ಜನರು ತಮ್ಮ ವೃತ್ತಿ ಜೀವನವನ್ನು ಆರಂಭಿಸುವ ಬಗ್ಗೆ ಯೋಚನೆ ಮಾಡುವುದಕ್ಕೂ ಮುನ್ನವೇ ಬಾಲಕಿಯೊಬ್ಬಳು ನಿವೃತ್ತಿಯನ್ನು ಘೋಷಣೆ ಮಾಡಿದ್ದಾಳೆ. ಹೌದು, ಪಿಕ್ಸಿ ಕರ್ಟಿಸ್ (Pixie Curtis) ಎಂಬ 11 ವರ್ಷದ ಬಾಲಕಿ ತನ್ನ ವೃತ್ತಿ ಜೀವನ ಆರಂಭಕ್ಕೂ ಮನ್ನವೇ ನಿವೃತ್ತಿ ಘೋಷಿಸಿದ್ದಾಳೆ. ಅಷ್ಟಕ್ಕೂ ಈ ಬಾಲಕಿಯ ಮಾಸಿಕ ಆದಾಯವು ಸರಿ ಸುಮಾರು 200,000 ಡಾಲರ್ (1.6 ಕೋಟಿ ರೂಪಾಯಿ) ಆಗಿದೆ. ಈ ಬಾಲಕಿಯು ಆಟಿಕೆಯನ್ನು ಮಾರಾಟ ಮಾಡಿ ಮಾಸಿಕವಾಗಿ ಕೋಟ್ಯಾಂತರ ಹಣ ಸಂಪಾದಿಸುತ್ತಿದ್ದಾಳೆ!
ಪಿಆರ್ ಕ್ವೀನ್ ರಾಕ್ಸಿ ಜಾಕೆನ್ಕೊ ಪುತ್ರಿ ಪಿಕ್ಸಿ ಕರ್ಟಿಸ್ ಫಿಂಗರ್ ಸ್ಪಿನರ್ ಸೇರಿದಂತೆ ಆಟಿಕೆಯನ್ನು ಮಾರಾಟ ಮಾಡುವ ಮೂಲಕ ತನ್ನ ಜೀವನ ಆರಂಭಕ್ಕೂ ಮುನ್ನ ಭವಿಷ್ಯ ಸುರಕ್ಷಿತಗೊಳಿಸಿದ್ದಾಳೆ. ಆದರೆ ತನ್ನ ಪ್ರೌಢ ಶಾಲೆಯ ವಿಧ್ಯಾಭ್ಯಾಸದ ಮೇಲೆ ಹೆಚ್ಚಿನ ಗಮನವನ್ನು ಹರಿಸುವ ನಿಟ್ಟಿನಲ್ಲಿ ಈ ಆಸ್ಟ್ರೇಲಿಯಾದ ಉದ್ಯಮಿ ಬಾಲಕಿ ನಿವೃತ್ತಿಯನ್ನು ಘೋಷಿಸಿದ್ದಾಳೆ. ಈ ಬಗ್ಗೆ ಫಿಕ್ಸಿ ಕರ್ಟಿಸ್ ತಾಯಿ ಮಾಹಿತಿ ನೀಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಕುಟುಂಬವು ಈ ಬಗ್ಗೆ ಚರ್ಚೆ ನಡೆಸುತ್ತಿತ್ತು.

ಬಾಲಕಿ ಬಗ್ಗೆ ಅಧಿಕ ಮಾಹಿತಿ
11ರ ಬಾಲಕಿ ಪಿಕ್ಸಿ ಕರ್ಟಿಸ್ ಆನ್‌ಲೈನ್‌ನಲ್ಲಿ ವಹಿವಾಟನ್ನು ನಡೆಸುತ್ತಿದ್ದಾಳೆ. ಮೂರು ವರ್ಷಕ್ಕೂ ಹಿಂದೆ ವಹಿವಾಟು ಆರಂಭ ಮಾಡಲಾಗಿದೆ. ಪ್ರಸ್ತುತ ಈ ಬ್ರ್ಯಾಂಡ್‌ನ ಆಟಿಕೆಗಳು ಆಸ್ಟ್ರೇಲಿಯಾದ ಮಕ್ಕಳಲ್ಲಿ ಅತೀ ಜನಪ್ರಿಯ ಬ್ರ್ಯಾಂಡ್ ಆಗಿ ಪರಿವರ್ತನೆಯಾಗಿದೆ. ವರದಿಗಳ ಪ್ರಕಾರ, ಈ ಸ್ಟೋರ್ ಬದಲಾವಣೆಯಾಗದೆಯೇ ಉಳಿಯಲಿದೆ. ಆದರೆ ಈ ಬಾಲಕಿಯ ಬದಲಾಗಿ ಬಾಲಕಿಯ ಕುಟುಂಬವು ವಹಿವಾಟನ್ನು ನೋಡಿಕೊಳ್ಳಲಿದೆ ಎಂದು ತಿಳಿಸಲಾಗಿದೆ.
"ಪಿಕ್ಸಿ ಕರ್ಟಿಸ್‌ರ ಪಿಕ್ಸ್ ಆನ್‌ಲೈನ್ ಸ್ಟೋರ್ ಎಂದಿನಂತೆ ಕಾರ್ಯನಿರ್ವಹಣೆ ಮಾಡಲಿದೆ. ಇದು 2011 ರಲ್ಲಿ ಹೇಗೆ ಪ್ರಾರಂಭವಾಯಿತು ಹಾಗೆಯೇ ಇರಲಿದೆ. ಇದು ಮಕ್ಕಳ ಕೂದಲು ಪರಿಕರಣಗಳು ಮತ್ತು ಪಿಕ್ಸೀಸ್ ಬೋಸ್ ಎಂದು ಕರೆಯಲ್ಪಡುವ ಹೇರ್ ಬೋವ್‌ಗಳನ್ನು ಮಾರಾಟ ಮಾಡುವ ಅತ್ಯುತ್ತಮ ತಾಣವಾಗಿದೆ. ಪಿಕ್ಸಿಗೆ ಈಗ ಸಮಯವಿಲ್ಲ, ಒತ್ತಡವು ಇದೆ. ಅದರಿಂದಾಗಿ ನಾವು ಕುಟುಂಬವು ಒಟ್ಟಿಗೆ ನಿರ್ವಹಿಸುವುದನ್ನು ಮುಂದುವರಿಸುತ್ತೇವೆ," ಎಂದು ಕೂಡಾ ತಿಳಿಸಿದ್ದಾರೆ.
ವರದಿಯ ಪ್ರಕಾರ ಪಿಕ್ಸಿ ಕರ್ಟಿಸ್ ಸುಮಾರು 270,000 ಡಾಲರ್‌ನ (ಸರಿಸುಮಾರು 2 ಕೋಟಿ ರೂಪಾಯಿ) ಮರ್ಸೆಡೀಸ್ ಬೆನ್ಜ್ ಕಾರನ್ನು ಹೊಂದಿದ್ದಾರೆ. ಪಿಕ್ಸಿ ಕರ್ಟಿಸ್ 11 ವರ್ಷದ ಜನ್ಮದಿನ ಆಚರಣೆಗಾಗಿ 40,000 ಡಾಲರ್ (ಸರಿಸುಮಾರು 33 ಲಕ್ಷ ರೂಪಾಯಿ) ಖರ್ಚು ಮಾಡಲಾಗಿದೆ. ಆದರೆ ಈಗ ಪಿಕ್ಸಿ ತನ್ನ ವಿದ್ಯಾಭ್ಯಾಸಕ್ಕೆ ಅಧಿಕ ಆದ್ಯತೆಯನ್ನು ನೀಡಲು ನಿರ್ಧಾರ ಮಾಡಿದ್ದಾರೆ. ಹಾಗೆಯೇ ಕುಟುಂಬವು ಹಣವನ್ನು ಇತರ ಬಡವರಿಗೆ ದಾನ ಮಾಡಲು ನಿರ್ಧಾರ ಮಾಡಿದೆ.


Click it and Unblock the Notifications