ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರವು ಭಾರತ ಸರ್ಕಾರದ ಹೊಸ ಯೋಜನೆಯಾಗಿದ್ದು, ಫೆಬ್ರವರಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುವಾಗ ಈ ಯೋಜನೆಯ ಘೋಷಣೆಯನ್ನು ಮಾಡಿದ್ದಾರೆ. ನಾವು ನಿಗದಿತ ಬ್ಯಾಂಕ್‌ಗಳಲ್ಲೊ ಮತ್ತು ಅಂಚೆ ಕಚೇರಿಯಲ್ಲಿ ಈ ಯೋಜನೆಯ ಖಾತೆ ತೆರೆಯಬಹುದಾಗಿದೆ.
ಏಪ್ರಿಲ್ 1, 2023 ರಿಂದ ಅಂಚೆ ಇಲಾಖೆಯಲ್ಲಿ ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಖಾತೆ ತೆರೆಯಲು ಅವಕಾಶವಿದೆ. ಭಾರತದ ಪ್ರತಿಯೊಬ್ಬ ಹೆಣ್ಣು ಮತ್ತು ಮಹಿಳೆಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಘೋಷಣೆಯೊಂದಿಗೆ ಈ ಯೋಜನೆಯನ್ನು ಆರಂಭ ಮಾಡಲಾಗಿದೆ. ಈ ಯೋಜನೆಯ ಬಗ್ಗೆ ಅಧಿಕ ಮಾಹಿತಿ, ಅಂಚೆ ಕಚೇರಿಯಲ್ಲಿ ಖಾತೆ ತೆರೆಯುವುದು ಹೇಗೆ ಎಂದು ತಿಳಿಯಿರಿ ಮುಂದೆ ಓದಿ...

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ
ಈ ಯೋಜನೆಯಡಿಯಲ್ಲಿ, ಒಬ್ಬ ಮಹಿಳೆ ತನ್ನ ಖಾತೆಯನ್ನು ಅಥವಾ ಅಪ್ರಾಪ್ತ ಬಾಲಕಿಯ ಪರವಾಗಿ ಪೋಷಕರು ಖಾತೆಯನ್ನು ತೆರೆಯಬಹುದಾಗಿದೆ. ಈ ಯೋಜನೆಗೆ ಶೇಕಡ 7.5ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಈ ಬಡ್ಡಿದರವು ತ್ರೈಮಾಸಿಕ ಆಧಾರದ ಮೇಲೆ ಖಾತೆಗೆ ಜಮೆಯಾಗುತ್ತದೆ, ಹಾಗೆಯೇ ಲೆಕ್ಕ ಮಾಡಲಾಗುತ್ತದೆ. ಒಂದು ಖಾತೆಯನ್ನು ತೆರೆದ ಬಳಿಕ ನೀವು ಇನ್ನೊಂದು ಖಾತೆಯನ್ನು ತೆರೆಯಲು ಬಯಸಿದರೆ, ಎರಡು ಖಾತೆ ಆರಂಭದ ದಿನದಲ್ಲಿ ಮೂರು ತಿಂಗಳುಗಳ ಕಾಲಾವಧಿ ಇರಬೇಕು.
ಕನಿಷ್ಠವಾಗಿ 1000 ರೂಪಾಯಿಯನ್ನು ಪಾವತಿ ಮಾಡಬಹುದಾಗಿದೆ. ಒಬ್ಬ ವ್ಯಕ್ತಿಯು ಗರಿಷ್ಠವಾಗಿ 2,00,000 ಲಕ್ಷ ರೂಪಾಯಿ ಖಾತೆಗೆ ಜಮೆ ಮಾಡಬಹುದಾಗಿದೆ. ಇಲ್ಲಿ ಯಾವುದೇ ವಯೋಮಿತಿಗಳು ಇಲ್ಲ. ಹೆಣ್ಣಾಗಿದ್ದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಉತ್ತಮ ರಿಟರ್ನ್ ಅನ್ನು ಪಡೆಯುವ ಅವಕಾಶವಿದೆ. ಈ ಯೋಜನೆಯು 2 ವರ್ಷಗಳವರೆಗೆ ಇರುತ್ತದೆ. ಮಾರ್ಚ್ 31, 2025 ಕ್ಕೆ ಕೊನೆಗೊಳ್ಳುತ್ತದೆ.
ಅಂಚೆ ಕಚೇರಿಯಲ್ಲಿ ಖಾತೆ ತೆರೆಯುವುದು ಹೇಗೆ?
ಹಂತ 1: ಅಂಚೆ ಕಚೇರಿಗೆ ಭೇಟಿ ನೀಡಿ
ಹಂತ 2: ಖಾತೆ ತೆರೆಯುವ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ
ಹಂತ 3: ಕೆವೈಸಿ ಡಾಕ್ಯುಮೆಂಟ್ (ಆಧಾರ್ ಮತ್ತು ಪ್ಯಾನ್ ಕಾರ್ಡ್) ಸಲ್ಲಿಸಿ.
ಹಂತ 4: ಹತ್ತಿರದ ಅಂಚೆ ಕಛೇರಿಯಲ್ಲಿ ಡೆಪಾಸಿಟ್ ಮೊತ್ತ/ ಚೆಕ್ ಜೊತೆಗೆ ದಾಖಲೆ ಸಲ್ಲಿಸಿ
ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆ ಏನು?
ಬಜೆಟ್ 2023ರಲ್ಲಿ ಜಾರಿ ಮಾಡಲಾದ ಭಾರತ ಸರ್ಕಾರದ ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆಯು ಹೊಸ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಒಂದು ಸಮಯ ಯೋಜನೆಯಾಗಿದೆ. ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆಯು ಮಾರ್ಚ್ 2025ರವರೆಗಿನ ಅಂದರೆ 2 ವರ್ಷದ ಅವಧಿಯ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ಮಹಿಳೆ ಅಥವಾ ಹುಡುಗಿಯ ಹೆಸರಿನಲ್ಲಿ ಸುಮಾರು 2 ಲಕ್ಷ ರೂಪಾಯಿ ಮೊತ್ತವನ್ನು 2 ವರ್ಷದವರೆಗೆ ಡೆಪಾಸಿಟ್ ಮಾಡಬಹುದಾಗಿದೆ.
ಮಹಿಳಾ ಸಮ್ಮಾನ ಪ್ರಮಾಣಪತ್ರ ತೆರಿಗೆ ಮುಕ್ತವೇ?
ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರದ ಯೋಜನೆಯಡಿಯಲ್ಲಿ ಮಾಡಿದ ಹೂಡಿಕೆಯು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯುವುದಿಲ್ಲ. ಆದರೆ ಯೋಜನೆಯ ಮೂಲಕ ಪಡೆದ ಬಡ್ಡಿದರಕ್ಕೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ. ನಿಮಗೆ ಫಿಕ್ಸಿಡ್ ಡೆಪಾಸಿಟ್‌ನಲ್ಲಿ ತೆರಿಗೆ ಪ್ರಯೋಜನ ಲಭ್ಯವಾಗುವಂತೆ ಈ ಯೋಜನೆಯಲ್ಲಿ ತೆರಿಗೆ ಪ್ರಯೋಜನ ಲಭ್ಯವಾಗುವುದಿಲ್ಲ.
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದ ಅಡಿಯಲ್ಲಿ ನಾವು ಮಾಡಿದ ಹೂಡಿಕೆಗೆ ಪಡೆಯುವ ಬಡ್ಡಿದರವು ತೆರಿಗೆ ಮುಕ್ತವಾಗಿರುವುದಿಲ್ಲ, ಅದು ತೆರಿಗೆಗೆ ಒಳಪಡುತ್ತದೆ. ನೀವು ಮಾಡಿದ ಹೂಡಿಕೆಗೆ ಸಂಪೂರ್ಣವಾಗಿ ಎಷ್ಟು ಬಡ್ಡಿದರ ಲಭ್ಯವಾಗಿದೆ ಎಂಬ ಲೆಕ್ಕಾಚಾರವನ್ನು ನೋಡಿಕೊಂಡು ನಿಮ್ಮ ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆ ಖಾತೆಯಿಂದ ತೆರಿಗೆಯನ್ನು ಕಡಿತ ಮಾಡಲಾಗುತ್ತದೆ.


Click it and Unblock the Notifications