ಆನ್‌ಲೈನ್ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಭಾರತದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆಯುತ್ತಿದೆ. ಜನರು ತಮಗೆ ಬೇಕಾದ ಆಹಾರವನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕವೇ ಆರ್ಡರ್ ಮಾಡಬಹುದಾಗಿದೆ. ಇತ್ತೀಚೆಗೆ ಜೊಮ್ಯಾಟೋ, ಸ್ವಿಗ್ಗಿಗೂ ಅಧಿಕವಾಗಿ ಭಾರತ ಸರ್ಕಾರವು ಆರಂಭ ಮಾಡಿದ ಒಎನ್‌ಡಿಸಿ (ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್) ಆಪ್ ಅತೀ ಜನಪ್ರಿಯವಾಗುತ್ತಿದೆ.
ಪ್ರಸ್ತುತ ಸ್ವಿಗ್ಗಿ ಮತ್ತು ಜೊಮ್ಯಾಟೊದಲ್ಲಿ ಮಾಡುವ ಆರ್ಡರ್ ಮತ್ತು ಸರ್ಕಾರದ ಈ ಆಪ್ ಮೂಲಕ ಮಾಡಿದ ಆರ್ಡರ್‌ನಲ್ಲಿ ಬೆಲೆಯಲ್ಲಿ ಎಷ್ಟು ವ್ಯತ್ಯಾಸವಿದೆ ಎಂಬುವುದರ ಸ್ಕ್ರೀನ್‌ಶಾಟ್ ಅನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊಮ್ಯಾಟೊ ಹಾಗೂ ಸ್ವಿಗಿಗಿಂತ ಕಡಿಮೆ ಬೆಲೆಯಲ್ಲಿ ಒಎನ್‌ಡಿಸಿಯಲ್ಲಿ ಆಹಾರ ಲಭ್ಯವಾಗುತ್ತದೆ. ಆದರೆ ಸರ್ಕಾರಿ ಇ- ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಕೆಲವು ತೊಂದರೆಗಳು ಇದೆ. ಒಎನ್‌ಡಿಸಿಯಲ್ಲಿ ಆರ್ಡರ್ ಮಾಡುವುದು ಹೇಗೆ?

ಒಎನ್‌ಡಿಸಿಯಲ್ಲಿ ಆಹಾರ ಆರ್ಡರ್ ಮಾಡುವುದು ಹೇಗೆ?
ಹಂತ 1: ಒಎನ್‌ಡಿಸಿ ಮೂಲಕ ಆರ್ಡರ್ ಮಾಡಲು, ನೀವು ಒಎನ್‌ಡಿಸಿ ವೆಬ್‌ಸೈಟ್‌ಗೆ ಭೇಟಿ ನೀಡಬೇಕಾಗುತ್ತದೆ. https://ondc.org/
ಹಂತ 2: ವೆಬ್‌ಸೈಟ್‌ಗೆ ಭೇಟಿ ನೀಡಿದ ನಂತರ, ಮುಖಪುಟದಲ್ಲಿ Shop on ONDC ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಹಂತ 3: ನೀವು ಆರ್ಡರ್ ಮಾಡಲು ಬಯಸುವ ಪ್ಲಾಟ್‌ಫಾರ್ಮ್ ಅನ್ನು ಆಯ್ಕೆ ಮಾಡಿ, Shop Now ಮೇಲೆ ಕ್ಲಿಕ್ ಮಾಡಿ. ಪ್ರಸ್ತುತ ಪೇಟಿಎಂ, ಮೈಸ್ಟೋರ್, ಕ್ರಾಫ್ಟ್ಸ್‌ವಿಲ್ಲಾ, ಟು ಲೈಫ್ ಬನಿ, ಮಿಶೋ, ಪಿನ್‌ಕೋಡ್, ಮ್ಯಾಜಿಕ್‌ಪಿನ್, ಪ್ಲಾಟ್‌ಫಾರ್ಮ್‌ಗಳು ಲಭ್ಯವಿದೆ.
ಹಂತ 4: ಈಗ, ನಿಮಗೆ ಬೇಕಾದ ವಸ್ತುಗಳನ್ನು ಆಯ್ಕೆಮಾಡಿ ಮತ್ತು ನೀವು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾಡಿದಂತೆ ಆರ್ಡರ್ ಮಾಡಿ.
ಹಂತ 5: ಪಾವತಿಯನ್ನು ಮಾಡಿದ ಬಳಿಕ, ಎಲ್ಲವೂ ಸಂಪೂರ್ಣವಾಗಲಿದೆ.
ಮೊಬೈಲ್ ಬಳಕೆದಾರರು ಸ್ವಿಗ್ಗಿ/ ಜೊಮ್ಯಾಟೊ ಮತ್ತು ಒಎನ್‌ಡಿಸಿ ಎರಡರಿಂದಲೂ ಬರ್ಗರ್‌ಗಳನ್ನು ಆರ್ಡರ್ ಮಾಡಿರುವುದಾಗಿ ಹೇಳಿದ್ದಾರೆ. ನೆಟ್ಟಿಗರು ಬೆಲೆಯಲ್ಲಿ ಸುಮಾರು ಶೇಕಡ 60ರಷ್ಟು ವ್ಯತ್ಯಾಸವನ್ನು ಹೊಂದಿರುವುದು ಪತ್ತೆ ಹಚ್ಚಿದ್ದಾರೆ. ಸ್ವಿಗ್ಗಿ/ ಜೊಮ್ಯಾಟೊದಲ್ಲಿ ಸುಮಾರು 282 ರೂಪಾಯಿಗೆ ಬರ್ಗರ್ ಲಭ್ಯವಾದರೆ, ಒಎನ್‌ಡಿಸಿಯಲ್ಲಿ ಅದೇ ಬರ್ಗರ್‌ಗೆ ಸುಮಾರು 109 ರೂಪಾಯಿ ಆಗಿದೆ.
ಆದರೂ ಹಲವಾರು ಬಳಕೆದಾರರು ಒಎನ್‌ಡಿಸಿಯಲ್ಲಿನ ತೊಂದರೆಗಳ ಬಗ್ಗೆ ಹಂಚಿಕೊಂಡಿದ್ದಾರೆ. ಪೇಟಿಎಂ ಒಎನ್‌ಡಿಸಿ ಮ್ಯಾಜಿಕ್‌ಪಿನ್‌ನಿಂದ ಚಾಲಿತವಾಗಿದೆ ಎಂದು ಬಳಕೆದಾರರು ಹೇಳುತ್ತಿದ್ದಾರೆ. ಹಾಗಾದರೆ ಮ್ಯಾಜಿಕ್‌ಪಿನ್‌ನಲ್ಲಿ ಮಾತ್ರ ಏಕೆ ಆರ್ಡರ್ ಮಾಡಬಾರದು ಎಂದು ಪ್ರಶ್ನಿಸಿದ್ದಾರೆ.
ಇನ್ನು ಇದರಲ್ಲಿ ಗ್ರಾಹಕ ಬೆಂಬಲವಿಲ್ಲ, ಕ್ಯಾಶ್ ಆನ್ ಡೆಲಿವರಿ ಇಲ್ಲ, ಆರ್ಡರ್ ಟ್ರ್ಯಾಕಿಂಗ್ ಇಲ್ಲ, ಬೆಲೆ ವ್ಯತ್ಯಾಸವು 10 ರೂಪಾಯಿಗಿಂತ ಕಡಿಮೆಯಿದೆ ಎಂಬ ಆರೋಪವಿದೆ. ನೀವು ಆರ್ಡರ್ ಮಾಡಿದ ಪ್ರತಿ ಬಾರಿ ವಿಳಾಸವನ್ನು ಅಪ್‌ಡೇಟ್ ಮಾಡಬೇಕಾಗುತ್ತದೆ ಎಂದು ಜನರು ಆರೋಪಿಸುತ್ತಿದ್ದಾರೆ.
ಒಎನ್‌ಡಿಸಿ ಎಂದರೇನು?
ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್‌ಡಿಸಿ) ಅನ್ನು ಭಾರತ ಸರ್ಕಾರವು ಅಭಿವೃದ್ಧಿಪಡಿಸಿದೆ. ಇದು ರೆಸ್ಟೋರೆಂಟ್‌ಗಳು ತಮ್ಮ ಆಹಾರವನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಅವಕಾಶ ನೀಡುವ ಪ್ಲಾಟ್‌ಫಾರ್ಮ್ ಆಗಿದೆ. ಇದಲ್ಲದೆ, ಇದು ದಿನಸಿ ಸಾಮಾನುಗಳು, ಮನೆಯ ಅಲಂಕಾರಿಕ ವಸ್ತುಗಳು, ಸ್ವಚ್ಛಗೊಳಿಸುವ ಅಗತ್ಯ ವಸ್ತುಗಳು ಇತ್ಯಾದಿಗಳನ್ನು ಸಹ ನೀಡುತ್ತದೆ. ಸ್ವಿಗ್ಗಿಯ ಇನ್‌ಸ್ಟಾ ಮಾರ್ಟ್, ಜೆಪ್ಟೊ, ಬ್ಲಿಂಕಿಂಟ್‌ನಂತಹ ಆಪ್‌ಗಳು ಇದಾಗಿದೆ. ಈ ಕೇಂದ್ರ ಸರ್ಕಾರದ ಆಪ್ ಸೆಪ್ಟೆಂಬರ್ 2022ರಲ್ಲಿ ಆರಂಭ ಮಾಡಲಾಗಿದೆ.


Click it and Unblock the Notifications