ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್‌ಸಿಯ ನೀವು ಖಾತೆಯನ್ನು ಹೊಂದಿದ್ದೀರಾ?. ಹಾಗಾದರೆ ಈ ಸುದ್ದಿಯನ್ನು ನೀವು ಓದುವುದು ಉತ್ತಮ. ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಎಷ್ಟು ಉಚಿತ ವಹಿವಾಟವನ್ನು ನೀವು ಮಾಡಲು ಸಾಧ್ಯವಿದೆ, ಹೆಚ್ಚಿನ ವಹಿವಾಟಿಗೆ ಎಷ್ಟು ಶುಲ್ಕ ವಿಧಿಸಲಾಗುತ್ತದೆ ಎಂಬ ಬಗ್ಗೆ ನಾವು ಇಲ್ಲಿ ಮಾಹಿತಿ ನೀಡಿದ್ದೇವೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಎಟಿಎಂಗಳಲ್ಲಿ ಉಳಿತಾಯ ಹಾಗೂ ಸ್ಯಾಲರಿ ಖಾತೆಯನ್ನು ನಾವು ಹೊಂದಿದ್ದರೆ, ಐದು ಬಾರಿ ಉಚಿತವಾಗಿ ಎಟಿಎಂ ವಹಿವಾಟು ನಡೆಸಬಹುದು. ಮೆಟ್ರೋ ನಗರದಲ್ಲಿ ಮೂರು ಬಾರಿ ಉಚಿತವಾಗಿ ಎಟಿಎಂ ವಹಿವಾಟು ನಡೆಸಬಹುದು. ಮೆಟ್ರೋಯೇತರ ನಗರದಲ್ಲಿ ಐದು ಬಾರಿ ಉಚಿತವಾಗಿ ಎಟಿಎಂ ವಹಿವಾಟು ನಾವು ನಡೆಸಬಹುದು.
ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಉಚಿತ ವಹಿವಾಟು ಮಿತಿಯನ್ನು ಮೀರಿ ನಾವು ಹಣಕಾಸು ವಹಿವಾಟು ನಡೆಸಿದರೆ, ರೂಪಾಯಿ 21 +ತೆರಿಗೆಯನ್ನು ವಿಧಿಸಲಾಗುತ್ತದೆ. ಹಣಕಾಸೇತರ ವಹಿವಾಟು ನಡೆಸಿದರೆ ರೂಪಾಯಿ 8.50+ಜಿಎಸ್‌ಟಿ ಪಾವತಿ ಮಾಡಬೇಕಾಗುತ್ತದೆ. ಆದರೆ ಕೆಲವು ಬ್ಯಾಂಕ್ ಖಾತೆ ಹೊಂದಿರುವವರಿಗೆ ಎಚ್‌ಡಿಎಫ್‌ಸಿ ಕೆಲವು ಆಫರ್‌ಗಳನ್ನು ನೀಡುತ್ತದೆ. ಯಾರಿಗೆ ಹೆಚ್ಚುವರಿ ಪ್ರಯೋಜನ ಇದೆ ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ...

ಯಾರಿಗೆ ಇದೆ ಹೆಚ್ಚುವರಿ ಪ್ರಯೋಜನ; ಆಕ್ಟಿವ್, ಆಕ್ಸೆಂಟ್, ಮ್ಯಾಕ್ಸ್ ಅಡ್ವಂಟೇಜ್, ಪ್ಲಸ್, ಪ್ರೊಫೇಷನಲ್, ಇಕಾನಮ್, ಸ್ಮಾರ್ಟ್‌ಅಪ್ ಆಲ್ಫಾ, ಸ್ಮಾರ್ಟ್ ಅಪ್ ಗ್ರೋಥ್, ಸ್ಮಾರ್ಟ್ ಅಪ್ ಮ್ಯಾಕ್ಸ್, ಅಲ್ಟಿಮ, ಅಪೆಕ್ಸ್, ಮ್ಯಾಕ್ಸ್, ಫ್ಲೆಕ್ಸಿ, ಮರ್ಚಂಟ್ ಅಡ್ವಾಂಟೇಜ್ ಪ್ಲಸ್, ಅನಿಯಮಿತವಾಗಿ ಹಣವನ್ನು ಹಿಂಪಡೆಯುವ ಖಾತೆಯನ್ನು ಹೊಂದಿರುವವರಿಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಹೆಚ್ಚುವರಿ ಪ್ರಯೋಜನವನ್ನು ನೀಡುತ್ತದೆ. ಆದರೆ ಬ್ಯಾಂಕ್‌ನಲ್ಲಿ ಮೆಟ್ರೋ ಎಟಿಎಂಗಳಲ್ಲಿ 3 ಉಚಿತ ವಹಿವಾಟುಗಳ ಮತ್ತು ಮೆಟ್ರೋ ಅಲ್ಲದ ಎಟಿಎಂಗಳಲ್ಲಿ 5 ಉಚಿತ ವಹಿವಾಟು ಇರುತ್ತದೆ. ಉಚಿತ ವಹಿವಾಟಿಗಿಂತ ಅಧಿಕ ವಹಿವಾಟು ನಡೆಸಿದರೆ ರೂಪಾಯಿ 21 ವಿಧಿಸಲಾಗುತ್ತದೆ.
ನಿಯಮಿತ, ಪ್ರೀಮಿಯಂ, ಟ್ರೇಡ್, ಮರ್ಚೆಂಟ್ ಅಡ್ವಾಂಟೇಜ್, ಇಝೀ ಅಡಿಯಲ್ಲಿ ಆಸ್ಪತ್ರೆಗಳು/ನರ್ಸಿಂಗ್ ಹೋಮ್‌ಗಳು/ಪಾಥಾಲಜಿ ಲ್ಯಾಬ್‌ಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಟಿಎಂನಿಂದ ಅನಿಯಮಿತವಾಗಿ ಹಣವನ್ನು ವಿತ್‌ಡ್ರಾ ಮಾಡಬಹುದು. ಆದರೆ ಬೇರೆ ಬ್ಯಾಂಕ್‌ನ ಎಟಿಎಂನಿಂದ ಹಣವನ್ನು ಹಿಂಪಡೆದರೆ ಮೊದಲ ವಹಿವಾಟಿಗೆಯೇ ಶುಲ್ಕ ವಿಧಿಸಲಾಗುತ್ತದೆ.


Click it and Unblock the Notifications