Hindenburg: ಹಿಂಡನ್‌ಬರ್ಗ್ ವರದಿ: ಅದಾನಿ ಸಂಸ್ಥೆಯ ಎಲ್ಲ ಮಹತ್ವಾಕಾಂಕ್ಷೆಯ ಯೋಜನೆಗಳೇನಾಯ್ತು?

ಭಾರತದ ಅತೀ ಶ್ರೀಮಂತ ವ್ಯಕ್ತಿಯಾಗಿದ್ದ ಗೌತಮ್ ಅದಾನಿ ಮಾಲೀಕತ್ವದ ಅದಾನಿ ಗ್ರೂಪ್ ಸಂಸ್ಥೆಯು ಸ್ಟಾಕ್ ಮಾರುಕಟ್ಟೆಯಲ್ಲಿ ಭಾರೀ ವಂಚನೆಯನ್ನು ಮಾಡಿದೆ ಎಂದು ಹಿಂಡನ್‌ಬರ್ಗ್ ಸಂಸ್ಥೆಯು ಸುಮಾರು ಎರಡು ತಿಂಗಳ ಹಿಂದೆ ಅಂದರೆ ಜನವರಿ 24ರಂದು ವರದಿ ಮಾಡಿದೆ. ಅದಾನಿ ಗ್ರೂಪ್ ಷೇರುಪೇಟೆಯಲ್ಲಿ ತಲ್ಲಣಿಸುವಂತೆ ಮಾಡಿದ ಈ ವರದಿಯು ಸಂಸ್ಥೆಯ ಹಲವಾರು ನಿರ್ಧಾರಗಳ ಮೇಲೆ ಪ್ರಭಾವ ಬೀರಿದೆ. ಭಾರತದ ಅತೀ ದೊಡ್ಡ ಬಿಲಿಯನೇರ್‌ನ ಸಾಮ್ರಾಜ್ಯವನ್ನು ಹೊಂದಿದ್ದ ಅದಾನಿ ಗ್ರೂಪ್ ತನ್ನ ಎಲ್ಲ ಮಹಾತ್ವಾಕಾಂಕ್ಷೆಯ ನಿರ್ಧಾರಗಳು, ಯೋಜನೆಗಳ ಜಾರಿ ಬಗ್ಗೆ ಮತ್ತೆ ಚಿಂತನೆ ನಡೆಸಬೇಕಾದ ಸ್ಥಿತಿ ಉಂಟಾಗಿದೆ.

ಅದಾನಿ ಗ್ರೂಪ್ ಹಲವಾರು ವರ್ಷಗಳಿಂದ ಸ್ಟಾಕ್ ಮಾರುಕಟ್ಟೆಯಲ್ಲಿ ಮ್ಯಾನಿಪುಲೇಷನ್ ಮಾಡುತ್ತಿದೆ ಎಂದು ಹಿಂಡನ್‌ಬರ್ಗ್ ವರದಿ ಮಾಡಿದೆ. ಈ ವರದಿ ಪ್ರಕಟವಾದಾಗಿನಿಂದ ಈವರೆಗೆ ಗ್ರೂಪ್ ಸುಮಾರು 125 ಬಿಲಿಯನ್ ಡಾಲರ್ ಸಂಪತ್ತಿನ ನಷ್ಟವನ್ನು ಕಂಡಿದೆ. ಅಷ್ಟು ಮಾತ್ರವಲ್ಲದೆ ಸಂಸ್ಥೆಯು ಹೊಸ ವಲಯಗಳಿಗೆ ವಿಸ್ತರಣೆ ಮಾಡುವ ಯೋಜನೆಗಳನ್ನು ಕೈಬಿಡುವ ಸ್ಥಿತಿಗೆ ಬಂದು ತಲುಪಿದೆ ಎಂದು ಅದಾನಿ ಸಂಸ್ಥೆಯ ಆಂತರಿಕ ಕಾರ್ಯಗಳ ಬಗ್ಗೆ ತಿಳಿದಿರುವ ಜನರು ಮಾಹಿತಿ ನೀಡಿದ್ದಾರೆ. ಭಾರೀ ನಷ್ಟವನ್ನು ಕಂಡಿರುವ ಅದಾನಿ ಗ್ರೂಪ್ ಈಗಾಗಲೇ ಹಲವಾರು ಯೋಜನೆಗಳನ್ನು ಕೈಬಿಟ್ಟಿದೆ.

 ಹಿಂಡನ್‌ಬರ್ಗ್ : ಅದಾನಿ ಸಂಸ್ಥೆಯ ಮಹಾತ್ವಾಕಾಂಕ್ಷೆಗಳೇನಾಯ್ತು?

ಹೊಸ ಹೊಸ ಕ್ಷೇತ್ರಗಳಲ್ಲಿ ತನ್ನ ಪ್ರಾಬಲ್ಯವನ್ನು ವಿಸ್ತರಣೆ ಮಾಡುತ್ತಾ ಬಂದಿರುವ ಭಾರತದಲ್ಲಿ ಅತೀ ಹೆಚ್ಚು ಸಾಲವನ್ನು ಹೊಂದಿರುವ ಸಂಸ್ಥೆಯು ಕೂಡಾ ಅದಾನಿ ಗ್ರೂಪ್ ಆಗಿದೆ. ಇತ್ತೀಚಿಗಷ್ಟೆ ಅದಾನಿ ಗ್ರೂಪ್ ಗುಜರಾತ್‌ನ ಮುಂದ್ರಾದಲ್ಲಿನ ಸುಮಾರು 34,900 ಕೋಟಿ ರೂಪಾಯಿಯ ಪೆಟ್ರೋಕೆಮಿಕಲ್ ಯೋಜನೆಯನ್ನು ಕೈಬಿಟ್ಟಿದೆ. ಇನ್ನು ಮುಂದ್ರಾದಲ್ಲಿರುವ ಸುಮಾರು 4 ಬಿಲಿಯನ್ ಡಾಲರ್‌ನ ಗ್ರೀನ್‌ಫೀಲ್ಡ್ ಕೋಲ್‌-ಟು-ಪಾಲಿವಿನೈಲ್ ಕ್ಲೋರೈಡ್ ಯೋಜನೆಯನ್ನು ಕೂಡಾ ಕೈಬಿಡುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಯೂಮಿನಿಯಂ, ಉಕ್ಕು ಮತ್ತು ರಸ್ತೆಯ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಬ್ರೇಕ್ ಹಾಕಿದ್ದಾರೆ ಎಂದು ಮಾಹಿತಿ ಲಭಿಸಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯೊಂದಿಗೆ ನಿಕಟ ಸಂಪರ್ಕವನ್ನು ಹೊಂದಿರುವ ಗೌತಮ್ ಅದಾನಿ ದೇಶದಲ್ಲಿ ಹಲವಾರು ಯೋಜನೆಗಳನ್ನು ತನ್ನ ಸಂಸ್ಥೆಯ ವಶಕ್ಕೆ ಪಡೆದುಕೊಂಡಿದ್ದಾರೆ. ವಿದ್ಯುತ್ ಉತ್ಪಾದನೆ, ಬಂದರುಗಳು ಮತ್ತು ಹೊಸ ಹಸಿರು ಶಕ್ತಿ ಉತ್ಪಾದನೆ, ಮೊದಲಾದ ಯೋಜನೆಗಳ ಮೂಲಕ ಅದಾನಿ ಗ್ರೂಪ್ ತನ್ನ ಕಬಂಧ ಬಾಹುವನ್ನು ಭಾರತದಲ್ಲಿ ಚಾಚುತ್ತಾ ಬಂದಿದೆ. ಮಾರ್ಜಿನ್ ಆಧಾರಿತ, ಷೇರು ಆಧಾರಿಯ ಸಾಲದ ಪೂರ್ವ ಪಾವತಿಗೆ ಅದಾನಿ ಗ್ರೂಪ್ ನಿರ್ಧಾರ ಮಾಡಿದ ಬಳಿಕ ಅದಾನಿ ಸಂಸ್ಥೆ ಈ ರೀತಿಯ ಅಧಿಕ ಹಣಕಾಸು ಅಪಾಯಕ್ಕೆ ಕಾರಣವಾಗುವ ಯಾವುದೇ ಯೋಜನೆಗಳಿಗೂ ಕೈಹಾಕುತ್ತಿಲ್ಲ, ಆ ಯೋಜನೆಗಳಿಂದ ದೃಢವಾಗಿ ನಿರ್ಧಾರ ಮಾಡಿ ದೂರವಾಗುತ್ತಿದೆ ಎಂದು ಮಾಧ್ಯಮ ವರದಿ ಮಾಡಿದೆ.

ಹಿಂಡನ್‌ಬರ್ಗ್ ವರದಿ ಏನು ಹೇಳಿದೆ?

ಹಿಂಡನ್‌ಬರ್ಗ್ ತನಿಖಾ ವರದಿಯು ಅದಾನಿ ಗ್ರೂಪ್ ವಂಚನೆಯನ್ನು ಭಾಗಿಯಾಗಿದೆ. ದಶಕಗಳಿಂದ ವಂಚನೆ ನಡೆಸುತ್ತಿದೆ. ಅದಾನಿ ಗ್ರೂಪ್‌ ಬಗ್ಗೆ ಸುಮಾರು ಎರಡು ವರ್ಷಗಳ ಕಾಲ ತನಿಖೆಯನ್ನು ನಡೆಸಿ ವರದಿ ನೀಡಲಾಗಿದೆ. ಅದಾನಿ ಗ್ರೂಪ್‌ನ ಹಲವಾರು ವ್ಯಕ್ತಿಗಳ ಸಂದರ್ಶನ ಮಾಡಲಾಗಿದೆ. ಮಾಜಿ ಹಿರಿಯ ಅಧಿಕಾರಿಗಳ ಸಂದರ್ಶನವನ್ನು ಕೂಡಾ ಮಾಡಲಾಗಿದೆ. ದಾಖಲೆಗಳು ನಮ್ಮಲ್ಲಿದೆ ಎಂದು ಹಿಂಡನ್‌ಬರ್ಗ್ ಮಾಹಿತಿ ನೀಡಿದೆ.

ಜನವರಿ 24ರಂದು ವರದಿ ಬಿಡುಗಡೆ ಮಾಡಿರುವ ಹಿಂಡನ್‌ಬರ್ಗ್, ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆ ಮಾಡಿರುವ ಬಗ್ಗೆ ನಾವು ಹಲವಾರು ದಾಖಲೆಗಳನ್ನು ಪರಿಶೀಲನೆ ಮಾಡಿದ್ದೇವೆ. 12ರಷ್ಟು ದೇಶಗಳಿಗೆ ಭೇಟಿ ನೀಡಿ ಸ್ವತಃ ಸ್ಥಳ ಪರಿಶೀಲನೆ ಮಾಡಿದ್ದೇವೆ. ಇದರಿಂದಾಗಿ ಅದಾನಿ ಗ್ರೂಪ್‌ಯು ವಂಚನೆಯನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ ಎಂದು ವರದಿ ಹೇಳಿದೆ.

ಅದಾನಿ ಕುಟುಂಬದ ಸದಸ್ಯರು ಹಾಗೂ ಕಂಪನಿಗೆ ಸಂಬಂಧಿಸಿದ ಅಧಿಕಾರಿಗಳು ಮಾರಿಷಸ್, ಯುಎಇ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ಕಡಲಾಚೆಯ ಶೆಲ್ ಘಟಕಗಳನ್ನು ರಚಿಸಲು ಸಹಕರಿಸಿದ್ದಾರೆ. ನಕಲಿ ಅಥವಾ ಕಾನೂನುಬಾಹಿರ ವಹಿವಾಟು ಮತ್ತು ಲಿಸ್ಟೆಡ್ ಕಂಪನಿಗಳಿಂದ ಹಣವನ್ನು ಪಡೆಯುವ ಪ್ರಯತ್ನ ಮಾಡಿದ್ದಾರೆ. ನಕಲಿ ಆಮದು/ರಫ್ತು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಹಿಂಡೆನ್‌ಬರ್ಗ್ ತನ್ನ ತನಿಖಾ ವರದಿಯಲ್ಲಿ ತಿಳಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+