ಪಿಂಚಣಿದಾರರು ಪ್ರತಿ ವರ್ಷ ತಮ್ಮ ಇರುವಿಕೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಜೀವನ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡಬೇಕು. ಈ ಹಿಂದೆ ಪಿಂಚಣಿದಾರರೇ ಪಿಂಚಣಿ ವಿತರಣೆ ಮಾಡುವ ಸಂಸ್ಥೆಗಳಾದ ಬ್ಯಾಂಕ್ ಅಥವಾ ಅಂಚೆಕಚೇರಿಗೆ ಭೇಟಿ ನೀಡಿ ತಾವು ಜೀವಂತವಾಗಿರುವುದನ್ನು ಖಾತರಿಪಡಿಸಬೇಕಾಗಿತ್ತು. ಆದರೆ ಈಗ ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು. ಅದರ ವ್ಯಾಲಿಡಿಟಿ ಹೇಗೆ ಚೆಕ್ ಮಾಡುವುದು ಗೊತ್ತಾ?
ನೀವು ಜೀವನ ಪ್ರಮಾಣಪತ್ರವನ್ನು ಸಲ್ಲಿಸದಿದ್ದರೆ ನಿಮಗೆ ಪಿಂಚಣಿ ಸ್ಥಗಿತವಾಗಲಿದೆ. ಜೀವನ ಪ್ರಮಾಣಪತ್ರವನ್ನು ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕವೂ ಸಲ್ಲಿಸಬಹುದು. ನೀವು ಬ್ಯಾಂಕ್ ವೆಬ್‌ಸೈಟ್‌ಗೆ ಭೇಟಿ ನೀಡಿ ಜೀವನ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡಬಹುದು.
ಆದರೆ ನೀವು ಈಗಾಗಲೇ ಸಲ್ಲಿಸಿರುವ ಜೀವನ ಪ್ರಮಾಣಪತ್ರದ ವ್ಯಾಲಿಡಿಟಿ ನಿಮಗೆ ಗೊತ್ತಿಲ್ಲದಿದ್ದರೆ ಏನು ಮಾಡುವುದು?, ಅದನ್ನು ನೀವು ಚೆಕ್ ಮಾಡಲು ಸಾಧ್ಯವಾಗಲಿದೆ. ಹೇಗೆ ಎಂದು ನಾವಿಲ್ಲಿ ವಿವರಿಸಿದ್ದೇವೆ. ಮುಂದೆ ಓದಿ...

ವ್ಯಾಲಿಡಿಟಿ ಚೆಕ್ ಮಾಡುವುದು ಹೇಗೆ?
ಡಿಜಿಟಲ್ ಜೀವನ ಪ್ರಮಾಣಪತ್ರದಲ್ಲಿ ಬಯೋಮೆಟ್ರಿಕ್, ಇತರೆ ಮಾಹಿತಿ ಇರುತ್ತದೆ. ಐಟಿ ಕಾಯ್ದೆಯಡಿಯಲ್ಲಿ ಈ ಡಿಜಿಟಲ್ ಜೀವನ ಪ್ರಮಾಣಪತ್ರ ಬರುತ್ತದೆ. ಪಿಂಚಣಿದಾರರು ಜೀವಂತವಾಗಿದ್ದಾರೆ ಎಂಬುವುದಕ್ಕೆ ಇದು ಸಾಕ್ಷಿಯಾಗಿದೆ. ಜೀವನ ಪ್ರಮಾಣಪತ್ರ ಜೀವನ ಪೂರ್ತಿ ವ್ಯಾಲಿಡಿಟಿಯನ್ನು ಹೊಂದಿರುವುದಿಲ್ಲ. ಜೀವನ ಪ್ರಮಾಣಪತ್ರ ಒಂದು ವರ್ಷ ಕಾಲ ವ್ಯಾಲಿಡಿಟಿ ಹೊಂದಿರುತ್ತದೆ. ನೀವು ಜೀವನ ಪ್ರಮಾಣಪತ್ರದ ಸ್ಟೇಟಸ್ ಚೆಕ್ ಮಾಡುವ ಮೂಲಕ ಜೀವನ ಪ್ರಮಾಣಪತ್ರದ ವ್ಯಾಲಿಡಿಟಿ ತಿಳಿಯಬಹುದು.
ಜೀವನ ಪ್ರಮಾಣಪತ್ರ ಪಡೆಯುವುದು ಹೇಗೆ?
ಹಂತ 1: https://jeevanpramaan.gov.in ಗೆ ಭೇಟಿ ನೀಡಿ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ
ಹಂತ 2: ಇಮೇಲ್ ಐಡಿ, ಕ್ಯಾಪ್ಚಾ ನಮೂದಿಸಿ, ಡೌನ್‌ಲೋಡ್ ಮಾಡಿಕೊಳ್ಳಿ
ಹಂತ 3: ಇಮೇಲ್‌ಗೆ ಬಂದ ಒಟಿಪಿಯನ್ನು ನಮೂದಿಸಿ
ಹಂತ 4: ಒಟಿಪಿ ನಮೂದಿಸಿದ ಬಳಿಕ ಡೌನ್‌ಲೋಡ್ ಮೊಬೈಲ್ ಆಪ್ ಮೇಲೆ ಕ್ಲಿಕ್ ಮಾಡಬೇಕು
ಹಂತ 5: ಇಮೇಲ್‌ನಲ್ಲಿ ನೀಡಲಾಗಿರುವ ಲಿಂಕ್ ಕ್ಲಿಕ್ ಮಾಡುವ ಮೂಲಕ ಆಪ್ ಡೌನ್‌ಲೋಡ್ ಮಾಡಿ ಪ್ರಮಾಣಪತ್ರ ಪಡೆಯಬಹುದು.


Click it and Unblock the Notifications