ಸರಕು ಮತ್ತು ಸೇವೆಗಳಿಗೆ ನಮ್ಮಲ್ಲಿ ಪಾವತಿ ಮಾಡಲು ನಮ್ಮಲ್ಲಿ ಹಣ ಇಲ್ಲವೆಂದಾಗ ಹಣವನ್ನು ಪಾವತಿಸಲು ಉತ್ತಮ ಮಾರ್ಗ ಕ್ರೆಡಿಟ್ ಕಾರ್ಡ್ ಆಗಿದೆ. ನೀವು ನಿಗದಿತ ಅವಧಿಯ ನಂತರ ಪಾವತಿಯನ್ನು ಮಾಡುವ ಅವಕಾಶವನ್ನು ಕ್ರೆಡಿಟ್ ಕಾರ್ಡ್‌ನಲ್ಲಿ ಹೊಂದಿರುತ್ತೀರಿ.
ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಪಾವತಿಗೆ ಒಂದು ತಿಂಗಳ ಅವಕಾಶ ಇರುತ್ತದೆ. ಇತ್ತೀಚಿನ ದಿನಗಳಲ್ಲಿ, ದೇಶದಲ್ಲಿ ಕ್ರೆಡಿಟ್ ಕಾರ್ಡ್‌ಗಳತ್ತ ಒಲವು ಹೆಚ್ಚುತ್ತಿದೆ. ರೀಚಾರ್ಜ್‌ಗಳು, ಬಿಲ್ ಪಾವತಿಗಳು, ಶಾಪಿಂಗ್ ಮೊದಲಾದವುಗಳಿಗೆ ಬಳಕೆ ಮಾಡಬಹುದಾಗಿದೆ.

ಇದರಿಂದಾಗಿ ಜನರು ಈಗ ಈಗ ಕ್ರೆಡಿಟ್ ಕಾರ್ಡ್‌ಗಳನ್ನು ಹೆಚ್ಚಾಗಿ ಆರಿಸಿಕೊಳ್ಳುತ್ತಿದ್ದಾರೆ. ಆದರೆ ಈಗ ಮನೆ ಬಾಡಿಗೆ ಪಾವತಿಸಲು ಕೂಡಾ ಕ್ರೆಡಿಟ್ ಕಾರ್ಡ್‌ಗಳನ್ನು ಬಳಕೆ ಮಾಡಬಹುದಾಗಿದೆ. ಭೂಮಾಲೀಕರು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಬಾಡಿಗೆ ಪಾವತಿಗಳನ್ನು ಸ್ವೀಕರಿಸದಿದ್ದರೂ ಸಹ, ಇತರೆ ಆಪ್‌ಗಳ ಅಥವಾ ವೆಬ್‌ಸೈಟ್‌ಗಳ ಮೂಲಕ ಬಾಡಿಗೆ ಪಾವತಿ ಮಾಡಬಹುದಾಗಿದೆ.
ಪಾವತಿಗಳನ್ನು ಮಾಡುವಾಗ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವುದರಿಂದ ಸಾಕಷ್ಟು ಬೆನಿಫಿಟ್ ಅನ್ನು ಕೂಡಾ ಪಡೆಯಲು ಸಾಧ್ಯವಾಗುತ್ತದೆ. ದೇಶದಲ್ಲಿ ಪೇಟಿಎಂ, ಫೋನ್‌ಪೇ, ಕ್ರೆಡ್, ನಾಬ್‌ಬೋಕರ್ಮ ಪೇಜ್ಯಾಪ್, ರೆಡ್ ಜಿರಾಫೆಯಂತಹ ಅನೇಕ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಮತ್ತು ಯುಪಿಐ ಆಪ್‌ಗಳು ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಬಾಡಿಗೆ ಪಾವತಿಸಲು ಅವಕಾಶ ನೀಡುತ್ತದೆ.
ಕ್ರೆಡಿಟ್ ಕಾರ್ಡ್ ಮೂಲಕ ಮನೆ ಬಾಡಿಗೆ ಪಾವತಿ ಮಾಡುವ ಹಂತಗಳು
ಹಂತ 1: ಯಾವುದೇ ಆನ್‌ಲೈನ್ ಸೇವಾ ಪೂರೈಕೆದಾರರ ವೆಬ್‌ಸೈಟ್ ಅಥವಾ ಯುಪಿಐ ಅಪ್ಲಿಕೇಶನ್‌ಗೆ ಹೋಗಿ.
ಹಂತ 2: ಬಾಡಿಗೆ ಪಾವತಿ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 3: ಇಲ್ಲಿ ತಿಳಿಸಲಾಗಿರುವ ಆಯ್ಕೆಗಳಿಂದ ಒಂದನ್ನು ನೀವು ಆಯ್ಕೆಮಾಡಬಹುದು: ಮನೆ ಅಥವಾ ಅಂಗಡಿ ಬಾಡಿಗೆ, ನಿರ್ವಹಣೆ, ಆಸ್ತಿ ಡೆಪಾಸಿಟ್, ಇತ್ಯಾದಿ.
ಹಂತ 4: ಬಾಡಿಗೆ ಮೊತ್ತ ಮತ್ತು ಆಸ್ತಿ ಹೆಸರನ್ನು ನಮೂದಿಸಿ.
ಹಂತ 5: Continue ಮೇಲೆ ಟ್ಯಾಪ್ ಮಾಡಿ.
ಹಂತ 6: ಜಮೀನುದಾರನ ಹೆಸರನ್ನು ನಮೂದಿಸಿ.
ಹಂತ 7: ಪಾವತಿ ವಿಧಾನವಾಗಿ ಕ್ರೆಡಿಟ್ ಕಾರ್ಡ್ ಅನ್ನು ಆಯ್ಕೆಮಾಡಿ.
ಹಂತ 8: ಜಮೀನುದಾರನ ಬ್ಯಾಂಕ್ ಖಾತೆ ಅಥವಾ ಯುಪಿಐ ಆಯ್ಕೆಮಾಡಿ.
ಹಂತ 9: ಬ್ಯಾಂಕ್‌ಗೆ ಲಿಂಕ್ ಮಾಡಲಾದ ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಮೊತ್ತವನ್ನು ಪಾವತಿಸಿ.
ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಪಾವತಿಸುವ ಪ್ರಯೋಜನ
ಒಬ್ಬರು ತಮ್ಮ ಬಾಡಿಗೆಯನ್ನು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸುವ ತಮ್ಮ ಹಣವನ್ನು ಉಳಿಸಬಹುದು. ಕ್ರೆಡಿಟ್ ಕಾರ್ಡ್ ಬಾಕಿಗಳನ್ನು ಸಾಮಾನ್ಯವಾಗಿ 45-50 ದಿನಗಳ ನಂತರ ಪಾವತಿಸಬೇಕಾಗುತ್ತದೆ. ಈ ಸಮಯದಲ್ಲಿ, ಅದೇ ಹಣವನ್ನು ಬೇರೆಡೆ ಬಳಸಬಹುದು.
ಕ್ರೆಡಿಟ್ ಕಾರ್ಡ್‌ನೊಂದಿಗೆ ಬಾಡಿಗೆ ಪಾವತಿಸುವುದನ್ನು ಸಹ ಇಎಂಐಗಳಾಗಿ ಪರಿವರ್ತಿಸಬಹುದು. ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ ವಹಿವಾಟಿನ ಮೇಲೆ ಹಲವು ಕ್ಯಾಶ್‌ಬ್ಯಾಕ್ ಮತ್ತು ರಿವಾರ್ಡ್ ಪಾಯಿಂಟ್‌ಗಳು ಲಭ್ಯವಿವೆ.


Click it and Unblock the Notifications