ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಆರಂಭದಿಂದ ಕಟ್ಟಿ ಬೆಳೆಸಿದವರು ಮಾಜಿ ಐಪಿಎಲ್ ಮುಖ್ಯಸ್ಥರಾದ ಲಲಿತ್ ಮೋದಿ. ಲಲಿತ್ ಮೋದಿಗೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಇಂದು ಸುಪ್ರೀಂ ಕೋರ್ಟ್‌ನಿಂದ ಕೊಂಚ ರಿಲೀಫ್ ಲಭ್ಯವಾಗಿದೆ. ಲಲಿತ್ ಮೋದಿ ವಿರುದ್ಧದ ಪ್ರಕರಣವನ್ನು ಕೈಬಿಡಲು ಸುಪ್ರೀಂ ಕೋರ್ಟ್ ಪೀಠ ನಿರ್ಧಾರ ಮಾಡಿದೆ.
ಇಂದಿಗೂ ಎಲ್ಲ ಜನರು ಅತೀ ಉತ್ಸಾಹದಿಂದ, ಅತೀ ಇಷ್ಟಪಟ್ಟು ನೋಡುವ ಕ್ರಿಕೆಟ್ ಟೂರ್ನಮೆಂಟ್ ಐಪಿಎಲ್ ಅನ್ನು ಸ್ಥಾಪನೆ ಮಾಡಿರುವವರು ಲಲಿತ್ ಮೋದಿ ಆಗಿದ್ದಾರೆ. ಹೆಸರಾಂತ ಉದ್ಯಮಿ ಮತ್ತು ಭಾರತದಿಂದ ಪಲಾಯನವಾದವರೂ ಕೂಡಾ ಹೌದು. ಲಲಿತ್ ಮೋದಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಮತ್ತು ದುರುಪಯೋಗದ ಆರೋಪಗಳು ದಾಖಲಾಗಿದ್ದವು. ಅದಾದ ಬಳಿಕ ಲಲಿತ್ ಮೋದಿ ದೇಶದಿಂದ ಪಲಾಯನಗೊಂಡಿದ್ದಾರೆ.

ಲಲಿತ್ ಮೋದಿಯನ್ನು 2013ರಲ್ಲಿ ಬಿಸಿಸಿಐನಲ್ಲಿ ಬ್ಯಾನ್ ಮಾಡಲಾಗಿದೆ. ಲಲಿತ್ ಮೋದಿ 2013 ರ ಐಪಿಎಲ್ ಫೈನಲ್ ನಂತರ ಹಣಕಾಸಿನ ಅಕ್ರಮ ಮಾಡಿದ್ದಾರೆ ಎಂಬ ಆರೋಪ ಬಂದಾಗ ಬಿಸಿಸಿಐನಲ್ಲಿ ಲಲಿತ್ ಮೋದಿಯನ್ನು ನಿಷೇಧ ಮಾಡಲಾಗಿದೆ. ಅದಾದ ಬಳಿಕ ಲಲಿತ್ ಮೋದಿ ಯುನೈಟೆಡ್ ಕಿಂಗ್‌ಡಂನ ಲಂಡನ್‌ನಲ್ಲಿ ವಾಸಿಸಲು ಪ್ರಾರಂಭ ಮಾಡಿದ್ದಾರೆ. ಪರಾರಿಯಾಗಿದ್ದರೂ ಸಹ ಸಾಕಷ್ಟು ಅದ್ದೂರಿ ಜೀವನಶೈಲಿಯನ್ನು ಮುಂದುವರೆಸಿದ್ದಾರೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...
ಲಲಿತ್ ಮೋದಿ ಈಗಲೂ ಹಣ ಗಳಿಸುವುದು ಹೇಗೆ?
ಕ್ರಿಕೆಟ್‌ನಲ್ಲಿ ಲಲಿತ್ ಮೋದಿ ವೃತ್ತಿ ಜೀವನ ಮುಗಿದಿದ್ದರೂ ಕೂಡಾ ಲಲಿತ್ ಮೋದಿ ಈಗಲೂ ಕೂಡಾ ಲಂಡನ್‌ನಲ್ಲಿ ಅತೀ ಐಷಾರಾಮಿಯಾದ ಜೀವನವನ್ನು ನಡೆಸುತ್ತಿದ್ದಾರೆ. ಐಷಾರಾಮಿ ಮನೆಯನ್ನು ಕೂಡಾ ಹೊಂದಿದ್ದಾರೆ. ಮಾಲ್ಡೀವ್ಸ್‌ನಲ್ಲಿ ವಿಹಾರ ಮಾಡಿಕೊಳ್ಳುತ್ತಿದ್ದಾರೆ. ಖಾಸಗಿ ನೌಕೆ ಮತ್ತು ವಿಮಾನದ ಮೂಲಕ ಪ್ರಯಾಣಿಸುವುದರೊಂದಿಗೆ ಬಹಳ ಅದ್ದೂರಿ ಜೀವನಶೈಲಿಯನ್ನು ಮುಂದುವರೆಸಿದ್ದಾರೆ.
ಲಲಿತ್ ಮೋದಿ ಕ್ರಿಕೆಟ್ ಕನ್ವೀನರ್ ಆಗಿ ತಮ್ಮ ವೃತ್ತಿಜೀವನದುದ್ದಕ್ಕೂ ಕೋಟ್ಯಾಂತರ ರೂಪಾಯಿಯನ್ನು ಗಳಿಸುತ್ತಿದ್ದರು. ಆದರೆ ಲಲಿತ್ ಮೋದಿಯ ನಿವ್ವಳ ಆದಾಯದಲ್ಲಿರುವ ಒಂದು ಸಣ್ಣ ಹನಿ ಇದಾಗಿದೆ. ಹಣಕಾಸು ಅಕ್ರಮ ಮಾಡಿರುವ ಆರೋಪಿ ಮತ್ತು ಭಾರತದಿಂದ ಪಲಾಯನವಾಗಿರುವ ಲಲಿತ್ ಮೋದಿ ಈಗಲೂ ತಮ್ಮ ತಂದೆಯ ಕಂಪನಿ ಮೋದಿ ಎಂಟರ್‌ಪ್ರೈಸಸ್‌ನ ಮುಖ್ಯಸ್ಥರಾಗಿದ್ದಾರೆ.
ಹೌದು, ಲಲಿತ್ ಮೋದಿ ಸಿಗರೇಟ್ ಉತ್ಪಾದನೆ, ಶಿಕ್ಷಣ ಕ್ಷೇತ್ರ, ಕೃಷಿ ಕ್ಷೇತ್ರ, ಮನರಂಜನ ಕ್ಷೇತ ಸೇರಿದಂತೆ ಹಲವಾರು ಉದ್ಯಮಗಳನ್ನು ಹೊಂದಿರುವ ಮೋದಿ ಎಂಟರ್‌ಪ್ರೈಸಸ್‌ನ ಅಧ್ಯಕ್ಷರಾಗಿದ್ದಾರೆ. ವರದಿ ಪ್ರಕಾರ ಮೋದಿ ಸಂಸ್ಥೆಯ ಒಟ್ಟು ವಹಿವಾಟು 2021ರಲ್ಲಿ 1750 ಕೋಟಿ ರೂಪಾಯಿ ಆಗಿದೆ.
ಲಲಿತ್ ಮೋದಿಯ ಮಾಸಿಕ ಆದಾಯವು ಸುಮಾರು 16.5 ಕೋಟಿ ರೂಪಾಯಿ ಆಗಿದೆ ಎಂದು ಅಂದಾಜು ಮಾಡಲಾಗಿದೆ. ಹಾಗೆಯೇ ಲಲಿತ್ ಮೋದಿ ಲಂಡನ್‌ನಲ್ಲಿ ಐದು ಅಂತಸ್ತಿನ ಬಂಗಲೆಯನ್ನು ಹೊಂದಿದ್ದಾರೆ. 12,000 ಕೋಟಿ ರೂಪಾಯಿಯ ಉದ್ಯಮವನ್ನು ಹೊಂದಿದ್ದಾರೆ. ಹಲವಾರು ಐಷಾರಾಮಿ ಕಾರುಗಳನ್ನು ಕೂಡಾ ಹೊಂದಿದ್ದಾರೆ. 2023ರಲ್ಲಿ ಲಲಿತ್ ಮೋದಿ ನಿವ್ವಳ ಆದಾಯವು 4555 ಕೋಟಿ ರೂಪಾಯಿ ಆಗಿದೆ.
ನ್ಯಾಯಾಂಗ ನಿಂದನೆ ಪ್ರಕರಣ ಸಮಾಪ್ತಿ
ಲಲಿತ್ ಮೋದಿ ಬೇಷರತ್ ಆಗಿ ಕ್ಷಮೆಯಾಚನೆ ಮಾಡಿದ ಬಳಿಕ ಲಲಿತ್ ಮೋದಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸೋಮವಾರ ಅಂತ್ಯ ಮಾಡಿದೆ. ನ್ಯಾಯಾಂಗ ನಿಂದನೆ ಮಾಡುವ ಹೇಳಿಕೆಯನ್ನು ಲಲಿತ್ ಮೋದಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಲಲಿತ್ ಮೋದಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್ ಬೇಷರತ್ ಕ್ಷಮೆಯಾಚಿಸುವಂತೆ ಏಪ್ರಿಲ್ 13ರಂದು ಸೂಚನೆ ನೀಡಿತ್ತು. ಅದಾದ ಬಳಿಕ ಲಲಿತ್ ಕ್ಷಮೆಯಾಚಿಸಿದ್ದಾರೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications