ಡಿಜಿಟಲ್ ಪೇಮೆಂಟ್ ಕ್ಷೇತ್ರದಲ್ಲಿ ಸಾಕಷ್ಟು ಕ್ರಾಂತಿ ನಡೆಯುತ್ತಿರಬೇಕಾದರೆ, ಎಸ್‌ಬಿಐ ಬ್ಯಾಂಕ್ ಕೂಡ ತನ್ನ ಗ್ರಾಹಕರಿಗೆ ಸಾಕಷ್ಟು ರೀತಿಯ ಸೇವೆಗಳನ್ನು ಪರಿಚಯಿಸುತ್ತಿವೆ. ಈ ಪೈಕಿ ಡೆಬಿಟ್ ಕಾರ್ಡ್ ಆಕ್ಟಿವೇಷನ್ ಮಾಡುವುದು ಬಹಳ ಅಗತ್ಯವಾಗಿದೆ.
ಅಂತಾರಾಷ್ಟ್ರೀಯ ವ್ಯವಹಾರಗಳಿರಲಿ, ಇ-ಕಾಮರ್ಸ್ ಪೇಮೆಂಟ್‌ಗಳಿರಬಹುದು ಅಥವಾ ಇತರೆ ಯಾವುದೇ ಪಾವತಿಗಳಿರಲಿ, ಎಸ್‌ಬಿಐ ಡೆಬಿಟ್ ಕಾರ್ಡ್ ಎಲ್ಲದಕ್ಕೂ ಗ್ರಾಹಕರಿಗೆ ಅನುಕೂಲವುಂಟು ಮಾಡುತ್ತದೆ. ಎಸ್‌ಬಿಐ ಯೋನೋ ಆಪ್ ಅನ್ನು ಅಂತಾರಾಷ್ಟ್ರೀಯ ವಹಿವಾಟುಗಳಿಗೆ ಅನ್‌ಲಾಕ್ ಮಾಡುವುದು ಹೇಗೆ? ಇಲ್ಲಿದೆ ವಿವರ

ಅನ್‌ಲಾಕ್ ಮಾಡುವುದು ಹೇಗೆ?
ಹಂತ 1: ಯೋನೋ ಎಸ್‌ಬಿಐ ಅಪ್ಲಿಕೇಷನ್‌ಗೆ ಲಾಗಿನ್ ಮಾಡಿ: ನಿಮ್ಮ ಖಾತೆಯನ್ನು ಪ್ರವೇಶಿಸಲು ನಿಮ್ಮ ಎಂಪಿನ್ ಅಥವಾ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಬಳಸಿ.
ಹಂತ 2: ಸೇವಾ ವಿನಂತಿಗೆ ನ್ಯಾವಿಗೇಟ್ ಮಾಡಿ: ಮುಖಪುಟದಲ್ಲಿ ತ್ವರಿತ ಲಿಂಕ್‌ಗಳು ಕ್ಲಿಕ್ ಮಾಡಿ ನಂತರ ಸರ್ವೀಸ್ ರಿಕ್ವೆಸ್ಟ್ ಅನ್ನು ಒತ್ತಿ.
ಹಂತ 3: ಎಟಿಎಂ/ಡೆಬಿಟ್ ಕಾರ್ಡ್ ಅನ್ನು ಆಯ್ಕೆ ಮಾಡಿ: ಎಟಿಎಂ/ಡೆಬಿಟ್ ಕಾರ್ಡ್ ಅನ್ನು ಆಯ್ಕೆ ಮಾಡಿಕೊಂಡು ಇಂಟರ್‌ನೆಟ್ ಬ್ಯಾಂಕಿಂಗ್ ಪ್ರೊಫೈಲ್ ಪಾಸ್‌ವರ್ಡ್ ಅನ್ನು ನಮೂದಿಸಿ. ನಂತರ ಸಬ್ಮಿಟ್ ಅನ್ನು ಕ್ಲಿಕ್ ಮಾಡಿ.
ಹಂತ 4: ಮ್ಯಾನೇಜ್ ಕಾರ್ಡ್: ಈ ಎಲ್ಲ ಆಯ್ಕೆ ಪೂರ್ಣಗೊಳಿಸಿದ ಬಳಿಕ ಮ್ಯಾನೇಜ್ ಕಾರ್ಡ್ ಅನ್ನು ಆಯ್ಕೆ ಮಾಡಿ.
ಹಂತ 5: ನಂತರ ಇಂಟರ್‌ನ್ಯಾಷನಲ್ ಯೂಸೇಜ್ ಅನ್ನು ಆಕ್ಟಿವೇಟ್ ಮಾಡಿ. ಡಿಸೈರ್ಡ್ ಅಕೌಂಟ್ & ಡೆಬಿಟ್ ಕಾರ್ಡ್ ಅನ್ನು ಆಯ್ಕೆ ಮಾಡಿ, ಬಳಿಕ ಮ್ಯಾನೇಜ್ ಯೂಸೇಜ್ ಅನ್ನು ಕ್ಲಿಕ್ ಮಾಡಿಕೊಂಡು ಇಂಟರ್‌ನ್ಯಾಷನಲ್ ಯೂಸೇಜ್ ಅನ್ನು ಚಾಲನೆಗೊಳಿಸಬೇಕು.
ಹಂತ 6: ದೃಢೀಕರಣ: ನೋಂದಾಯಿತ ಮೊಬೈಲ್‌ಗೆ ಬರುವ ಒನ್ ಟೈಮ್ ಓಟಿಪಿಯನ್ನು ಪಡೆದುಕೊಂಡು ಕನ್ಫರ್ಮ್ ಮಾಡಿಕೊಂಡು ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಬೇಕು.
ಇದು ಆಕ್ಟೀವ್ ಆಗಿರುವ ಬಗ್ಗೆ ದೃಢೀಕರಣ ಮೆಸೇಜ್ ಬರುತ್ತದೆ. ಎಟಿಎಂ ಮೂಲಕ ಎಸ್‌ಬಿಐ ಡೆಬಿಟ್ ಕಾರ್ಡ್ ಆಕ್ಟಿವೇಟ್ ಮಾಡುವುದು. ಸಮೀಪದ ಎಟಿಎಂ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಡೆಬಿಟ್ ಕಾರ್ಡ್ ಅನ್ನು ಇನ್‌ಸರ್ಟ್ ಮಾಡಬೇಕು.
ನಂತರ 11 ಡಿಜಿಟ್‌ನ ಅಕೌಂಟ್ ನಂಬರ್ ಅನ್ನು ನಮೂದಿಸಬೇಕು. ನಂತರ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ದಾಖಲಿಸಬೇಕು. ನಂತರ ಒನ್‌ಟೈಮ್ ಪಿನ್ ಅನ್ನು ಪಡೆಯುವ ಮೂಲಕ ಹೊಸ ಎಟಿಎಂ ಪಿನ್ ಅನ್ನು ಜನರೇಟ್ ಮಾಡಿಕೊಳ್ಳಬಹುದು.
ಎಸ್‌ಎಂಎಸ್ ಮೂಲಕ ಆಕ್ಟಿವೇಟ್ ಮಾಡಿ
ಎಸ್‌ಎಂಎಸ್ ಮೂಲಕ ಎಸ್‌ಬಿಐ ಡೆಬಿಟ್ ಕಾರ್ಡ್ ಆಕ್ಟಿವೇಟ್ ಮಾಡುವುದು: PIN SPACE ಕೊನೆಯ ನಾಲ್ಕು ಡಿಜಿಟ್‌ನ ಡೆಬಿಟ್ ಕಾರ್ಡ್ ಸಂಖ್ಯೆ ಮತ್ತೆ SPACE ಕೊಟ್ಟು ಅಕೌಂಟ್ ಸಂಖ್ಯೆಯ ಕೊನೆಯ ನಾಲ್ಕು ಡಿಜಿಟ್ ಅನ್ನು ಟೈಪ್ ಮಾಡಿಕೊಂಡು 567676ಗೆ ಎಸ್‌ಎಂಎಸ್ ಕಳುಹಿಸಬೇಕು. ಒನ್‌ಟೈಮ್ ಪಿನ್ ಅನ್ನು ಪಡೆಯುವ ಮೂಲಕ ಎಟಿಎಂ ಪಿನ್ ಅನ್ನು ಪಡೆಯಬಹುದು.
ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕವೂ ಎಸ್‌ಬಿಐ ಎಟಿಎಂ/ಡೆಬಿಟ್ ಕಾರ್ಡ್ ಆಕ್ಟಿವೇಟ್ ಮಾಡಬಹುದು. ಅದಕ್ಕಾಗಿ www.onlinesbi.com ಗೆ ಭೇಟಿ ನೀಡಬೇಕು. ಯೂಸರ್ ಹಾಗೂ ಪಾಸ್‌ವರ್ಡ್ ಹಾಕಿ ಲಾಗಿನ್ ಆಗಬೇಕು. ನಂತರ ಇ-ಸರ್ವೀಸ್ ಹಾಗೂ ಎಟಿಎಂ ಕಾರ್ಡ್ ಸರ್ವೀಸ್ ಗೆ ಹೋಗಿ.
ಅಲ್ಲಿ ಹೊಸ ಎಟಿಎಂ ಕಾರ್ಡ್ ಆಕ್ಟಿವೇಷನ್ ಆಯ್ಕೆಯನ್ನು ಮಾಡಿಕೊಳ್ಳಿ. ನಂತರ ಅಕೌಂಟ್ ಖಾತೆ ನಂಬರ್ ಹಾಗೂ 16 ಡಿಜಿಟ್ ಎಟಿಎಂ ಕಾರ್ಡ್ ನಂಬರ್ ನಮೂದಿಸಿ. ಅದನ್ನು ದೃಢೀಕರಿಸುವ ಮೂಲಕ ಮೊಬೈಲ್ ಸಂಖ್ಯೆಗೆ ಪಾಸ್‌ವರ್ಡ್ ಬರುತ್ತದೆ. ಅದನ್ನು ನಮೂದಿಸಿ ಆಕ್ಟಿವೇಷನ್ ಮಾಡಬೇಕು.
1800 11 2211/1800 425 3800 or 080-26599990 ಕಸ್ಟಮರ್ ಕೇರ್‌ಗೆ ಕರೆ ಮಾಡಿ ಐವಿಆರ್ ಮೂಲಕ ಎಸ್‌ಬಿಐ ಎಟಿಎಂ/ಡೆಬಿಟ್ ಕಾರ್ಡ್ ಆಕ್ಟಿವೇಟ್ ಮಾಡಿಕೊಳ್ಳಬಹುದು. ಈ ಐವಿಆರ್ ಗ್ರೀನ್ ಪಿನ್ ಅನ್ನು ಜನರೇಟ್ ಮಾಡುವ ಮೂಲಕ ಹೊಸ ಎಟಿಎಂ ಪಿನ್ ಸೃಷ್ಟಿಸುವುದಕ್ಕೆ ಸಹಾಯ ಮಾಡುತ್ತದೆ.
ಈ ಗ್ರೀನ್ ಪಿನ್ ಪಡೆದ ಎರಡು ದಿನದೊಳಗೆ ಸಮೀಪದ ಎಸ್‌ಬಿಐ ಎಟಿಎಂಗೆ ಹೋಗಿ ಎಟಿಎಂ ಪಿನ್ ಜನರೇಟ್ ಮಾಡಿಕೊಳ್ಳಬಹುದು. ಇನ್ನು ಎಸ್‌ಬಿಐ ಡೆಬಿಟ್ ಕಾರ್ಡ್ ಅನ್ನು ಯೋನೋ ಆಪ್ ಮೂಲಕವೂ ಆಕ್ಟಿವೇಟ್ ಮಾಡಿಕೊಳ್ಳಬಹುದು.


Click it and Unblock the Notifications