ಜನಸಂಖ್ಯೆಯ ಬೆಳವಣಿಗೆಯನ್ನು ತಡೆಯುವ ಪ್ರಯತ್ನದಲ್ಲಿ, ಭಾರತವು 1968 ರಲ್ಲಿ ಮೊದಲ ಬಾರಿಗೆ ಕಾಂಡೋಮ್ ಅನ್ನು ಪರಿಚಯಿಸಿದೆ. ಆದರೆ ಭಾರತದಲ್ಲಿ ಈ ಬಗ್ಗೆ ಇದ್ದ ಅಪನಂಬಿಕೆ, ನಾಚಿಕೆಯಿಂದಾಗಿ ಆರಂಭದಲ್ಲಿಯೇ ಈ ಇಂಡಸ್ಟ್ರೀ ವಿಫಲವಾಯಿತು. ಆದರೆ ಜಾಹೀರಾತಿನಲ್ಲಿನ ಬದಲಾವಣೆಯು ಈಗ ಕಾಂಡೋಮ್ ಉದ್ಯಮವನ್ನು 508 ಮಿಲಿಯನ್ ಡಾಲರ್ ವ್ಯವಹಾರವನ್ನಾಗಿ ಮಾಡಿದೆ.
ವಿಶ್ವಸಂಸ್ಥೆಯ ಜನಸಂಖ್ಯೆಯ ಅಂದಾಜಿನ ಪ್ರಕಾರ, ಭಾರತವು ಏಪ್ರಿಲ್ 2023 ರಲ್ಲಿ ಜನಸಂಖ್ಯೆಯಲ್ಲಿ ಚೀನಾವನ್ನು ಮೀರಿಸಿದೆ. ಭಾರತ 'ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ' ಎಂದು ದಾಖಲೆಗಳು ಪ್ರಾರಂಭವಾದಾಗಿನಿಂದ ಜಾಗತಿಕ ಜನಸಂಖ್ಯಾಶಾಸ್ತ್ರದಲ್ಲಿ ಅತ್ಯಂತ ಆಳವಾದ ಬದಲಾವಣೆಯನ್ನು ಗುರುತಿಸುತ್ತದೆ. ಆದರೆ 1960ರ ದಶಕದಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಕಾಂಡೋಮ್ ಇಂಡಸ್ಟ್ರೀ ಬೆಳೆದು ಬಂದ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಕಾಂಡೋಮ್ ಇಂಡಸ್ಟ್ರೀ ಆರಂಭದಿಂದ ಈವರೆಗೆ
ಭಾರತದ ಜನಸಂಖ್ಯೆಯು ಬೆರಗುಗೊಳಿಸುವ ಪ್ರಮಾಣದಲ್ಲಿ ವಿಸ್ತರಿಸುತ್ತಿದೆ. 1964 ರಲ್ಲಿ, 470 ಮಿಲಿಯನ್ ಸಂಖ್ಯೆಯು ಮುಂದಿನ ಮೂರು ದಶಕಗಳಲ್ಲಿ ದ್ವಿಗುಣಗೊಳ್ಳುತ್ತದೆ ಎಂದು ಊಹಿಸಲಾಗಿತ್ತು. ಇದನ್ನು ತಡೆಗಟ್ಟುವ ಅನಿವಾರ್ಯವಿತ್ತು. ರಾಷ್ಟ್ರೀಯ ಕುಟುಂಬ ಯೋಜನೆ ಕಾರ್ಯಕ್ರಮದ ಭಾಗವಾಗಿ, ಸರ್ಕಾರವು ನಿರೋಧ್ ಅನ್ನು ಭಾರತದಲ್ಲಿ ಮೊದಲ ಕಾಂಡೋಮ್ ಆಗಿ ಪರಿಚಯಿಸಿತು.
ಆದರೆ ಕಾಂಡೋಮ್-ವಿರೋಧಿ ದೇಶವಾದ ಭಾರತದಲ್ಲಿ ಇದಕ್ಕೆ ಸ್ವಾಗತ ತೋರಲಾಗಿದೆಯೇ? ಇಲ್ಲ. ಆದರೆ 1972 ರ ಹೊತ್ತಿಗೆ ಮಾಸಿಕ ಕಾಂಡೋಮ್ ಬಳಕೆಯು 7 ಮಿಲಿಯನ್ ತಲುಪಿದೆ. ಈ ಅಂದಾಜನ್ನು ನೋಡಿದಾಗ ಸರ್ಕಾರದ ಪ್ರಯತ್ನವು ನಿರರ್ಥಕವಾಗಲಿಲ್ಲ ಎಂದು ಹೇಳಬಹುದು.
'ನಿರೋಧ್' ಪದವನ್ನು ಅಕ್ಷರಶಃ ತಡೆಗಟ್ಟುವಿಕೆ ಎಂದು ಅನುವಾದಿಸಬಹುದು. ಹೆಸರು ಅತ್ಯಂತ ಪ್ರತಿಕೂಲವಾದ ಅರ್ಥವನ್ನು ಹೊಂದಿದೆ. ಇದರ ಆಸಕ್ತಿರಹಿತ ಪ್ಯಾಕೇಜಿಂಗ್ ಮತ್ತಷ್ಟು ಇಂಡಸ್ಟ್ರೀಗೆ ಹಾನಿ ಉಂಟು ಮಾಡಿತು. ಹಾಗೆಯೇ ಕಾಂಡೋಮ್ ಎಂಬುವುದೇ ಒಂದು ರಹಸ್ಯ ಮಾರ್ಕೆಂಟಿಂಗ್ ಎಂಬಂತಾಯಿತು.
ಕಾಂಡೋಮ್ ಬಗ್ಗೆ ಇದ್ದ ವಿರೋಧಗಳು
* ಗರ್ಭ ಮಹಿಳೆಯ ಕರ್ತವ್ಯವೆಂದು ಗುರುತಿಸಲಾಗಿತ್ತು.
* ಕಾಂಡೋಮ್‌ಗಳು ಲೈಂಗಿಕ ಚಟುವಟಿಕೆಗೆ ಅಡ್ಡಿಪಡಿಸುತ್ತದೆ ಎಂಬ ನಂಬಿಕೆಯಿತ್ತು.
* ಪುರುಷರು ಮಹಿಳೆ ಗರ್ಭ ಧರಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ. ಗರ್ಭ ಧರಿಸಿದರೆ ಅದನ್ನು ತೆಗಿಸಬಹುದು ಎಂಬ ವಾದ.
* ಕಾಂಡೋಮ್‌ಗಳು ಅಸಹ್ಯಕರ, ದುಷ್ಟವಾದುದ್ದು ಎಂಬ ಕಲ್ಪನೆ. ವಿಶ್ವಾಸದ್ರೋಹಿ ಜನರು ಮಾತ್ರ ಬಳಸುತ್ತಾರೆ ಎಂಬ ನಂಬಿಕೆ.
ಇಂತಹ ಅಪನಂಬಿಕೆಗಳು ಭಾರತದಲ್ಲಿ ಮಾತ್ರವಲ್ಲ, ದೀರ್ಘಕಾಲದವರೆಗೆ ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಇತರ ಮಧ್ಯಪ್ರಾಚ್ಯ ರಾಷ್ಟ್ರಗಳು ಕಾಂಡೋಮ್‌ಗಳ ಬಳಕೆಯನ್ನು ನಿಷೇಧಿಸಿವೆ. 1980 ರವರೆಗೆ, ಎಚ್‌ಐವಿ/ ಏಡ್ಸ್ ಹೆಚ್ಚಾಗುವರೆಗೂ ಕಾಂಡೋಮ್‌ಗಳ ವಿರುದ್ಧ ಮಾಡಲಾಗುತ್ತಿತ್ತು.
ಹೀಗಾಗಿ, ಏಡ್ಸ್‌ನಂತಹ ಲೈಂಗಿಕವಾಗಿ ಹರಡುವ ರೋಗಗಳನ್ನು (ಎಸ್‌ಟಿಡಿ) ತಡೆಗಟ್ಟಲು ಮತ್ತು ಸುರಕ್ಷಿತ ಲೈಂಗಿಕ ಕ್ರಿಯೆಗಾಗಿ ಕಾಂಡೋಮ್ ಬಳಕೆಯು ವಿಶ್ವಾದ್ಯಂತ ಜನಪ್ರಿಯತೆ ಪಡೆಯಿತು. ಇದರ ನಂತರ, ಅತ್ಯಂತ ಸಂಪ್ರದಾಯವಾದಿ ರಾಷ್ಟ್ರಗಳು ಸಹ ಇದನ್ನು ಅನುಮೋದಿಸಲು ಪ್ರಾರಂಭಿಸಿದವು. ಆದರೆ ಭಾರತದಲ್ಲಿ ಮಾತ್ರ ಕಾಂಡೋಮ್ ಬಳಕೆ ಕಡಿಮೆ ಇತ್ತು.
ಭಾರತದಲ್ಲಿ ಗರ್ಭನಿರೋಧಕಗಳ ಬಳಕೆ ಅಧಿಕವಾಯಿತು. ಥೈಲ್ಯಾಂಡ್‌ನಲ್ಲಿಯೂ ಇದೇ ಬೆಳವಣಿಗೆ ಕಂಡು ಬಂದಿತ್ತು. ಆದರೆ ಅಲ್ಲಿ ಬೌದ್ಧ ಸನ್ಯಾಸಿಗಳು ಜನರಿಗೆ ತಿಳಿಹೇಳಿದರು. ಉಚಿತವಾಗಿ ಕಾಂಡೋಮ್‌ಗಳನ್ನು ನೀಡಲು ಆರಂಭಿಸಲಾಯಿತು. ಎಲ್ಲ ಸ್ಟೋರ್‌ಗಳಲ್ಲಿ ಲಭ್ಯವಿತ್ತು.
ಆದರೆ ಭಾರತದಲ್ಲಿ ಜನರ ಅಪನಂಬಿಕೆಗಳು ಜನಸಂಖ್ಯೆ ಇನ್ನಷ್ಟು ಬೆಳೆಯಲು ಕಾರಣವಾಯಿತು. ಮತ್ತೊಂದೆಡೆ, ಖಾಸಗಿ ಕಾಂಡೋಮ್ ತಯಾರಕರು ತಮ್ಮ ಪ್ರಚಾರ ಕಾರ್ಯ ಆರಂಭಿಸಿದರು. ಕಾಂಡೋಮ್‌ಗಳು ಲೈಂಗಿಕತೆ ಹೆಚ್ಚಿಸುತ್ತದೆ ಎಂಬ ಪ್ರಚಾರವನ್ನು ಮಾಡಿದರು. ಇದರ ಬಳಿಕ ಬೇಡಿಕೆ ಅಧಿಕವಾಗುತ್ತಾ ಸಾಗಿತು. ಆದರೆ ನಿರ್ಬಂಧದೊಂದಿಗೆ ಮಾರುಕಟ್ಟೆ ಬೆಳೆಸುವುದು ಅತೀ ಸರಳವಾಗಿರಲಿಲ್ಲ.
ಡ್ಯುರೆಕ್ಸ್ ಮತ್ತು ಮ್ಯಾನ್‌ಫೋರ್ಸ್‌ನಂತಹ ಬ್ರ್ಯಾಂಡ್‌ಗಳು ವರ್ಷಗಳಿಂದ ಭಾರತದಲ್ಲಿ ಜನಪ್ರಿಯತೆ ಪಡೆಯುತ್ತಾ ಬಂದಿದೆ. ಈ ಎರಡು ಸಂಸ್ಥೆಗಳು ಜಾಗತಿಕವಾಗಿ 8.6 ಬಿಲಿಯನ್ ಡಾಲರ್ ಮೌಲ್ಯದ ಮಾರುಕಟ್ಟೆಯನ್ನು ಮತ್ತು ಭಾರತದಲ್ಲಿ 508 ಮಿಲಿಯನ್ ಡಾಲರ್ ವ್ಯವಹಾರವನ್ನು ಸೃಷ್ಟಿಸಿದರು. ಮ್ಯಾನ್‌ಫೋರ್ಸ್ ಭಾರತದಲ್ಲಿ ಅಧಿಕ ಪ್ರಚಾರದಲ್ಲಿದೆ. 1930 ರ ದಶಕದಿಂದಲೂ, ಡ್ಯುರೆಕ್ಸ್ ಪ್ರಪಂಚದಾದ್ಯಂತ ಕಾಂಡೋಮ್‌ಗಳನ್ನು ಮಾರಾಟ ಮಾಡುತ್ತಾ ಬಂದಿರುವ ಮೊದಲ ಕಾಂಡೋಮ್ ಬ್ರಾಂಡ್ ಆಗಿದೆ.
More From GoodReturns

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

ಎಲ್ಲ ಹಣವನ್ನೂ ಒಂದೇ ಬ್ಯಾಂಕ್ನಲ್ಲಿ ಇಡ್ತಿದ್ದೀರಾ? ಒಂದು ತಪ್ಪು ನಿಮ್ಮ ಸಂಪೂರ್ಣ ಉಳಿತಾಯಕ್ಕೆ ಅಪಾಯ!

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications