For Quick Alerts
ALLOW NOTIFICATIONS  
For Daily Alerts

ಹಿಂದೂ ಅವಿಭಕ್ತ ಕುಟುಂಬ (HUF) ಆದಾಯ ತೆರಿಗೆ ಲೆಕ್ಕಾಚಾರ ಹೇಗೆ?

|

ಆದಾಯ ತೆರಿಗೆ ಅಥವಾ ಇನ್ ಕಮ್ ಟ್ಯಾಕ್ಸ್ ಬಗ್ಗೆ ತುಂಬ ಆಸಕ್ತಿಕರ ಮಾಹಿತಿ ನೀಡಲಿದೆ ಈ ಲೇಖನ. "ಹಿಂದೂ ಅವಿಭಕ್ತ ಕುಟುಂಬ" (HUF) ಆದಾಯ ತೆರಿಗೆ ಅಡಿಯಲ್ಲಿ ಹೇಗೆ ಗಣನೆಗೆ ಬರುತ್ತದೆ ಹಾಗೂ ಲೆಕ್ಕಾಚಾರ ಹೇಗಿರುತ್ತದೆ ಎಂಬುದು ನಿಮ್ಮೆದುರು ಇಡಲಾಗುತ್ತಿದೆ. ಅಂದ ಹಾಗೆ ಹಿಂದೂ ಅವಿಭಕ್ತ ಕುಟುಂಬವನ್ನು ಆದಾಯ ತೆರಿಗೆ ಕಾಯ್ದೆ 1961, ಸೆಕ್ಷನ್ 2(31) ಅಡಿಯಲ್ಲಿ 'ವ್ಯಕ್ತಿ' ಎಂದು ಪರಿಗಣಿಸಲಾಗುತ್ತದೆ.

 

ಈ ಕಾಯ್ದೆ ಅಡಿಯಲ್ಲಿ ಅಸೆಸ್ ಮೆಂಟ್ ಉದ್ದೇಶಕ್ಕೆ ಹಿಂದೂ ಅವಿಭಕ್ತ ಕುಟುಂಬವನ್ನು ಪ್ರತ್ಯೇಕ ಸಂಸ್ಥೆ ಎಂದು ಗುರುತಿಸಲಾಗುತ್ತದೆ. ಹಿಂದೂ ಕಾನೂನು ಪ್ರಕಾರ, HUF ಎಂಬುದು ಕುಟುಂಬ. ಒಬ್ಬರೇ ವ್ಯಕ್ತಿಯ ಮೂಲಕ ಬೆಳೆದುಬಂದ ಕುಟುಂಬದ ಎಲ್ಲ ಸದಸ್ಯರೂ ಅಂದರೆ ಪತ್ನಿಯರು, ಅವರ ಮದುವೆ ಆಗದ ಹೆಣ್ಣುಮಕ್ಕಳು ಇದರಲ್ಲಿ ಒಳಗೊಂಡಿರುತ್ತಾರೆ.

 

FY19- 20ರಲ್ಲಿ EPF ವಿಥ್ ಡ್ರಾ ಮಾಡಿದರಾ? ITRಗೆ ನೀಡಬೇಕು ಮಾಹಿತಿFY19- 20ರಲ್ಲಿ EPF ವಿಥ್ ಡ್ರಾ ಮಾಡಿದರಾ? ITRಗೆ ನೀಡಬೇಕು ಮಾಹಿತಿ

ಹಿಂದೂ ಅವಿಭಕ್ತ ಕುಟುಂಬ ಎಂಬುದು ಒಪ್ಪಂದದ (ಕಾಂಟ್ರ್ಯಾಕ್ಟ್) ಮೂಲಕ ರಚನೆ ಆಗುವುದಲ್ಲ. ಹಿಂದೂ ಕುಟುಂಬದಲ್ಲಿ ತಾನಾಗಿ ಸೃಷ್ಟಿ ಆಗುತ್ತದೆ. ಜೈನರು ಮತ್ತು ಸಿಖ್ಖರು ಹಿಂದೂ ಕಾನೂನು ಅಡಿಯಲ್ಲಿ ಬರುವುದಿಲ್ಲ. ಆದರೆ ಅವರನ್ನೂ ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಹಿಂದೂ ಅವಿಭಕ್ತ ಕುಟುಂಬ ಎಂದು ಪರಿಗಣಿಸಲಾಗುತ್ತದೆ.

ಹಿಂದೂ ಅವಿಭಕ್ತ ಕುಟುಂಬ (HUF) ಆದಾಯ ತೆರಿಗೆ ಲೆಕ್ಕಾಚಾರ ಹೇಗೆ?

ಹಿಂದೂ ಅವಿಭಕ್ತ ಕುಟುಂಬದ ಅಸೆಸ್ ಮೆಂಟ್
ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ HUF ಅನ್ನು ಪ್ರತ್ಯೇಕ ಸಂಸ್ಥೆ ಎಂಬಂತೆ ಗುರುತಿಸಲಾಗುತ್ತದೆ. ಎರಡು ನಿಬಂಧನೆಗಳನ್ನು ಪೂರ್ಣಗೊಳಿಸಿದ ನಂತರವಷ್ಟೇ ಅದರ ಆದಾಯವನ್ನು ಅಸೆಸ್ ಮಾಡಬಹುದಾಗಿದೆ. ಆ ಎರಡು ನಿಬಂಧನೆ ಹೀಗಿದೆ:

* ಕೋಪಾರ್ಸನರ್ ಷಿಪ್ ಇರಬೇಕು. ಈ ಸಂಬಂಧವಾಗಿ ತಿಳಿದುಕೊಳ್ಳಬೇಕಾದದ್ದು ಏನೆಂದರೆ, ಒಂದು ಸಲ ಕೂಡು ಕುಟುಂಬ ಎಂದು ಆದಾಯ ಗುರುತಿಸಿ, ಹಿಂದೂ ಅವಿಭಕ್ತ ಕುಟುಂಬ ಆದಾಯ ಎಂದು ಅಸೆಸ್ ಮೆಂಟ್ ಆದ ಮೇಲೆ ಆ ನಂತರದ ವರ್ಷಗಳು ಕೂಡ ಹಿಂದೂ ಅವಿಭಕ್ತ ಕುಟುಂಬ ಎಂದು ಅಸೆಸ್ ಮೆಂಟ್ ಆಗಬೇಕು. ಅದು ಎಲ್ಲಿಯ ತನಕ ಅಂದರೆ, ಕುಟುಂಬಸ್ಥರ ಮಧ್ಯೆ ಆಸ್ತಿ ಹಂಚಿಕೆ ಆಗುವವರೆಗೆ ಮುಂದುವರಿಯಬೇಕು.

ಐಟಿ ರಿಟರ್ನ್ಸ್‌ ಸಲ್ಲಿಕೆ ಗಡುವು ಮತ್ತೆ ವಿಸ್ತರಣೆ: ಏನೆಲ್ಲಾ ಬದಲಾಗಿದೆ ಪರೀಕ್ಷಿಸಿ..ಐಟಿ ರಿಟರ್ನ್ಸ್‌ ಸಲ್ಲಿಕೆ ಗಡುವು ಮತ್ತೆ ವಿಸ್ತರಣೆ: ಏನೆಲ್ಲಾ ಬದಲಾಗಿದೆ ಪರೀಕ್ಷಿಸಿ..

* ಇನ್ನು ಆ ಕೂಡು ಕುಟುಂಬದ ಆಸ್ತಿ ಇರಬೇಕು, ಅದರಲ್ಲಿ ಪಿತ್ರಾರ್ಜಿತ ಆಸ್ತಿ ಆಗಿರಬೇಕು. ಇನ್ನು ಪಿತ್ರಾರ್ಜಿತ ಆಸ್ತಿಯ ಹಣದಿಂದ ಆಸ್ತಿಯನ್ನು ಖರೀದಿಸಿದಂತಾಗಿರಬೇಕು ಮತ್ತು ಆ ಆಸ್ತಿಯನ್ನು ಸದಸ್ಯರಿಗೆ ವರ್ಗಾವಣೆ ಮಾಡಿರಬೇಕು.

ಪಿತ್ರಾರ್ಜಿತ ಆಸ್ತಿ
ಪಿತ್ರಾರ್ಜಿತ ಆಸ್ತಿ ಅಂದರೆ ಒಬ್ಬ ವ್ಯಕ್ತಿಯ ಮೂರು ತಲೆಮಾರಿನ ಪುರುಷ ವಂಶಜರಿಂದ ಬಂದಂಥ ಆಸ್ತಿ. ತಂದೆ, ತಾತ ಮತ್ತು ಮುತ್ತಾತನ ಮೂಲಕ ಬಂದಂಥ ಆಸ್ತಿ ಆಗಿರಬೇಕು. ಆದ್ದರಿಂದ ಬೇರೆ ಸಂಬಂಧಗಳ ಮೂಲಕ ಬಂದ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಎಂದು ಪರಿಗಣಿಸಲು ಸಾಧ್ಯವಿಲ್ಲ.

ಇಲ್ಲಿ ಪ್ರಸ್ತಾಪಿಸಿದಂಥ ಕುಟುಂಬ ಸದಸ್ಯರಿಗೆ ಪಿತ್ರಾರ್ಜಿತ ಆಸ್ತಿ ಮೂಲಕ ಬಂದಂಥ ಆದಾಯವನ್ನು ಹಿಂದೂ ಅವಿಭಕ್ತ ಕುಟುಂಬದ ತೆರಿಗೆ ಆದಾಯ ಎಂದು ಪರಿಗಣಿಸಲಾಗುತ್ತದೆ.

* ವಿಧವೆ ತಾಯಿ ಮತ್ತು ಮಗನ (ವಯಸ್ಕ ಅಥವಾ ಅಪ್ರಾಪ್ತ) ಕುಟುಂಬ

* ಮಕ್ಕಳಿಲ್ಲದ ಪತಿ ಮತ್ತು ಪತ್ನಿಯ ಕುಟುಂಬ

* ಮೃತ ಸೋದರರ ವಿಧವೆ ಪತ್ನಿಯರ ಕುಟುಂಬ

* ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಸೋದರರ ಕುಟುಂಬ

* ಸೋದರ ಸಂಬಂಧಿ ಮತ್ತು ಸೋದರಿಯ ಮಗ/ಮಗಳ ಕುಟುಂಬ

* ತಾಯಿ, ಮಗ ಮತ್ತು ಮಗನ ಹೆಂಡತಿಯ ಕುಟುಂಬ

* ಪುರುಷ ಮತ್ತು ಆತನ ತೀರಿಹೋದ ಸೋದರನ ಪತ್ನಿಯ ಕುಟುಂಬ

ಗಮನಿಸಿ:
ಕೂಡು ಕುಟುಂಬದಿಂದ ಮಗಳಿಗೆ ಬಂದ ಆಸ್ತಿಯನ್ನು ಅದು ಆಕೆಯದೇ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಆ ಆಸ್ತಿಯ ಮೂಲಕ ಬರುವ ಯಾವುದೇ ಆದಾಯವನ್ನು ವೈಯಕ್ತಿಕ ಗಳಿಕೆ ಎಂದೇ ಪರಿಗಣಿಸಲಾಗುತ್ತದೆ. ಉತ್ತರಾಧಿಕಾರಿ ಎಂಬ ಕಾರಣಕ್ಕೆ ಬಂದ ಪಿತ್ರಾರ್ಜಿತ ಆಸ್ತಿಯ ಮೂಲಕ ಗಳಿಸಿದ್ದಕ್ಕೂ ಇದೇ ನಿಯಮ ಅನ್ವಯ ಆಗುತ್ತದೆ.

ಹಿಂದೂ ಅವಿಭಕ್ತ ಕುಟುಂಬ ತೆರಿಗೆ ಲೆಕ್ಕಾಚಾರ:
ಹಿಂದೂ ಅವಿಭಕ್ತ ಕುಟುಂಬದ ಆದಾಯವನ್ನು ಲೆಕ್ಕ ಹಾಕುವಾಗ ಮೊದಲಿಗೆ ವಿವಿಧ ಮೂಲಗಳ ಮೂಲಕ ಬರುವ ಆದಾಯವನ್ನು ಲೆಕ್ಕ ಹಾಕಬೇಕು (ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಸೆಕ್ಷನ್ 10 ಮತ್ತು 13A ವಿನಾಯಿತಿ ಸಿಗುವಂಥದನ್ನು ಹೊರತುಪಡಿಸಬೇಕು). ಆದಾಯವನ್ನು ಲೆಕ್ಕ ಹಾಕುವಾಗ ಕೆಲವು ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು.

English summary

How To Calculate Income Tax For Hindu Undivided Family- HUF?

How to calculate Income Tax for Hindu Undivided Family (HUF)? Here is an explainer.
Story first published: Friday, December 4, 2020, 15:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X