ವಿಶ್ವಕಪ್ ಫೈನಲ್ ಈಗಾಗಲೇ ನಡೆದಿದೆ. ಐದು ಬಾರಿ ವಿಶ್ವಕಪ್ ವಿಜೇತರಾಗಿರುವ ಆಸ್ಟ್ರೇಲಿಯಾ ಮುಂದೆ ನಮ್ಮ ಭಾರತ ತಂಡ ಶರಣಾಗಿದ್ದು, ಆಸ್ಟ್ರೇಲಿಯಾ ಆರನೇ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಈ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದೆ.
ಈ ವಿಶೇಷ ಪಂದ್ಯಕ್ಕೆ ಬರೋಬ್ಬರಿ 1,00,000 ಮಂದಿಗೂ ಅಧಿಕ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ವಿಶ್ವಕಪ್ ಬರೀ ಮನರಂಜನೆ ಮಾತ್ರವಲ್ಲ ಹಣಕಾಸು ವರ್ಷ 2024ರ ಆರ್ಥಿಕತೆ ಬೂಸ್ಟ್ ಆಗಲು ಸಹಾಯವಾಗುತ್ತದೆ. ಇಲ್ಲಿದೆ ವಿವರ ಮುಂದೆ ಓದಿ...

ವಿಶ್ವಕಪ್‌ನಿಂದಾಗಿ ಆರ್ಥಿಕ ಸಹಾಯ ಹೇಗೆ?
ವಿಶ್ವಕಪ್ ಪ್ರಪಂಚದಾದ್ಯಂತದ ಜನರನ್ನು ಸೆಳೆದಿದೆ. ಆದ್ದರಿಂದ ಟಿಕೆಟ್ ಮಾರಾಟವು ಆದಾಯದ ದೊಡ್ಡ ಮೂಲವಾಗಿದೆ. ಇದಲ್ಲದೇ ವಿಮಾನಯಾನ ಮತ್ತು ಸಾರಿಗೆ ಉದ್ಯಮಕ್ಕೂ ಲಾಭವಾಗಲಿದೆ. ಹೋಟೆಲ್‌ಗಳು, ಆಹಾರ ಉದ್ಯಮ ಮತ್ತು ವಿತರಣಾ ಸೇವೆಗಳು ಆತಿಥ್ಯ ಕ್ಷೇತ್ರವು ಹೆಚ್ಚಳವನ್ನು ಕಂಡಿದೆ. ಇನ್ನು ಸರಕುಗಳ ಖರೀದಿಯೂ ಅಧಿಕವಾಗಲಿದೆ.
ವಿಶ್ವಕಪ್ ಭಾರತದಲ್ಲಿ ಹಬ್ಬದ ಸೀಸನ್‌ನಲ್ಲಿಯೇ ಬಂದ ಕಾರಣ ವಿಶೇಷವಾಗಿ ಮುಖ್ಯವಾಗುತ್ತದೆ. ಮೊದಲಾಗಿ ಟಿಕೆಟ್ ಮಾರಾಟವು ಆರ್ಥಿಕತೆಗೆ ಸಹಾಯವಾದರೆ, ಒಟ್ಟಾಗಿ 1,600-2,200 ಕೋಟಿ ರೂಪಾಯಿ ಆದಾಯದ ನಿರೀಕ್ಷೆಯಿದೆ ಎಂದು ಬಿಒಬಿ ಇಕಾನಮಿಕ್ಸ್ ತಿಳಿಸಿದೆ.
ಇದರ ಹೊರತಾಗಿ, ಪಂದ್ಯಾವಳಿಯ ಒಟ್ಟು ವೀಕ್ಷಕರ ಸಂಖ್ಯೆ (ಟಿವಿ, ಒಟಿಟಿ ಮುಂತಾದ ಮಾಧ್ಯಮಗಳ ಮೂಲಕ) ಕಳೆದ ಬಾರಿಗಿಂತ (2019 ರ ವಿಶ್ವಕಪ್- 552 ಮಿಲಿಯನ್ ಭಾರತೀಯ ವೀಕ್ಷಕರು) ತುಂಬಾ ಅಧಿಕವಾಗಿದೆ ಎಂದು ಬಿಒಬಿ ಇಕಾನಮಿಕ್ಸ್ ವರದಿ ಹೇಳಿದೆ.
ವಿಶ್ವಕಪ್‌ನ ಪ್ರಾಯೋಜಕತ್ವ/ಟಿವಿ ಹಕ್ಕುಗಳು ಸಂಪ್ರದಾಯವಾದಿ ಆಧಾರದ ಮೇಲೆ ಸುಮಾರು 10,500-12,000 ಕೋಟಿ ರೂಪಾಯಿಗೆ ನಡೆದಿದೆ ಎಂದು ಬಿಒಬಿ ಇಕಾನಮಿಕ್ಸ್ ಹೇಳಿದೆ. ಈ ವಿಶ್ವಕಪ್ ಸಾಮಾನ್ಯವಾಗಿಯೇ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದರಿಂದಾಗಿ ಭಾರತದ ಪ್ರವಾಸೋದ್ಯಮವು ಲಾಭ ಪಡೆಯುತ್ತದೆ.
ಹೋಟೆಲ್-ಲಾಡ್ಜ್, ಆಹಾರ, ಪ್ರಯಾಣ....
ಪ್ರತಿ ಪಂದ್ಯಗಳಿಗೆ 1,000 ಪ್ರವಾಸಿಗರು ಬರುತ್ತಾರೆ ಎಂದು ಊಹಿಸಿದರೆ, ಶಾಪಿಂಗ್ ಸೇರಿದಂತೆ ಹೋಟೆಲ್, ಆಹಾರ ಮತ್ತು ಪ್ರಯಾಣದ ವೆಚ್ಚಗಳು ಸುಮಾರು 450-600 ಕೋಟಿ ರೂಪಾಯಿ ಆಗಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಸ್ಥಳೀಯ ಪ್ರವಾಸಿಗರು, ಹೊಟೇಲ್, ಆಹಾರ, ಪ್ರವಾಸಕ್ಕಾಗಿ 150-250 ಕೋಟಿ ರೂಪಾಯಿ ಖರ್ಚು ಮಾಡಿರುವ ನಿರೀಕ್ಷೆಯಿದೆ.
ಇದಲ್ಲದೆ, ಜನರು ಆಟವನ್ನು ನೋಡಲು ಮತ್ತು ಆಹಾರದ ವೆಚ್ಚಗಳ ಜೊತೆಗೆ ಇಂಧನ ವೆಚ್ಚವನ್ನು ಕೂಡಾ ಹೊಂದಿರುತ್ತಾರೆ. ಯಾಕೆಂದರೆ ಅದೇ ನಗರದಲ್ಲಿ ವಿಶ್ವಕಪ್ ಸಂದರ್ಭ ಪ್ರಯಾಣ ಅಧಿಕವಾಗುತ್ತದೆ. ಇದು 300-500 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಇದಲ್ಲದೆ, ಈ ಪಂದ್ಯಗಳ ಪ್ರದರ್ಶನಕ್ಕಾಗಿ ರೆಸ್ಟೋರೆಂಟ್‌ಗಳು, ಕೆಫೆಗಳಲ್ಲಿ ಸ್ಕ್ರೀನಿಂಗ್ ಇರಲಿದೆ. ಇಲ್ಲಿ ಜನರು ಅಧಿಕವಾಗಲಿದ್ದಾರೆ. ಇನ್ನು ಮನೆಯಲ್ಲಿಯೇ ನೋಡುವ ವೀಕ್ಷಕರು ಆಹಾರವನ್ನು ಆರ್ಡರ್ ಮಾಡುವುದರಿಂದ ಈವೆಂಟ್‌ನ ಸಂಪೂರ್ಣ ಅವಧಿಯಲ್ಲಿ 4,000-5,000 ಕೋಟಿ ರೂಪಾಯಿ ವಹಿವಾಟನ್ನು ಬಿಒಬಿ ಅಂದಾಜು ಮಾಡಿದೆ. ವಿಶ್ವಕಪ್ ಸಂದರ್ಭದಲ್ಲಿ ಒಟ್ಟಾಗಿ 18,000-22,000 ಕೋಟಿ ರೂಪಾಯಿ ವಹಿವಾಟಿನ ಅಂದಾಜನ್ನು ಬಿಒಬಿ ಹೊಂದಿದೆ.
ವಿಶ್ವಕಪ್ ಸಂದರ್ಭದಲ್ಲಿ ಒಟ್ಟಾಗಿ 18,000-22,000 ಕೋಟಿ ರೂಪಾಯಿ ವಹಿವಾಟಿನ ಅಂದಾಜನ್ನು ಬಿಒಬಿ ಹೊಂದಿದೆ. ಪ್ರಸಕ್ತ ವಿಶ್ವಕಪ್ ಭಾರತದ ಜಿಡಿಪಿ ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. "ಬಳಕೆಯ ವಲಯ, ನಿರ್ದಿಷ್ಟವಾಗಿ ಸೇವೆಗಳ ಬಳಕೆಯು ಗರಿಷ್ಠ ಉತ್ತೇಜನವನ್ನು ಪಡೆಯುವ ಸಾಧ್ಯತೆಯಿದೆ. ಆತಿಥ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರವು ಹೆಚ್ಚು ಪ್ರಯೋಜನವನ್ನು ಪಡೆಯುವ ಸಾಧ್ಯತೆಯಿದೆ," ಎಂದು ಬಿಒಬಿ ಹೇಳಿದೆ.


Click it and Unblock the Notifications