ಯುಪಿಐ ಎನ್ನುವುದು ನಮ್ಮ ಬ್ಯಾಂಕ್ ಖಾತೆಯನ್ನು ಒಂದೇ ಅಪ್ಲಿಕೇಶನ್‌ಗೆ ಲಿಂಕ್ ಮಾಡಿ ಈ ಮೂಲಕ ಹಣಕಾಸು ವ್ಯವಹಾರ ನಡೆಸಲು ಅವಕಾಶ ನೀಡುವ ವ್ಯವಸ್ಥೆಯಾಗಿದೆ. ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಪಾವತಿ ಆಯ್ಕೆಯು ನಾವು ಹಣವನ್ನು ವರ್ಗಾವಣೆ ಮಾಡುವ ಸುರಕ್ಷಿತ ಪಾವತಿ ವಿಧಾನಗಳಲ್ಲಿ ಒಂದಾಗಿದೆ.
ನಾವು ಯುಪಿಐ ಮೂಲಕ ಪಾವತಿ ಮಾಡುವುದು ಸುರಕ್ಷಿತ ಪಾವತಿ ವಿಧಾನವಾಗಿದೆ. ಆದರೆ ಈ ಡಿಜಿಟಲ್ ಯುಗದಲ್ಲಿ ಆನ್‌ಲೈನ್ ವಂಚನೆ ಅಧಿಕವಾಗಿರುವ ಕಾರಣದಿಂದಾಗಿ ಹಲವಾರು ಮಂದಿ ಅಧಿಕ ಮೊತ್ತವನ್ನು ಯುಪಿಐ ಮೂಲಕ ಪಾವತಿಸಲು ಕೊಂಚ ಹಿಂಜರಿಯುತ್ತಾರೆ.
ನಾವು ಕಾರ್ಡ್ ಇಲ್ಲದೆಯೇ ಎಟಿಎಂನಿಂದ ಹಣವನ್ನು ಪಡೆಯಲು ಕೂಡಾ ಯುಪಿಐ ಸಹಕಾರಿಯಾಗಿದೆ. ಆದರೆ ನಾವು ಹಣವನ್ನು ಗೂಗಲ್ ಪೇ, ಫೋನ್‌ಪೇ, ಪೇಟಿಎಂ ಮೊದಲಾದವುಗಳಲ್ಲಿ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಪಾವತಿಯು ಡಿಕ್ಲೈನ್ ಆಗಬಹುದು, ಆದರೆ ನಮ್ಮ ಖಾತೆಯಿಂದ ಹಣ ಮಾತ್ರ ಕಡಿತವಾಗಬಹುದು. ಈ ರೀತಿ ಆಗದಂತೆ ನೋಡಿಕೊಳ್ಳುವುದು ಹೇಗೆ ಹಾಗೂ ಈ ರೀತಿ ಆದಾಗ ನಾವು ಏನು ಮಾಡಬೇಕು ಎಂಬ ಬಗ್ಗೆ ನಾವು ಇಲ್ಲಿ ವಿವರಿಸಿದ್ದೇವೆ ಮುಂದೆ ಓದಿ....
ಈ ಅಂಶಗಳನ್ನು ನೆನಪಿನಲ್ಲಿಡಿ
ಯುಪಿಐ ಮೋಡ್‌ನಿಂದ ಪಾವತಿಸುವಾಗ ನಿಮ್ಮ ಖಾತೆಯಲ್ಲಿ ಸಾಕಷ್ಟು ಹಣ ಇದೆಯೇ ಎಂದು ನೀವು ಖಚಿತಪಡಿಸಿಕೊಳ್ಳುವುದು ಉತ್ತಮ. ಹಾಗೆಯೇ ವಹಿವಾಟು ಮಾಡುವಾಗ ನಿಮ್ಮ ಯುಪಿಐ ಪಿನ್ ಕೂಡಾ ಸರಿಯಾಗಿ ಹಾಕಿದ್ದೀರಿ ಎಂದು ಖಾತರಿಪಡಿಸಿಕೊಳ್ಳಿ. ನೀವು ವಹಿವಾಟು ಮಾಡುವ ಸಂದರ್ಭದಲ್ಲಿ ಯುಪಿಐ ವಹಿವಾಟಿಗೆ ಎಷ್ಟು ಮಿತಿ ಇದೆ ಎಂದು ಕೂಡಾ ತಿಳಿದಿರಲಿ. ನೀವು ಹಣವನ್ನು ಪಾವತಿ ಮಾಡುವವರ ಖಾತೆಯನ್ನು ನಿಷ್ಕ್ರೀಯ ಮಾಡಲಾಗಿಲ್ಲ ಎಂಬುವುದು ಖಚಿತಪಡಿಸಿಕೊಳ್ಳಿ. ಓರ್ವ ವ್ಯಕ್ತಿ ಯುಪಿಐ ಪಾವತಿ ವ್ಯವಸ್ಥೆಯನ್ನು ಹೊಸದಾಗಿ ಆರಂಭ ಮಾಡಿದ 24 ಗಂಟೆಗಳ ಕಾಲ ರೂಪಾಯಿ 5000ಗಿಂತ ಅಧಿಕ ವಹಿವಾಟು ನಡೆಸುವಂತಿಲ್ಲ ಎಂಬುವುದು ನೆನಪಿನಲ್ಲಿ ಇರಲಿ.
ತಪ್ಪಾದ ಯುಪಿಐ ಪಿನ್ ಮೂರು ಬಾರಿ ಹಾಕಬೇಡಿ
ನೀವು ಮಾಡುವ ಯುಪಿಐ ವಹಿವಾಟು ಡಿಕ್ಲೈನ್ ಆಗದಂತೆ ನೋಡಲು ನೀವು ಯುಪಿಐ ಪಿನ್ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನಿರಂತರವಾಗಿ ಮೂರು ಬಾರಿ ಯುಪಿಐ ಪಿನ್ ಅನ್ನು ತಪ್ಪಾಗಿ ನಮೂದಿಸಿದರೆ ಅದು ನಿಮಗೆ ತೊಂದರೆ ಆಗಲಿದೆ. ನಿಮಗೆ ಪಿನ್ ಮರೆತಿದ್ದರೆ ಮೊದಲು ಪಿನ್ ರಿಸೆಟ್ ಮಾಡಿಕೊಳ್ಳಿ. ಮೂರು ಬಾರಿ ತಪ್ಪಾಗಿ ಪಿನ್ ಮಾತ್ರ ಹಾಕದಿರಿ. ಯುಪಿಐ ಪಿನ್ ಅನ್ನು ರಿಸೆಟ್ ಮಾಡಲು ಅಕೌಂಟ್ ಸೆಕ್ಷನ್‌ನಲ್ಲಿ Reset UPI PIN ಅನ್ನು ಕ್ಲಿಕ್ ಮಾಡಿ. ಡೆಬಿಟ್ ಕಾರ್ಡ್‌ನ ಕೊನೆಯ ಆರು ಡಿಜಿಟ್ ಅನ್ನು ಹಾಕಿ. ಡೆಬಿಟ್ ಕಾರ್ಡ್‌ನಲ್ಲಿರುವ expiry date ಅನ್ನು ನಮೂದಿಸಿ. ಬ್ಯಾಂಕ್‌ನಿಂದ ಬರುವ ಒಟಿಪಿಯನ್ನು ನಮೂದಿಸಿ. ಹೊಸ ಯುಪಿಐ ಪಿನ್ ಅನ್ನು ಹಾಕಿ. ಈ ಹಂತವನ್ನು ಪಾಲಿಸಿದ ಬಳಿಕ ನಿಮ್ಮ ಯುಪಿಐ ಪಿನ್ ರಿಸೆಟ್ ಆಗಲಿದೆ.
ಆನ್‌ಲೈನ್ ಶಾಪಿಂಗ್ ಮಾಡುವಾಗ ಹೀಗೆ ಮಾಡಿ
ಆನ್‌ಲೈನ್ ಶಾಪಿಂಗ್‌ನಲ್ಲಿ ಯುಪಿಐ ಪಾವತಿಯ ಆಯ್ಕೆ ಕೂಡಾ ನಮಗೆ ಲಭ್ಯವಾಗಲಿದೆ. ನಾವು ಆನ್‌ಲೈನ್‌ನಲ್ಲಿ ಶಾಪಿಂಗ್ ವೇಳೆ ಯುಪಿಐ ಪಾವತಿ ಮಾಡುವುದು ಕೆಲವೇ ಸೆಕೆಂಡ್‌ಗಳ ಕೆಲಸವಾಗಿದೆ. ಇದು ಕೇಂದ್ರ ಸರ್ಕಾರದ ಡಿಜಟಲೀಕರಣದ ಒಂದು ಕ್ರಮ ಕೂಡಾ ಹೌದು. ಇದರಿಂದಾಗಿ ಗ್ರಾಹಕರ ಸಮಯ ಉಳಿಯುತ್ತದೆ. ಆದರೆ ನಾವು ಆನ್‌ಲೈನ್ ಶಾಪಿಂಗ್ ಮಾಡುವ ವೇಳೆ ಪಾವತಿ ಡಿಕ್ಲೈನ್ ಆಗುವುದನ್ನು ತಡೆಯಬೇಕಾದರೆ ನಮ್ಮ ಖಾತೆಯಲ್ಲಿ ಬೇಕಾದಷ್ಟು ಮೊತ್ತವಿದೆಯೇ ಎಂದು ನೋಡಿಕೊಳ್ಳಬೇಕು. ಹಾಗೆಯೇ ಯುಪಿಐ ಪಿನ್ ಅನ್ನು ಸರಿಯಾಗಿ ನಮೂದಿಸಬೇಕು.


Click it and Unblock the Notifications