ಭಾರತೀಯರಿಗೆ ಚಿನ್ನ ಎಂದರೆ ಎಲ್ಲಿಲ್ಲದ ಪ್ರೀತಿ. ಭಾರತೀಯರು ಚಿನ್ನ ಖರೀದಿಯಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ, ಹೀಗಾಗೇ ವಿಶ್ವದಲ್ಲೇ ಚಿನ್ನ ಖರೀದಿಯ 2ನೇ ಅತಿದೊಡ್ಡ ಗ್ರಾಹಕರಾಗಿದ್ದಾರೆ. ಹಳದಿ ಲೋಹದ ಮೇಲಿನ ವ್ಯಾಮೋಹವಂತೂ ಎಂದಿಗೂ ಕಮ್ಮಿ ಆಗಲ್ಲ. ಆದರೆ ಒಡವೆ ಖರೀದಿಸಲು ಹೋದಾಗ ಎಷ್ಟು ಜನರು ಚಿನ್ನದ ಶುದ್ಧತೆಯನ್ನು ಪರೀಕ್ಷಿಸುತ್ತಾರೆ? ಶುದ್ಧತೆಯ ಚಿನ್ನವನ್ನು ತಿಳಿದುಕೊಳ್ಳುವುದು ಹೇಗೆ ಎಂದು ಎಷ್ಟೋ ಗ್ರಾಹಕರಿಗೆ ತಿಳಿದಿರುವುದಿಲ್ಲ. ಇದರಿಂದ ಮೋಸ ಹೋಗುವ ಸಾಧ್ಯತೆಯು ಹೆಚ್ಚಿದೆ.
ಬಹುತೇಕ ಆಭರಣಗಳ ಸ್ವರೂಪದಲ್ಲಿ ಖರೀದಿಸುವ ಹೆಚ್ಚಿನ ಚಿನ್ನವು ಶುದ್ಧತೆಗೆ ಪ್ರಮಾಣಿಕರಿಸಲ್ಪಟ್ಟಿಲ್ಲ. ಯಾವುದೇ ಚಿನ್ನದ ಪರಿಶುದ್ಧತೆಯನ್ನು ತಿಳಿಸಲು ಹಾಲ್‌ಮಾರ್ಕ್ ಮಾಡಬೇಕಾಗಿದೆ. ಆದರೆ ಚಿನ್ನ ಖರೀದಿಸುವವರಲ್ಲಿ ಎಷ್ಟು ಜನರು ಈ ಹಾಲ್‌ಮಾರ್ಕ್ ಪರೀಕ್ಷಿಸುತ್ತಾರೆ ಹೇಳಿ? ತುಂಬಾ ಕಡಿಮೆ ಗ್ರಾಹಕರು ಚಿನ್ನದ ಶುದ್ಧತೆಯನ್ನು ಅರಿತು ಖರೀದಿಗೆ ಮುಂದಾಗುತ್ತಾರೆ. ಆದರೆ ಅನೇಕ ಗ್ರಾಹಕರು ಏನೂ ಅರಿಯದೆ ಕಡಿಮೆ ಶುದ್ಧತೆಗೆ ಜಾಸ್ತಿ ಬೆಲೆ ನೀಡುತ್ತಾರೆ.
ಕೇಂದ್ರ ಸರ್ಕಾರವು ದೇಶದಲ್ಲಿ ಮಾರಾಟವಾಗುವ ಎಲ್ಲಾ ಚಿನ್ನಾಭರಣಗಳಿಗೆ 2021ರಿಂದ ಹಾಲ್‌ಮಾರ್ಕ್ ಕಡ್ಡಾಯಗೊಳಿಸಲು ನಿರ್ಧರಿಸಿದೆ. 2021 ಜನವರಿಯಿಂದ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳಿಗೆ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ(ಬಿಐಎಸ್) ಹಾಲ್‌ಮಾರ್ಕ್ ಕಡ್ಡಾಯವಾಗಲಿದೆ. ಹಾಲ್‌ಮಾರ್ಕ್ ಅಧಿಸೂಚನೆಯನ್ನು ಉಲ್ಲಂಘಿಸಿದರೆ ಚಿನ್ನದ 5 ಪಟ್ಟು ಮತ್ತು ಒಂದು ಜೈಲು ಶಿಕ್ಷೆ ವಿಧಿಸುವ ಅವಕಾಶವೂ ಸೃಷ್ಠಿಯಾಗಲಿದೆ.
ಚಿನ್ನದ ಆಭರಗಳಲ್ಲಿನ ಶುದ್ಧತೆ ಪರಿಶೀಲಿಸುವುದು ಹೇಗೆ?
ಬಹುತೇಕ ನೋಂದಾಯಿಸಲಾದ ಆಭರಣದ ಅಂಗಡಿಗಳಲ್ಲಿ ಹಾಲ್‌ಮಾರ್ಕ್‌ವುಳ್ಳ ಆಭರಣಗಳನ್ನೇ ಮಾರಾಟ ಮಾಡಲಾಗುತ್ತದೆ. ಆದರೆ ಬಹುತೇಕ ಆಭರಣಗಳಿಗೆ ಹಾಲ್‌ಮಾರ್ಕ್ ಇಲ್ಲದೆಯು ಅಥವಾ ಹಾಲ್‌ಮಾರ್ಕ್ ಬಗ್ಗೆ ಗೊತ್ತಿಲದೇ ಗ್ರಾಹಕರು ಚಿನ್ನ ಖರೀದಿಸುತ್ತಾರೆ. ಆದರೆ ಆಭರಣ ಖರೀದಿಗೆ ಮುನ್ನ ಹಾಲ್‌ಮಾರ್ಕ್ ಇದೆಯಾ ಎಂದು ಪರೀಕ್ಷಿಸಿಕೊಳ್ಳಿ.
ಚಿನ್ನದ ಶುದ್ಧತೆ ಎಷ್ಟಿದೆ ಎಂದು ಹೇಗೆ ತಿಳಿದುಕೊಳ್ಳುವುದು?
ಚಿನ್ನದ ಶುದ್ಧತೆಯನ್ನು ಕ್ಯಾರೆಟ್ ಆಧಾರದಲ್ಲಿ ಅಳೆಯಲಾಗುತ್ತದೆ. ಪರಿಶುದ್ಧ ಚಿನ್ನವು 24 ಕ್ಯಾರೆಟ್‌ನೊಂದಿಗೆ ಆರಂಭಗೊಳ್ಳುತ್ತದೆ. ಆಭರಣದ ಚಿನ್ನವು 22 ಕ್ಯಾರೆಟ್ ಆಗಿದ್ದು, 14 ರಿಂದ 22 ಕ್ಯಾರೆಟ್‌ವರೆಗೆ ಆಭರಣ ಚಿನ್ನದ ಶುದ್ಧತೆಯನ್ನು ನಿರ್ಧರಿಸಲಾಗುತ್ತದೆ. ಆಭರಣ ಚಿನ್ನದ ಹಾಲ್‌ಮಾರ್ಕ್ 14K, 18K ಮತ್ತು 22K ಆಗಿದೆ. ಚಿನ್ನವು ಎಷ್ಟು ಕ್ಯಾರೆಟ್ ಇದೆ ಎಂಬುದನ್ನು ತಿಳಿಸಲು ಪರ್ಸೆಂಟ್ ಮೂಲಕ ತಿಳಿಸಲಾಗುತ್ತದೆ. ಈ ಕೆಳಗಿನಂತೆ ಚಿನ್ನದ ಶುದ್ಧತೆಯನ್ನು ಆಭರಣಗಳಲ್ಲಿ ನಮೂದಿಸಲಾಗಿರುತ್ತದೆ.
24K - 99.9%(999)
22K - 91.6%(916)
20K - 83.3%(833)
18K - 75.0%(750)
14K - 58.5%(585)
10K - 41.7%(417)
ಈ ಮೇಲಿನ ಅಂಕಿ-ಅಂಶಗಳಿಗೆ ಅನುಗುಣವಾಗಿ 14 ಕ್ಯಾರೆಟ್ ಚಿನ್ನವು 58.5 ಪರ್ಸೆಂಟ್ ಶುದ್ಧತೆಯನ್ನು, 18 ಕ್ಯಾರೆಟ್ ಚಿನ್ನವು 75 ಪರ್ಸೆಂಟ್ ಶುದ್ಧತೆ ಹಾಗೂ 22 ಕ್ಯಾರೆಟ್ ಚಿನ್ನವು 91.6 (916) ಶುದ್ಧತೆ ಹೊಂದಿದೆ.
ಹಾಲ್‌ಮಾರ್ಕ್ ಆಭರಣ ಖರೀದಿಸುವಾಗ ಗಮನಿಸಬೇಕಾದ ಅಂಶಗಳು
ಹಾಲ್‌ಮಾರ್ಕ್ ಆಭರಣಗಳನ್ನು ಖರೀದಿಸುವಾಗ ಈ 4 ಅಂಶಗಳನ್ನು ಮುಖ್ಯವಾಗಿ ಗಮನಿಸಬೇಕಾಗಿದೆ. ಮೊದಲನೆಯದಾಗಿ ಬಿಐಎಸ್(BIS) ಚಿಹ್ನೆ, ಚಿನ್ನದ ಶುದ್ಧತೆ (22 ಕ್ಯಾರೆಟ್ ಚಿನ್ನಕ್ಕೆ 916), ಹಾಲ್‌ಮಾರ್ಕ್ ಸೆಂಟರ್ ಮಾರ್ಕ್, ಆಭರಣಕಾರರ ಗುರುತನ್ನು ಗಮನಿಸಬೇಕು. ಈ ಮೂಲಕ ಚಿನ್ನದ ಶುದ್ಧತೆಯ ಮಟ್ಟವನ್ನು ಹಾಲ್‌ಮಾರ್ಕ್ ಮೂಲಕ ತಿಳಿದುಕೊಳ್ಳಬಹುದು. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಹಾಲ್‌ಮಾರ್ಕ್ ಕಡ್ಡಾಯಗೊಳಿಸುವುದು. ಆದ್ದರಿಂದ ಹಾಲ್‌ಮಾರ್ಕ್ ಇರುವಂತಹ ಆಭರಣಗಳನ್ನೇ ಖರೀದಿಸಿ.
ಹಾಲ್‌ಮಾರ್ಕ್ ವರ್ಷವನ್ನು ತಿಳಿದುಕೊಳ್ಳುವುದು ಹೇಗೆ?
ಚಿನ್ನದ ಆಭರಣಗಳಲ್ಲಿ ಹಾಲ್‌ಮಾರ್ಕ್ ಗುರುತನ್ನು ನೋಡಿಕೊಂಡು ಗ್ರಾಹಕರು ಖರೀದಿಸುತ್ತಾರೆ. ಹಾಗಿದ್ದರೆ ಈ ಹಾಲ್‌ಮಾರ್ಕ್ ಯಾವ ವರ್ಷದಲ್ಲಿ ಆಗಿದೆ ಎಂಬುದನ್ನು ಇಂಗ್ಲೀಷ್ ಅಕ್ಷರಗಳ ಮೂಲಕ ನೀಡಲಾಗಿರುತ್ತದೆ. ಉದಾಹರಣೆಗೆ 'A' ಅಕ್ಷರವು 2000ನೇ ಇಸವಿಯನ್ನು, 'J' 2008ನೇ ಇಸವಿಯನ್ನು, 'I' 2010ನೇ ಇಸವಿಯನ್ನು, 'M' 2011ನೇ ಇಸವಿ, 'N' 2012, 'R' 2016, 'T' 2018 ಇತ್ಯಾದಿ.
ಗಮನಿಸಬೇಕಾದ ಮುಖ್ಯವಾದ ಅಂಶಗಳು
* ನೀವು ಚಿನ್ನವನ್ನು ಖರೀದಿಸಲು ತೆರಳಿದ ಆಭರಣದ ಅಂಗಡಿಯು ಹಾಲ್‌ಮಾರ್ಕ್ ಚಿನ್ನವನ್ನು ಮಾರುತ್ತಿದೆಯೇ ಇಲ್ಲವೇ ಎಂದು ಪರೀಕ್ಷಿಸಿಕೊಳ್ಳಿ
* ಹಾಲ್‌ಮಾರ್ಕ್ ಚಿನ್ನವನ್ನು ಮಾತ್ರ ಖರೀದಿಸಿ
* ಚಿನ್ನ ಖರೀದಿ ಚೀಟಿ ಪಡೆಯಿರಿ. ಇದರಿಂದ ಏನೇ ದೂರಿದ್ದರು ಇದರ ಮೂಲಕ ಬಿಐಎಸ್ ಸಹಾಯ ಮಾಡುತ್ತದೆ.
* ಚಿನ್ನದ ಆಭರಣಗಳ ಮೇಲೆ ಹಾಲ್‌ಮಾರ್ಕ್ ಶುಲ್ಕ ಕೇವಲ 25 ರುಪಾಯಿ. KDM ಆಭರಣಗಳು ಹಾಲ್‌ಮಾರ್ಕ್ ಮಾಡಿದ ಆಭರಣವಲ್ಲ, ಆದ್ದರಿಂದ KDM ಚಿನ್ನದ ಶುದ್ಧತೆಯನ್ನು ಖಚಿತವಾಗಿ ತಿಳಿಸುವುದಿಲ್ಲ.
More From GoodReturns

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications