ನಮಗೆ ವೇತನ ಬರುವುದಕ್ಕೆ ಮುನ್ನವೇ ಹಲವಾರು ಅಗತ್ಯ ಕಾರ್ಯಗಳಿಗೆ ಹಣ ಬೇಕಾಗಬಹುದು. ಆ ಸಂದರ್ಭದಲ್ಲಿ ಹಲವಾರು ಖಾಸಗಿ ಉದ್ಯೋಗಿಗಳು ತಮ್ಮ ಸಂಸ್ಥೆಯಿಂದ ವೇತನವನ್ನು ಅಡ್ವಾನ್ಸ್ ಆಗಿ ಪಡೆಯುತ್ತಾರೆ. ಕೆಲವು ಸಂಸ್ಥೆಗಳಲ್ಲಿ ಅಡ್ವಾನ್ಸ್ ನೀಡಲಾಗುತ್ತದೆ, ಕೆಲವು ಸಂಸ್ಥೆಗಳಲ್ಲಿ ನೀಡಲಾಗುವುದಿಲ್ಲ. ಆದರೆ ಸರ್ಕಾರಿ ಉದ್ಯೋಗಿಗಳು ಏನು ಮಾಡುವುದು?
ಆದರೆ ಈ ಒಂದು ರಾಜ್ಯದಲ್ಲಿ ಸರ್ಕಾರಿ ಉದ್ಯೋಗಿಗಳು ಕೂಡಾ ಅಡ್ವಾನ್ಸ್ ಅನ್ನು ಪಡೆಯಲು ಅವಕಾಶವಿದೆ. ತೀರಾ ಅಗತ್ಯ ಸಂದರ್ಭ ಬಂದಾಗ ಅಡ್ವಾನ್ಸ್ ಪಡೆಯಬಹುದಾಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ "ಅರ್ನ್ಡ್ ಸ್ಯಾಲರಿ ಅಡ್ವಾನ್ಸ್ ಡ್ರಾವಲ್ ಆಕ್ಸೆಸ್ ಸ್ಕೀಮ್" ಅನ್ನು ಅನುಮೋದಿಸಿದ್ದಾರೆ. ಜೂನ್ 1, 2023 ರಿಂದ ಎಲ್ಲಾ ಉದ್ಯೋಗಿಗಳು ಈ ಯೋಜನೆಯ ಫಲ ಪಡೆಯಬಹುದಾಗಿದೆ.

ರಾಜಸ್ಥಾನದಲ್ಲಿ ಅಡ್ವಾನ್ಸ್ ವೇತನ
ಈ ಹೊಸ ಯೋಜನೆಯನ್ನು ಜಾರಿ ಮಾಡುವ ಮೂಲಕ ರಾಜಸ್ಥಾನವು ಸರ್ಕಾರಿ ಉದ್ಯೋಗಿಗಳಿಗೆ ಅಡ್ವಾನ್ಸ್ ವೇತನವನ್ನು ಮೊದಲ ರಾಜ್ಯವಾಗಿದೆ. ರಾಜ್ಯ ಸರ್ಕಾರದ ಪ್ರಕಾರ ಈ ಯೋಜನೆಯನ್ನು ರಾಜಸ್ಥಾನ ಫೈನಾನ್ಶಿಯಲ್ ಸರ್ವಿಸ್ ಡೆಲಿವರಿ ಲಿಮಿಟೆಡ್ ನಡೆಸುತ್ತಿದೆ. ಉದ್ಯೋಗಿ ತಿಂಗಳ ಅಂತ್ಯದ ಮೊದಲು ತಮ್ಮ ಆದಾಯದ ಮೇಲೆ ವೇತನದ ಅಡ್ವಾನ್ಸ್ ಅನ್ನು ಪಡೆಯಬಹುದಾಗಿದೆ.
ವೇತನ ಮುಂಗಡ ಹೇಗೆ ಪಡೆಯುವುದು ನೋಡಿ
"ಅರ್ನ್ಡ್ ಸ್ಯಾಲರಿ ಅಡ್ವಾನ್ಸ್ ಡ್ರಾವಲ್ ಆಕ್ಸೆಸ್ ಸ್ಕೀಮ್" ಬಗ್ಗೆ ರಾಜಸ್ಥಾನ ಸರ್ಕಾರವು ಸಂಪೂರ್ಣ ಮಾಹಿತಿಯನ್ನು ನೀಡಿದೆ. ರಾಜ್ಯ ಸರ್ಕಾರವು ಹೆಚ್ಚಿನ ಮಾಹಿತಿಯನ್ನು ಒದಗಿಸಿದೆ. ನೌಕರರ ಮುಂಗಡ ಪಾವತಿ ಕಡಿತವನ್ನು ಮುಂದಿನ ತಿಂಗಳಿಗೆ ಉದ್ಯೋಗಿಗಳ ವೇತನದಿಂದ ಸರಿಹೊಂದಿಸಲಾಗುತ್ತದೆ ಎಂದು ಹೇಳಿದೆ.
ಉದ್ಯೋಗಿಯು ಎಷ್ಟು ವೇತನವನ್ನು ಪಡೆಯಬಹುದು?
ಈ ಹೊಸ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರಿ ನೌಕರರು ವೇತನದ ಅಡ್ವಾನ್ಸ್ ಅನ್ನು ಪಡೆಯಬಹುದಾಗಿದೆ. ಆದರೆ ಅವರು ಒಟ್ಟು ವೇತನದ ಶೇಕಡ 50ಕ್ಕಿಂತ ಅಧಿಕ ಮೊತ್ತವನ್ನು ಅಡ್ವಾನ್ಸ್ ರೂಪದಲ್ಲಿ ಪಡೆಯಲು ಸಾಧ್ಯವಿಲ್ಲ. ಅಡ್ವಾನ್ಸ್ ಪಡೆಯುವ ಯಾವುದೇ ನಿರ್ದಿಷ್ಟ ತಿಂಗಳ 21 ನೇ ದಿನಾಂಕದ ಮೊದಲು ಮುಂಗಡ ಪಾವತಿಯನ್ನು ಸ್ವೀಕರಿಸಿದರೆ ಅವರ ಪ್ರಸ್ತುತ ಸಂಬಳದ ತಿಂಗಳಿನಿಂದ ಮರುಪಾವತಿ ಮಾಡಲಾಗುತ್ತದೆ.
ಇದಲ್ಲದೆ, ವಿಶ್ವ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಗಳು ಮತ್ತು ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆದ್ದ ರಾಜ್ಯ ಸರ್ಕಾರಿ ನೌಕರರಿಗೆ ವೈಯಕ್ತಿಕ ವೇತನದ ರೂಪದಲ್ಲಿ ವಿಶೇಷ ಏರಿಕೆಯನ್ನು ನೀಡುವ ಪ್ರಸ್ತಾವನೆಗೆ ಮುಖ್ಯಮಂತ್ರಿ ಗೆಹ್ಲೋಟ್ ತಮ್ಮ ಅನುಮೋದನೆಯನ್ನು ನೀಡಿದ್ದಾರೆ.
ಕ್ರೀಡಾಕೂಟದ ಮುಕ್ತಾಯದ ನಂತರ ಅರ್ಹ ಉದ್ಯೋಗಿಗಳು ಆರು ತಿಂಗಳೊಳಗೆ ವಿಶೇಷ ವೇತನ ಹೆಚ್ಚಳಕ್ಕಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಇದು ಏಪ್ರಿಲ್ ಒಂದರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ, ಉದ್ಯೋಗಿಗಳು ರಾಜ್ಯ ಸರ್ಕಾರವು ನಿಗದಿಪಡಿಸಿದ ಮೊತ್ತದಲ್ಲಿ ವೈಯಕ್ತಿಕ ವೇತನವಾಗಿ ವಿಶೇಷ ಏರಿಕೆಗಳನ್ನು ಪಡೆಯಬಹುದಾಗಿದೆ.
ಉದ್ಯೋಗಿಗಳಿಗೆ ಅಧಿಕ ಪಾವತಿ ನೀಡುವ ನಗರ ಬೆಂಗಳೂರು!
ಈ ವರ್ಷದಲ್ಲಿ ವೇತನ ಬೆಳವಣಿಗೆಯು ಶೇಕಡ 3.20ರಿಂದ ಶೇಕಡ 10.19ರ ನಡುವೆ ಇದೆ. ನಾವು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ವರ್ಷದಲ್ಲಿ ವೇತನ ಬೆಳವಣಿಗೆ ಆಗಿಲ್ಲ. ಈ ವರ್ಷ ಒಟ್ಟಾರೆ ವೇತನದ ಬೆಳವಣಿಗೆಯಲ್ಲಿ ಕುಸಿತದ ಹೊರತಾಗಿಯೂ, ಇತರೆ ಪ್ರಮುಖ ವ್ಯತ್ಯಾಸಗಳು ಕೂಡಾ ಇದೆ.
ಉದ್ಯೋಗಗಳು ಮತ್ತು ವೇತನದ ವರದಿ ಏನು ಹೇಳುತ್ತದೆ? ಈ ಸಮೀಕ್ಷೆಯಲ್ಲಿ ಹೆಚ್ಚಿನ ಕೈಗಾರಿಕೆಗಳು ಲಾಭದಾಯಕ ವೇತನವನ್ನು ನೀಡುವ ಉದ್ಯೋಗ ಸೃಷ್ಟಿಯನ್ನು ಸೂಚಿಸಿದೆ. ಸುಮಾರು ಅರ್ಧದಷ್ಟು ಉದ್ಯಮಗಳು ಭವಿಷ್ಯಕ್ಕೆ ಸೂಕ್ತವಾದ ಅತ್ಯಾಧುನಿಕ ಸ್ಥಾನಗಳನ್ನು ಅಭಿವೃದ್ಧಿಪಡಿಸುತ್ತಿವೆ ಎಂದು ವರದಿ ಹೇಳಿದೆ. ಬೆಂಗಳೂರು, ಮುಂಬೈ, ಚೆನ್ನೈ, ದೆಹಲಿ ಮತ್ತು ಹೈದಾರಾಬಾದ್ ದೇಶದಲ್ಲಿ ಉದ್ಯೋಗಿಗಳಿಗೆ ಅಧಿಕ ವೇತನವನ್ನು ನೀಡುವ ನಗರವಾಗಿದೆ ಎಂದು ವರದಿ ಹೇಳಿದೆ.


Click it and Unblock the Notifications