ಒಂದು ವೇಳೆ ನಿಮ್ಮ ಬಳಿ ರುಪೇ ಡೆಬಿಟ್ ಕಾರ್ಡ್ ಇದ್ದಲ್ಲಿ ನೀವು ಉಚಿತ ಅಪಘಾತ ವಿಮಾ ಸುರಕ್ಷೆ ಪಡೆಯಬಹುದು. ರುಪೇ ಡೆಬಿಟ್ ಕಾರ್ಡ್ ಮೇಲೆ ಸಿಗುವ ಈ ಉಚಿತ ವಿಮಾ ಯೋಜನೆಯ ಬಗ್ಗೆ ಬಹಳ ಜನಕ್ಕೆ ಈವರೆಗೂ ಗೊತ್ತಿಲ್ಲ. ರುಪೇ ಡೆಬಿಟ್ ಕಾರ್ಡ್ ಇದ್ದರೆ ಸಾಕು, ಈ ಅಪಘಾತ ವಿಮೆ ಸೌಲಭ್ಯಕ್ಕೆ ನೀವು ಅರ್ಹರಾಗಬಹುದು.
ಇದು ಜೀವವಿಮೆ, ಆರೋಗ್ಯ ವಿಮೆ ಅಥವಾ ವೈದ್ಯಕೀಯ ವಿಮೆ ಅಲ್ಲ ಎಂಬುದು ಗೊತ್ತಿರಲಿ. ಇದೇನಿದ್ದರೂ ಕೇವಲ ಅಪಘಾತ ವಿಮೆ ಮಾತ್ರ. ಡೆಬಿಟ್ ಕಾರ್ಡ್ ಹೊಂದಿದವರು ಅಪಘಾತಕ್ಕೆ ಈಡಾದಾಗ ಅವರಿಗೆ ಶಾಶ್ವತ ಅಂಗವೈಕಲ್ಯ ಉಂಟಾದಲ್ಲಿ ಅಥವಾ ಅವರು ಮೃತಪಟ್ಟಲ್ಲಿ ಮಾತ್ರ ಕೆಲವೊಂದು ನಿರ್ದಿಷ್ಟ ನಿಯಮಗಳನ್ವಯ ಅಪಘಾತ ವಿಮಾ ಸೌಲಭ್ಯ ಪಡೆಯಬಹುದು.
ರುಪೇ ಕಾರ್ಡ್ ವಿಧಗಳು, ವಿಮಾ ನೀಡುವ ಕಂಪನಿಗಳು, ಕ್ಲೇಮ್ ಮಾಡುವ ವಿಧಾನ, ಬೇಕಾದ ದಾಖಲೆಗಳು ಮತ್ತು ಇತರ ವಿಷಯಗಳ ಬಗ್ಗೆ ನಾವಿಲ್ಲಿ ನಿಮಗಾಗಿ ತಿಳಿಸುತ್ತಿದ್ದೇವೆ. ಆದಾಗ್ಯೂ ಈ ವಿಷಯದ ಬಗ್ಗೆ ಇಲ್ಲಿ ತಿಳಿಸಿದ್ದಕ್ಕಿಂತ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸಂಬಂಧಿಸಿದ ಬ್ಯಾಂಕ್‌ನೊಂದಿಗೆ ಸಂಪರ್ಕಿಸುವುದು ಸೂಕ್ತ.
ರುಪೇ ಕಾರ್ಡ್ ವಿಮಾ ಸೌಲಭ್ಯ
ಪ್ರೀಮಿಯಂ ಅಲ್ಲದ ರುಪೇ ಕಾರ್ಡಿಗೆ ನ್ಯೂ ಇಂಡಿಯಾ ಅಶುರೆನ್ಸ್ ಕಂಪನಿಯಿಂದ ಹಾಗೂ ಪ್ರೀಮಿಯಂ ಕಾರ್ಡಿಗೆ ಟಾಟಾ ಎಐಜಿ ಕಂಪನಿಯಿಂದ ವಿಮಾ ಸೌಲಭ್ಯ ನೀಡಲಾಗುತ್ತಿದೆ.
ಕಾರ್ಡ್ ವಿಧಗಳು
ಮಾರುಕಟ್ಟೆಯಲ್ಲಿ ರುಪೇ ಪ್ರೀಮಿಯಂ ಹಾಗೂ ನಾನ್-ಪ್ರೀಮಿಯಂ ಹೀಗೆ ಎರಡು ವಿಧದ ಕಾರ್ಡುಗಳು ಚಲಾವಣೆಯಲ್ಲಿವೆ. ಈ ಎರಡು ಮಾದರಿಯ ಕಾರ್ಡ್ಗಳನ್ನು ಮತ್ತೆ ಉಪಮಾದರಿಗಳಾಗಿ ವಿಂಗಡಿಸಲಾಗಿದೆ. ಕಾರ್ಡ್ ಮಾದರಿಯನ್ನು ಅವಲಂಬಿಸಿ ವಿಮಾ ಮೊತ್ತ ಬದಲಾಗುತ್ತದೆ ಎಂಬುದು ಗಮನದಲ್ಲಿರಲಿ.
ನಾನ್-ಪ್ರೀಮಿಯಂ ಕ್ಲಾಸಿಕ್ ರುಪೇ ಕಾರ್ಡ್
ಕ್ಲಾಸಿಕ್ ನಾನ್ - ಪ್ರೀಮಿಯಂ ರುಪೇ ಕಾರ್ಡ್ ಮೇಲೆ ಯಾವುದೇ ಉಚಿತ ಅಪಘಾತ ವಿಮಾ ಸೌಲಭ್ಯ ಇರುವುದಿಲ್ಲ.
ಪ್ರಧಾನ ಮಂತ್ರಿ ಜನಧನ್ ಯೋಜನಾ ಕಾರ್ಡ್ (ಹಳೆಯದು): 28-08-2018 ಕ್ಕೂ ಮುಂಚೆ ಪಡೆಯಲಾದ ಈ ಮಾದರಿಯ ಕಾರ್ಡ್ ಹೊಂದಿದ್ದರೆ ನಿಮಗೆ 1 ಲಕ್ಷ ರೂಪಾಯಿಗಳವರೆಗೆ ಅಪಘಾತ ವಿಮಾ ಸುರಕ್ಷತೆ ಪಡೆಯಬಹುದು.
ಪ್ರಧಾನ ಮಂತ್ರಿ ಜನಧನ್ ಯೋಜನಾ ಕಾರ್ಡ್ (ಹೊಸದು): 28-08-2018 ರ ನಂತರ ಪಡೆಯಲಾದ ಈ ಮಾದರಿಯ ಕಾರ್ಡ್ ಹೊಂದಿದ್ದರೆ ನಿಮಗೆ 2 ಲಕ್ಷ ರೂಪಾಯಿಗಳವರೆಗೆ ಅಪಘಾತ ವಿಮಾ ಸುರಕ್ಷತೆ ಪಡೆಯಬಹುದು.
ಕ್ಲೇಮ್ ಸಲ್ಲಿಸುವ ವಿಳಾಸ: ವಿಮೆಯನ್ನು ಕ್ಲೇಮ್ ಮಾಡಬೇಕಾದರೆ ಎಲ್ಲ ದಾಖಲೆಗಳನ್ನು ಈ ಕೆಳಗೆ ನೀಡಲಾದ ನ್ಯೂ ಇಂಡಿಯಾ ಅಶ್ಯುರೆನ್ಸ್ ಕಂಪನಿಯ ವಿಳಾಸಕ್ಕೆ ಕಳುಹಿಸಬೇಕು.
Senior Divisional Manager Department - RuPay Insurance Program The New India Assurance Co. Ltd. DO 142300 1 st Floor, NCL Premises Plot No. C-6, Bandra Kurla Complex Bandra East, Mumbai- 400051
ಪ್ರೀಮಿಯಂ ರುಪೇ ಕಾರ್ಡ್
ಈ ಕಾರ್ಡ್ ಹೊಂದಿದವರಿಗೆ 2 ಲಕ್ಷ ರೂಪಾಯಿಗಳವರೆಗೆ ಉಚಿತ ಅಪಘಾತ ವಿಮಾ ಸೌಲಭ್ಯ ಸಿಗುತ್ತದೆ.
ಸೆಲೆಕ್ಟ್ ರುಪೇ ಕಾರ್ಡ್
ಈ ಕಾರ್ಡ್ ಹೊಂದಿದವರಿಗೆ 10 ಲಕ್ಷ ರೂಪಾಯಿಗಳವರೆಗೆ ಉಚಿತ ಅಪಘಾತ ವಿಮಾ ಸೌಲಭ್ಯ ಸಿಗುತ್ತದೆ.
ಕ್ಲೇಮ್ ಸಲ್ಲಿಸುವ ವಿಳಾಸ: ವಿಮೆಯನ್ನು ಕ್ಲೇಮ್ ಮಾಡಬೇಕಾದರೆ ಎಲ್ಲ ದಾಖಲೆಗಳನ್ನು ಈ ಕೆಳಗೆ ನೀಡಲಾದ ನ್ಯೂ ಇಂಡಿಯಾ ಅಶ್ಯುರೆನ್ಸ್ ಕಂಪನಿಯ ವಿಳಾಸಕ್ಕೆ ಕಳುಹಿಸಬೇಕು.
TATA - AIG General Insurance Co. Ltd A-501, 5th Floor, Bldg No - 4, Infinity Park, Dindoshi, Malad (East) Mumbai- 400097
ಅನ್ವಯಿಸುವ ಷರತ್ತುಗಳು
ರುಪೇ ಡೆಬಿಟ್ ಕಾರ್ಡ್ ಮೇಲೆ ಅಪಘಾತ ವಿಮೆ ಸೌಲಭ್ಯ ಪಡೆಯಲು ನೀವು ಯಾವುದೇ ಪ್ರೀಮಿಯಂ ಕಟ್ಟಬೇಕಿಲ್ಲ. ನೀವು ರುಪೇ ಕಾರ್ಡ್ ಹೊಂದಿರುವವರಾದರೆ ನೀವು ಸ್ವಯಂಚಾಲಿತವಾಗಿ ಉಚಿತ ಅಪಘಾತ ವಿಮೆಗೆ ಅರ್ಹರಾಗಿರುತ್ತೀರಿ (ಕ್ಲಾಸಿಕ್ ಕಾರ್ಡ್ ಹೊರತುಪಡಿಸಿ). ಆದಾಗ್ಯೂ ಈ ರೀತಿಯ ಉಚಿತ ವಿಮಾ ಸೌಲಭ್ಯ ಪಡೆಯಬೇಕಾದರೆ ನೀವು ಕೆಲವೊಂದು ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ. ಒಂದೊಮ್ಮೆ ಅಪಘಾತ ಸಂಭವಿಸಿದಲ್ಲಿ, ಅಪಘಾತ ವಿಮೆ ಕ್ಲೇಮ್ ಮಾಡಬೇಕಾದರೆ ಕಾರ್ಡ್ ಧಾರಕನು ತನ್ನ ಕಾರ್ಡನ್ನು ಅಪಘಾತಕ್ಕೂ ಹಿಂದಿನ 90 ರಿಂದ 45 ದಿನಗಳ ಮಧ್ಯೆ ಒಮ್ಮೆಯಾದರೂ ವ್ಯವಹಾರಕ್ಕೆ ಬಳಸಿರಬೇಕು. 90 ರಿಂದ 45 ದಿನಗಳ ಮಧ್ಯೆ ಒಮ್ಮೆಯೂ ಕಾರ್ಡನ್ನು ಉಪಯೋಗಿಸಿಲ್ಲವಾದರೆ ವಿಮೆ ಕ್ಲೇಮ್ ಮಾಡಲಾಗದು.
ಕ್ಲೇಮ್ ಸಲ್ಲಿಸುವುದು
1. 2020-21ನೇ ಸಾಲಿನಲ್ಲಿ ಘಟಿಸಿದ ಎಲ್ಲ ಅಪಘಾತ ವಿಮಾ ಕ್ಲೇಮ್‌ಗಳನ್ನು ಈ ಮುಂದೆ ತಿಳಿಸಲಾದ ಇಮೇಲ್ ವಿಳಾಸಕ್ಕೆ ಸಲ್ಲಿಸಬೇಕಾಗುತ್ತದೆ.
ನಾನ್ - ಪ್ರೀಮಿಯಂ ಕಾರ್ಡ್ - rupay@newindia.co.in
ಪ್ರೀಮಿಯಂ ಕಾರ್ಡ್ - rupay@tataaig.com
2. ಕಂಪನಿಗೆ ಕಳುಹಿಸಲಾದ ಇಮೇಲ್ ಪ್ರತಿಯ ಪ್ರಿಂಟ್ ತೆಗೆದು ಅದನ್ನು ನ್ಯೂ ಇಂಡಿಯಾ ಅಶ್ಯುರೆನ್ಸ್ ಕಂಪನಿಯ ವಿಳಾಸಕ್ಕೆ ಹಾಗೂ ಪ್ರೀಮಿಯಂ ಕಾರ್ಡ್ ಆಗಿದ್ದಲ್ಲಿ ಅದನ್ನು ಟಾಟಾ ಎಐಜಿ ಕಚೇರಿ ವಿಳಾಸಕ್ಕೆ ಕಳುಹಿಸಬೇಕು.
3. ಅಪಘಾತ ಸಂಭವಿಸಿದ 90 ದಿನಗಳ ಒಳಗೆ ಕ್ಲೇಮ್ ಸಲ್ಲಿಸಬೇಕು. ಒಂದು ವೇಳೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯೋರ್ವನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದು, ತುಂಬಾ ಚಿಂತಾಜನಕ ಸ್ಥಿತಿಯಲ್ಲಿದ್ದು 90/45 ದಿನಗಳೊಳಗೆ (ಪ್ರೀಮಿಯಂ ಹಾಗೂ ನಾನ್ ಪ್ರೀಮಿಯಂ) ಕ್ಲೇಮ್ ಸಲ್ಲಿಸಲಾಗದಿದ್ದರೆ ಅಂಥ ಸಂದರ್ಭಗಳಲ್ಲಿ ಅವಧಿ ಮೀರಿ ಬರುವ ಕ್ಲೇಮ್ಗಳನ್ನು ಸಹ ಪರಿಶೀಲನೆಗೆ ಸ್ವೀಕರಿಸಲಾಗುತ್ತದೆ. ಆದರೆ ಕ್ಲೇಮ್ ಮಾಡಬೇಕಾದರೆ ಅಗತ್ಯವಾದ ಷರತ್ತುಗಳು ಪೂರೈಸುವಂತಿರಬೇಕು.
ಬೇಕಾದ ದಾಖಲೆಗಳು
1. ನಾಮಿನಿ ಅಥವಾ ಕಾರ್ಡ್ ಧಾರಕನ ಆಧಾರ್ ಸಂಖ್ಯೆ
2. ಮರಣ ಸಂಭವಿಸಿದ್ದಲ್ಲಿ ಪೋಸ್ಟ್ ಮಾರ್ಟಮ್ ವರದಿ ಅಥವಾ ಮರಣ ಪ್ರಮಾಣ ಪತ್ರ
3. ಡಿಸ್ಚಾರ್ಜ್ ರಿಪೋರ್ಟ್
4. 90/45 ದಿನಗಳ ಮಧ್ಯೆ ವ್ಯವಹಾರ ನಡೆಸಿರುವ ದಾಖಲೆ
5. ಎಫ್ಐಆರ್ ಪ್ರತಿ
6. ರುಪೇ ಕಾರ್ಡ್ ಸಂಖ್ಯೆ
7. ಬ್ಯಾಂಕ್ ಡಿಕ್ಲೆರೇಶನ್
ಕ್ಲೇಮ್ ಪರಿಹಾರ ವಿಧಾನ
ಬಾಕಿ ಇರುವ ಕ್ಲೇಮ್‌ಗಳ ಬಗ್ಗೆ ಆಯಾ ವಿಮಾ ಕಂಪನಿಯು ಸಂಬಂಧಿಸಿದ ಬ್ಯಾಂಕಿಗೆ ಸೂಕ್ತ ಸಂದರ್ಭಗಳಲ್ಲಿ ಸುತ್ತೋಲೆಗಳನ್ನು ಕಳುಹಿಸುತ್ತಿರುತ್ತದೆ. ಕಾಗದದ ರೂಪದಲ್ಲಿ ಪತ್ರ ಅಥವಾ ಇಮೇಲ್ ಅನ್ನು ಕಳುಹಿಸಲಾಗುತ್ತದೆ. ಕ್ಲೇಮ್ ಸೆಟ್ಲಮೆಂಟ್ ಗೆ ಸಂಬಂಧಿಸಿದ ಎಲ್ಲ ಫಾಲೋ ಅಪ್ ಇಮೇಲ್‌ಗಳನ್ನು ಎನ್ಪಿಸಿಐ ಇನ್ಸೂರೆನ್ಸ್ ಮೇಲ್ ಐಡಿ rupayinsurance@npci.org.in ಗೆ ಸಹ ಕಳುಹಿಸಬೇಕು.
ಯಾವುದೇ ದಾಖಲೆಗಳ ಕೊರತೆ ಇದ್ದಲ್ಲಿ, ಇದೇ ವಿಧಾನದಲ್ಲಿ ಅದರ ಬಗ್ಗೆ ಮಾಹಿತಿ ನೀಡಲಾಗುವುದು.
ಮೊದಲ ರಿಮೈಂಡರ್ : T + 61
ಎರಡನೇ ರಿಮೈಂಡರ್ : T + 81
ಅಂತಿಮ ರಿಮೈಂಡರ್ : T + 90
ಗಮನಿಸಿ: T ಎಂಬುದು ಇಂಟಿಮೇಶನ್ ಸಲ್ಲಿಸಿದ ದಿನಾಂಕವಾಗಿರುತ್ತದೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications