ಜಾಗತಿಕವಾಗಿ ಬಿಲಿಯನೇರ್‌ಗಳ ಸಂಖ್ಯೆಯು ಶೇಕಡ 8ರಷ್ಟು ಇಳಿಕೆ ಕಂಡಿದೆ. ಆದರೆ ಭಾರತದಲ್ಲಿ ಮಾತ್ರ ಹೊಸದಾಗಿ ಬಿಲಿಯನೇರ್‌ಗಳು ಸೃಷ್ಟಿಯಾಗಿದ್ದಾರೆ. ಹೌದು ಭಾರತದಲ್ಲಿ ಹೊಸದಾಗಿ 16 ಮಂದಿ ಬಿಲಿಯನೇರ್‌ಗಳು ಆಗಿದ್ದಾರೆ. ಈ ಪಟ್ಟಿಯಲ್ಲಿ ರಾಕೇಶ್ ಜುಂಜುನ್‌ವಾಲಾರ ಪತ್ನಿ ರೇಖಾ ರಾಕೇಶ್ ಜುಂಜುನ್‌ವಾಲಾ ಟಾಪ್‌ನಲ್ಲಿ ಇದ್ದಾರೆ. ಇನ್ನು ಜಾಗತಿಕವಾಗಿ ಅತೀ ಹೆಚ್ಚು ಬಿಲಿಯನೇರ್‌ಗಳನ್ನು ಹೊಂದಿರುವ ದೇಶದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.
2023ರ ಎಂ3ಎಂ ಹುರುನ್ ಗ್ಲೋಬಲ್ ಶ್ರೀಮಂತರ ಪಟ್ಟಿಯ ಪ್ರಕಾರ ರಾಕೇಜ್ ಜುಂಜುನ್‌ವಾಲಾರ ಸ್ಥಾನವನ್ನು ಈಗ ರೇಖಾ ಜುಂಜುನ್‌ವಾಲಾ ತುಂಬುತ್ತಿದ್ದಾರೆ. ಭಾರತದ ವಾರೆನ್ ಬಫೆಟ್ ಎಂದೇ ಪ್ರಸಿದ್ಧರಾದ ರಾಕೇಜ್ ಜುಂಜುನ್‌ವಾಲಾ ಮರಣ ಹೊಂದಿದ ಬಳಿಕ ರಾಕೇಶ್ ಜುಂಜುನ್‌ವಾಲಾ ತನ್ನ ಪತಿಯ ಸ್ಟಾಕ್ ಪೋರ್ಟ್‌ಪೋಲಿಯೋವನ್ನು ನಿರ್ವಹಣೆ ಮಾಡಲು ಆರಂಭಿಸಿದ್ದಾರೆ. 2023ರ ಎಂ3ಎಂ ಹುರುನ್ ಗ್ಲೋಬಲ್ ಶ್ರೀಮಂತರ ಪಟ್ಟಿಯ ಪ್ರಕಾರ ಜಾಗತಿಕವಾಗಿ ಹೊಸದಾಗಿ 176 ಮಂದಿ ಬಿಲಿಯನೇರ್‌ಗಳಾಗಿದ್ದಾರೆ.

176 ಮಂದಿ ಬಿಲಿಯನೇರ್‌ಗಳು 18 ಇಂಡಸ್ಟ್ರೀಗಳು ಮತ್ತು 99 ನಗರಗಳಿಗೆ ಸೇರಿದವರು ಆಗಿದ್ದಾರೆ. ಕಳೆದ ಐದು ವರ್ಷದಲ್ಲಿ ಭಾರತದ ಬಿಲಿಯನೇರ್‌ಗಳ ಪಟ್ಟಿಗೆ ಹೆಚ್ಚುವರಿಯಾಗಿ 360 ಬಿಲಿಯನ್ ಡಾಲರ್ ಸೇರ್ಪಡೆಯಾಗಿದೆ. ಪಟ್ಟಿಯ ಪ್ರಕಾರ 360 ಬಿಲಿಯನ್ ಡಾಲರ್ ಅಂಕಿ ಅಂಶವು ಹಾಂಗ್ ಕಾಂಗ್‌ನ ಜಿಡಿಪಿಗೆ ಸಮನಾಗಿರುತ್ತದೆ.
ಜಾಗತಿಕವಾಗಿ ಬಿಲಿಯನೇರ್‌ಗಳ ಸಂಖ್ಯೆ ಇಳಿಕೆ
ಜಾಗತಿಕವಾಗಿ ಬಿಲಿಯನೇರ್‌ಗಳ ಸಂಖ್ಯೆಯು ಇಳಿಕೆಯಾಗಿದೆ. ಕಳೆದ ವರ್ಷ ಅಂದರೆ 2022ರಲ್ಲಿ ಒಟ್ಟಾಗಿ 3,384 ಬಿಲಿಯನೇರ್‌ಗಳು ಇದ್ದರೆ, 2023ರಲ್ಲಿ ಬಿಲಿಯನರ್‌ಗಳ ಸಂಖ್ಯೆಯು 3,112ಕ್ಕೆ ಇಳಿಕೆಯಾಗಿದೆ. ಈ ಬಿಲಿಯನೇರ್‌ಗಳು 69 ದೇಶಗಳಿಗೆ ಸೇರಿದವರು ಆಗಿದ್ದಾರೆ. ಹಾಗೆಯೇ ಒಟ್ಟಾಗಿ 2,356 ಸಂಸ್ಥೆಗಳ ಮಾಲೀಕತ್ವವನ್ನು ಹೊಂದಿದ್ದಾರೆ. 2023ರ ಎಂ3ಎಂ ಹುರುನ್ ಗ್ಲೋಬಲ್ ಶ್ರೀಮಂತರ ಪಟ್ಟಿಯ ಪ್ರಕಾರ ವಲಸಿಗ ಬಿಲಿಯನೇರ್‌ಗಳ ಪ್ರಮಾಣವು ಕಳೆದ ಐದು ವರ್ಷಗಳಲ್ಲಿ ಅರ್ಧದಷ್ಟು ಕಡಿಮೆಯಾಗಿದೆ. 2018 ರಲ್ಲಿ ವಲಸಿಗ ಬಿಲಿಯನೇರ್‌ಗಳ ಪ್ರಮಾಣವು ಶೇಕಡ 23ರಷ್ಟಿದ್ದರೆ, 2023ರಲ್ಲಿ ಈ ಪ್ರಮಾಣವು ಶೇಕಡ 14ಕ್ಕೆ ಇಳಿಕೆಯಾಗಿದೆ.
ಉದ್ಯಮಿ ರಾಕೇಶ್ ಪತ್ನಿ ರೇಖಾ ಬಳಿ ಇರುವ ಷೇರುಗಳ ಮೌಲ್ಯ
ಷೇರುಪೇಟೆ ಬಿಗ್ ಬುಲ್ ರಾಕೇಶ್ ಜುಂಜುನ್ ವಾಲ ನಿಧನರಾದ ಬಳಿಕ ಅವರ ಷೇರುಗಳು ಹಾಗೂ ಕುಟುಂಬಸ್ಥರ ಆಸ್ತಿ ಮೌಲ್ಯದ ಲೆಕ್ಕಾಚಾರ ಶುರುವಾಗಿದೆ. ಸದ್ಯಕ್ಕೆ ಸಿಕ್ಕಿರುವ ಲೆಕ್ಕಾಚಾರದಂತೆ ರೇಖಾ ಬಳಿ ಸುಮಾರು 19 ಷೇರುಗಳಿದ್ದು ಇವುಗಳ ಮೌಲ್ಯ ಸುಮಾರು 9,8000 ಕೋಟಿ ರು ಗೂ ಅಧಿಕ ಎಂಬ ಮಾಹಿತಿ ಬಂದಿದೆ. ಅತಿ ಹೆಚ್ಚು ಸ್ಟಾರ್ ಹೆಲ್ತ್ ಹಾಗೂ ಅಲೈಡ್ ಇನ್ಶುರೆನ್ಸ್ ಕಂಪನಿ (1,264 ಕೋಟಿ ರು), ಮೆಟ್ರೋ ಬ್ರ್ಯಾಂಡ್ಸ್ (3,310 ಕೋಟಿ ರು), ಟೈಟನ್ ಕಂಪನಿ (2,379 ಕೋಟಿ ರು) ಕಂಪನಿಗಳ ಮೌಲ್ಯದ ಷೇರು ಹೊಂದಿದ್ದಾರೆ.
ಶೇಕಡಾವಾರು ಲೆಕ್ಕಾಚಾರದಂತೆ ಮೆಟ್ರೋ ಬ್ರ್ಯಾಂಡ್ಸ್ ನಲ್ಲಿ ಶೇ 14.43ರಷ್ಟು, ಟೈಟನ್ ಕಂಪನಿಯಲ್ಲಿ ಶೇ 1.07ರಷ್ಟು ಹೋಲ್ಡಿಂಗ್ ಹೊಂದಿದ್ದಾರೆ. ಇದಲ್ಲದೆ ಸ್ಟಾರ್ ಹೆಲ್ತ್ ಹಾಗೂ ಅಲೈಡ್ ಇನ್ಸುರೆನ್ಸ್ ಕಂಪನಿಯಲ್ಲಿ ಶೇ 3.10ರಷ್ಟು ಪಾಲು ಹೊಂದಿದ್ದಾರೆ. 12 ಸ್ಟಾಕ್ ಗಳಿಂದಲೇ 10,000 ಕೋಟಿ ರು ಗೂ ಅಧಿಕ ಮೌಲ್ಯ ಹೊಂದಿದ್ದಾರೆ. 1985ರಲ್ಲಿ 5000 ರು ನೊಂದಿಗೆ ಷೇರುಪೇಟೆಯಲ್ಲಿ ವ್ಯವಹಾರ ಆರಂಭಿಸಿದ ರಾಕೇಶ್ ಟಾಟಾ ಟೀ 11,000 ಕೋಟಿ ಹಾಗೂ ಟೈಟನ್ 7,000 ಕೋಟಿ ರು ಮೌಲ್ಯ ಶೇರುಗಳನ್ನು ಹೊಂದಿದ್ದಲ್ಲದೆ 5.5 ಬಿಲಿಯನ್ ಮೌಲ್ಯದ ಆಸ್ತಿ ಗಳಿಸಿದರು.


Click it and Unblock the Notifications