ಭಾರತದಲ್ಲಿ, ಡಿಜಿಟಲ್ ವಹಿವಾಟುಗಳನ್ನು ಬಳಸುವುದು ಹೆಚ್ಚಳವಾಗುತ್ತಿದ್ದಂತೆ, ನಾಗರಿಕರು ಹೊಸದಾದ ಈ ಸಾಮಾನ್ಯ ವ್ಯವಸ್ಥೆಗೆ ಒಗ್ಗಿಕೊಳ್ಳುತ್ತಿದ್ದಾರೆ. ಇನ್ನೊಂದು ಬದಿಯಲ್ಲಿ, ಮನೆಯಲ್ಲಿ ಹಣವನ್ನು ಇಟ್ಟುಕೊಳ್ಳುವ ಸಾಂಪ್ರದಾಯಿಕ ವಿಧಾನವನ್ನು ಅವಲಂಭಿಸಿರುವ ಮತ್ತು ನಂಬುವ ಬಹುಪಾಲು ಭಾರತೀಯರು ಇನ್ನೂ ಇದ್ದಾರೆ. ನೀವು ಕೂಡಾ ಅಂತಹ ನಂಬಿಕೆ ಹೊಂದಿರುವವರಲ್ಲಿ ಒಬ್ಬರೇ?, ನೀವು ಕೂಡಾ ಮನೆಯಲ್ಲಿ ನಗದು ಇಟ್ಟುಕೊಳ್ಳುತ್ತಿರಬಹುದು. ಆದರೆ ಮನೆಯಲ್ಲಿ ಸಂಗ್ರಹಿಸಬಹುದಾದ ಮೊತ್ತದ ಮೇಲೆ ಕೆಲವು ನಿರ್ಬಂಧಗಳಿವೆ ಎಂಬುವುದು ನಿಮಗೆ ತಿಳಿದಿದೆಯೇ?
ನೀವು ಉದ್ಯಮಿಯಾಗಿದ್ದರೆ ಮನೆಯಲ್ಲಿ ಹಣವನ್ನು ಇಡುವುದು ಸಾಮಾನ್ಯ. ಆದರೆ ಆದಾಯ ತೆರಿಗೆ ಅಧಿಕಾರಿಗಳು ನಿಮ್ಮ ಮನೆಯ ಮೇಲೆ ದಾಳಿ ಮಾಡಿದರೆ ಏನು ಮಾಡುವುದು?, ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಈ ದಾಳಿಯಿಂದ ನೀವು ರಕ್ಷಿಸಬೇಕಾದರೆ ಮನೆಯಲ್ಲಿ ಎಷ್ಟು ಮೊತ್ತವನ್ನು ಇಟ್ಟುಕೊಳ್ಳಬಹುದು ಎಂದು ತಿಳಿಯುವುದು ಮುಖ್ಯವಾಗುತ್ತದೆ. ನೀವು ಮನೆಯಲ್ಲಿ ಎಷ್ಟು ನಗದು ಇಟ್ಟುಕೊಳ್ಳಬಹುದು, ಯಾವೆಲ್ಲ ನಿರ್ಬಂಧಗಳು ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ..

ಆದಾಯ ತೆರಿಗೆ ಕಾಯ್ದೆ ಏನು ಹೇಳುತ್ತದೆ?
ಆದಾಯ ತೆರಿಗೆ ಕಾಯ್ದೆಯ ಪ್ರಕಾರ ನೀವು ಮನೆಯಲ್ಲಿ ಸಂಗ್ರಹಿಸಿ ಇಡಬಹುದಾದ ನಗದು ಅಥವಾ ಹಣಕ್ಕೆ ಯಾವುದೇ ಅಡ್ಡಿ ಇಲ್ಲ. ಆದರೆ ಮನೆಗೆ ಆದಾಯ ತೆರಿಗೆ ದಾಳಿ ನಡೆಸಿದರೆ ಆ ಸಂದರ್ಭದಲ್ಲಿ ನೀವು ನಿಮ್ಮ ಈ ಹಣ ಮೂಲವನ್ನು ಸಾಬೀತುಪಡಿಸಬೇಕು ಸರಿಯಾದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಮುಖ್ಯವಾಗಿ ನಿಮ್ಮ ಮನೆಯಲ್ಲಿ ಇರುವ ಮೊತ್ತವು ನಿಮ್ಮ ಆದಾಯದಲ್ಲಿ ಯಾವುದೇ ಲೆಕ್ಕಾಚಾರಕ್ಕೆ ಒಳಪಡದೆ ಇರಬಾರದು. ನಿಮ್ಮ ದಾಖಲೆಗಳು ನಿಮ್ಮ ಮನೆಯಲ್ಲಿ ಇರುವ ನಗದಿನ ಮೊತ್ತಕ್ಕೆ ಹೊಂದಿಕೆಯಾಗದಿದ್ದರೆ ಆದಾಯ ತೆರಿಗೆ ಅಧಿಕಾರಿಗಳು ನಿಮಗೆ ದಂಡ ವಿಧಿಸಬಹುದು.
ನಿಮ್ಮಲ್ಲಿರುವ ನಗದಿಗೆ ಯಾವುದೇ ದಾಖಲೆಗಳು ಇಲ್ಲವೆಂದಾದರೆ ಆದಾಯ ತೆರಿಗೆ ಸಿಬ್ಬಂದಿ ಲೆಕ್ಕವಿಲ್ಲದ ಹಣವನ್ನು ವಶಪಡಿಸಿಕೊಳ್ಳುತ್ತಾರೆ, ದಂಡ ವಿಧಿಸುತ್ತಾರೆ. ದಂಡವು ಒಟ್ಟು ಮೊತ್ತದ ಶೇಕಡ 137ರವರೆಗೆ ಇರುತ್ತದೆ. ಆದಾಯ ತೆರಿಗೆ ಇಲಾಖೆ ರೂಪಿಸಿರುವ ನಗದು ಹಣಕ್ಕೆ ಸಂಬಂಧಿಸಿದ ಈ ನಿಯಮಗಳನ್ನು ಸದಾ ನೆನಪಿನಲ್ಲಿಡಿ. ಯಾವುದೇ ವ್ಯಕ್ತಿಯು ಪಡೆಯುವ ಅಥವಾ ಮಾಡುವ ಯಾವುದೇ ಸಾಲ ಅಥವಾ ಠೇವಣಿಗೆ 20,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಸ್ವೀಕರಿಸಲು ಅನುಮತಿಸಲಾಗುವುದಿಲ್ಲ.
ಯಾವುದೇ ಹಣಕಾಸು ವರ್ಷದಲ್ಲಿ 20 ಲಕ್ಷ ರೂಪಾಯಿಗಿಂತ ಹೆಚ್ಚಿನ ನಗದು ವಹಿವಾಟುಗಳು ಲೆಕ್ಕಕ್ಕೆ ಸಿಗದಿದ್ದರೆ ಅಥವಾ ಮೂಲವಿಲ್ಲದಿದ್ದರೆ ಮಾತ್ರ ದಂಡವನ್ನು ವಿಧಿಸಬಹುದು. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸೇಶನ್ ಪ್ರಕಾರ, ಒಂದು ಬಾರಿಗೆ 50,000 ರೂಪಾಯಿಗಿಂತ ಅಧಿಕ ಹಣವನ್ನು ಠೇವಣಿ ಮಾಡಲು ಅಥವಾ ಹಿಂಪಡೆಯಲು ಪ್ಯಾನ್ ವಿವರ ತೋರಿಸುವುದು ಅಗತ್ಯವಾಗಿದೆ. ಖಾತೆದಾರರು ಒಂದು ವರ್ಷದಲ್ಲಿ 20 ಲಕ್ಷ ರೂಪಾಯಿ ನಗದು ರೂಪದಲ್ಲಿ ಠೇವಣಿ ಮಾಡಿದರೆ, ಪ್ಯಾನ್ ಮತ್ತು ಆಧಾರ್ ಮಾಹಿತಿಯನ್ನು ನೀಡಬೇಕಾಗುತ್ತದೆ.
ಯಾವುದೇ ಭಾರತೀಯ ಪ್ರಜೆಯು 30 ಲಕ್ಷ ರೂಪಾಯಿಗಿಂತ ಅಧಿಕ ನಗದು ಮೂಲಕ ಆಸ್ತಿಗಳ ಖರೀದಿ ಅಥವಾ ಮಾರಾಟವನ್ನು ಪೂರ್ಣಗೊಳಿಸಿದರೆ ತನಿಖಾ ಸಂಸ್ಥೆಯ ಪರಿಶೀಲನೆಗೆ ಒಳಪಡಬಹುದು. ಕ್ರೆಡಿಟ್-ಡೆಬಿಟ್ ಕಾರ್ಡ್ ಪಾವತಿಯ ಸಮಯದಲ್ಲಿ, ಕಾರ್ಡ್ ಹೋಲ್ಡರ್ ಒಮ್ಮೆಗೆ ಒಂದು ಲಕ್ಷ ರೂಪಾಯಿಗಿಂತ ಹೆಚ್ಚು ಪಾವತಿಸಿದರೆ, ನಂತರ ವ್ಯಕ್ತಿಯ ವಿರುದ್ಧ ತನಿಖೆ ನಡೆಸಬಹುದು. ಒಂದು ದಿನದಲ್ಲಿ ಸಂಬಂಧಿಕರಿಂದ ಸುಮಾರು 2 ಲಕ್ಷ ರೂಪಾಯಿ ನಗದು ಮೊತ್ತವನ್ನು ಪಡೆಯುವ ಅವಕಾಶವಿಲ್ಲ. ಪ್ರಕ್ರಿಯೆಯನ್ನು ಬ್ಯಾಂಕ್ ಮೂಲಕ ನಡೆಸಬೇಕು.


Click it and Unblock the Notifications