ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ಮಹತ್ವದ ಪಾತ್ರವನ್ನು ಗೌರವಿಸಲು ಮತ್ತು ಶ್ಲಾಘಿಸಲು ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಶಿಕ್ಷಕರ ದಿನವನ್ನು ಮಾಜಿ ರಾಷ್ಟ್ರಪತಿ, ತತ್ವಜ್ಞಾನಿ, ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಮತ್ತು ವಿದ್ವಾಂಸ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನದ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. ಡಾ ಸರ್ವಪಲ್ಲಿ ರಾಧಾಕೃಷ್ಣನ್ ಭಾರತದ ಮೊದಲ ಉಪರಾಷ್ಟ್ರಪತಿಯಾಗಿದ್ದಾರೆ.
ಶಿಕ್ಷಕರ ದಿನದಂದು ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಶ್ರಮ ಮತ್ತು ಉತ್ಸಾಹವನ್ನು ಸ್ಮರಿಸಲಾಗುತ್ತದೆ. ಶಿಕ್ಷಕರ ದಿನಾಚರಣೆ 2023 ರ ಸಂದರ್ಭದಲ್ಲಿ, ನಿಮ್ಮ ಪ್ರೀತಿಯ ಶಿಕ್ಷಕರಿಗೆ ಪ್ರೀತಿ ಮತ್ತು ಗೌರವವನ್ನು ಉಡುಗೊರೆಯನ್ನು ನೀಡಲಾಗುತ್ತದೆ. ನಿಮ್ಮ ಪಾಕೆಟ್ ಮನಿಯನ್ನು ಬಳಸಿಕೊಂಡು, ಕಡಿಮೆ ಮೊತ್ತದಲ್ಲಿ ನೀವು ಈ ದಿನದಂದು ಯಾವೆಲ್ಲ ಗಿಫ್ಟ್‌ಗಳನ್ನು ಶಿಕ್ಷಕರಿಗೆ ನೀಡಬಹುದು ಎಂಬುವುದು ಇಲ್ಲಿದೆ, ಮುಂದೆ ಓದಿ....

ಶಿಕ್ಷಕರಿಗೆ ನೀಡಿ ಈ 10 ಗಿಫ್ಟ್‌ಗಳನ್ನು
1. ನೀವೇ ತಯಾರಿಸಿದ ಗ್ರೀಟಿಂಗ್ ಕಾರ್ಡ್: ನೀವೇ ಮಾಡಿದ ಶುಭಾಶಯ ಪತ್ರವನ್ನು ನೀವು ನಿಮ್ಮ ಶಿಕ್ಷಕರಿಗೆ ನೀಡಬಹುದು. ವಿದ್ಯಾರ್ಥಿಗಳಾದ ನೀವು ಕಡಿಮೆ ಖರ್ಚಿನಲ್ಲಿಯೇ ಗ್ರೀಟಿಂಗ್ ಕಾರ್ಡ್ ತಯಾರಿಸಬಹುದು.
2. ಪೆನ್ ಉಡುಗೊರೆ: ಯುದ್ಧದಲ್ಲಿ ಸೈನಿಕನಿಗೆ ಖಡ್ಗವು ಆಯುಧದಂತೆ, ಪೆನ್ನು ಪ್ರತಿಯೊಬ್ಬ ಶಿಕ್ಷಕರ ಆಯುಧವಾಗಿದೆ. ಲೇಖನಿಯ ಸಹಾಯದಿಂದ ವಿದ್ಯಾರ್ಥಿಗಳ ಭವಿಷ್ಯವನ್ನು ಯಾವಾಗಲೂ ಅಂದಗೊಳಿಸಲಾಗಿದೆ. ನೀವು ಪೆನ್ ಅನ್ನು ಶಿಕ್ಷಕರಿಗೆ ಉಡುಗೊರೆಯಾಗಿ ನೀಡುವುದು ಉತ್ತಮ ಆಯ್ಕೆಯಾಗಿದೆ.
3. ಫೋಟೋ ಫ್ರೇಮ್: ಫೋಟೋ ಫ್ರೇಮ್‌ಗಳನ್ನು ಉಡುಗೊರೆಯಾಗಿ ನೀಡುವುದು ಇಂದಿಗೂ ಫ್ಯಾಷನ್‌ನಿಂದ ಹೊರಗುಳಿದಿಲ್ಲ. ಈ ಶಿಕ್ಷಕರ ದಿನದಂದು, ನಿಮ್ಮ ಶಿಕ್ಷಕರ ಉತ್ತಮ ಚಿತ್ರಗಳನ್ನು ಫ್ರೇಮ್ ಮೂಲಕ ನೀವು ಉಡುಗೊರೆಯಾಗಿ ನೀಡಬಹುದು.
4. ಕಾಫಿ ಮಗ್: ನಿಮ್ಮ ಶಿಕ್ಷಕರು ಕಾಫಿ ಪ್ರಿಯರಾಗಿದ್ದರೆ, ನೀವು ಕಾಫಿ ಮಗ್ ಅನ್ನು ಗಿಫ್ಟ್ ಆಗಿ ನೀಡಬಹುದು. ಕಾಫಿ ಮಗ್‌ನಲ್ಲಿ ಶಿಕ್ಷಕರ ಫೋಟೋ ಹಾಕಿಸಿ ಉಡುಗೊರೆಯಾಗಿ ನೀಡಬಹುದು.
5. ಪೆಂಡೆಂಟ್: ನಿಮ್ಮ ಮೆಚ್ಚಿನ ಶಿಕ್ಷಕರು ಪೆಂಡೆಂಟ್‌ಗಳನ್ನು ಧರಿಸಲು ಇಷ್ಟಪಡುತ್ತಿದ್ದರೆ, ಈ ಶಿಕ್ಷಕರ ದಿನದಂದು ನಿಮ್ಮ ಶಿಕ್ಷಕರಿಗೆ ಪೆಂಡೆಂಟ್ ಅನ್ನು ನೀಡಬಹುದು. ನಿಮ್ಮ ಶಿಕ್ಷಕರ ಹೆಸರಿನ ಮೊದಲಾಕ್ಷರ ಇರುವ ಪೆಂಡೆಂಟ್ ನೀಡಬಹುದು.
6. ಹೂಗಳು ಮತ್ತು ಚಾಕೊಲೇಟ್‌ಗಳು: ಚಾಕೊಲೇಟ್‌ಗಳು ಮತ್ತು ಹೂವುಗಳನ್ನು ಯಾರು ಇಷ್ಟಪಡಲ್ಲ ಹೇಳಿ. ಈ ಶಿಕ್ಷಕರ ದಿನದಂದು ಚಾಕೊಲೇಟ್‌ಗಳು ಮತ್ತು ಹೂವುಗಳನ್ನು ನಿಮ್ಮ ಶಿಕ್ಷಕರಿಗೆ ಉಡುಗೊರೆಯನ್ನಾಗಿ ನೀಡಬಹುದು.
7. ಕೇಕ್: ಯಾವುದೇ ಸಂದರ್ಭಕ್ಕೂ ಉತ್ತಮ ಕೊಡುಗೆ ಎಂದರೆ ಸಿಹಿ ಮತ್ತು ರುಚಿಕರವಾದ ಕೇಕ್. ಈ ಶಿಕ್ಷಕರ ದಿನದಂದು, ನಿಮ್ಮ ಶಿಕ್ಷಕರಿಗೆ ಕೇಕ್ ಅನ್ನು ನೀಡಬಹುದು.
8. ಚಿತ್ರಕಲೆ: ನಿಮ್ಮ ಶಿಕ್ಷಕರು ಕಲಾ ಪ್ರೇಮಿಯಾಗಿದ್ದರೆ, ಚಿತ್ರಕಲೆಗಿಂತ ಉತ್ತಮ ಕೊಡುಗೆ ಯಾವುದೂ ಇಲ್ಲ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಕಲೆಯು ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ನೀವು ಕಲಾವಿದರಾಗಿದ್ದರೆ, ನಿಮ್ಮ ಶಿಕ್ಷಕರಿಗೆ ನೀವು ಪೇಂಟಿಂಗ್ ಅನ್ನು ಮಾಡಬಹುದು ಅಥವಾ ಖರೀದಿಸಿ ನೀಡಬಹುದು.
9. ಕೀಚೈನ್‌ಗಳು: ಕೀಚೈನ್‌ಗಳು ಪ್ರತಿಯೊಬ್ಬರ ಮೆಚ್ಚಿನದ್ದಾಗಿದೆ. ನೀವು ಕೀಚೈನ್‌ಗಳನ್ನು ನಿಮ್ಮ ಶಿಕ್ಷಕರಿಗೆ ಗಿಫ್ಟ್ ಆಗಿ ನೀಡಬಹುದು.
10. ಟಿ-ಶರ್ಟ್: ಯಾವುದೇ ಸಂದರ್ಭದಲ್ಲಿ ಟೀ ಶರ್ಟ್‌ಗಳನ್ನು ಉಡುಗೊರೆಯಾಗಿ ನೀಡುವುದು ಹೊಸ ಟ್ರೆಂಡ್. ಈ ಶಿಕ್ಷಕರ ದಿನದಂದು, ನಿಮ್ಮ ಶಿಕ್ಷಕರಿಗೆ ಟೀ ಶರ್ಟ್ ಅನ್ನು ಉಡುಗೊರೆಯಾಗಿ ನೀಡಿ. ಇದು ಖಂಡಿತವಾಗಿಯೂ ನಿಮ್ಮ ಶಿಕ್ಷಕರಿಗೆ ಸಂತೋಷ ತರಿಸುತ್ತದೆ.


Click it and Unblock the Notifications