ಡೊಮಿನೋಸ್ ಮಾಜಿ ಸಿಇಒ ರಿಚ್ ಅಲ್ಲಿಸಾನ್ 2022 ರಲ್ಲಿ ಫಾಸ್ಟ್ ಫುಡ್ ಕಂಪನಿ ಡೊಮಿನೋಸ್ ಅನ್ನು ತೊರೆದಾಗ ಅವರ ಸ್ಥಾನಕ್ಕೆ "ಜೀವಮಾನದ ಸವಲತ್ತು" ಎಂದು ಘೋಷಿಸಿದೆ. ಹಿಂದಿನ ವರ್ಷದಿಂದ ಈ ವರ್ಷದವರೆಗೆ ಅಂದರೆ ಒಂದು ವರ್ಷದಲ್ಲಿ ಸುಮಾರು 4,000 ಡಾಲರ್ ಮೌಲ್ಯದ ಪಿಜ್ಜಾವನ್ನು ಖರೀದಿ ಮಾಡಿದ್ದು, ಇದಕ್ಕೆ ಮರುಪಾವತಿಯನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. ಅಷ್ಟಕ್ಕೂ ಅವರು ಒಂದು ವರ್ಷದಲ್ಲಿ ವೈಯಕ್ತಿಕ ಪಿಜ್ಜಾ ಖರೀದಿಗಾಗಿಯೂ ಮೊತ್ತವನ್ನು ಪಡೆದಿದ್ದಾರೆ ಎಂಬುವುದು ನಿಮಗೆ ತಿಳಿದಿದೆಯೇ?
2021ರ ಸಿಇಒ ಭತ್ಯೆಯ ಅಡಿಯಲ್ಲಿ ಡೊಮಿನೋಸ್ ಮಾಜಿ ಸಿಇಒ ರಿಚ್ ಅಲ್ಲಿಸಾನ್ ವೈಯಕ್ತಿಕವಾಗಿ ಪಿಜ್ಜಾ ಖರೀದಿಗೆ 3,919 ಡಾಲರ್ ಅನ್ನು ಪಡೆದಿದ್ದಾರೆ. ಈ ಮೊತ್ತದಲ್ಲಿ ವೈಯಕ್ತಿಕ ಜೆಟ್, ತಂಡದ ಸದಸ್ಯರ ಉಡುಗೊರೆ ಮತ್ತು ಇತರೆ ಖರ್ಚುಗಳು ಕೂಡಾ ಸೇರ್ಪಡೆಯಾಗಿದೆ. ಆದರೆ ರಿಚ್ ಅಲ್ಲಿಸಾನ್ ಪಿಜ್ಜಾಕ್ಕಾಗಿ ಪಡೆದ 3,919 ಡಾಲರ್ ಅವರ ಭಾರೀ ಪ್ರಮಾಣದ ಭತ್ಯೆಯ ಒಂದು ಸಣ್ಣ ಭಾಗವಾಗಿದೆ. ರಿಚ್ ಅಲ್ಲಿಸಾನ್ ಒಟ್ಟಾಗಿ 7,138,002 ಡಾಲರ್ ಮೊತ್ತವನ್ನು 2021ರಲ್ಲಿ ಭತ್ಯೆಯಾಗಿ ಪಡೆದಿದ್ದಾರೆ.

ಅದೇ ವರ್ಷದಲ್ಲಿ ಅಂದರೆ 2021ರಲ್ಲಿ ಡೊಮಿನೋಸ್‌ನ ಹೊಸ ಮುಖ್ಯಸ್ಥ ಸಿಇಒ ರಷಲ್ ವೀನರ್ ಒಟ್ಟಾಗಿ 2,810 ಡಾಲರ್ ಮೌಲ್ಯದ ಪಿಜ್ಜಾವನ್ನು ಖರೀದಿ ಮಾಡಿದ್ದಾರೆ. ಇನ್ನು ಮಾಹಿತಿ ಪ್ರಕಾರ ಡೊಮಿನೋಸ್ ಮಾಜಿ ಸಿಇಒ ರಿಚ್ ಅಲ್ಲಿಸಾನ್ 2021ರ ಒಂದು ವರ್ಷದಲ್ಲಿ ಸರಿಸುಮಾರು 4,000 ಡಾಲರ್ ಮೌಲ್ಯದ ಪಿಜ್ಜಾ ಖರೀದಿಸಿರುವುದು ಆಶ್ಚರ್ಯಕರವಾಗಿ ಕಡಿಮೆಯಾಗಿದೆ!. ಇನ್ನು ಫೈಲಿಂಗ್ ಪ್ರಕಾರ 2020ರಲ್ಲಿ ಕೋವಿಡ್ ಸಾಂಕ್ರಾಮಿಕ ಆರಂಭದಲ್ಲಿ ರಿಚ್ ಅಲ್ಲಿಸಾನ್ 6,126 ಡಾಲರ್ ತೆತ್ತಿದ್ದಾರೆ.
ಡೊಮಿನೋಸ್ ಸಿಇಒಗಳಿಗೆ ಉಚಿತ ಆಹಾರ
ಡೊಮಿನೋಸ್ ಉಚಿತ ಆಹಾರ ಪ್ರಯೋಜನವು ಡೊಮಿನೋಸ್‌ನ ಉದ್ಯೋಗದಲ್ಲಿನ ಒಂದು ಭಾಗವಾಗಿದೆ. ಪಿಜ್ಜಾಕ್ಕಾಗಿ ತಾವು ಖರ್ಚು ಮಾಡಿದ ಮೊತ್ತವನ್ನು ಡೊಮಿನೋಸ್ ಸಿಇಒಗಳಿಗೆ ಮರುಪಾವತಿ ಮಾಡುವುದು ಆಶ್ಚರ್ಯವೇನಲ್ಲ ಎನ್ನುತ್ತಾರೆ ಚಿಕಾಗೋ ರೆಸ್ಟೋರೆಂಟ್‌ನ ಸಲಹೆಗಾರ ಟಿಮ್ ಪಾವೆಲ್. ಇನ್ನು ಸಂಸ್ಥೆಯ ಸಿಇಒಗಳು ಆ ಬ್ರ್ಯಾಂಡ್‌ನ ಸಿಇಒಗಳಾಗಿಯೂ ಸೇವೆ ಸಲ್ಲಿಸಬೇಕಾಗುತ್ತದೆ.
ಡೊಮಿನೋಸ್‌ನಲ್ಲಿ ರಿಚ್ ಅಲ್ಲಿಸಾನ್ ಸುಮಾರು 10 ವರ್ಷಗಳ ಕಾಲ ಕಾರ್ಯನಿರ್ವಹಣೆ ಮಾಡಿದ್ದಾರೆ. ಹಾಗೆಯೇ ನಾಲ್ಕು ವರ್ಷಗಳಿಂದ ರೆಸ್ಟೋರೆಂಟ್ ಚೇನ್‌ನ ಸಿಇಒ ಆಗಿ ಸೇವೆ ಸಲ್ಲಿಸಿದ್ದಾರೆ. 2022ರಲ್ಲಿ ರಿಚ್ ಅಲ್ಲಿಸಾನ್ ನಿವೃತ್ತಿಯನ್ನು ಪಡೆದಿದ್ದಾರೆ. ಇನ್ನು ಡೊಮಿನೋಸ್ ಇತ್ತೀಚೆಗೆ ಎಐ ಆಧಾರಿತ ಸೆಲ್ಫ್ ಡ್ರೈವಿಂಗ್ ಡೆಲಿವರಿ ಯೋಜನೆಯನ್ನು ಆರಂಭಿಸಿದೆ. ಇದಕ್ಕಾಗಿ 333,000 ಸ್ಕ್ವೇರ್ ಫೀಟ್‌ನ ಲ್ಯಾಬ್ ಅನ್ನು ಮಿಚಿಗನ್‌ನ ಆನ್ ಅರ್ಬಾರ್‌ನಲ್ಲಿ ಸ್ಥಾಪಿಸಿದೆ.
20 ನಿಮಿಷದ ಪಿಜ್ಜಾ ಡೆಲಿವರಿ
ದೇಶದಲ್ಲಿ ಅತೀ ಹೆಚ್ಚು ಟ್ರಾಫಿಕ್ ಸಮಸ್ಯೆ ಕಾಡುವ ನಗರಗಳಲ್ಲಿ ಬೆಂಗಳೂ ಕೂಡಾ ಒಂದಾಗಿದ್ದು, ಇಲ್ಲಿಯೇ ಡೊನಿನೋಸ್ 20 ನಿಮಿಷಗಳ ಡೆಲಿವರಿ ಸೇವೆ ಆರಂಭಿಸಿದೆ. ಡೊಮಿನೋಸ್ ಇಂಡಿಯಾ ಈಗಾಗಲೇ ಭಾರತದ 14 ನಗರಗಳಲ್ಲಿ 20 ನಿಮಿಷಗಳ ಡೆಲಿವರಿ ಸೇವೆಯನ್ನು ಆರಂಭಿಸಿದೆ. ಈ ಬಗ್ಗೆ ಡಿಸೆಂಬರ್ 2022ರಲ್ಲಿ ಘೋಷಣೆ ಮಾಡಿದೆ. ಈ 14 ನಗರಗಳಲ್ಲಿ ಬೆಂಗಳೂರು ಕೂಡಾ ಒಂದಾಗಿದೆ. ಪ್ರಸ್ತುತ ಡೊಮಿನೋಸ್ ಬೆಂಗಳೂರಿನ ಸುಮಾರು 170 ಔಟ್‌ಲೇಟ್‌ಗಳಲ್ಲಿ 20 ನಿಮಿಷಗಳ ಡೆಲಿವರಿ ಸೇವೆಯನ್ನು ಆರಂಭ ಮಾಡಿದೆ.
ಈ ಹಿಂದೆ ಜೊಮ್ಯಾಟೊವು 10 ನಿಮಿಷಗಳಲ್ಲಿ ಫುಡ್ ಡೆಲಿವರಿ ಮಾಡುವ ಸೇವೆಯನ್ನು ಆರಂಭ ಮಾಡಿತ್ತು. ಆದರೆ ಇದು ಫುಡ್ ಡೆಲಿವರಿ ಬಾಯ್‌ಗಳಿಗೆ ಅಪಾಯಕಾರಿ ಎಂದು ಹಲವಾರು ವಿರೋಧಗಳು ವ್ಯಕ್ತವಾದ ಬಳಿಕ ಈ ಸೇವೆಯನ್ನು ಹಿಂಪಡೆಯಲಾಗಿದೆ. ಈ ಸೇವೆ ಆರಂಭವಾದ ವರ್ಷದೊಳಗೆ ಸ್ಥಗಿತಗೊಳಿಸಲಾಗಿದೆ. ಆದರೆ ಈಗ ಡೊಮಿನೋಸ್ 20 ನಿಮಿಷಗಳ ಫುಡ್ ಡೆಲಿವರಿ ಸೇವೆಯನ್ನು ಆರಂಭ ಮಾಡಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.


Click it and Unblock the Notifications