ಕೆಲವು ವರ್ಷಗಳ ಹಿಂದೆ ನಾವು ಯಾವುದೇ ಹಣಕಾಸು ವಹಿವಾಟನ್ನು ನಡೆಸಬೇಕಾದರೆ ಬ್ಯಾಂಕ್‌ಗೆ ಭೇಟಿ ನೀಡಬೇಕಾಗುತ್ತಿತ್ತು. ಆದರೆ ಕ್ರೆಡಿಟ್ ಕಾರ್ಡ್ ಸಂಪೂರ್ಣ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಬದಲಾವಣೆ ಮಾಡಿದೆ. ಪ್ರಸ್ತುತ ಯುಪಿಐ ಡಿಜಟಲ್ ಬ್ಯಾಂಕಿಂಗ್ ವ್ಯವಸ್ಥೆಗೆ ಒಂದು ಹೊಸ ಮುನ್ನುಡಿಯನ್ನೇ ಬರೆದಿದೆ. ಇನ್ನು ನಾವು ಕ್ರೆಡಿಟ್ ಕಾರ್ಡ್ ವಿಚಾರಕ್ಕೆ ಬಂದಾಗ ಅದರಲ್ಲಿ ಕ್ರೆಡಿಟ್ ಮಿತಿ ಇರುತ್ತದೆ. ಆ ಮಿತಿಯನ್ನು ಮೀರಿ ನಾವು ವಹಿವಾಟು ನಡೆಸಿದರೆ ನಮಗೆ ಬ್ಯಾಂಕು ದಂಡವನ್ನು ವಿಧಿಸುತ್ತದೆ. ಹಲವಾರರು ಬ್ಯಾಂಕುಗಳಲ್ಲಿ ಕ್ರೆಡಿಟ್ ಕಾರ್ಡ್ ಮಿತಿ ಇರುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿಯೂ (ಎಸ್‌ಬಿಐ) ಕ್ರೆಡಿಟ್ ಕಾರ್ಡ್ ಮೊತ್ತಕ್ಕೆ ಮಿತಿಯಿದೆ.
ಎಸ್‌ಬಿಐನಲ್ಲಿ ಪ್ರತಿ ಕಾರ್ಡ್‌ಗೂ ಬೇರೆ ಬೇರೆ ರೀತಿಯ ಕ್ರೆಡಿಟ್ ಕಾರ್ಡ್ ಮಿತಿಯಿದೆ. ಇದು ನಿಮ್ಮ ಅರ್ಹತೆ ಆಧಾರದಲ್ಲಿ ನಿರ್ಧಾರವಾಗುತ್ತದೆ. ಎಸ್‌ಬಿಐನಲ್ಲಿ ಕ್ರೆಡಿಟ್ ಕಾರ್ಡ್‌ದಾರರ ರಿಸ್ಕ್ ಕ್ರೇಟೇರಿಯಾ ಆಧಾರದಲ್ಲಿ ಪ್ರೀ ಅಪ್ರೋವ್ಡ್ (ಪೂರ್ವ ಅನುಮೋದಿತ) ಕ್ರೆಡಿಟ್ ಕಾರ್ಡ್ ಅನ್ನು ಮಿತಿಯನ್ನು ಏರಿಕೆ ಮಾಡುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಕ್ರೆಡಿಟ್ ಕಾರ್ಡ್‌ದಾರರಿಗೆ ಕ್ರೆಡಿಟ್ ಕಾರ್ಡ್ ಮಿತಿ ಏರಿಕೆಯ ಬಗ್ಗೆ ಎಸ್‌ಎಂಎಸ್, ಇಮೇಲ್, ಮಾಸಿಕ ಸ್ಟೇಟ್‌ಮೆಂಟ್ ಮೊದಲಾದವುಗಳ ಮೂಲಕ ಮಾಹಿತಿ ನೀಡುತ್ತದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ಈ ಆಫರ್ ಬರೀ ಅರ್ಹ ಕಾರ್ಡ್‌ದಾರರಿಗೆ ಮಾತ್ರ ಲಭ್ಯವಿರುತ್ತದೆ. ಯಾವುದೇ ಹೆಚ್ಚುವರಿ ದಾಖಲೆಗಳನ್ನು ನೀಡದೆಯೇ ಕ್ರೆಡಿಟ್ ಕಾರ್ಡ್ ಅನ್ನು ನೀವು ಪಡೆಯುವ ಅವಕಾಶವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೀಡುತ್ತದೆ. ಇದು ಮಾತ್ರವಲ್ಲದೆ ನೀವು ಬ್ಯಾಂಕ್‌ಗೆ ಭೇಟಿ ನೀಡಿ ಕ್ರೆಡಿಟ್ ಕಾರ್ಡ್ ಮಿತಿ ಏರಿಕೆಯ ಬಗ್ಗೆ ಮಾಹಿತಿ ಪಡೆಯಬಹುದು. ಹಾಗೆಯೇ ಕ್ರೆಡಿಟ್ ಕಾರ್ಡ್ ಪೂರೈಕೆದಾರರನ್ನು ಭೇಟಿ ಮಾಡಿ ಕ್ರೆಡಿಟ್ ಕಾರ್ಡ್ ಮಿತಿಯನ್ನು ಏರಿಸುವ ಮನವಿಯನ್ನು ಮಾಡಬಹುದು. ಎಲ್ಲ ಅಗತ್ಯ ದಾಖಲೆ ಸಲ್ಲಿಸಿದರೆ, ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ಏರಿಸಲಾಗುತ್ತದೆ.
ಕಾರ್ಡ್ ಮಿತಿ ಏರಿಸಲು ಬೇಕಾದ ದಾಖಲೆಗಳು
ನೀವು ಎಸ್‌ಬಿಐನ ಕ್ರೆಡಿಟ್ ಕಾರ್ಡ್ ಮಿತಿಯನ್ನು ಏರಿಕೆ ಮಾಡಬೇಕಾದರೆ, ಕೆಲವೊಂದು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮಿತಿಯನ್ನು ಏರಿಸಬೇಕಾದರೆ ಈ ಕೆಳಗೆ ಉಲ್ಲೇಖ ಮಾಡಲಾದ ದಾಖಲೆಗಳನ್ನು ನೀವು ಸಲ್ಲಿಸಬೇಕಾಗುತ್ತದೆ.
* ಫಾರ್ಮ್ 16
* ಐಟಿಆರ್ VI (6)
* ವೇತನ ಪಡೆಯುವ ವ್ಯಕ್ತಿ ಎರಡು ತಿಂಗಳಿನ ವೇತನ ಸ್ಲಿಪ್ ಸಲ್ಲಿಸಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೇಗೆ ಏರಿಕೆ ಮಾಡುವುದು ನೋಡಿ
ವೆಬ್‌ಸೈಟ್ ಮೂಲಕ ಕ್ರೆಡಿಟ್ ಕಾರ್ಡ್‌ನ ಕ್ರೆಡಿಟ್ ಮಿತಿ ಏರಿಸುವುದು ಹೇಗೆ?: sbicard.com ಗೆ ಭೇಟಿ ನೀಡಿ, ಸೈನ್‌ಇನ್ ಆಗಿ. ಅದಾದ ಬಳಿಕ 'Offers or Perks' ಅನ್ನು ಆಯ್ಕೆ ಮಾಡಿಕೊಳ್ಳಿ. ನೀವು ಕ್ರೆಡಿಟ್ ಕಾರ್ಡ್ ಮೊತ್ತದ ಮಿತಿ ಏರಿಸುವ ಅರ್ಹತೆಯನ್ನು ಹೊಂದಿದ್ದರೆ, ನಿಮಗೆ ಕ್ರೆಡಿಟ್ ಕಾರ್ಡ್ ಮಿತಿ ಏರಿಸುವ ಅವಕಾಶವಿರುತ್ತದೆ. ಯಾವುದೇ ಕ್ರೆಡಿಟ್ ಮಿತಿ ಹೆಚ್ಚಳದ ಆಫರ್ ಇದೆಯೇ ಎಂದು ನೀವು ಪರಿಶೀಲನೆ ಮಾಡಬಹುದು. ಬಳಿಕ 'Submit' ಬಟನ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ.
ಚಾಟ್‌ಬಾಟ್ ಮೂಲಕ ಕಾರ್ಡ್ ಮಿತಿ ಏರಿಸಿ: ಐಎಲ್‌ಎ ಎಂಬುವುದು ಎಸ್‌ಬಿಐ ಕಾರ್ಡ್‌ಗಳ ಇಂಟರ್ ಆಕ್ಟಿವ್ ಲೈವ್ ಅಸಿಸ್ಟೆಂಟ್ ಆಗಿದೆ. ಈ ಬಾಟ್ ಬ್ಯಾಂಕ್‌ನ ಉತ್ಪನ್ನಗಳು ಮತ್ತು ನವೀಕೃತ ವಿಚಾರಗಳ ಬಗ್ಗೆ ಮಾಹಿತಿ ನೀಡುತ್ತದೆ. ಚಾಟ್‌ಬಾಟ್ ಐಎಲ್‌ಎಗೆ ಜಾಯಿನ್ ಆಗಿ, ನೀವು ಕ್ರೆಡಿಟ್ ಕಾರ್ಡ್ ಮಿತಿ ಸಂಬಂಧಿತ ಪ್ರಶ್ನೆಗಳನ್ನು ಕೇಳಬಹುದು. ಸ್ಕ್ರೀನ್‌ನಲ್ಲಿ ಇರುವ ಸೂಚನೆಯನ್ನು ಅನುಸರಿಸಿದರೆ, ಕ್ರೆಡಿಟ್ ಮಿತಿ ಏರಿಕೆಯಾಗಲಿದೆ.
ಎಸ್‌ಎಂಎಸ್ ಮೂಲಕ ಕ್ರೆಡಿಟ್ ಮಿತಿ ಏರಿಕೆ: 'INCR XXXX' (ಕೊನೆಯ ನಾಲ್ಕು ಡಿಜಿಟ್ ನಿಮ್ಮ ಕ್ರೆಡಿಟ್ ಕಾರ್ಡ್‌ನ ಸಂಖ್ಯೆಯಾಗಿರಲಿದೆ) ಎಂದು ಟೈಪ್ ಮಾಡಿ ನಿಮ್ಮ ರಿಜಿಸ್ಟಾರ್ ಆದ ಮೊಬೈಲ್ ಸಂಖ್ಯೆಯಿಂದ 5676791ಕ್ಕೆ ಎಸ್‌ಎಂಎಸ್ ಕಳುಹಿಸಿ.
ಗ್ರಾಹಕರ ಸಹಾಯವಾಣಿ ಮೂಲಕ ಕ್ರೆಡಿಟ್ ಮಿತಿ ಏರಿಕೆ: ನೀವು ಗ್ರಾಹಕರ ಸಹಾಯವಾಣಿಯ ಮೂಲಕವು ಕ್ರೆಡಿಟ್ ಕಾರ್ಡ್ ಮಿತಿಯನ್ನು ಏರಿಕೆ ಮಾಡಬಹುದು. ಅದಕ್ಕಾಗಿ ನೀವು ಎಸ್‌ಬಿಐ ಕಾರ್ಡ್ ಗ್ರಾಹಕರ ಸಹಾಯವಾಣಿ 39 02 02 02 (ಸ್ಥಳೀಯ ಎಸ್‌ಟಿಡಿ ಕೋಡ್ ನಮೂದಿಸಿ) ಅಥವಾ 1860 180 1290ಕ್ಕೆ ಕರೆ ಮಾಡಿ.
ಇಮೇಲ್ ಮೂಲಕ ಕ್ರೆಡಿಟ್ ಕಾರ್ಡ್ ಮೊತ್ತದ ಮಿತಿ ಏರಿಕೆ ಮಾಡಿ: ನೀವು ಇಮೇಲ್ ಮೂಲಕವು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮಿತಿಯನ್ನು ಏರಿಕೆ ಮಾಡಬಹುದು. ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮಿತಿ ಏರಿಸಲು sbicard.com/emailಗೆ ಇಮೇಲ್ ಮಾಡಿಬಿಡಿ.


Click it and Unblock the Notifications