ಈ ಡಿಜಿಟಲ್ ಯುಗದಲ್ಲಿ ಪ್ಯಾನ್ ಕಾರ್ಡ್‌ಗೆ ಅತೀ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಆಧಾರ್ ಕಾರ್ಡ್ ಹೇಗೆ ದೇಶದಲ್ಲಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆಯೋ ಹಾಗೆಯೇ ಪ್ಯಾನ್ ಕಾರ್ಡ್ ಕೂಡಾ ಅತೀ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಪ್ಯಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆಯು ಜಾರಿ ಮಾಡಿದ್ದು, ಪ್ರಸ್ತುತ ಎಲ್ಲ ವಹಿವಾಟಿಗೆ ಪ್ಯಾನ್ ಕಾರ್ಡ್ ಆಗಿದೆ.
ಭಾರತದ ನಾಗರಿಕರಿಗೆ ಪ್ಯಾನ್ ಕಾರ್ಡ್ ಅತೀ ಮುಖ್ಯವಾಗಿದೆ. ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡಲು ಎಲ್ಲ ತೆರಿಗೆದಾರರಿಗೆ ಪ್ಯಾನ್ ಕಾರ್ಡ್ ಅತೀ ಮುಖ್ಯವಾಗಿದೆ. ಹಾಗೆಯೇ ನಾನ್ ರೆಸಿಡೆಂಟ್ ಇಂಡಿಯನ್‌ಗಳಿಗೂ (ಎನ್‌ಆರ್‌ಐ) ಪ್ಯಾನ್ ಕಾರ್ಡ್ ಅತೀ ಮುಖ್ಯ ದಾಖಲೆಯಾಗಿದೆ. ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಬೇಕಾದರೆ ಎನ್‌ಆರ್‌ಐಗಳು ಪ್ಯಾನ್ ಕಾರ್ಡ್ ಅನ್ನು ಹೊಂದಿರಬೇಕಾಗುತ್ತದೆ.
ಎನ್‌ಆರ್‌ಐಗಳ ಆದಾಯವು ತೆರಿಗೆಗೆ ಒಳಗಾಗುವುದಾದರೆ ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡುವುದು ಮುಖ್ಯವಾಗುತ್ತದೆ. ಆದರೆ ಎನ್‌ಆರ್‌ಐಗಳ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ, ಬೇಕಾದ ದಾಖಲೆಗಳು ಯಾವುದು, ಇಲ್ಲಿದೆ ಮಾಹಿತಿ ಮುಂದೆ ಓದಿ....

ಎನ್‌ಆರ್‌ಐ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?
ಹಂತ 1: ಎನ್‌ಆರ್‌ಐಗಳು ಭಾರತದ ನಾಗರಿಕತೆ ಹೊಂದಿದ್ದರೆ, 49A ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ.
ಹಂತ 2: ಬೇರೆ ದೇಶದ ನಾಗರಿಕತೆಯನ್ನು ಹೊಂದಿರುವ ಎನ್‌ಆರ್‌ಐಗಳಾದರೆ 49AA ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ.
ಹಂತ 3: UTIITSL ಅಥವಾ NDSL ವೆಬ್‌ಸೈಟ್ ಮೂಲಕ ಫಾರ್ಮ್ ಅನ್ನು ಸಬ್‌ಮಿಟ್ ಮಾಡಬೇಕಾಗುತ್ತದೆ.
ಹಂತ 4: ಫಾರ್ಮ್ ಸಬ್‌ಮಿಟ್ ಆದ ಬಳಿಕ ಅಕ್ನಾಲಜೆಮೆಂಟ್ ಪ್ರತಿಯೊಂದಿಗೆ 15 ಡಿಜಿಟ್ ಸಂಖ್ಯೆಯು ನಿಮ್ಮ ವಿಳಾಸಕ್ಕೆ ಬರಲಿದೆ.
ಹಂತ 5: ಭಾರತದ ಒಳಗಿನ ವಿಳಾಸಕ್ಕೆ ಅಕ್ನಾಲಜೆಮೆಂಟ್ ಪ್ರತಿ ಕಳುಹಿಸಲು 107 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.
ಹಂತ 6: ವಿದೇಶಕ್ಕೆ ಅಕ್ನಾಲಜೆಮೆಂಟ್ ಪ್ರತಿ ಕಳುಹಿಸಲು 989 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.
ಹಂತ 7: ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಆನ್‌ಲೈನ್ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.
ಎನ್‌ಆರ್‌ಐ ಪ್ಯಾನ್ ಕಾರ್ಡ್‌ಗೆ ಬೇಕಾದ ದಾಖಲೆಗಳು
* ಎರಡು ಪಾಸ್‌ಪೋರ್ಟ್ ಗಾತ್ರದ ಫೋಟೋಗಳನ್ನು ನೀಡಬೇಕಾಗುತ್ತದೆ.
* ವಿಳಾಸದ ಜೊತೆ ಬ್ಯಾಂಕ್ ಖಾತೆಯ ಸ್ಟೇಟ್‌ಮೆಂಟ್ ಇರುವ ಪ್ರತಿ
* ಎರಡು ತಿಂಗಳುಗಳ ಕಾಲದ ವಹಿವಾಟಿಗೆ ಎನ್‌ಆರ್‌ಐ ಬ್ಯಾಂಕ್ ಖಾತೆಯ ಸ್ಟೇಟ್‌ಮೆಂಟ್‌ನ ಪ್ರತಿ


Click it and Unblock the Notifications