ವಿಚ್ಛೇದನ ಅಥವಾ ಡಿವೋರ್ಸ್ ಎನ್ನುವುದು ಈಗ ಸಾಮಾನ್ಯವಾಗಿದೆ. ಅದರೊಂದಿಗೆ ವಿಚ್ಛೇದನ ಪರಿಹಾರವೂ ಕೂಡಾ ಹೆಚ್ಚು ಸದ್ದು ಮಾಡುತ್ತಾ ಬರುತ್ತಿದೆ. ಅದರಲ್ಲೂ ಇತ್ತೀಚೆಗೆ ಗೌತಮ್ ಸಿಂಘಾನಿಯಾರ ವಿಚ್ಛೇದನ ಪ್ರಕರಣ ಅಧಿಕ ಸುದ್ದಿಯಾಗಿದೆ. ಸಿಂಘಾನಿಯಾ ಪತ್ನಿ ಭಾರೀ ಡಿವೋರ್ಸ್ ಪರಿಹಾರವನ್ನು ಕೇಳಿದ್ದಾರೆ.
ಹೌದು, ಗೌತಮ್ ಸಿಂಘಾನಿಯಾರ ಪತ್ನಿ ನವಾಜ್ ಮೋದಿ ವಿಚ್ಛೇದನ ಪರಿಹಾರಕ್ಕಾಗಿ ಸಿಂಘಾನಿಯಾರ ಸಂಪತ್ತಾದ 1.4 ಬಿಲಿಯನ್ ಡಾಲರ್‌ನಲ್ಲಿ ಶೇಕಡ 75 ರಷ್ಟನ್ನು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಆದರೆ ಇದೇ ಮೊದಲು ಇಂತಹ ದುಬಾರಿ ವಿಚ್ಛೇದನ ನಡೆಯುತ್ತಿರುವುದಲ್ಲ. ಬಾಲಿವುಡ್‌ನ ಅತೀ ದುಬಾರಿ ವಿಚ್ಛೇದನ ಪ್ರಕರಣಗಳು ಇಲ್ಲಿದೆ, ಮುಂದೆ ಓದಿ.....

ಹೃತಿಕ್ ರೋಷನ್- ಸುಸಾನೆ ಖಾನ್
14 ವರ್ಷಗಳ ವೈವಾಹಿಕ ಜೀವನದ ಬಳಿಕ ಹೃತಿಕ್ ರೋಷನ್ ಮತ್ತು ಸುಸಾನೆ ಖಾನ್ ಬೇರ್ಪಟ್ಟಿದ್ದಾರೆ. ಸುಸಾನೆ ಖಾನ್ ಡಿವೋರ್ಸ್ ಪರಿಹಾರವಾಗಿ 400 ಕೋಟಿ ರೂಪಾಯಿಯ ಬೇಡಿಕೆಯನ್ನು ಮುಂದಿಟ್ಟರೆ, ಹೃತಿಕ್ ರೋಷನ್ 380 ಕೋಟಿ ರೂಪಾಯಿಯನ್ನು ಪರಿಹಾರವಾಗಿ ನೀಡಿದ್ದಾರೆ.
ಕರಿಷ್ಮಾ ಕಪೂರ್- ಸಂಜಯ್ ಕಪೂರ್
ಕರಿಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್ ಮೇ 2016 ರಲ್ಲಿ ಕಾನೂನುಬದ್ಧವಾಗಿ ವಿಚ್ಛೇದನ ಪಡೆದರು. ಪ್ರಕರಣದ ವಕೀಲರು, "ಕರಿಷ್ಮಾ ಅವರು ಸಂಜಯ್ ಅವರ ತಂದೆಯ ಮನೆಯನ್ನು (ಖಾರ್‌ನಲ್ಲಿರುವ) ತನ್ನ ಹೆಸರಿಗೆ ಮಾಡಿಸಿಕೊಳ್ಳುತ್ತಿದ್ದಾರೆ. ಸಂಜಯ್ ಅವರು ಮಕ್ಕಳ ಹೆಸರಿನಲ್ಲಿ 14 ಕೋಟಿ ರೂಪಾಯಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಬೇಕಾಗಿದೆ. ಇದು ಮಾಸಿಕವಾಗಿ ಸುಮಾರು 10 ಲಕ್ಷ ರೂಪಾಯಿ ನೀಡುತ್ತದೆ," ಎಂದು ಮಾಹಿತಿ ನೀಡಿದ್ದರು.
ಫರ್ಹಾನ್ ಅಖ್ತರ್- ಅಧುನಾ ಭಬಾನಿ
ಫರ್ಹಾನ್ ಅಖ್ತರ್ ಮತ್ತು ಅಧುನಾ ಭಬಾನಿ ದಂಪತಿಗಳು 16 ವರ್ಷಗಳ ನಂತರ ತಮ್ಮ ದಾಂಪತ್ಯ ಜೀವನವನ್ನು ಕೊನೆ ಮಾಡಿದ್ದಾರೆ. ಫರ್ಹಾನ್ ಅಧುನಾಗೆ ಒಂದು ಬಾರಿ ಜೀವನಾಂಶವನ್ನು ಪಾವತಿಸಿದ್ದಾರೆ. ಮುಂಬೈನ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿರುವ ವಿಪಸ್ಸನಾ ಎಂಬ ಹೆಸರಿನ 10,000 ಚದರ ಅಡಿ ಬಂಗಲೆಯನ್ನು ಅಧುನಾಗೆ ನೀಡಿದ್ದಾರೆ.
ಸೈಫ್ ಅಲಿ ಖಾನ್- ಅಮೃತಾ ಸಿಂಗ್
ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ 13 ವರ್ಷಗಳ ದಾಂಪತ್ಯದ ನಂತರ, 2004 ರಲ್ಲಿ ಇಬ್ಬರೂ ಬೇರ್ಪಟ್ಟರು. ಜೀವನಾಂಶದ ಬಗ್ಗೆ ಹಳೆಯ ಮಾತನಾಡುತ್ತಾ, ಸೈಫ್ ಸಂದರ್ಶನವೊಂದರಲ್ಲಿ, "ನಾನು ಅಮೃತಾಗೆ 5 ಕೋಟಿ ರೂಪಾಯಿಗಳನ್ನು ನೀಡಬೇಕಾಗಿತ್ತು. ಅದರಲ್ಲಿ ನಾನು ಈಗಾಗಲೇ ಅವಳಿಗೆ ಸುಮಾರು 2.5 ಕೋಟಿ ರೂಪಾಯಿಗಳನ್ನು ನೀಡಿದ್ದೇನೆ. ಅಲ್ಲದೆ, ನನ್ನ ಮಗನಿಗೆ 18 ವರ್ಷವಾಗುವವರೆಗೆ ತಿಂಗಳಿಗೆ 1 ಲಕ್ಷ ರೂಪಾಯಿ ನೀಡಲಿದ್ದೇನೆ," ಎಂದು ತಿಳಿಸಿದ್ದರು.
ಹಾಗೆಯೇ, "ನಾನು ಶಾರುಖ್ ಖಾನ್ ಅಲ್ಲ. ನನ್ನ ಬಳಿ ಅಷ್ಟೊಂದು ಹಣವಿಲ್ಲ. ನಾನು ಉಳಿದ ಹಣವನ್ನು ಪಾವತಿಸುತ್ತೇನೆ ಎಂದು ನಾನು ಅವಳಿಗೆ ಭರವಸೆ ನೀಡಿದ್ದೇನೆ. ನಾನು ಸಾಯುವವರೆಗೂ ನಾನು ಅದಕ್ಕಾಗಿ ದುಡಿಯಬೇಕಾಗಿ ಬಂದರೂ ಕೂಡಾ ನಾನು ಹಣ ನೀಡುತ್ತೇನೆ," ಎಂದು ಹೇಳಿದ್ದರು.


Click it and Unblock the Notifications