ದೇಶದ ಅತೀ ಶ್ರೀಮಂತ ವ್ಯಕ್ತಿಯಾದ ಮುಕೇಶ್ ಅಂಬಾನಿಯ ಪತ್ನಿ ನೀತಾ ಅಂಬಾನಿ ಮುಂಬೈ ಇಂಡಿಯನ್ಸ್‌ನ ಮಾಲೀಕತ್ವವನ್ನು ಹೊಂದಿದ್ದಾರೆ. ನೀತಾ ಅಂಬಾನಿ ಒಡೆತನದ ಐಪಿಎಲ್ ತಂಡ ಮುಂಬೈ ಇಂಡಿಯನ್ಸ್ ಕಳೆದ ರಾತ್ರಿಯ ಐಪಿಎಲ್ 2023 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲನ್ನು ಕಂಡಿದೆ. ಈ ಮೂಲಕ ಫೈನಲ್‌ಗೆ ಪ್ರವೇಶಿಸುವ, ಟ್ರೋಫಿಯನ್ನು ಗೆಲ್ಲುವ ಅವಕಾಶ ಕಳೆದುಕೊಂಡಿದೆ.
ಮುಂಬೈ ಇಂಡಿಯನ್ಸ್ ತಂಡವು 2023ರ ಐಪಿಎಲ್‌ನಲ್ಲಿ ಟ್ರೋಫಿ ವಿಜೇತರಾಗುವ ಅವಕಾಶವನ್ನು ಪ್ರಸ್ತುತ ಹೊಂದಿಲ್ಲದಿದ್ದರೂ ಕೂಡಾ ತಂಡವ ಮಾಲೀಕರು ಉತ್ತಮ ಆದಾಯವನ್ನು ಗಳಿಸಿದ್ದಾರೆ. ಹೌದು, ಮುಕೇಶ್ ಹಾಗೂ ನೀತಾ ಅಂಬಾನಿ ಈ 16ನೇ ಸೀಸನ್‌ನ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸಾವಿರಾರು ಕೋಟಿ ರೂಪಾಯಿ ಗಳಿಕೆ ಪಡೆದುಕೊಂಡಿದ್ದಾರೆ.

ಐಪಿಎಲ್ ತಂಡ ಮುಂಬೈ ಇಂಡಿಯನ್ಸ್‌ನ ಒಟ್ಟು ಶೇಕಡ 100ರಷ್ಟು ಷೇರನ್ನು ಕೂಡಾ ನೀತಾ ಅಂಬಾನಿ ಹಾಗೂ ಮುಕೇಶ್ ಅಂಬಾನಿ ಹೊಂದಿದ್ದಾರೆ. 2008ರಲ್ಲಿ ಈ ದಂಪತಿಯು ಮುಂಬೈ ಇಂಡಿಯನ್ಸ್ ತಂಡವನ್ನು ಖರೀದಿ ಮಾಡಲು ಮಿಲಿಯನ್ ಡಾಲರ್‌ಗಳನ್ನು ವ್ಯಯಿಸಿದ್ದಾರೆ. ಜಿಕ್ಯೂ ವರದಿಯ ಪ್ರಕಾರ ಐಪಿಎಲ್‌ನ ಮೊದಲ ಸೀಸನ್‌ನಲ್ಲಿ ಈ ತಂಡವನ್ನು ಖರೀದಿ ಮಾಡಲು 916 ಕೋಟಿ ರೂಪಾಯಿಯನ್ನು ಖರ್ಚು ಮಾಡಿದ್ದಾರೆ.
ಮುಂಬೈ ಇಂಡಿಯನ್ಸ್ ಅನ್ನು ಅತ್ಯಂತ ಯಶಸ್ವಿ ಐಪಿಎಲ್ ತಂಡವೆಂದು ಪರಿಗಣಿಸಲಾಗುತ್ತದೆ. ಮುಂಬೈ ಇಂಡಿಯನ್ಸ್ ತಂಡವು ಈವರೆಗೆ ಸುಮಾರು ಸೀಸನ್‌ಗಳನ್ನು ಗೆದ್ದಿದೆ. ಹಾಗೆಯೇ 2023ರವರೆಗೆ ಅಧಿಕ ಐಪಿಎಲ್ ಪಂದ್ಯಗಳನ್ನು ಗೆದ್ದಿರುವ ತಂಡ ಮುಂಬೈ ಇಂಡಿಯನ್ಸ್ ಆಗಿದೆ. ಈ ನಡುವೆ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಮುಂಬೈ ತಂಡದಿಂದ ಎಷ್ಟು ಗಳಿಸಿದ್ದಾರೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ಐಪಿಎಲ್ 2023ರಲ್ಲಿ ನೀತಾ, ಮುಕೇಶ್ ಅಂಬಾನಿ ಆದಾಯ
ಮುಕೇಶ್ ಅಂಬಾನಿಯವರ ಕಂಪನಿ ರಿಲಯನ್ಸ್ ಐಪಿಎಲ್ ತಂಡದ ಮುಂಬೈ ಇಂಡಿಯನ್ಸ್‌ನ ಏಕೈಕ ಮಾಲೀಕರಾಗಿದ್ದಾರೆ. ಇಲ್ಲಿಯವರೆಗೆ ಅಧಿಕ ಲಾಭವನ್ನು ಪಡೆದ ಐಪಿಎಲ್ ತಂಡ ಇದಾಗಿದೆ. ದಿ ಟ್ರಿಬ್ಯೂನ್ ಪ್ರಕಾರ, ಮುಂಬೈ ಇಂಡಿಯನ್ಸ್ 10,070 ಕೋಟಿ ರೂಪಾಯಿಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿರುವ ಸಂಸ್ಥೆಯಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷಕ್ಕೆ ಸಂಸ್ಥೆಯ ಮೌಲ್ಯವು 200 ಕೋಟಿ ರೂಪಾಯಿ ಏರಿಕೆಯಾಗಿದೆ.
ಇದರ ಹೊರತಾಗಿ, ನೀತಾ ಮತ್ತು ಮುಖೇಶ್ ಅಂಬಾನಿ ಸರಕು ಮತ್ತು ಟಿಕೆಟ್ ಮೊತ್ತದ ಮೂಲಕ ಹಣವನ್ನು ಗಳಿಸುತ್ತಿದ್ದಾರೆ. ಜೊತೆಗೆ ಮಾಧ್ಯಮ ಪ್ರಾಯೋಜಕತ್ವಗಳು ಮತ್ತು ಜಾಹೀರಾತುಗಳ ಮೂಲಕವು ಆದಾಯವನ್ನು ಮುಂಬೈ ಇಂಡಿಯನ್ಸ್ ತಂಡ ಪಡೆಯುತ್ತಿದೆ. ಇದರ ಹೊರತಾಗಿ, ಅಂಬಾನಿ ಕುಟುಂಬಕ್ಕೆ ಮತ್ತೊಂದು ಪ್ರಮುಖ ಆದಾಯದ ಮೂಲವೆಂದರೆ ಜಿಯೋ ಸಿನಿಮಾಗೆ ಮಾರಾಟವಾದ ಐಪಿಎಲ್ ಹಕ್ಕುಗಳಾಗಿದೆ.
ಐಪಿಎಲ್ ಫ್ರಾಂಚೈಸ್ ಅನ್ನು ಡಿಸ್ನಿ+ ಹಾಟ್‌ಸ್ಟಾರ್‌ನಿಂದ ತೆಗೆದುಹಾಕಲಾಗಿದೆ. ರಿಲಯನ್ಸ್‌ನ ಬ್ರ್ಯಾಂಡ್ ವಯಾಕಾಮ್ 18, ಜಿಯೋ ಸಿನಿಮಾಕ್ಕಾಗಿ ಐಪಿಎಲ್ ಟೆಲಿಕಾಸ್ಟಿಂಗ್ ಹಕ್ಕುಗಳನ್ನು 22,290 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಇನ್ನು ಜಿಯೋ ಸಿನಿಮಾ ಐಪಿಎಲ್‌ನ ಮೊದಲ ಹೋಸ್ಟಿಂಗ್ ಮೂಲಕ 23,000 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ. ಹಾಗೆಯೇ ಮುಂದಿನ ಕೆಲವು ವರ್ಷಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಗಳಿಸಲಿದೆ.
ಡಬ್ಲ್ಯೂಪಿಎಲ್ 2023ರಲ್ಲಿ ದುಬಾರಿ ತಂಡ
ಅಹಮದಾಬಾದ್ ತಂಡವು ಅತೀ ದುಬಾರಿ ತಂಡವಾಗಿದೆ. ಅದಾನಿ ಸ್ಪೋರ್ಟ್ಸ್‌ಲೈನ್ ಬರೋಬ್ಬರಿ 1289 ಕೋಟಿ ರೂಪಾಯಿಗೆ ತಂಡವನ್ನು ಖರೀದಿ ಮಾಡಿದೆ. 912.99 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್ ತಂಡವನ್ನು ಮುಕೇಶ್ ಅಂಬಾನಿ ಖರೀದಿ ಮಾಡಿದ್ದಾರೆ.


Click it and Unblock the Notifications