ಬೆಂಗಳೂರು, ಜೂನ್ 16: ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದ ಮೇಲೆ ಅವುಗಳನ್ನು ಯಾವ ಸಂದರ್ಭದಲ್ಲಿ ರಿಡೀಮ್ ಮಾಡಿಕೊಂಡರೆ ಹೆಚ್ಚಿನ ಲಾಭ ಪಡೆದುಕೊಳ್ಳಬಹುದು ಎನ್ನುವುದು ಗೊತ್ತಿರಬೇಕು.
ಮೊದಲಿಗೆ, ರಿಡಮ್ಷನ್ ಪ್ರಕ್ರಿಯೆ ಅರ್ಥ ಮಾಡ್ಕೋಳೋಣ. ನಿಮ್ಮ ಮ್ಯೂಚುಯಲ್ ಫಂಡ್ ಹೂಡಿಕೆ ರಿಡೀಮ್ ಮಾಡೋಕೆ ನೀವು ಸುದೀರ್ಘ ಅರ್ಜಿ ತುಂಬುವ ಅಗತ್ಯ ಇಲ್ಲ. ಜೊತೆಗೆ ಅಸೆಟ್ ಮ್ಯಾನೇಜ್ಮೆಂಟ್ ಕಂಪೆನಿ (ಎಎಂಸಿ)ಗೆ ಭೇಟಿ ಕೊಡೋ ಅಗತ್ಯ ಕೂಡ ಇರುವುದಿಲ್ಲ. ಡಿಜಿಟಲೀಕರಣದ ಬಳಿಕ ಹೂಡಿಕೆಗಳನ್ನ ರಿಡೀಮ್ ಮಾಡುವುದು ತುಂಬಾ ಸುಲಭ ಆಗಿದೆ.

ಒಂದೇ ಒಂದು ಕ್ಲಿಕ್ ನಿಂದ ನೀವು ನಿಮ್ಮ ಮ್ಯೂಚುಯಲ್ ಫಂಡ್ ನ ನೆಟ್ ಅಸೆಟ್ ವ್ಯಾಲ್ಯೂ -ಎನ್ ಎ ವಿ, ಅಂದ್ರೆ ಮ್ಯೂಚುಯಲ್ ಫಂಡ್ ಯೂನಿಟ್ ಗಳನ್ನ ಸರಳವಾಗಿ ಹಿಂಪಡೆಯಬಹುದು. ಮ್ಯೂಚುಯಲ್ ಫಂಡ್ ಗಳಲ್ಲಿ ರಿಡಮ್ಷನ್ ಅನ್ನೋದು ಯಾವುದೇ ಒಂದು ಸ್ಕೀಂನಿಂದ ಹೊರಬರುವುದಕ್ಕೆ ಅಥವಾ ಭಾಗಶಃ ಹೂಡಿಕೆ ಹಣವನ್ನ ಹಿಂಪಡೆಯುವುದಕ್ಕೆ ಬಳಕೆ ಮಾಡುವ ಪದ. ನಿಮ್ಮ ಮ್ಯೂಚುಯಲ್ ಫಂಡ್ ಹೂಡಿಕೆಯನ್ನು ಸುಲಭವಾಗಿ ರಿಡೀಮ್ ಮಾಡುವ ಕೆಲವು ವಿಧಾನಗಖಳನ್ನು ನಾವು ತಿಳಿಸಿಕೊಡುತ್ತೇವೆ.
ಮೊದಲನೆಯದು ಎಎಂಸಿ ಅಥವಾ ಡಿಸ್ಟ್ರಿಬ್ಯೂಟರ್ ಮೂಲಕ ರಿಡಮ್ಷನ್. ಇದು ಅತ್ಯಂತ ಸರಳ ಮಾರ್ಗ. ಇತ್ತೀಚಿನ ದಿನಗಳಲ್ಲಿ, ಬಹುತೇಕ ಹೂಡಿಕೆದಾರರು ಮ್ಯೂಚುಯಲ್ ಫಂಡ್ ಗಳನ್ನು ನೇರವಾಗಿ ಮ್ಯೂಚುಯಲ್ ಫಂಡ್ ಹೌಸ್ ಮೂಲಕ ಅಥವಾ ಡಿಸ್ಟ್ರಿಬ್ಯೂಟರ್ ಮೂಲಕ ಖರೀದಿಸುತ್ತಿದ್ದಾರೆ. ಎಲ್ಲಾ ಎಎಂಸಿಗಳು ತಮ್ಮ ವೆಬ್ ಸೈಟ್ ಮೂಲಕ ಮ್ಯೂಚುಯಲ್ ಫಂಡ್ ಗಳನ್ನ ಖರೀದಿ ಹಾಗೇ ಮಾರಟ ಮಾಡುವ ಸೌಲಭ್ಯ ಕೊಟ್ಟಿವೆ. ಎಲ್ಲಾ ಡಿಸ್ಟ್ರಿಬ್ಯೂಟರ್ ಗಳು ಕೂಡ ಈ ಆಯ್ಕೆ ಕೊಟ್ಟಿದಾರೆ.
ಇದರ ಮೂಲಕ ನೀವು ಸುಲಭವಾಗಿ ನಿಮ್ಮ ಹೂಡಿಕೆಯನ್ನು ರಿಡೀಮ್ ಮಾಡಿಕೊಳ್ಳಬಹುದು. ನೀವೇನಾದರೂ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಮೂಲಕ ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿದರೆ, ನೀವು ಯಾವಾಗ ಬೇಕಾದರೂ ಮಾರಾಟ ಮಾಡುವ ಆರ್ಡರ್ ಕೊಡಬಹುದು. ಈ ಮಾರಾಟದಿಂದ ಸಿಗುವ ಹಣ ನೇರವಾಗಿ ನಿಮ್ಮ ಖಾತೆಗೆ ಜಮಾ ಆಗುತ್ತದೆ.
ನೀವು ರಿಜಿಸ್ಟ್ರಾರ್ ಮತ್ತು ಟ್ರಾನ್ಸ್ಫರ್ ಏಜೆಂಟ್ (ಆರ್ ಟಿ ಎ) ಮೂಲಕ ನಿಮ್ಮ ಮ್ಯೂಚುಯಲ್ ಫಂಡ್ ಹೂಡಿಕೆಗಳನ್ನು ರಿಡೀಮ್ ಮಾಡಿಕೊಳ್ಳಬಹುದು. ಆನ್ಲೈನ್ ನಲ್ಲಿ ಅರ್ಜಿ ಡೌನ್ ಲೋಡ್ ಮಾಡಿಕೊಂಡು ಹತ್ತಿರದ ಎಎಂಸಿ ಶಾಖೆಯಲ್ಲಿ ನೀವು ಖರೀದಿ ಮಾಡಿರುವ ಮ್ಯೂಚುಯಲ್ ಫಂಡ್ ರಿಡೀಮ್ ಮಾಡಿಕೊಳ್ಳಬಹುದು. ಎಎಂಸಿ ಅಥವಾ ಬ್ರೋಕರ್ ಮೂಲಕ ಮ್ಯೂಚುಯಲ್ ಫಂಡ್ ರಿಡೀಮ್ ಮಾಡಿದಲ್ಲಿ, ಈ ರಿಡಮ್ಷನ್ ಪ್ರಕ್ರಿಯೆಗಳಲ್ಲಿ ವ್ಯತ್ಯಾಸಗಳಿರಬಹುದು ಎನ್ನುವುದು ನಿಮಗೆ ಗೊತ್ತಿರಬೇಕು. ಮ್ಯೂಚುಯಲ್ ಫಂಡ್ ಗಳನ್ನ ರಿಡೀಮ್ ಮಾಡುವ ಬಗೆಗಿನ ನಿಖರ ಮಾಹಿತಿಗಾಗಿ ಎಎಂಸಿಯ ಅಧಿಕೃತ ವೆಬ್ಸೈಟ್ ನೋಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಯಾವುದೇ ಅನುಮಾನ, ಪ್ರಶ್ನೆಗಳಿದ್ದರೆ ಕಂಪೆನಿಯ ಕಸ್ಟಮರ್ ಕೇರ್ ಸಂಪರ್ಕಿಸುವ ಆಯ್ಕೆಯೂ ಇರುತ್ತದೆ


Click it and Unblock the Notifications
