ಡಿಜಿಟಲ್ ಇಂಡಿಯಾದಲ್ಲಿ ಈಗ ಎಲ್ಲ ಬ್ಯಾಂಕಿಂಗ್ ವ್ಯವಹಾರಗಳು ಸಹ ಡಿಜಿಟಲ್ ಆಗುತ್ತಿವೆ. ಬ್ಯಾಂಕಿನಲ್ಲಿ ಫಿಕ್ಸೆಡ್ ಡಿಪಾಸಿಟ್(ಎಫ್‌ಡಿ) ಖಾತೆ ಮಾಡಿಸುವುದು ಕೂಡ ಈಗ ಡಿಜಿಟಲ್ ಆಗಿದೆ. ಫಿಕ್ಸೆಡ್ ಡಿಪಾಸಿಟ್‌ನಲ್ಲಿ ಹಣ ಇಡಲು ಬಯಸುವಿರಾದರೆ ಬಹಳ ಸುಲಭವಾಗಿ ಎಫ್‌ಡಿ ಖಾತೆಯೊಂದನ್ನು ಆರಂಭಿಸಬಹುದು.
ಖುದ್ದಾಗಿ ಬ್ಯಾಂಕಿಗೆ ಹೋಗಬೇಕಿಲ್ಲ: ಎಫ್‌ಡಿ ಮಾಡಿಸಲು ಐಡಿ ಪ್ರೂಫ್, ಅಡ್ರೆಸ್ ಪ್ರೂಫ್, ಪ್ಯಾನ್ ಕಾರ್ಡ್ ಮುಂತಾದ ಕಾಗದಗಳನ್ನು ಹಿಡಿದುಕೊಂಡು ನೀವೀಗ ಖುದ್ದಾಗಿ ಬ್ಯಾಂಕಿಗೆ ಹೋಗುವುದು ಅಗತ್ಯವೇ ಇಲ್ಲ. ಕೇವಲ ಒಂದು ವಿಡಿಯೋ ಆಧರಿತ ಆನ್‌ಲೈನ್ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದರೆ ಸಾಕು, ನಿಮ್ಮ ಎಫ್‌ಡಿ ಖಾತೆ ಚಾಲನೆಯಾಗುತ್ತದೆ.
ಎಫ್‌ಡಿ ಖಾತೆ ತೆರೆಯಲು ಬೆಸ್ಟ್ ಯೊನೊ ಆ್ಯಪ್
ನಿಮ್ಮ ಹಣವನ್ನು ಹೂಡಿಕೆ ಮಾಡಲು ಭಾರತದ ಅಗ್ರಗಣ್ಯ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅತ್ಯಂತ ಸುರಕ್ಷಿತವಾಗಿದೆ. 2 ಕೋಟಿ ರೂಪಾಯಿಗಳಿಗಿಂತ ಕಡಿಮೆ ಮೊತ್ತದ ಎಫ್‌ಡಿಗಳಿಗೆ ಬ್ಯಾಂಕ್ ಸ್ಥಿರವಾದ ಬಡ್ಡಿದರಗಳನ್ನು ನೀಡುತ್ತಿದೆ. ಈಗ ಬ್ಯಾಂಕಿನ ಯೊನೊ ಆ್ಯಪ್ ಬಳಸಿ ನೀವು ಆನ್ಲೈನ್ ಮೂಲಕವೇ ಎಫ್‌ಡಿ ಖಾತೆ ಆರಂಭಿಸಬಹುದು.
ಎಸ್‌ಬಿಐ ಫಿಕ್ಸೆಡ್ ಡಿಪಾಸಿಟ್
60 ವರ್ಷ ಕೆಳಗಿನ ನಾಗರಿಕರಿಗೆ ಎಸ್‌ಬಿಐ ಅತ್ಯುತ್ತಮವಾದ ಫಿಕ್ಸೆಡ್ ಡಿಪಾಸಿಟ್ ಸೌಲಭ್ಯಗಳನ್ನು ನೀಡುತ್ತಿದೆ. ನಿಶ್ಚಿತ ಪ್ರತಿಫಲ, ಬಡ್ಡಿ ಪಾವತಿ, ಓವರ್‌ಡ್ರಾಫ್ಟ್ ಅಥವಾ ಅವಧಿಪೂರ್ವ ಹಿಂಪಡೆಯುವಿಕೆ ಹೀಗೆ ಅನೇಕ ಸೌಲಭ್ಯಗಳು ಇಲ್ಲಿವೆ. 7 ದಿನಗಳಿಂದ ಹಿಡಿದು 10 ವರ್ಷಗಳ ಪಕ್ವತಾ ಅವಧಿಯ ಫಿಕ್ಸೆಡ್ ಡಿಪಾಸಿಟ್ ಖಾತೆಯನ್ನು ಯಾರಾದರೂ ಆರಂಭಿಸಬಹುದು. ಕನಿಷ್ಠ 1000 ರೂಪಾಯಿಗಳಿಂದ ಎಫ್‌ಡಿ ಖಾತೆ ಆರಂಭಿಸಬಹುದಾಗಿದ್ದು, ಇದರ ನಂತರ 100 ರೂಪಾಯಿಯ ಗುಣಕಗಳಲ್ಲಿ ಗರಿಷ್ಠ ಯಾವುದೇ ಮಿತಿಯಿಲ್ಲದೆ ನೀವು ಹೂಡಿಕೆ ಮಾಡಬಹುದು. ಡಿಪಾಸಿಟ್ ಮಾಡಿದ ದಿನಾಂಕದ ನಂತರ ಪ್ರತಿ ತ್ರೈಮಾಸಿಕಕ್ಕೊಮ್ಮೆ ಬಡ್ಡಿಯನ್ನು ಪಾವತಿ ಮಾಡಲಾಗುತ್ತದೆ. ಅಲ್ಲದೆ, ಎಫ್‌ಡಿ ಅವಧಿಯು ಪಕ್ವವಾಗಿದ್ದಲ್ಲಿ ಬಡ್ಡಿಯ ಜೊತೆಗೆ ಮೂಲ ಹಣವನ್ನು ಮರಳಿಸಲಾಗುತ್ತದೆ.
ಪ್ರತಿ ತಿಂಗಳು ಬಡ್ಡಿ ಆದಾಯ ಪಡೆದುಕೊಳ್ಳಬಹುದು
12 ತಿಂಗಳು ಅಥವಾ ಅದಕ್ಕೂ ಹೆಚ್ಚಿನ ಫಿಕ್ಸೆಡ್ ಡಿಪಾಸಿಟ್ ಇದ್ದಲ್ಲಿ, ಠೇವಣಿದಾರರು ಪ್ರತಿ ತಿಂಗಳಿಗೊಮ್ಮೆ, 6 ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಬಡ್ಡಿ ಆದಾಯ ಪಡೆದುಕೊಳ್ಳುವ ಸೌಲಭ್ಯ ಇಲ್ಲಿದೆ.
ಜನವರಿ 8, 2021 ರಂದು ಎಸ್‌ಬಿಐ ಠೇವಣಿಗಳ ಮೇಲಿನ ಬಡ್ಡಿದರ
ಜನವರಿ 8, 2021 ರಂದು ಎಸ್‌ಬಿಐ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದ್ದು, 2 ಕೋಟಿ ರೂಪಾಯಿಗಳಿಗಿಂತ ಕಡಿಮೆ ಮೊತ್ತದ ಠೇವಣಿಗಳಿಗೆ ನೀಡಲಾಗುವ ಬಡ್ಡಿದರಗಳು ಇಲ್ಲಿವೆ ನೋಡಿ.
| ಅವಧಿ | ಸಾರ್ವಜನಿಕರಿಗೆ 08.01.2021 ರಿಂದ ಅನ್ವಯವಾಗುವ ಬಡ್ಡಿದರ |
| 7 ದಿನಗಳಿಂದ 45 ದಿನಗಳು | ಶೇ 2.9 |
| 46 ದಿನಗಳಿಂದ 179 ದಿನಗಳು | ಶೇ 3.9 |
| 180 ದಿನಗಳಿಂದ 210 ದಿನಗಳು | ಶೇ 4.4 |
| 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ | ಶೇ 4.4 |
| 1 ವರ್ಷದಿಂದ 2 ವರ್ಷ | ಶೇ 5 |
| 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ | ಶೇ 5.1 |
| 3 ವರ್ಷಗಳಿಂದ 5 ವರ್ಷಕ್ಕೂ ಕಡಿಮೆ | ಶೇ 5.3 |
| 5 ವರ್ಷಗಳು ಮತ್ತು 10 ವರ್ಷಗಳವರೆಗೆ | ಶೇ 5.4 |
(ಮೂಲ: SBI)
ಎಸ್‌ಬಿಐ ವಿಕೇರ್ ಡಿಪಾಸಿಟ್ ಯೋಜನೆ (SBI Wecare)
60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಎಸ್‌ಬಿಐ, ವಿಕೇರ್ ಡಿಪಾಸಿಟ್ ಎಂಬ ಹೆಸರಿನ ವಿಶಿಷ್ಟ ಯೋಜನೆಯೊಂದನ್ನು ಪರಿಚಯಿಸಿದೆ. ಹಿರಿಯ ನಾಗರಿಕರ 5 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ನಿಶ್ಚಿತ ಅವಧಿಯ ಠೇವಣಿಗಳಿಗೆ ಸ್ಟ್ಯಾಂಡರ್ಡ್ 50 ಬಿಪಿಎಸ್ ಪಾಯಿಂಟುಗಳ ಮೇಲೆ ಮತ್ತೆ 30 ಬಿಪಿಎಸ್ ಪಾಯಿಂಟುಗಳಷ್ಟು ದರಗಳನ್ನು ನೀಡಲಾಗುತ್ತಿದೆ.
ಇನ್ನು, ಎಸ್‌ಬಿಐ ನೌಕರರು ಹಾಗೂ ಸಂಸ್ಥೆಯ ನಿವೃತ್ತರಿಗೆ ಚಾಲ್ತಿಯಲ್ಲಿರುವ ಬಡ್ಡಿದರಕ್ಕಿಂತ ಶೇ 1 ರಷ್ಟು ಹೆಚ್ಚುವರಿ ಬಡ್ಡಿಯನ್ನು ನೀಡಲಾಗುವುದು. ಎಲ್ಲ ಹಿರಿಯ ನಾಗರಿಕರು ಮತ್ತು 60 ವರ್ಷ ಮೇಲ್ಪಟ್ಟ ಎಸ್‌ಬಿಐ ಪೆನ್ಷನರುಗಳಿಗೆ ರೆಸಿಡೆಂಟ್ ಭಾರತೀಯ ಹಿರಿಯ ನಾಗರಿಕರಿಗೆ ನೀಡಲಾಗುವ ಬಡ್ಡಿದರಕ್ಕಿಂತ 0.50 ಪ್ರತಿಶತ ಹೆಚ್ಚು ಬಡ್ಡಿದರ ನೀಡಲಾಗುತ್ತದೆ. ಅಂದರೆ ಎಸ್‌ಬಿಐ ರೆಸಿಡೆಂಟ್ ಭಾರತೀಯ ಹಿರಿಯ ನಾಗರಿಕರಿಗೆ ಶೇ 1 ಮತ್ತು ಅದರ ಮೇಲೆ 0.50 ಪ್ರತಿಶತದಷ್ಟು ಅಧಿಕ ಲಾಭ ಸಿಗುತ್ತದೆ.
ಎಸ್‌ಬಿಐ ವಿಕೇರ್ ಡಿಪಾಸಿಟ್‌ಗಳ ಮೇಲಿನ ಬಡ್ಡಿದರಗಳು ಹೊಸ ಡಿಪಾಸಿಟ್‌ಗಳಿಗೆ ಮತ್ತು ನವೀಕರಿಸಲಾಗುವ ಡಿಪಾಸಿಟ್‌ಗಳಿಗೆ ಅನ್ವಯವಾಗುತ್ತವೆ. ಎಸ್‌ಬಿಐ ವಿಕೇರ್ ಡಿಪಾಸಿಟ್ ಯೋಜನೆಯನ್ನು ಮಾರ್ಚ್ 31, 2022 ರವರೆಗೆ ವಿಸ್ತರಿಸಲಾಗಿದೆ.
2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಠೇವಣಿ
ಹಿರಿಯ ನಾಗರಿಕರಿಗಾಗಿ 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಠೇವಣಿಗೆ ನೀಡಲಾಗುತ್ತಿರುವ ಎಸ್‌ಬಿಐ ಬಡ್ಡಿದರ ಹೀಗಿವೆ:
| ಅವಧಿ | ಹಿರಿಯ ನಾಗರಿಕರಿಗೆ 08.01.2021 ರಿಂದ ಅನ್ವಯವಾಗುವ ಬಡ್ಡಿದರ |
| 7 ದಿನಗಳಿಂದ 45 ದಿನಗಳು | ಶೇ 3.4 |
| 46 ದಿನಗಳಿಂದ 179 ದಿನಗಳು | ಶೇ 4.4 |
| 180 ದಿನಗಳಿಂದ 210 ದಿನಗಳು | ಶೇ 4.9 |
| 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ | ಶೇ 4.9 |
| 1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ | ಶೇ 5.5 |
| 2 ವರ್ಷಗಳಿಂದ 3 ವರ್ಷಕ್ಕಿಂತ ಕಡಿಮೆ | ಶೇ 5.6 |
| 3 ವರ್ಷದಿಂದ 5 ವರ್ಷಗಳಿಗಿಂತ ಕಡಿಮೆ | ಶೇ 5.8 |
| 5 ವರ್ಷಗಳು ಮತ್ತು 10 ವರ್ಷಗಳವರೆಗೆ | ಶೇ 6.2 |
(ಮೂಲ: SBI)
ಯೊನೊ ಆ್ಯಪ್‌ನಲ್ಲಿ ಫಿಕ್ಸೆಡ್ ಡಿಪಾಸಿಟ್ ಖಾತೆ ಆರಂಭಿಸುವ ವಿಧಾನ
- ನಿಮ್ಮ ಮೊಬೈಲಿನಲ್ಲಿ ಯೊನೊ ಆ್ಯಪ್ ಓಪನ್ ಮಾಡಿ, ನಿಮ್ಮ ಯೂಸರ್ ಐಡಿ-ಪಾಸವರ್ಡ್ ಅಥವಾ 6 ಅಂಕಿಯ ಎಂ ಪಿನ್ ಬಳಸಿ ಲಾಗಿನ್ ಆಗಿ.
- ಹೋಮ್ ಪೇಜಿನಲ್ಲಿ 'Deposits' ನಂತರ 'My Deposits' ನಲ್ಲಿ 'Fixed Deposits' ಕ್ಲಿಕ್ ಮಾಡಿ
- ಈಗ 'Open Fixed Deposit' ಎಂಬುದನ್ನು ಕ್ಲಿಕ್ ಮಾಡಿ ನೀವು ಠೇವಣಿ ಮಾಡಬಯಸುವ ಮೊತ್ತ ನಮೂದಿಸಿ.
- ಒಂದು ವೇಳೆ ನೀವು ತೆರಿಗೆ ಉಳಿತಾಯ ಮಾಡುವ ಡಿಪಾಸಿಟ್ ಖಾತೆ ತೆರೆಯಲು ಬಯಸಿದರೆ, 'Do you want your Fixed Deposit to be Tax Saver Fixed Deposit' ಬಾಕ್ಸ್ ಕ್ಲಿಕ್ ಮಾಡಿ.
- ನೀವು ನಿರ್ಧಾರ ಮಾಡಿದ ನಂತರ ಮುಂದುವರಿಯಲು 'Next' ಕ್ಲಿಕ್ ಮಾಡಿ.
- ಈಗ ವರ್ಷ, ತಿಂಗಳು ಹಾಗೂ ದಿನಗಳ ಅವಧಿಯನ್ನು ನಮೂದಿಸಿ 'Next' ಕ್ಲಿಕ್ ಮಾಡಿ.
- ನೀವು ನಿಮ್ಮ ಠೇವಣಿಯ ಅವಧಿಯನ್ನು ನಮೂದಿಸಿದ ನಂತರ ನಿಮಗೆ ಠೇವಣಿಯ ಪಕ್ವತಾ ದಿನಾಂಕ ಮತ್ತು ಅನ್ವಯವಾಗುವ ಬಡ್ಡಿದರಗಳು ಕಾಣಿಸುತ್ತವೆ.
- ಈಗ 'Next' ಎಂಬುದನ್ನು ಕ್ಲಿಕ್ ಮಾಡಿ ಹಾಗೂ ನಿಮ್ಮ ಬಡ್ಡಿ ಪಾವತಿಯು ತ್ರೈಮಾಸಿಕ ಆಗಿರಬೇಕಾ ಅಥವಾ ಠೇವಣಿ ಪಕ್ಷವಾದ ನಂತರ ಸಿಗಬೇಕಾ ಎಂಬುದನ್ನು ಆಯ್ದುಕೊಳ್ಳಿ.
- ನಿಮ್ಮ ಠೇವಣಿಯು ಪಕ್ವವಾದ ನಂತರ ಬರುವ ಪಕ್ವತಾ ಮೊತ್ತವನ್ನು ನೀವು ಏನು ಮಾಡಲು ಬಯಸುವಿರಿ ಅಂದರೆ, ಖಾತೆಗೆ ಜಮೆಯಾಗಬೇಕಾ ಅಥವಾ ಬಂಡವಾಳವನ್ನು ಮತ್ತೆ ಠೇವಣಿಯಾಗಿಸಿ ಬಡ್ಡಿಯನ್ನು ಮಾತ್ರ ಪಾವತಿ ಮಾಡಬೇಕಾ ಎಂಬ ಆಯ್ಕೆಗಳಿಗಾಗಿ 'Credit to account' ಅಥವಾ 'Renew principal and repay interest' ಎಂಬುದರಲ್ಲಿ ಒಂದನ್ನು ಆಯ್ದುಕೊಳ್ಳಿ.
- ಎಲ್ಲ ಪ್ರಕ್ರಿಯೆಗಳು ಮುಗಿದ ನಂತರ 'Review Your Fixed Deposit' ಚೆಕ್ ಮಾಡಿ 'Confirm' ಎಂಬುದನ್ನು ಕ್ಲಿಕ್ ಮಾಡಿ ನಿಯಮ ನಿಬಂಧನೆಗಳಿಗೆ ಒಪ್ಪಿಗೆ ಸೂಚಿಸಿ.
- ಅಪ್ಲಿಕೇಶನ್ ಪೂರ್ತಿಯಾದ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಈ ಬಗ್ಗೆ ಕನ್ಫರ್ಮೇಶನ್ ಮೆಸೇಜು ಬರುತ್ತದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Silver Rates India: ಮತ್ತೆ ಗಗನಕ್ಕೇರಿದ ಬೆಳ್ಳಿ ದರ; ದಿಢೀರ್ 5,000 ರೂ. ಹೆಚ್ಚಳ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Gold Price Today: ಭಾರತದಲ್ಲಿ ಏರಿಕೆ ಕಂಡ ಚಿನ್ನದ ಬೆಲೆ! ದಿಢೀರ್ 12,000 ರೂ. ಹೆಚ್ಚಳ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ



Click it and Unblock the Notifications