ಆಧಾರ್ ಕಾರ್ಡ್ ವ್ಯವಸ್ಥೆಯನ್ನು 2010ರಲ್ಲಿ ಆರಂಭ ಮಾಡಲಾಗಿದ್ದು, ಪ್ರಸ್ತುತ ಎಲ್ಲಾ ಕ್ಷೇತ್ರದಲ್ಲೂ ಆಧಾರ್ ಕಡ್ಡಾಯವಾಗಿದೆ. ಇದೊಂದು ಮೂಲ ದಾಖಲೆಯಾಗಿ ಪರಿವರ್ತನೆಯಾಗಿದೆ. ಈಗ ಈ ಆಧಾರ್ ಅನ್ನು ಜನರ ಹುಟ್ಟಿನಿಂದ ಮರಣದವರೆಗೆ ಜನರ ಮೂಲ ಆಧಾರವಾಗಿ ಲಿಂಕ್ ಮಾಡಲು ಯುಐಡಿಎಐ ಮುಂದಾಗಿದೆ.
ಇದಲ್ಲದೇ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಜನರಿಗೆ ಮನೆ ಬಾಗಿಲಿಗೆ ಆಧಾರ್ ಸೇವೆಯನ್ನು ನೀಡಲು ಆರಂಭ ಮಾಡಿದೆ. ಅಂದರೆ ಇನ್ಮುಂದೆ ನೀವು ಮನೆಯಲ್ಲಿ ಇದ್ದು ಆಧಾರ್ ಸೇವೆ ಪಡೆಯಬಹುದು. ಈಗ ಹೊಸ ಅಪ್ಡೇಟ್ ನೀಡಿರುವ ಯುಐಡಿಎಐ, ಮುಖಚರ್ಯೆ ಮೂಲಕ ವ್ಯಕ್ತಿ ದೃಢೀಕರಣ ಪತ್ತೆಗೆ ಮುಂದಾಗಿದೆ.
ಯುಐಡಿಎಐ ಇತ್ತೀಚಿನ ಪ್ರಕಟಣೆಯಂತೆ ಫೇಸ್ ಅಥೆಂಟಿಕೇಷನ್ ಸೇವೆ ಆರಂಭಿಸಿದ್ದು, ಇದಕ್ಕಾಗಿ ಆಪ್ಲಿಕೇಷನ್ ಹೊರ ತಂದಿದೆ. ಈ Face Authentication Service App ಬಳಸುವ ವಿಧಾನ ಹೇಗೆ? ಎಂಬ ವಿವರ ಮುಂದಿದೆ.
ಈ ಹೊಸ ಪರಿಶೀಲನೆ ಪ್ರಕ್ರಿಯೆಯ ಮೂಲಕ, ಆಧಾರ್ ದಾಖಲಾತಿ ಸಮಯದಲ್ಲಿ ಸೆರೆಹಿಡಿಯಲಾದ UIDAI ಯ ಡೇಟಾಬೇಸ್‌ಗಳಲ್ಲಿ ಆಧಾರ್ ಹೊಂದಿರುವವರ ನಿಜವಾದ ಗುರುತನ್ನು ಮೌಲ್ಯೀಕರಿಸಲಾಗುತ್ತದೆ(validate) ಮತ್ತು ದಾಖಲಿಸಲಾಗುತ್ತದೆ.
ಬಳಕೆದಾರರ ಏಜೆನ್ಸಿಗಳಿಗೆ (AUA) ಅನುಮತಿ
ಆಧಾರ್ ಹೊಂದಿರುವವರ ಗುರುತನ್ನು ದೃಢೀಕರಿಸುವ ವಿಧಾನವಾಗಿ ಮುಖಚರ್ಯೆ ದೃಢೀಕರಣವನ್ನು ಬಳಸಲು UIDAI ಪ್ರಾರಂಭಿಸಿದೆ. ಒಮ್ಮೆ ನಿಮ್ಮ ಮುಖಚರ್ಯೆ ದೃಢೀಕರಣ ಯಶಸ್ವಿಯಾದರೆ, ಅದು ನಿಮ್ಮ ಗುರುತನ್ನು ಪರಿಶೀಲಿಸುತ್ತದೆ. UIDAI ಇತ್ತೀಚೆಗೆ ಆಧಾರ್ ಮುಖದ ದೃಢೀಕರಣ RD ಸೇವಾ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ, ಇದು ದೃಢೀಕರಣ ಪ್ರಕ್ರಿಯೆಗಾಗಿ ಲೈವ್ ವ್ಯಕ್ತಿಯ ಮುಖವನ್ನು ಸೆರೆಹಿಡಿಯಲು ಆಧಾರ್ ದೃಢೀಕರಣ ಬಳಕೆದಾರರ ಏಜೆನ್ಸಿಗಳಿಗೆ (AUA) ಅನುಮತಿಸುತ್ತದೆ.
ಎಲ್ಲೆಲ್ಲಿ ಬಳಸಬಹುದು
ಈ ಆಧಾರ್ ಮುಖದ ದೃಢೀಕರಣ RD ಸೇವಾ ಅಪ್ಲಿಕೇಶನ್ ಅನ್ನು ಜೀವನ್ ಪ್ರಮಾಣ್, PDS, ಸ್ಕಾಲರ್‌ಶಿಪ್ ಯೋಜನೆಗಳು, COWIN, ರೈತ ಕಲ್ಯಾಣ ಯೋಜನೆಗಳಂತಹ ಹಲವಾರು ಇತರ ಅಪ್ಲಿಕೇಶನ್‌ಗಳಿಗೆ ಆಧಾರ್ ಮುಖದ ದೃಢೀಕರಣಕ್ಕಾಗಿ ಬಳಸಬಹುದು.
Aadhaar FaceRD app
UIDAI ಅಧಿಕೃತವಾಗಿ ಟ್ವೀಟ್ ಮಾಡಿ, "ಬಳಕೆದಾರರು ಈಗ UIDAI RDApp ಅನ್ನು ಡೌನ್‌ಲೋಡ್ ಮಾಡುವ ಮೂಲಕ ಆಧಾರ್ ಫೇಸ್ ದೃಢೀಕರಣ ವೈಶಿಷ್ಟ್ಯವನ್ನು ಬಳಸುತ್ತಿದ್ದಾರೆ, ಇದನ್ನು ಜೀವನ್‌ಪ್ರಮಾಣ್, PDS, ಸ್ಕಾಲರ್‌ಶಿಪ್ ಯೋಜನೆಗಳು, COWIN, ರೈತ ಕಲ್ಯಾಣ ಯೋಜನೆಗಳಂತಹ ವಿವಿಧ ಆಧಾರ್ ದೃಢೀಕರಣ ಅಪ್ಲಿಕೇಶನ್‌ಗಳಿಗೆ ಬಳಸಬಹುದು." ಎಂದು ತಿಳಿಸಿದೆ.
"Aadhaar FaceRD ಅಪ್ಲಿಕೇಶನ್ ಫೇಸ್ ದೃಢೀಕರಣ ತಂತ್ರಜ್ಞಾನವನ್ನು ಬಳಸಿಕೊಂಡು ಆಧಾರ್ ದೃಢೀಕರಣಕ್ಕಾಗಿ ಲೈವ್ ವ್ಯಕ್ತಿಯ ಮುಖವನ್ನು ಸೆರೆಹಿಡಿಯುತ್ತದೆ" ಎಂದು UIDAI ವಿಡಿಯೋ ಟ್ವೀಟ್ ಮೂಲಕ ತಿಳಿಸಿದೆ.
ಆಪ್ ಬಳಕೆ ಮುನ್ನ ಓದಿ
*ನಿಮ್ಮ ಮೊಬೈಲ್ ಫೋನ್‌ನ Google Play Store ಅಪ್ಲಿಕೇಶನ್‌ಗೆ ಭೇಟಿ ನೀಡಿ ಮತ್ತು Aadhaar FaceRD ಗಾಗಿ ಹುಡುಕಿ.
*ಅಧಿಕೃತವಾಗಿ UIDAI ವಿನ್ಯಾಸಗೊಳಿಸಿ ಹೊರ ತಂದಿರುವ ಆಪ್ ಮಾತ್ರ ಆಯ್ಕೆ ಮಾಡಿಕೊಳ್ಳಿ
* 'Install' ಕ್ಲಿಕ್ ಮಾಡಿ ಮತ್ತು ಅಪ್ಲಿಕೇಶನ್ ತೆರೆಯಿರಿ.
* ಮುಖಚರ್ಯೆ ದೃಢೀಕರಣವನ್ನು ನಿರ್ವಹಿಸಲು, ಆನ್-ಸ್ಕ್ರೀನ್ ಮುಖ ದೃಢೀಕರಣ ಮಾರ್ಗದರ್ಶಿಯನ್ನು ಅನುಸರಿಸಿ ಮತ್ತು 'ಮುಂದುವರಿಯಿರಿ' ಮೇಲೆ ಟ್ಯಾಪ್ ಮಾಡಿ.
* ಮುಖದ ದೃಢೀಕರಣ ಯಶಸ್ವಿಗೊಳಿಸಲು ನೀವು ಬೆಳಕಿನ ಮೂಲದ ಕಡೆಗೆ ಮುಖಮಾಡಬೇಕು, ಕ್ಯಾಮರಾ ಹತ್ತಿರ ಚಲಿಸಬೇಕು, ವಿಭಿನ್ನ ಅಥವಾ ಸ್ಪಷ್ಟ ಹಿನ್ನೆಲೆಗೆ ಸರಿಸಿ ಮತ್ತು ಬಳಸುವ ಮೊದಲು ಕ್ಯಾಮರಾ ಲೆನ್ಸ್ ಅನ್ನು ಸ್ವಚ್ಛಗೊಳಿಸಬೇಕು.
* ಒಮ್ಮೆ ನಿಮ್ಮ ಮುಖಚರ್ಯೆ ದೃಢಪಟ್ಟರೆ, ಮೇಲೆ ತಿಳಿಸಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಯೋಜನ ಪಡೆಯಲು ಈ ಆಪ್ ಸುಲಭವಾಗಿ ಬಳಸಬಹುದು.


Click it and Unblock the Notifications