ದಿನ ಕಳೆದಂತೆ ಆಧಾರ್ ಕಾರ್ಡ್ ಎಲ್ಲ ಕಾರ್ಯಗಳಿಗೂ ಪ್ರಮುಖ ದಾಖಲೆಯಾಗಿದೆ. ಒಬ್ಬ ವ್ಯಕ್ತಿಯ ಗುರುತಿಗೆ ಆಧಾರ್ ಕಾರ್ಡ್ ಮೂಲವಾಗಿದೆ. ನಾವು ಹುಟ್ಟಿದಾಗಿನಿಂದ ಸಾಯುವವರೆಗೂ ಆಧಾರ್ ಕಾರ್ಡ್ ಮುಖ್ಯವಾಗಿದೆ. ನಾವು ಆಧಾರ್ ಕಾರ್ಡ್ ಅನ್ನು ಬೇರೆ ಬೇರೆ ಕಾರ್ಯಗಳಿಗೆ ಬಳಕೆ ಮಾಡಬಹುದಾಗಿದೆ.
ಆಧಾರ್ ಕಾರ್ಡ್ ನಿಮ್ಮ ಬಯೋಮೆಟ್ರಿಕ್ ಡೇಟಾದೊಂದಿಗೆ ಲಿಂಕ್ ಆಗುತ್ತದೆ. ಇದರಲ್ಲಿ ನಮ್ಮ ಫಿಂಗರ್ ಪ್ರಿಂಟ್ ಹಾಗೂ ಐರಿಸ್ ಸ್ಕ್ಯಾನ್ ಇರಲಿದೆ. ನಾವು ಆಧಾರ್ ಕಾರ್ಡ್ ಅನ್ನು ಬಳಕೆ ಮಾಡಿಕೊಂಡು ನಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ಕೂಡಾ ನೋಡಲು ಸಾಧ್ಯವಾಗಲಿದೆ. ನಾವು ನಮ್ಮ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್ ಆಗದೆಯೇ ಆಧಾರ್ ಕಾರ್ಡ್ ಅನ್ನು ಬಳಕೆ ಮಾಡಿಕೊಂಡು ನಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ನೋಡಲು ಸಾಧ್ಯವಾಗಲಿದೆ.
ನಮ್ಮ ಆಧಾರ್ ಕಾರ್ಡ್ ನಮ್ಮ ಬಯೋಮೆಟ್ರಿಲ್ ಡೇಟಾವನ್ನು ಹೊಂದಿರುವ ಕಾರಣದಿಂದಾಗಿ ನಮಗೆ ಅಗತ್ಯ ಕಾರ್ಯಗಳನ್ನು ಆಧಾರ್ ಬಳಸಿ ಮಾಡಲು ಸಾಧ್ಯವಾಗುತ್ತದೆ. ಈ ಲಿಂಕ್ ಆದ ಮಾಹಿತಿಗಳು ನಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಆಧಾರ್ ಸಂಖ್ಯೆಯ ಮೂಲಕ ಸುಲಭವಾಗಿ ಚೆಕ್ ಮಾಡಲು ಸಹಾಯ ಮಾಡಲಿದೆ.

ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸುವ ಈ ಹೊಸ ಫೀಚರ್ ಪ್ರಮುಖವಾಗಿ ಹಿರಿಯ ನಾಗರಿಕರಿಗೆ ಮತ್ತು ಸ್ಮಾರ್ಟ್‌ಫೋನ್ ಹೊಂದಿರದ ಇತರ ಜನರಿಗೆ ಪ್ರಯೋಜನಕಾರಿಯಾಗಿದೆ. ಬ್ಯಾಂಕ್‌ನಲ್ಲಿ ಸರತಿ ಸಾಲಿನಲ್ಲಿ ನಿಂತು ಹಿರಿಯ ನಾಗರಿಕರು ಬ್ಯಾಂಕ್ ಬ್ಯಾಲೆನ್ಸ್ ಅನ್ನು ಪರಿಶೀಲಿಸುವುದು ತಪ್ಪುತ್ತದೆ. ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಸಹ ವ್ಯಕ್ತಿಗಳು ತಮ್ಮ ಫೋನ್‌ಗಳಲ್ಲಿ ತಮ್ಮ ಬ್ಯಾಂಕ್ ಬ್ಯಾಲೆನ್ಸ್‌ಗಳನ್ನು ಪರಿಶೀಲಿಸಲು ತಮ್ಮ ಆಧಾರ್ ಕಾರ್ಡ್‌ಗಳನ್ನು ಬಳಸಬಹುದು. ಅದು ಹೇಗೆ ಎಂದು ಈ ಕೆಳಗೆ ವಿವರಿಸಲಾಗಿದೆ ಮುಂದೆ ಓದಿ....
ಬ್ಯಾಂಕ್ ಬ್ಯಾಲೆನ್ಸ್ ಅನ್ನು ಆಧಾರ್ ಮೂಲಕ ಚೆಕ್ ಮಾಡಿ
ಹಂತ 1: ನಿಮ್ಮ ರಿಜಿಸ್ಟರ್ ಆದ ಮೊಬೈಲ್ ಸಂಖ್ಯೆಯನ್ನು ನೀವು ಹೊಂದಿರುವುದು ಮುಖ್ಯವಾಗಿದೆ
ಹಂತ 2: ನಿಮ್ಮ ರಿಜಿಸ್ಟರ್ ಆದ ಮೊಬೈಲ್ ಸಂಖ್ಯೆಯಿಂದ *99*99*1# ಗೆ ಡಯಲ್ ಮಾಡಿ
ಹಂತ 3: ನಿಮ್ಮ 12 ಡಿಜಿಟ್‌ಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ
ಹಂತ 4: ದೃಢೀಕರಣಕ್ಕಾಗಿ ನಿಮ್ಮ 12 ಡಿಜಿಟ್‌ಗಳ ಆಧಾರ್ ಸಂಖ್ಯೆಯನ್ನು ಮತ್ತೆ ನಮೂದಿಸಿ
ಹಂತ 5: ನಿಮ್ಮ ಮೊಬೈಲ್‌ನಲ್ಲಿ ಫ್ಲ್ಯಾಶ್ ನೋಟಿಫಿಕೇಶನ್ ಬರಲಿದೆ
ಹಂತ 6: ಈ ನೋಟಿಫಿಕೇಶನ್‌ನಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಮಾಹಿತಿ ಇರಲಿದೆ
ಇನ್ನು ಈ ಫ್ಲಾಶ್ ಮೆಸೇಜ್ ಅನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಪ್ರಕಟ ಮಾಡುತ್ತದೆ. ಇನ್ನು ಆಧಾರ್ ಹಾಗೂ ಪ್ಯಾನ್ ಅನ್ನು ಲಿಂಕ್ ಮಾಡುವುದು ಕೂಡಾ ಕಡ್ಡಾಯವಾಗಿದೆ ಎಂದು ಗಮನದಲ್ಲಿರಲಿ.


Click it and Unblock the Notifications