ನೀವು ಮನೆಯಲ್ಲಿಯೇ ಕುಳಿತು ಎಸ್‌ಬಿಐ ನೆಟ್ ಬ್ಯಾಂಕಿಂಗ್ ಮೂಲಕ ಎಲ್ಲಾ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಹಣ ವರ್ಗಾವಣೆ, ಆನ್‌ಲೈನ್ ಶಾಪಿಂಗ್, ಯುಟಿಲಿಟಿ ಬಿಲ್ ಪಾವತಿ ಅಥವಾ ಮೊಬೈಲ್ ರೀಚಾರ್ಜ್ ಮಾಡಲು ನಿಮಗೆ ಅವಕಾಶ ನೀಡುತ್ತದೆ.
ಈ ಸೇವೆಗಳನ್ನು ಪಡೆಯಲು ನೀವು ಬ್ಯಾಂಕ್‌ಗೆ ಹೋಗುವ ಅಗತ್ಯವಿಲ್ಲ. ಪ್ರತಿ ವ್ಯವಹಾರವನ್ನು ಸುರಕ್ಷಿತವಾಗಿರಿಸಲು ಪಾಸ್‌ವರ್ಡ್‌ಗಳನ್ನು ಬಳಸಲಾಗುತ್ತದೆ. ಆದರೆ ಕೆಲವು ಷರತ್ತುಗಳಿವೆ. ನೀವು ಬ್ಯಾಂಕಿಂಗ್ ಸೇವೆಯನ್ನು ಮುಂದುವರಿಸಲು ಆಗಾಗ ನಿಮ್ಮ ಪಾಸ್‌ವರ್ಡ್ ಅನ್ನು ಬದಲಾವಣೆ ಮಾಡಬೇಕು ಅಥವಾ ರಿಸೆಟ್ ಮಾಡಬಹುದಾಗಿದೆ.
ಒಂದು ವೇಳೆ ನಾವು ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್ ಅನ್ನು ಮರೆತರೆ ಏನು ಮಾಡುವುದು?. ಕೆಲವೊಮ್ಮೆ ಬಳಕೆದಾರರ ಹೆಸರನ್ನು ಸಹ ಮರೆತುಬಿಡುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಯಾವ ಆಯ್ಕೆಗಳನ್ನು ಹೊಂದಿದ್ದೀರಿ ಎಂಬುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಎಸ್‌ಬಿಐ ತನ್ನ ಬಳಕೆದಾರರಿಗೆ ಅವರ ಸರಿಯಾದ ಪಾಸ್‌ವರ್ಡ್‌ಗಳನ್ನು ನಮೂದಿಸಲು ಮತ್ತು ಅವರ ಪ್ರೊಫೈಲ್‌ಗಳಿಗೆ ಲಾಗ್ ಇನ್ ಮಾಡಲು ಮೂರು ಬಾರಿ ಪ್ರಯತ್ನಿಸಲು ಅವಕಾಶ ನೀಡುತ್ತದೆ.

ಈ ಮೂರು ಅವಕಾಶ ಮುಗಿದ ಬಳಿಕ, ಎಸ್‌ಬಿಐ ಬಳಕೆದಾರರ ಖಾತೆಗಳು ಬ್ಯಾಂಕ್‌ನಿಂದ ಲಾಕ್ ಆಗುತ್ತವೆ. ಈ ಪರಿಸ್ಥಿತಿಯಲ್ಲಿ ನಿಮಗೆ ಸಹಾಯ ಮಾಡಲು, ನಿಮ್ಮ ಮನೆಯಲ್ಲಿ ಸುಲಭವಾಗಿ ಆನ್‌ಲೈನ್‌ನಲ್ಲಿ ನಿಮ್ಮ ಪಾಸ್‌ವರ್ಡ್ ಅನ್ನು ರಿಸೆಟ್ ಮಾಡುವ ಆಯ್ಕೆಯನ್ನು ಎಸ್‌ಬಿಐ ನಿಮಗೆ ನೀಡುತ್ತದೆ.
ಎಸ್‌ಬಿಐ ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್ ರಿಸೆಟ್ ಮಾಡುವುದು ಹೇಗೆ?
ಹಂತ 01: ಎಸ್‌ಬಿಐನ ನೆಟ್ ಬ್ಯಾಂಕಿಂಗ್ ವೆಬ್ ಪೋರ್ಟಲ್‌ಗೆ ತೆರೆಯಿರಿ
ಹಂತ 02: "Forgot Login Password" ಕ್ಲಿಕ್ ಮಾಡಿ
ಹಂತ 03: ಬಳಿಕ "Forgot My Login Password" ಆಯ್ಕೆ ಮಾಡಿ, "Next" ಕ್ಲಿಕ್ ಮಾಡಿ
ಹಂತ 04: ಹೆಸರು, ಜನ್ಮದಿನಾಂಕ, ಬ್ಯಾಂಕ್ ಖಾತೆ ಮೊದಲಾದ ವಿವರ ಭರ್ತಿ ಮಾಡಿ, submit ಕ್ಲಿಕ್ ಮಾಡಿ
ಹಂತ 05: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ
ಹಂತ 06: ಒಟಿಪಿ ನಮೂದಿಸಿ
ಹಂತ 07: Change login password using profile password" ಕ್ಲಿಕ್ ಮಾಡಿ
ಹಂತ 08: ಹೊಸ ಪಾಸ್‌ವರ್ಡ್ ಎರಡು ಬಾರಿ ಹಾಕಿದರೆ, ಪಾಸ್‌ವರ್ಡ್ ರಿಸೆಟ್ ಆಗಲಿದೆ
ಮೇಲೆ ತಿಳಿಸಿದ ಹಂತಗಳನ್ನು ಸರಿಯಾಗಿ ಅನುಸರಿಸಿದ ಬಳಿಕ ನಿಮ್ಮ ಎಸ್‌ಬಿಐ ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್ ಅನ್ನು ರಿಸೆಟ್ ಮಾಡಲಾಗುತ್ತದೆ. ಆ ಬಳಿಕ ನೀವು ಹೊಸ ಪಾಸ್‌ವರ್ಡ್ ಬಳಸಿ ಲಾಗಿನ್ ಆಗಬಹುದು.


Click it and Unblock the Notifications