For Quick Alerts
ALLOW NOTIFICATIONS  
For Daily Alerts

36 ತಿಂಗಳಲ್ಲಿ 1 ಕೋಟಿ ಗಳಿಸುವುದು ಹೇಗೆ ಗೊತ್ತಾ? ಇಲ್ಲಿವೆ ನಾಲ್ಕು ಅದ್ಭುತ ದಾರಿ

By ಶ್ರೀಸಾಗರ್
|

ಕಾಸು ಮಾಡೋದು ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ. ಹಗಲು-ರಾತ್ರಿ ಅದಕ್ಕಾಗಿ ಜನರು ಎದ್ದು-ಬಿದ್ದು ಬದುಕಿನ ಬಂಡಿ ಸಾಗಿಸಲು ಶ್ರಮ ಪಡುತ್ತಾರೆ. ಎಷ್ಟೇ ದುಡಿದರೂ ಲೈಫ್ ಸ್ಟೈಲ್ ಚೇಂಜ್ ಆಗುತ್ತಿಲ್ಲ. ಅದೇ ಮನೆ, ಅದೇ ಕೆಲಸ, ತಿಂಗಳ ಕೊನೆಯಲ್ಲಿ ಮತ್ತದೇ ಖಾಲಿ ಜೇಬು. ಇದಕ್ಕೇನಪ್ಪಾ ಪರಿಹಾರ ಅಂತಾ ಯೋಚಿಸಿ ಯೋಚಿಸಿ ಸುಸ್ತ್ ಆಗಿದ್ದೀರಾ, ನಿಮ್ಮ ಬದುಕಿನ ಪರಿಯನ್ನೇ ಬದಲಾಯಿಸುವ ಐಡಿಯಾವನ್ನು ನಾವು ಕೊಡುತ್ತೀವಿ ನೋಡಿ.

ಅಸಲಿಗೆ ಈ ಸ್ಟೋರಿಯ ಹೆಡ್ಡಿಂಗ್ ನೋಡಿದ್ದೀರಿ ಅಲ್ಲವಾ? ಈ ಹೆಡ್ಡಿಂಗ್ ನೋಡಿದ ತಕ್ಷಣ ತಲೆಯೊಳಗೊಂದು ಬಲ್ಬ್ ಹೊತ್ತಿದಂತೆ ಆಗುತ್ತದೆ ಅಲ್ಲವಾ? ಆದರೆ ಇದು ಅಂದುಕೊಂಡಷ್ಟು ಸಲೀಸಾ? ಅದನ್ನೇ ಈ ಲೇಖನದಲ್ಲಿ ನೀವು ಓದಲಿದ್ದೀರಿ. ಆದರೆ ನಿಮಗೆ ಮೊದಲು ಗೊತ್ತಾಗಬೇಕಾದದ್ದು ಏನೆಂದರೆ, 36 ತಿಂಗಳು ಅಂದರೆ, 3 ವರ್ಷ. ಮೂರು ವರ್ಷಕ್ಕೆ 1195 ದಿನ. ಒಂದು ಕೋಟಿ ಉಳಿಸುವುದಕ್ಕೆ ನಿಮ್ಮ ಬಳಿ 1195 ದಿನ ಇದೆ.

 

ಅಲ್ಲಿಗೆ ಒಂದು ದಿನಕ್ಕೆ 8,369 ರುಪಾಯಿಯನ್ನು ನೀವು ಉಳಿಸಬೇಕಾಗುತ್ತದೆ. ಈಗ ಗುರಿ ಹೆಚ್ಚು ಸ್ಪಷ್ಟವಾಗಿದೆ ಅಂದುಕೊಳ್ಳೋಣ. ನೀವು ಯಾವುದೋ ಉದ್ಯೋಗ ಮಾಡುತ್ತಿದ್ದಲ್ಲಿ ತಿಂಗಳಿಗೆ ಲಕ್ಷ ರುಪಾಯಿ ಸಂಬಳ ಬರುತ್ತಿದ್ದಲ್ಲಿ ಪೂರ್ತಿಯಾಗಿ ಆ ಮೊತ್ತವನ್ನು ಉಳಿಸಿದರಷ್ಟೇ ಮೂರು ವರ್ಷದಲ್ಲಿ ಒಂದು ಕೋಟಿ ಉಳಿತಾಯ ಸಾಧ್ಯ. ಅಯ್ಯೋ, ನಮಗೆಲ್ಲಿ ಅಷ್ಟೊಂದು ಸಂಬಳ ಬರುತ್ತದೆ ಅಂತೀರಾ?

ಅದಕ್ಕೆ ಹೇಳಿದ್ದು, ಸಂಬಳದ ಕೆಲಸಕ್ಕಿಂತ ಸ್ವಂತ ವ್ಯಾಪಾರ ಅಥವಾ ವೃತ್ತಿ ಇದಕ್ಕೆ ಸೂಕ್ತವಾದದ್ದು. ಅಂಥ ನಾಲ್ಕು ಆಯ್ಕೆಗಳನ್ನು ಇಲ್ಲಿ ನೀಡಲಾಗುತ್ತಿದೆ. ಇಲ್ಲಿ ಅಪಾಯವೂ ಇದೆ. ಅದೇ ರೀತಿ ರಿಟರ್ನ್ಸ್ ಕೂಡ ಇದೆ.

ಷೇರು ಮಾರುಕಟ್ಟೆ

ಷೇರು ಮಾರುಕಟ್ಟೆ

ನಿಮಗೆ ಒಂದು ಉದಾಹರಣೆ ನೀಡಬೇಕು ಅಂದರೆ, ಕಳೆದ ವರ್ಷದ ಅಕ್ಟೋಬರ್ ನಲ್ಲಿ ಐಆರ್ ಸಿಟಿಸಿ ಷೇರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಪ್ರತಿ ಷೇರಿನ ಬೆಲೆ 320 ರುಪಾಯಿ. ಆ ಷೇರಿನ ಬೆಲೆ ಫೆಬ್ರವರಿ ಮೊದಲ ವಾರದಲ್ಲಿ 1500 ರುಪಾಯಿ ದಾಟಿದೆ. ಇದೇ ಷೇರು ಕೇವಲ ಏಳು ಟ್ರೇಡಿಂಗ್ ಸೆಷನ್ ನಲ್ಲಿ 76 ಪರ್ಸೆಂಟ್ ಏರಿಕೆ ಕಂಡಿದೆ. ಒಂದೇ ದಿನದಲ್ಲಿ ಐದು, ಏಳು, ಇಪ್ಪತ್ತು ಪರ್ಸೆಂಟ್ ನಷ್ಟು ಏರಿಕೆ ಕಾಣುವ ಷೇರುಗಳ ಉದಾಹರಣೆ ಸಹ ಇದೆ. ಆದರೆ ಇದಕ್ಕೆ ಬೇಕಾದದ್ದು ಸರಿಯಾದ ಲೆಕ್ಕಾಚಾರ. ನಿರ್ಧಾರವನ್ನು ಸೂಕ್ತವಾಗಿ ತೆಗೆದುಕೊಂಡು, ಯಾವ ಷೇರುಗಳ ಮೇಲೆ ಯಾವ ಸಮಯಕ್ಕೆ ಹಣ ಹೂಡಿಕೆ ಮಾಡಬೇಕು ಎಂಬುದನ್ನು ತಿಳಿದುಕೊಂಡಿರಬೇಕು. ಷೇರು ದಲ್ಲಾಳಿಗಳು, ಸಲಹೆಯ ಸೇವೆ ಒದಗಿಸುವವರ ನೆರವು ಪಡೆದು ಮುಂದುವರಿದಲ್ಲಿ ಒಂದು ದಿನಕ್ಕೆ 9 ಸಾವಿರ ರುಪಾಯಿ ಗಳಿಸುವುದು ಕಷ್ಟವೇನಲ್ಲ. ಇನ್ನೊಂದು ವಿಚಾರ ನೆನಪಿಡಿ, ಷೇರು ಮಾರುಕಟ್ಟೆ ಮೇಲೇರಿದರೆ ಮಾತ್ರ ಅಲ್ಲ, ಬಿದ್ದಾಗಲೂ ಹಣ ಮಾಡುವ ದಾರಿ ಇದೆ. ಅದನ್ನು ತಿಳಿದುಕೊಳ್ಳುವುದು ಮುಖ್ಯ.

ರಿಯಲ್ ಎಸ್ಟೇಟ್
 

ರಿಯಲ್ ಎಸ್ಟೇಟ್

ಅದೇನೇ ಮಾರ್ಕೆಟ್ ಡೌನ್ ಅಂದರೂ ರಿಯಲ್ ಎಸ್ಟೇಟ್ ಉಸಿರಾಡುತ್ತಲೇ ಇರುತ್ತದೆ. ಒಂದು ಮನೆಯನ್ನು ಬಾಡಿಗೆಗೆ ಕೊಡಿಸಿದರೂ ಒಂದು ತಿಂಗಳ ಬಾಡಿಗೆಯನ್ನು ಬ್ರೋಕರೇಜ್ ಪಡೆಯುತ್ತಾರೆ. ಇನ್ನು ಸೈಟು- ಮನೆಗಳನ್ನು ಮಾರಾಟ ಮಾಡುವವರು 2 ಪರ್ಸೆಂಟ್ ಪಡೆಯುತ್ತಾರೆ. ಅಂದರೆ ಎರಡು ಕೋಟಿಯ ಮೌಲ್ಯದ ಆಸ್ತಿಯನ್ನು ಮಾರಾಟ ಮಾಡಿಸಿದರೆ 4 ಲಕ್ಷ ರುಪಾಯಿ ಬ್ರೋಕರೇಜ್ ದೊರೆಯುತ್ತದೆ. ಇನ್ನು ಎಕರೆಗಟ್ಟಲೆ ಜಮೀನು ಮಾರಾಟ ಮಾಡಿಸಿದರೆ ನೂರಾರು ಕೋಟಿ ವ್ಯಾಪಾರ ಆಗಿರುತ್ತದೆ. ಇಂಥ ಕಡೆ ಒಬ್ಬರಿಗಿಂತ ಹೆಚ್ಚು ಬ್ರೋಕರ್ ಗಳು ಇರುತ್ತಾರೆ. ಆದರೆ ಎಲ್ಲರಿಗೂ ಬ್ರೋಕರೇಜ್ ದೊರೆಯುತ್ತದೆ. ಈ ಬಿಜಿನೆಸ್ ಗೆ ಕಾಂಟ್ಯಾಕ್ಟ್ ಬಹಳ ಚೆನ್ನಾಗಿರಬೇಕು. ಪ್ರಾಥಮಿಕ ಜ್ಞಾನ, ಧೈರ್ಯ, ಮಾತಿನ ಕೌಶಲ ಇರಬೇಕು.

ಜೀವನದಲ್ಲಿ ಸಿಕ್ಕಾಪಟ್ಟೆ ದುಡ್ಡು ಮಾಡಬೇಕು ಅಂತಿರಾ? ಈ 10 ಸಂಗತಿ ಮರಿಬೇಡಿ..

ಆನ್ ಲೈನ್ ಟ್ಯುಟೋರಿಯಲ್

ಆನ್ ಲೈನ್ ಟ್ಯುಟೋರಿಯಲ್

ನಿಮಗೆ ಕೆಲವು ನಿರ್ದಿಷ್ಟ ವಿಷಯದ ಬಗ್ಗೆ ಅದ್ಭುತವಾದ ಜ್ಞಾನ ಇದ್ದಲ್ಲಿ ಆನ್ ಲೈನ್ ಟ್ಯುಟೋರಿಯಲ್ ನಲ್ಲಿ ದಿನದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಸಿಕ್ಕಾಪಟ್ಟೆ ಹಣ ಗಳಿಸಬಹುದು. ಇಂಗ್ಲಿಷ್, ಕಂಪ್ಯೂಟರ್ ಸೈನ್ಸ್, ಭಾಷೆ, ಗಣಿತ, ಸಂಗೀತ, ವಿಜ್ಞಾನ, ಪರೀಕ್ಷೆ ಸಿದ್ಧತೆ ಬಗ್ಗೆ ಹೀಗೆ ನಾನಾ ವಿಷಯಗಳನ್ನು ಆನ್ ಲೈನ್ ಮೂಲಕ ಕಲಿಸಬಹುದು. ಇದಕ್ಕೆ ಪ್ರತಿ ಗಂಟೆಗೆ 30ರಿಂದ 60 ಡಾಲರ್ ತನಕ ಸಂಪಾದಿಸಬಹುದು. ನಿಮ್ಮ ಜ್ಞಾನವು ನಿಮಗಾಗಿ ಹಣ ಸಂಪಾದಿಸುತ್ತದೆ. ಹೀಗೆ ಒಂದು ದಿನದಲ್ಲಿ ಮೂರರಿಂದ ನಾಲ್ಕು ಗಂಟೆ ಇಟ್ಟಲ್ಲಿ ಎಷ್ಟು ಹಣ ಗಳಿಸಬಹುದು ಎಂಬುದನ್ನು ಆಲೋಚಿಸಿ.

ಭಾಷಾಂತರದಲ್ಲೂ ವಿಫುಲ ಅವಕಾಶ

ಭಾಷಾಂತರದಲ್ಲೂ ವಿಫುಲ ಅವಕಾಶ

ನಿಮಗೆ ಇಂಗ್ಲಿಷ್ ಸೇರಿದಂತೆ ಎರಡು- ಮೂರು ವಿದೇಶಿ ಭಾಷೆಗಳ ಮೇಲೆ ಹಿಡಿತ ಇದೆಯಾ? ಅಥವಾ ಇದಕ್ಕಾಗಿ ಸಮಯ ಮೀಸಲಿಟ್ಟು ಕಲಿತಲ್ಲಿ ಆ ಮೂಲಕ ಒಳ್ಳೆ ಹಣ ಸಂಪಾದನೆ ಮಾಡುವ ಅವಕಾಶ ಇದೆ. ಏಕೆಂದರೆ, ಭಾಷಾಂತರಕ್ಕೆ ಬಹಳ ಅವಕಾಶಗಳಿದ್ದು, ಕಾನೂನು, ವಿಜ್ಞಾನ ಸೇರಿದಂತೆ ವಿವಿಧ ವಿಷಯಗಳ ಭಾಷಾಂತರ ಮಾಡುವವರಿಗೆ ಭಾರೀ ಬೇಡಿಕೆ ಇದ್ದು, ಒಳ್ಳೆ ಹಣ ಕೂಡ ಗಳಿಸಬಹುದು. ವಿಷಯ ಎಷ್ಟು ಕಠಿಣವಾದರೆ ಅಷ್ಟು ದೊಡ್ಡ ಮೊತ್ತದ ಹಣ ಸಿಗುತ್ತದೆ. ಉಳಿದ ಕೆಲಸ ಮಾಡಿಕೊಂಡು, ಈ ಭಾಷಾಂತರವನ್ನೂ ಮಾಡಬಹುದು.

English summary

How To Earn 1 Crore In 3 Years?

How to earn 1 crore rupees in 3 years with these 4 ways? Here is an explainer.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more