ಪ್ರಸ್ತುತ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಇಲ್ಲದೆ ಯಾವುದೇ ಹಣಕಾಸು ವಹಿವಾಟು ನಡೆಸಲು ಸಾಧ್ಯ ಆಗುವುದಿಲ್ಲ. ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಹಾಗೂ ಆಧಾರ್ ಕಾರ್ಡ್ ಎಲ್ಲ ಹಣಕಾಸು ವಹಿವಾಟಿಗೆ ಅತೀ ಮುಖ್ಯವಾದ ದಾಖಲೆಯಾಗಿದೆ. ಸಾಮಾನ್ಯವಾಗಿ ಈ ಎರಡೂ ಪ್ರಮುಖ ದಾಖಲೆಗಳು ಬ್ಯಾಂಕ್‌ನೊಂದಿಗೆ ಲಿಂಕ್ ಆಗಿರುತ್ತದೆ.
ಹಾಗೆಯೇ ನಮ್ಮ ವಾಹನದ ದಾಖಲೆ, ವಿಮಾ ಪಾಲಿಸಿ ಮೊದಲಾದ ಪ್ರಮುಖ ದಾಖಲೆಗಳಿಗೆ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಲಾಗಿರುತ್ತದೆ. ಆಧಾರ್ ಕಾರ್ಡ್‌ನಲ್ಲಿ ವ್ಯಕ್ತಿಯ ಹೆಸರು, ಜನನ ದಿನಾಂಕ, ವರ್ಷ, ಲಿಂಗ, ವಿಳಾಸ, ಛಾಯಾಚಿತ್ರ ಇರುತ್ತದೆ.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಮೊಬೈಲ್ ಸಂಖ್ಯೆಯನ್ನು ಹೊಂದಿಲ್ಲದಿದ್ದರೂ ಅಧಿಕೃತ ವೆಬ್‌ಸೈಟ್ ಮೂಲಕ ಆಧಾರ್ ಕಾರ್ಡ್ ಅನ್ನು ಪಡೆಯಲು ಸಾಧ್ಯವಾಗಲಿದೆ. ಅದು ಕೂಡಾ ಸರಳವಾಗಿದೆ.
ಇನ್ನು ಆದಾಯ ತೆರಿಗೆ ಇಲಾಖೆಯು ನಮ್ಮ ಹಣಕಾಸು ವಹಿವಾಟಿನ ಬಗ್ಗೆ ತಿಳಿಯಲು ಪ್ಯಾನ್ ಕಾರ್ಡ್ ಸಹಕಾರಿಯಾಗಿದೆ. ಒಬ್ಬ ವ್ಯಕ್ತಿಯ ಅಥವಾ ಒಂದು ಸಂಸ್ಥೆಯ ವಹಿವಾಟಿನ ಬಗ್ಗೆ ತಿಳಿಯಲು ಪ್ಯಾನ್ ಅತೀ ಮುಖ್ಯವಾಗಿದೆ. ತೆರಿಗೆ ವಂಚನೆಯನ್ನು ತಪ್ಪಿಸಲು ಕೂಡಾ ಇದು ಸಹಕಾರಿಯಾಗಿದೆ.
ಆಧಾರ್ ಪ್ಯಾನ್ ಕಾರ್ಡ್ ಲಿಂಕ್ ಕಡ್ಡಾಯ
ಆದಾಯ ತೆರಿಗೆ ಇಲಾಖೆಯ ಪ್ರಕಾರ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಲಿಂಕ್ ಮಾಡದಿದ್ದರೆ ಹೂಡಿಕೆ, ಕಡಿತ ಹಾಗೂ ಟಿಡಿಎಸ್ ವಿಚಾರದಲ್ಲಿ ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ. ಆದರೆ ಇನ್ನು ಕೆಲವರಿಗೆ ನಮ್ಮ ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲಾಗಿದೆಯೇ ಎಂಬ ಬಗ್ಗೆ ಗೊಂದಲವಿದೆ. ಇಂತಹ ಸಂದರ್ಭದಲ್ಲಿ ನಮ್ಮ ಪ್ಯಾನ್-ಆಧಾರ್ ಲಿಂಕ್ ಆಗಿದೆಯೇ ಎಂದು ಸ್ಪಷ್ಟಪಡಿಸುವುದು ಹೇಗೆ?, ಈ ಬಗ್ಗೆ ಮಾಹಿತಿ ಮುಂದೆ ಓದಿ...
ಪ್ಯಾನ್ ಆಧಾರ್ ಲಿಂಕ್ ಆಗಿದೆಯೇ ಎಂದು ಹೀಗೆ ನೋಡಿ
ಹಂತ 1: incometaxindiaefiling.gov.in/aadhaarstatus ಗೆ ಭೇಟಿ ನೀಡಿ
ಹಂತ 2: ಪ್ಯಾನ್, ಆಧಾರ್ ಅಥವಾ ಇತರೆ ಯೂಸರ್ ಐಡಿ ಹಾಕಿ ಲಾಗಿನ್ ಆಗಿ
ಹಂತ 3: ಆಧಾರ್ ಸಂಖ್ಯೆಯನ್ನು ಉಲ್ಲೇಖ ಮಾಡಿ
ಹಂತ 4: ನಿಮ್ಮ ಪ್ಯಾನ್ ಸಂಖ್ಯೆಯನ್ನು ಉಲ್ಲೇಖ ಮಾಡಿ
ಹಂತ 5: View Link Aadhaar Status ಮೇಲೆ ಕ್ಲಿಕ್ ಮಾಡಿ
ಹಂತ 6: ನಿಮ್ಮ ಆಧಾರ್ ಪ್ಯಾನ್ ಲಿಂಕ್ ಆಗಿದೆಯೇ ಎಂಬುವುದು ಸ್ಕ್ರೀನ್ ಮೇಲೆ ತೋರಿಸಲಿದೆ
ಎಸ್‌ಎಂಎಸ್ ಮೂಲಕ ಆಧಾರ್ ಪ್ಯಾನ್ ಲಿಂಕ್ ಮಾಡುವುದು ಹೇಗೆ?
ತಮ್ಮ ಆಧಾರ್ ಸಂಖ್ಯೆಯನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡಲು ಬಯಸುವ ತೆರಿಗೆದಾರರು ಈ ಕೆಳಗಿನಂತೆ 567678 ಅಥವಾ 56161 ಗೆ ಎಸ್‌ಎಂಎಸ್ ಕಳುಹಿಸಬೇಕಾಗುತ್ತದೆ.
567678 ಅಥವಾ 56161 ಗೆ ಎಸ್‌ಎಂಎಸ್ ಕಳುಹಿಸುವ ಉದಾಹರಣೆ:
UIDPAN 111122223333 AAAPA9999Q
ತೆರಿಗೆದಾರರ ಹೆಸರು ಮತ್ತು ಹುಟ್ಟಿದ ದಿನಾಂಕವು ಆಧಾರ್ ಮತ್ತು ಪ್ಯಾನ್‌ಗೆ ಒಂದೇ ಆಗಿದ್ದರೆ ಆಧಾರ್ ಸಂಖ್ಯೆಯನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡಲಾಗುತ್ತದೆ.
ಇ-ಫೈಲಿಂಗ್ ಪೋರ್ಟಲ್ ಅನ್ನು ಬಳಸಿ ಆಧಾರ್-ಪ್ಯಾನ್ ಲಿಂಕ್ ಹೀಗೆ ಮಾಡಿ
ತೆರಿಗೆದಾರನು ತನ್ನ ನೋಂದಾಯಿತ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಅನ್ನು ಬಳಸಿಕೊಂಡು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಾಗಿನ್ ಆಗಬೇಕಾಗುತ್ತದೆ. ಲಾಗಿನ್ ಆದ ನಂತರ, Profile Settings ಕೆಳಗಡೆ link Aadhaar ಆಯ್ಕೆ ಲಭ್ಯವಾಗಲಿದೆ. ಆಧಾರ್ ಹಾಗೂ ಪ್ಯಾನ್ ಎರಡರಲ್ಲೂ ಇದ್ದ ಹೆಸರು, ಹುಟ್ಟಿದ ದಿನಾಂಕ ಒಂದೇ ಆಗಿದ್ದರೆ ಲಿಂಕ್ ಮಾಡಲಾಗುತ್ತದೆ.


Click it and Unblock the Notifications