ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಶುಕ್ರವಾರ ಆಫ್‌ಲೈನ್ ಮೂಲಕ ವಿದ್ಯುತ್ ಪಾವತಿ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ ಎಂದು ಘೋಷಣೆ ಮಾಡಿದೆ. 70 ಕ್ಕೂ ಹೆಚ್ಚು ವಿದ್ಯುತ್ ಬೋರ್ಡ್‌ಗಳಿಗೆ ವಿದ್ಯುತ್ ಬಿಲ್‌ಗಳನ್ನು ಪಾವತಿಸುವ ಸೇವೆ 123PAY ಅನ್ನು ಸಕ್ರಿಯಗೊಳಿಸಲಾಗಿದೆ ಎಂದು ಘೋಷಣೆ ಮಾಡಿದೆ.
ಈ ಮೂಲಕ ಗ್ರಾಹಕರು ತಮ್ಮ ಫೀಚರ್ ಫೋನ್‌ನಲ್ಲಿಯೇ ಬಿಲ್ ಪಾವತಿ ಮಾಡಬಹುದು. ಅದು ಕೂಡಾ ಇಂಟರ್‌ನೆಟ್ ಸಂಪರ್ಕವಿಲ್ಲದೆಯೇ ವಿದ್ಯುತ್ ಪಾವತಿ ಮಾಡಬಹುದು. ಈ ಬಗ್ಗೆ ಎನ್‌ಪಿಸಿಐ ಹೇಳಿಕೆಯನ್ನು ಹೊರಡಿಸಿದೆ.
"ಭಾರತ್ ಬಿಲ್ ಪಾವತಿ ವ್ಯವಸ್ಥೆ (ಬಿಬಿಪಿಎಸ್) ಈ ವ್ಯವಸ್ಥೆಯನ್ನು ನಿರ್ವಹಣೆ ಮಾಡುತ್ತದೆ. 123PAY ಮೂಲಕ ಸರಳವಾಗಿ ಹಾಗೂ ಶೀಘ್ರವಾಗಿ ವಿದ್ಯುತ್ ಬಿಲ್ ಪಾವತಿ ಮಾಡಲು ಸಾಧ್ಯವಾಗಲಿದೆ. ಇದು ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳಿಂದ ನೇರವಾಗಿ ಹಣ ಪಾವತಿಸಲು ಅವಕಾಶ ಮಾಡಿಕೊಡುತ್ತದೆ," ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಪ್ರಸ್ತುತ ಫೀಚರ್ ಫೋನ್‌ನಲ್ಲಿಯೂ ಯುಪಿಐ ಪಾವತಿ ಮಾಡಲು ಸಾಧ್ಯವಾಗುತ್ತದೆ. ವಿದ್ಯುತ್ ಬಿಲ್ ಅನ್ನು ಹೇಗೆ ಪಾವತಿ ಮಾಡುವುದು ಎಂದುತಿಳಿಯೋಣ ಮುಂದೆ ಓದಿ.. ಹಾಗಾದರೆ
ವಿದ್ಯುತ್ ಪಾವತಿ ಮಾಡುವ ವಿಧಾನ
ಹಂತ 1: ಮೊದಲ ಬಾರಿಗೆ ಈ ವ್ಯವಸ್ಥೆಯಲ್ಲಿ ವಿದ್ಯುತ್ ಪಾವತಿ ಮಾಡಲು ಮುಂದಾಗುವವರು ಯುಪಿಐ ನೋಂದಣಿ ಮಾಡಬೇಕಾಗುತ್ತದೆ.
ಹಂತ 2: ಯುಪಿಐ ನೋಂದಣಿ ಬಳಿಕ ಗ್ರಾಹಕರು 123ಪೇ ಪಾವತಿ ಸಂಖ್ಯೆಗಳಿಗೆ (080 4516 3666 / 6366 200 200 / 080 4516 3581) ಕರೆ ಮಾಡಬೇಕು.
ಹಂತ 3: ಅಲ್ಲಿ ವಿದ್ಯುತ್ ಬಿಲ್ ಪಾವತಿಯನ್ನು ಆಯ್ಕೆ ಮಾಡಿಕೊಳ್ಳಿ
ಹಂತ 4: ಗ್ರಾಹಕರು ಪಾವತಿಸಬೇಕಾದ ವಿದ್ಯುತ್ ಮಂಡಳಿಯ ಹೆಸರನ್ನು ನಮೂದಿಸಬೇಕು.
ಹಂತ 5: ಗ್ರಾಹಕರ ಹೆಸರು, ಗ್ರಾಹಕ ಸಂಖ್ಯೆ ಹಾಗೂ ಕರೆಯಲ್ಲಿ ತಿಳಿಸಿದ ಮಾಹಿತಿಯನ್ನು ನಮೂದಿಸಿ
ಹಂತ 6: ಪಾವತಿ ಮಾಡಿದ ಬಿಲ್‌ಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ.
ಹಂತ 7: ಯುಪಿಐ ಪಿನ್ ಅನ್ನು ನಮೂದಿಸಿದ ಬಳಿಕ ಪಾವತಿ ಸಂಪೂರ್ಣವಾಗಲಿದೆ.
ಯುಪಿಐ ನೋಂದಣಿ ಹೀಗೆ ಮಾಡಿ
1. ಐವಿಆರ್ ಲೈನ್‌ಗೆ (804) 516-3666, (636) 200-200, ಅಥವಾ (804) 516-3581 ಗೆ ಕರೆ ಮಾಡಿ
2. ಯಾವ ಭಾಷೆಯಲ್ಲಿ ನಿಮಗೆ ಮಾಹಿತಿ ಲಭ್ಯವಾಗಬೇಕೋ ಆ ಭಾಷೆಯ ಸಂಖ್ಯೆಯಲ್ಲಿ ಆಯ್ಕೆ ಮಾಡಿ
3. ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿಕೊಳ್ಳಿ
4. ಡೆಬಿಟ್ ಕಾರ್ಡ್ ಮಾಹಿತಿಯನ್ನು ಕೂಡಾ ನಮೂದಿಸಬೇಕಾಗುತ್ತದೆ.
5. ಯುಪಿಐ ಪಿನ್ ಅನ್ನು ನಮೂದಿಸಿ
6. ಈ ಬಳಿಕ ನೀವು ಯುಪಿಐ ಪಾವತಿ ಮಾಡಲು ಸಾಧ್ಯವಾಗಲಿದೆ.


Click it and Unblock the Notifications