ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್ಒ) ಉದ್ಯೋಗಿಗಳಿಗೆ ನೀಡಲಾಗುವ ಅತೀ ಸುರಕ್ಷಿತವಾದ ಆರ್ಥಿಕ ಪ್ರಯೋಜನವಾಗಿದೆ. ಇದು ನಿವೃತ್ತಿ ಉಳಿತಾಯ ಯೋಜನೆಯಾಗಿದೆ. ಇದು ಉದ್ಯೋಗಿಗಳಿಗೆ ಸುರಕ್ಷಿತ ಆರ್ಥಿಕ ಭವಿಷ್ಯವನ್ನು ಖಾತರಿಪಡಿಸುವ ಯೋಜನೆಯಾಗಿದೆ. ಇಲ್ಲಿ ನೀವು ಮಾಡಿದ ಹೂಡಿಕೆ ಎಂದಿಗೂ ಕೂಡಾ ಸುರಕ್ಷಿತವಾಗಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಎಲ್ಲಾ ಉದ್ಯಮಗಳು ತಮ್ಮ ಉದ್ಯೋಗಿಗಳ ವೇತನದ ಒಂದು ಭಾಗವನ್ನು ಭವಿಷ್ಯ ನಿಧಿಗೆ ಡೆಪಾಸಿಟ್ ಮಾಡಬೇಕಾಗುತ್ತದೆ. ಉದ್ಯೋಗಿಗಳು ತಮ್ಮ ಇಪಿಎಫ್ ಸದಸ್ಯರ ಪಾಸ್‌ಬುಕ್ ಅನ್ನು ಪರಿಶೀಲಿಸಬಹುದು ಮತ್ತು ಅವರ ಇಪಿಎಫ್ ಕೊಡುಗೆಗಳು ಮತ್ತು ಕ್ಲೈಮ್ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡಬಹುದು. ಹೇಗೆ ಎಂಬ ವಿವರ ಮುಂದೆ ಓದಿ...

ಇಪಿಎಫ್ ಖಾತೆ ಎಂದರೇನು?
ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಉದ್ಯೋಗಿಗಳಿಗೆ ಭಾರತೀಯ ಸರ್ಕಾರದ ಅಡಿಯಲ್ಲಿ ಬರುವ ಆರ್ಥಿಕ ಲಾಭ ಕಾರ್ಯಕ್ರಮವಾಗಿದೆ. ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರೂ ಈ ಪಿಎಫ್ ಯೋಜನೆಯಡಿಯಲ್ಲಿ ಉದ್ಯೋಗಿಯ ಇಪಿಎಫ್ ಖಾತೆಗೆ ಮಾಸಿಕ ಕೊಡುಗೆ ನೀಡುತ್ತಾರೆ.
ಉದ್ಯೋಗಿಗಳು ತಮ್ಮ ಮೂಲ ಆದಾಯದ ಕನಿಷ್ಠ ಶೇಕಡ 12ರಷ್ಟು ಕೊಡುಗೆ ನೀಡಬೇಕು. ಉದ್ಯೋಗ ನೀಡಿದ ಸಂಸ್ಥೆಯು ಕೂಡಾ ಅದೇ ಮೊತ್ತವನ್ನು ನೀಡಬೇಕಾಗುತ್ತದೆ. ಅಂದರೆ ಉದ್ಯೋಗಿಯ ಮೂಲ ಆದಾಯದ ಕನಿಷ್ಠ ಶೇಕಡ 12ರಷ್ಟು ಸಂಸ್ಥೆಯು ನೀಡಬೇಕಾಗುತ್ತದೆ.
ಆನ್‌ಲೈನ್‌ನಲ್ಲಿ ಮೆಂಬರ್ ಪಾಸ್‌ಬುಕ್ ಚೆಕ್ ಮಾಡಿ
ಹಂತ 1: https://www.epfindia.gov.in/site_en/index.php ಗೆ ಭೇಟಿ ನೀಡಿ.
ಹಂತ 2: 'e-Passbook' ಆಯ್ಕೆಮಾಡಿ.
ಹಂತ 3: ನಿಮ್ಮ ಯುಎಎನ್, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಮಾಹಿತಿಯನ್ನು ನಮೂದಿಸಿ, ನಂತರ 'Login' ಕ್ಲಿಕ್ ಮಾಡಿ.
ಹಂತ 4: ಉದ್ಯೋಗಿಯ ಸದಸ್ಯ ಐಡಿ ಇರಲಿದೆ. ತಮ್ಮ ಪಿಎಫ್ ಸ್ಟೇಟ್‌ಮೆಂಟ್ ಅನ್ನು ನೋಡಲು ಬಯಸುವವರು ತಮ್ಮ ಖಾತೆಯ ಐಡಿ ಮೇಲೆ ಕ್ಲಿಕ್ ಮಾಡಿ.
ಮೆಂಬರ್ ಪೋರ್ಟಲ್ ಮೂಲಕ ಇಪಿಎಫ್ ಕ್ಲೈಮ್ ಸ್ಟೇಟಸ್ ಚೆಕ್
ಹಂತ 1: ಇಪಿಎಫ್‌ಒ ಸದಸ್ಯರ ಪೋರ್ಟಲ್‌ಗೆ ಭೇಟಿ ನೀಡಿ
ಹಂತ 2: ನಿಮ್ಮ ಯುಎಎನ್ ಸಂಖ್ಯೆ, ಪಾಸ್‌ವರ್ಡ್ ಅನ್ನು ನಮೂದಿಸಿ
ಹಂತ 3: 'Online Services' ಟ್ಯಾಬ್ ಅನ್ನು ಕ್ಲಿಕ್ ಮಾಡಿದಾಗ, ಡ್ರಾಪ್-ಡೌನ್ ಮೆನು ಕಾಣಿಸಿಕೊಳ್ಳುತ್ತದೆ.
ಹಂತ 4: 'Track Claim Status' ಆಯ್ಕೆ ಮಾಡಿಕೊಳ್ಳಿ
ಹಂತ 5: ಸ್ಕ್ರೀನ್ ಮೇಲೆ ನಿಮ್ಮ ಆನ್‌ಲೈನ್ ವಾಪಸಾತಿ/ವರ್ಗಾವಣೆ ಕ್ಲೈಮ್‌ನ ಸ್ಟೇಟಸ್ ಕಾಣಲಿದೆ.
ಉಮಾಂಗ್ ಆಪ್‌ನಲ್ಲಿ ಇಪಿಎಫ್ ಕ್ಲೈಮ್ ಸ್ಟೇಟಸ್ ಚೆಕ್ ಮಾಡಿ
ಹಂತ 1: ಇಪಿಎಫ್‌ಒ ಸದಸ್ಯರ ಪೋರ್ಟಲ್‌ಗೆ ಭೇಟಿ ನೀಡಿ
ಹಂತ 2: ನಿಮ್ಮ ಯುಎಎನ್ ಸಂಖ್ಯೆ, ಪಾಸ್‌ವರ್ಡ್ ಅನ್ನು ನಮೂದಿಸಿ
ಹಂತ 3: 'Online Services' ಟ್ಯಾಬ್ ಅನ್ನು ಕ್ಲಿಕ್ ಮಾಡಿದಾಗ, ಡ್ರಾಪ್-ಡೌನ್ ಮೆನು ಕಾಣಿಸಿಕೊಳ್ಳುತ್ತದೆ.
ಹಂತ 4: 'Track Claim Status' ಆಯ್ಕೆ ಮಾಡಿಕೊಳ್ಳಿ
ಹಂತ 5: ಸ್ಕ್ರೀನ್ ಮೇಲೆ ನಿಮ್ಮ ಆನ್‌ಲೈನ್ ವಾಪಸಾತಿ/ವರ್ಗಾವಣೆ ಕ್ಲೈಮ್‌ನ ಸ್ಟೇಟಸ್ ಕಾಣಲಿದೆ.
ಮಿಸ್ಡ್‌ಕಾಲ್ ಮೂಲಕ ಇಪಿಎಫ್ ಕ್ಲೈಮ್ ಸ್ಟೇಟಸ್ ಚೆಕ್ ಮಾಡಿ
ಉದ್ಯೋಗಿಗಳು ತಮ್ಮ ನೋಂದಾಯಿತ ಸೆಲ್‌ಫೋನ್ ಸಂಖ್ಯೆಯಿಂದ 011-22901406 ಅನ್ನು ಡಯಲ್ ಮಾಡುವ ಮೂಲಕ ಅಥವಾ ಅವರ ಕ್ಲೈಮ್‌ನ ಸ್ಟೇಟಸ್ ಅನ್ನು ಪಡೆಯಲು ಎಸ್‌ಎಂಎಸ್ ಕಳುಹಿಸುವ ಮೂಲಕ ತಮ್ಮ ಇಪಿಎಫ್ ಕ್ಲೈಮ್‌ನ ಸ್ಟೇಟಸ್ ಅನ್ನು ಪರಿಶೀಲಿಸಬಹುದು.
ಎಸ್‌ಎಂಎಸ್ ಮೂಲಕ ಇಪಿಎಫ್ ಕ್ಲೈಮ್ ಸ್ಟೇಟಸ್ ಚೆಕ್ ಮಾಡಿ
ಉದ್ಯೋಗಿಗಳು ತಮ್ಮ ಇಪಿಎಫ್ ಕ್ಲೈಮ್‌ನ ಸ್ಟೇಟಸ್ ಅನ್ನು ಪರಿಶೀಲಿಸಲು ಸಂದೇಶವನ್ನು ಸಹ ಕಳುಹಿಸಬಹುದು. ಎಸ್‌ಎಂಎಸ್ ಫಾರ್ಮ್ಯಾಟ್: 'EPFOHO UAN LAN' ಅನ್ನು 7738299899 ಗೆ ಕಳುಹಿಸಿ. ಯುಎಎನ್ ಎಂಬಲ್ಲಿ ನಿಮ್ಮ ಯುಎಎನ್ ಸಂಖ್ಯೆಯನ್ನು ಮತ್ತು LAN ಎಂಬುವುದು ನೀವು ಆಯ್ಕೆ ಮಾಡಲು ಬಯಸುವ ಭಾಷೆಯನ್ನು ಸೂಚಿಸುತ್ತದೆ.


Click it and Unblock the Notifications