಸ್ಟಾಕ್‌ಗಳಾದ ಅದಾನಿ ಟ್ರಾನ್ಸ್‌ಮಿಷನ್ ಶೇಕಡ 5.00ರಷ್ಟು ಹೆಚ್ಚಾಗಿ, 708.75 ರೂಪಾಯಿಗೆ ತಲುಪಿದೆ. ಅದಾನಿ ಟೋಟಲ್ ಗ್ಯಾಸ್ ಶೇ.2.74ರಷ್ಟು ಏರಿ 731.15 ರೂಪಾಯಿ ಆಗಿದೆ. ಅದಾನಿ ಗ್ರೀನ್ ಎನರ್ಜಿ ಶೇ.4.99ರಷ್ಟು ಏರಿ, 535.00ಕ್ಕೆ ತಲುಪಿದೆ. ಎನ್‌ಡಿಟಿವಿ ಶೇಕಡ 4.16ರಷ್ಟು ಹೆಚ್ಚಾಗಿ 207.95 ರೂಪಾಯಿಗೆ ಮತ್ತು ಅದಾನಿ ಪವರ್ ಶೇಕಡ 4.98ರಷ್ಟು ಏರಿಕೆಯಾಗಿ 161.25 ರೂಪಾಯಿಗೆ ತಲುಪಿದೆ.


Click it and Unblock the Notifications