ದೇಶದಲ್ಲಿ ಪ್ರಸ್ತುತ ಯುಪಿಐ ವ್ಯವಸ್ಥೆಯನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಜನರು ಹೆಚ್ಚಾಗಿ ಫೋನ್‌ಪೇ, ಪೇಟಿಎಂ, ಗೂಗಲ್ ಪೇ ಆಪ್‌ಗಳ ಮೂಲಕ ಯುಪಿಐ ವಹಿವಾಟು ನಡೆಸುತ್ತದೆ. ಈಗ ಗೂಗಲ್ ಪೇ ಹೊಸ ಫೀಚರ್ ಒಂದನ್ನು ಆರಂಭ ಮಾಡಿದೆ. ಈ ಫೀಚರ್ ಗೂಗಲ್ ಪೇ ಬಳಕೆದಾರರಿ ಆಧಾರ್ ಆಧಾರಿತವಾಗಿ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಆರಂಭಿಸುವ ಅವಕಾಶವನ್ನು ನೀಡುತ್ತದೆ.
ದೇಶದಲ್ಲಿ ಅತೀ ಪ್ರಮುಖ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಕೂಡಾ ಒಂದಾಗಿದೆ. ನಮ್ಮ ಎಲ್ಲ ಕಾರ್ಯಗಳಿಗೂ ಪ್ರಸ್ತುತ ಆಧಾರ್ ಕಾರ್ಡ್ ಮುಖ್ಯವಾಗುತ್ತಿದೆ. ನಮ್ಮಲ್ಲಿರುವ ಇತರೆ ಪ್ರಮುಖ ದಾಖಲೆಗಳಿಗೂ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯಗೊಳಿಸಲಾಗುತ್ತಿದೆ. ಸರ್ಕಾರಿ ಯೋಜನೆಗಳಿಗಂತೂ ಆಧಾರ್ ಕಡ್ಡಾಯವಾಗಿದೆ.

ಈ ನಡುವೆ ಗೂಗಲ್ ಪೇ ಆಧಾರ್ ಆಧಾರಿಯ ಯುಪಿಐ ಆಕ್ಟಿವೇಷನ್ ಫೀಚರ್ ಆರಂಭಿಸಿದೆ. ಆದರೆ ಇದು ಒಂದು ಫೀಚರ್ ಆಗಿದೆ. ಕಡ್ಡಾಯವಲ್ಲ. ಈ ಮೂಲಕ ಯುಪಿಐ ಆಕ್ಟಿವೇಷನ್ ಪ್ರಕ್ರಿಯೆಯನ್ನು ಸರಳಗೊಳಿಸುವ ಗುರಿಯನ್ನು ಗೂಗಲ್ ಪೇ ಹೊಂದಿದೆ. ಈ ಆಧಾರ್ ಆಧಾರಿತ ಯುಪಿಐ ಆಕ್ಟಿವೇಷನ್ ಮೂಲಕ ಗೂಗಲ್ ಪೇ ಬಳಕೆದಾರರು ತಮ್ಮ ಬ್ಯಾಂಕ್ ಖಾತೆ ಲಿಂಕ್ ಮಾಡಿಕೊಂಡು, ಆಧಾರ್ ನಂಬರ್ ಬಳಸಿಕೊಂಡು ಯುಪಿಐ ಐಡಿಯನ್ನು ಕ್ರಿಯೆಟ್ ಮಾಡಬಹುದಾಗಿದೆ.
ಆಧಾರ್ ಆಧಾರಿತ ಯುಪಿಐ ಆಕ್ಟಿವೇಷನ್ ಮಾಡುವಾಗ ನೀವು ನಿಮ್ಮ ಬ್ಯಾಂಕ್ ಮಾಹಿತಿಯನ್ನು ನಮೂದಿಸಬೇಕಾಗಿ ಬರುವುದಿಲ್ಲ. ಆಧಾರ್‌ನಲ್ಲಿ ಎಲ್ಲ ಮಾಹಿತಿ ಇರುವ ಕಾರಣದಿಂದಾಗಿ ಸ್ವಯಂಚಾಲಿತವಾಗಿ ನಿಮ್ಮ ಬ್ಯಾಂಕ್ ಮಾಹಿತಿ ಎಂಟ್ರಿಯಾಗಲಿದೆ. ಇದು ಬಳಕೆದಾರರು ಯುಪಿಐ ಆಕ್ಟೀವೇಷನ್ ಮಾಡುವ ಪ್ರಕ್ರಿಯೆಯನ್ನು ಸರಳ, ಸುಲಭಗೊಳಿಸುತ್ತದೆ.
ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ವರದಿಗಳ ಪ್ರಕಾರ ಭಾರತದಲ್ಲಿನ ಬರೋಬ್ಬರಿ ಶೇಕಡ 99.99ರಷ್ಟು ವಯಸ್ಕರು ಈ ವಿಶಿಷ್ಟ ಗುರುತಿನ ಪುರಾವೆಯಾದ ಆಧಾರ್ ಸಂಖ್ಯೆಯನ್ನು ಹೊಂದಿದ್ದಾರೆ. ಇನ್ನು ಈ ಆಧಾರ್ ಆಧಾರಿತ ಯುಪಿಐ ಆಕ್ಟಿವೇಷನ್ ನಡೆಸಲು ಜನರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಕೊಂಡಿರುವುದು ಕಡ್ಡಾಯವಾಗಿರುತ್ತದೆ.
ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿದ್ದರೆ, ಅದೇ ಸಂಖ್ಯೆ ಇದ್ದರೆ ಮಾತ್ರ ಈ ಪ್ರಕ್ರಿಯೆ ನಡೆಸಲು ಸಾಧ್ಯವಾಗುತ್ತದೆ. ಇನ್ನು ಗೂಗಲ್ ಪೇ ಆಧಾರ್ ಸಂಖ್ಯೆಯನ್ನು ಸಂಗ್ರ ಮಾಡುವುದಿಲ್ಲ ಎಂದು ಈಗಾಗಲೇ ಖಚಿತಪಡಿಸಿಕೊಂಡಿದೆ. ಆದರೆ ದೃಢೀಕರಣ ಮಾಡುವುದಕ್ಕೆ ರಾಷ್ಟ್ರೀಯ ಪಾವತಿಗಳ ನಿಗಮಕ್ಕೆ (NPCI) ಆಧಾರ್ ಸಂಖ್ಯೆಯನ್ನು ಸುರಕ್ಷಿತವಾಗಿ ರವಾನಿಸಲಾಗುತ್ತದೆ ಎಂದು ಗೂಗಲ್ ಪೇ ಒತ್ತಿ ಹೇಳಿದೆ.
ಹೇಗೆ ಆಕ್ಟಿವೇಷನ್ ಮಾಡುವುದು?
ಗೂಗಲ್ ಪೇಗೆ ಸೈನ್ ಅಪ್ ಮಾಡುವಾಗ, ಬಳಕೆದಾರರು ಡೆಬಿಟ್ ಕಾರ್ಡ್ ಮತ್ತು ಆಧಾರ್ ಆಧಾರಿತ ಯುಪಿಐನಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬೇಕಾಗುತ್ತದೆ. ಆಧಾರ್ ಆಧಾರಿತ ಯುಪಿಐ ಆಕ್ಟಿವೇಷನ್ ಮಾಡಬೇಕಾದರೆ ಗ್ರಾಹಕರು ಮೊದಲು ತಮ್ಮ ಆಧಾರ್ ಸಂಖ್ಯೆಯ ಮೊದಲ ಆರು ಅಂಕೆಗಳನ್ನು ನೀಡಬೇಕು.
ಹಂತ 1: ಗೂಗಲ್ ಪೇ ಆಪ್ ಅನ್ನು ಡೌನ್‌ಲೋಡ್ ಮಾಡಿ ನಿಮ್ಮ ಫೋನ್‌ನಲ್ಲಿ ತೆರೆಯಿರಿ
ಹಂತ 2: "Add Account" ಅನ್ನು ಆಯ್ಕೆಮಾಡಿಕೊಳ್ಳಿ.
ಹಂತ 3: ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಸಂಯೋಜಿತವಾಗಿರುವ ಬ್ಯಾಂಕ್ ಅನ್ನು ಆಯ್ಕೆ ಮಾಡಿ ನಂತರ Next ಕ್ಲಿಕ್ ಮಾಡಿ.
ಹಂತ 4: ನಿಮ್ಮ ಮೊಬೈಲ್ ನಂಬರ್ ಹಾಗೂ ಬ್ಯಾಂಕ್ ಖಾತೆಯನ್ನು ವೆರಿಫೈ ಮಾಡಲು "Aadhaar" ಮೋಡ್ ಅನ್ನು ಆಯ್ಕೆ ಮಾಡಿಕೊಳ್ಳಿ.
ಹಂತ 5: ಮೊದಲ 6 ಡಿಜಿಟ್‌ನಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ
ಹಂತ 6: 4 ಅಥವಾ 6 ಡಿಜಿಟ್‌ನ ಯುಪಿಐ ಪಿನ್ ಅನ್ನು ಮಾಡಿ
ಹಂತ 7: ವೆರಿಫಿಕೇಷನ್‌ಗಾಗಿ ಬ್ಯಾಂಕ್ ನಿಮ್ಮ ಮೊಬೈಲ್‌ಗೆ ಒಟಿಪಿ ಕಳುಹಿಸಲಿದೆ.
ಹಂತ 8: ಒಟಿಪಿ ನಮೂದಿಸಿ, ಯುಪಿಐ ಪಿನ್ ಸೆಟ್ ಮಾಡಿ confirm ಮಾಡಿಕೊಳ್ಳಿ.
ಹಂತ 9: ಈಗ ಆಧಾರ್ ನಂಬರ್ ಸಹಾಯದಿಂದ ನಿಮ್ಮ ಬ್ಯಾಂಕ್ ಖಾತೆಯು ಯಶಸ್ವಿಯಾಗಿ ಲಿಂಕ್ ಆಗುತ್ತದೆ. ಇಲ್ಲಿಗೆ ಪ್ರಕ್ರಿಯೆ ಕೊನೆಯಾಗುತ್ತದೆ.


Click it and Unblock the Notifications