ಭಾರತದ ಮೂರನೇ ಅತೀ ದೊಡ್ಡ ವಿಮಾನಯಾನ ಸಂಸ್ಥೆಯಾದ ಗೋ ಫಸ್ಟ್ ಸಂಪೂರ್ಣವಾಗಿ ಆರ್ಥಿಕ ಅಪಾಯದಲ್ಲಿದೆ. ಮೇ 3 ಮತ್ತು ಮೇ 4ರಂದು ನಿಗದಿಪಡಿಸಿದ್ದ ಎಲ್ಲ ವಿಮಾನಗಳನ್ನು ರದ್ದು ಮಾಡಲಾಗುತ್ತದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ (ಡಿಜಿಸಿಎ) ಗೋ ಫಸ್ಟ್ ತಿಳಿಸಿದೆ. ಇಂಜಿನ್‌ಗಳ ಸರಬರಾಜು ಇಲ್ಲದ ಕಾರಣ ರದ್ದು ಮಾಡಲಾಗಿದೆ ಎಂದು ಕೂಡಾ ಹೇಳಿದೆ.
ಈಗ ಗೋ ಫಸ್ಟ್ ಸಂಸ್ಥೆಯು ಸಂಪೂರ್ಣವಾಗಿ ವ್ಯಾಪಾರದಿಂದ ಹೊರಗುಳಿಯುವ ಅಪಾಯದಲ್ಲಿದೆ. ಅಂದರೆ ಭಾರತದಲ್ಲಿ ಮತ್ತೊಂದು ವಿಮಾನಯಾನ ಸಂಸ್ಥೆಯು ಸ್ಥಗಿತವಾಗುವ ಸಾಧ್ಯತೆಯಿದೆ. ಭಾರತದಲ್ಲಿ ವಾಯುಯಾನ ವೈಫಲ್ಯಗಳ ಪಟ್ಟಿಯು ವಿಸ್ತಾರವಾಗುತ್ತಿದೆ. ಭಾರತದಲ್ಲಿ 1994ರಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಗಳು ಆರಂಭವಾಗಿದೆ.

ಈ ಮೂರು ದಶಕಗಳಲ್ಲೇ ಹಲವಾರು ವಿಮಾನಯಾನ ಸಂಸ್ಥೆಗಳು ಸ್ಥಗಿತಗೊಂಡಿದೆ. ಕಡಿಮೆಯೆಂದರೆ 27ರಷ್ಟು ವಿಮಾನಯಾನ ಸಂಸ್ಥೆಗಳಾದರೂ ವ್ಯಾಪಾರವನ್ನು ಸ್ಥಗಿತಗೊಳಿಸಿದೆ ಅಥವಾ ಇನ್ನೊಂದು ವಿಮಾನಯಾನ ಸಂಸ್ಥೆಯೊಂದಿಗೆ ವಿಲೀನವಾಗಿದೆ ಎಂದು ಅಧಿಕೃತ ಡೇಟಾ ಹೇಳುತ್ತದೆ. ಸ್ಥಗಿತವಾದ ವಿಮಾನಯಾನ ಸಂಸ್ಥೆಗಳ ಬಗ್ಗೆ ಪಟ್ಟಿ ಇಲ್ಲಿದೆ ಮುಂದೆ ಓದಿ...
ಸ್ಥಗಿತವಾದ ವಿಮಾನಯಾನ ಸಂಸ್ಥೆಗಳು, ಟೈಮ್‌ಲೈನ್
1996: ದೇಶದಲ್ಲಿ ಮೊದಲ ಬಾರಿಗೆ 1996ರ ನವೆಂಬರ್‌ನಲ್ಲಿ ವಿಮಾನವು ಸ್ಥಗಿತವಾಗಿದೆ. ಆರಂಭವಾದ ಎರಡು ವರ್ಷಗಳ ಒಳಗಾಗಿಯೇ ವಿಮಾನವು ಸ್ಥಗಿತವಾಗಿದೆ. ಈಸ್ಟ್ ವೆಸ್ಟ್ ಟ್ರಾವೆಲ್ಸ್ & ಟ್ರೇಡ್ ಲಿಂಕ್ ಲಿಮಿಟೆಡ್ ಭಾರತದಲ್ಲಿ ಮೊದಲ ಬಾರಿಗೆ ಸ್ಥಗಿತವಾದ ಅಥವಾ ಮುಚ್ಚಲ್ಪಟ್ಟ ವಿಮಾನಯಾನ ಸಂಸ್ಥೆಯಾಗಿದೆ. ಈ ವರ್ಷವೇ ಮೋದಿಲ್ಫ್ಟ್ ಲಿಮಿಟೆಡ್ ವಿಮಾನಯಾನ ಸಂಸ್ಥೆ ಮುಚ್ಚಲ್ಪಟ್ಟಿದೆ.
1997: ಮೊದಲ ಬಾರಿಗೆ ವಿಮಾನಯಾನ ಸಂಸ್ಥೆಯು ಮುಚ್ಚಲ್ಪಟ್ಟ ನಂತರದ ಒಂದು ವರ್ಷದಲ್ಲೇ ಇನ್ನೆರಡು ಸಂಸ್ಥೆಗಳು ಮುಚ್ಚಲ್ಪಟ್ಟಿದೆ. 1997 ರಲ್ಲಿ ಎನ್‌ಇಪಿಸಿ ಮೈಕಾನ್ ಲಿಮಿಟೆಡ್ ಮತ್ತು ಸ್ಕೈಲೈನ್ ಎನ್‌ಇಪಿಸಿ ಲಿಮಿಟೆಡ್ (ಹಿಂದೆ ದಮಾನಿಯಾ ಏರ್ವೇಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು) ವ್ಯವಹಾರದಿಂದ ಹೊರಗುಳಿದಿದೆ.
2000: ಲುಫ್ಥಾನ್ಸ್ ಕಾರ್ಗೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ 2000 ರಲ್ಲಿ ಮುಚ್ಚಲ್ಪಟ್ಟಿದೆ.
2007: ಇಂಡಸ್ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್ (2007) ಮುಚ್ಚಲಾಗಿದೆ.
2008: ಜಾಗ್ಸನ್ ಏರ್ಲೈನ್ಸ್ ಲಿಮಿಟೆಡ್ ವ್ಯವಹಾರದಿಂದ ಹೊರಗುಳಿದಿದೆ.
2008: ಕಡಿಮೆ-ವೆಚ್ಚದ ವಿಮಾನಯಾನ ಸಂಸ್ಥೆಯಾದ ಡೆಕ್ಕನ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ (ಏರ್ ಡೆಕ್ಕನ್) ಅನ್ನು ಕಿಂಗ್‌ಫಿಶರ್ ಏರ್‌ಲೈನ್ಸ್ ಸ್ವಾಧೀನಪಡಿಸಿಕೊಂಡಿದೆ.
2009: ಎಂಡಿಎಲ್‌ಆರ್ ವಿಮಾನಯಾನ ಲಿಮಿಟೆಡ್ ಸ್ಥಗಿತವಾಗಿದೆ.
2010: ಪ್ಯಾರಾಮೌಂಟ್ ಏರ್ವೇಸ್ ಮುಚ್ಚಲ್ಪಟ್ಟಿತು.
2011: ಆರ್ಯನ್ ಕಾರ್ಗೋ ಎಕ್ಸ್‌ಪ್ರೆಸ್ ಸ್ಥಗಿತಗೊಂಡಿದೆ.
2012: ಪ್ರಮುಖ ಏರ್ ಕ್ಯಾರಿಯರ್ ಕಿಂಗ್‌ಫಿಷರ್ ಏರ್‌ಲೈನ್ಸ್ ಹಾರಾಟ ಸ್ಥಗಿತಗೊಳಿಸಿದೆ.
2014: ಡೆಕ್ಕನ್ ಕಾರ್ಗೋ & ಎಕ್ಸ್‌ಪ್ರೆಸ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ಸ್ಥಗಿತಗೊಂಡಿದೆ.
2017: ಕನಿಷ್ಠ ಐದು ವಿಮಾನಯಾನ ಸಂಸ್ಥೆಗಳು ವ್ಯಾಪಾರವನ್ನು ಸ್ಥಗಿತಗೊಳಿಸಿದೆ. ಏರ್ ಕಾರ್ನಿವಲ್ ಪ್ರೈವೇಟ್ ಲಿಮಿಟೆಡ್, ಏರ್ ಪೆಗಾಸಸ್ ಪ್ರೈವೇಟ್ ಲಿಮಿಟೆಡ್, ರೆಲಿಗೇರ್ ಏವಿಯೇಷನ್ ಲಿಮಿಟೆಡ್, ಏರ್ ಕೋಸ್ಟಾ ಮತ್ತು ಕ್ವಿಕ್ಜೆಟ್ ಕಾರ್ಗೋ ಏರ್ಲೈನ್ಸ್ ಪ್ರೈವೇಟ್ ಲಿಮಿಟೆಡ್ ಮುಚ್ಚಲ್ಪಟ್ಟಿದೆ.
2019: ಜೆಟ್ ಏರ್ವೇಸ್ ಏಪ್ರಿಲ್ 2019 ರಲ್ಲಿ ಹಾರಾಟವನ್ನು ನಿಲ್ಲಿಸಿದೆ. ಈಗಲೂ ವಿಮಾನಯಾನ ಹಾರಾಟ ನಡೆಸುತ್ತಿಲ್ಲ. ಹಿಂದೆ ಸಹಾರಾ ಏರ್‌ಲೈನ್ಸ್ ಎಂದು ಕರೆಯಲ್ಪಡುವ ಜೆಟ್ ಲೈಟ್ 2019 ರಲ್ಲಿ ಹಾರಾಟವನ್ನು ನಿಲ್ಲಿಸಿದೆ.
2020: ಜೆಕ್ಸಸ್ ಏರ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ (ಜೂಮ್ ಏರ್), ಡೆಕ್ಕನ್ ಚಾರ್ಟರ್ಡ್ ಪ್ರೈವೇಟ್ ಲಿಮಿಟೆಡ್ ಮತ್ತು ಏರ್ ಒಡಿಶಾ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ವಿಮಾನಯಾನವನ್ನು ಸ್ಥಗಿತಗೊಳಿಸಿದೆ.
2022: ಹೆರಿಟೇಜ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಹಾರಾಟವನ್ನು ನಿಲ್ಲಿಸಿದೆ.
2023: ಗೋ ಫಸ್ಟ್ ಸ್ವಯಂಪ್ರೇರಿತವಾಗಿ ವಿಮಾನವನ್ನು ಸ್ಥಗಿತಗೊಳಿಸಿದೆ. 17 ವರ್ಷಗಳ ಕಾಲ ಭಾರತದಲ್ಲಿ ವಿಮಾನಯಾನ ಸೇವೆಯನ್ನು ನೀಡಿರುವ ಗೋ ಫಸ್ಟ್ ಮೂರು ದಿನಗಳ ಕಾಲ ವಿಮಾನಯಾನ ಸ್ಥಗಿತಗೊಳಿಸಿದೆ.


Click it and Unblock the Notifications